Personality Test : ಕಣ್ಣಿನ ಬಣ್ಣದಿಂದ ತಿಳಿಯುತ್ತೆ ಮನುಷ್ಯನ ನಿಗೂಢ ವ್ಯಕ್ತಿತ್ವ

ನಮ್ಮ ಕಣ್ಣುಗಳು ಮಾತನಾಡುತ್ತವೆ, ಎಷ್ಟೋ ಸಲ ಮನಸ್ಸಿನಲ್ಲಿರುವುದನ್ನು ಕಣ್ಣಿನಿಂದಲೇ ಅರ್ಥೈಸಿಕೊಳ್ಳಬಹುದು. ಒಬ್ಬ ವ್ಯಕ್ತಿಗೆ ನೋವಾದಾಗ, ಸಿಟ್ಟು ಬಂದಾಗ, ಖುಷಿಯಾದಾಗ ಹೀಗೆ ಎಲ್ಲಾ ಭಾವನೆಗಳನ್ನು ಹೇಳುವುದೇ ಈ ಸುಂದರವಾದ ಕಣ್ಣುಗಳು. ಆದರೆ ಕಣ್ಣುಗಳ ಬಣ್ಣವು ಕೂಡ ನಿಮ್ಮ ಗುಣಸ್ವಭಾವ, ವ್ಯಕ್ತಿತ್ವವನ್ನು ರಿವೀಲ್ ಮಾಡುತ್ತೆ. ಹಾಗಾದ್ರೆ ಕಣ್ಣಿನ ಬಣ್ಣದ ಆಧಾರದಲ್ಲಿ ನಿಮ್ಮ ನಿಗೂಢ ಗುಣಸ್ವಭಾವಗಳೇನು? ಎನ್ನುವುದರ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

Personality Test : ಕಣ್ಣಿನ ಬಣ್ಣದಿಂದ ತಿಳಿಯುತ್ತೆ ಮನುಷ್ಯನ ನಿಗೂಢ ವ್ಯಕ್ತಿತ್ವ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 05, 2024 | 5:07 PM

ಈ ಪ್ರಪಂಚವು ಹೇಗಿದೆ ಎಂದು ನೋಡಲು ಸಹಾಯಕವಾಗಿರುವ ಅಂಗವೇ ಈ ಕಣ್ಣು. ದೇಹದ ಅತ್ಯಂತ ಪ್ರಮುಖ ಅಂಗಗಳಲ್ಲಿ ಇದು ಒಂದಾಗಿದ್ದು, ಜಗತ್ತನ್ನು ನೋಡಲು ಮಾತ್ರವಲ್ಲದೇ, ವ್ಯಕ್ತಿಯ ಭಾವನೆಯನ್ನು ಕಣ್ಣಿನಿಂದಲೇ ಅರ್ಥೈಸಿಕೊಳ್ಳಬಹುದು. ಎಲ್ಲರಿಗೂ ತಿಳಿದಿರುವಂತೆ ಒಬ್ಬೊಬ್ಬರ ಕಣ್ಣು ಒಂದೊಂದು ಬಣ್ಣದಲ್ಲಿರುತ್ತದೆ. ಹೆಚ್ಚು ಜನರ ಕಣ್ಣು ಕಪ್ಪಾಗಿದ್ದರೆ, ಇನ್ನು ಕೆಲವರ ಕಣ್ಣು, ನೀಲಿ, ತಿಳಿ ಹಸಿರು, ಬೂದು ಹೀಗೆ ನಾನಾ ರೀತಿಯ ಬಣ್ಣದಲ್ಲಿರುತ್ತದೆ. ಆದರೆ, ಈ ಕಣ್ಣಿನ ಬಣ್ಣದಿಂದಲೇ ಒಬ್ಬ ವ್ಯಕ್ತಿಯೂ ಹೇಗೆ ಎಂದು ತಿಳಿಯಬಹುದಂತೆ.

  • ಕಂದು ಬಣ್ಣದ ಕಣ್ಣು : ಕಂದು ಬಣ್ಣದ ಕಣ್ಣುಗಳನ್ನು ಹೊಂದಿರುವ ಜನರು ಪ್ರಾಮಾಣಿಕರು ಮತ್ತು ಸ್ವಭಾವತಃ ತುಂಬಾ ಸ್ನೇಹಪರ ವ್ಯಕ್ತಿತ್ವದವರಾಗಿರುತ್ತಾರೆ. ಈ ಜನರು ಅದೃಷ್ಟವಂತರಾಗಿದ್ದು, ತಮ್ಮ ಜೀವನದಲ್ಲಿ ಹೆಸರು, ಹಣ, ಸಂತೋಷದ ಸಂಬಂಧಗಳು ಹೀಗೆ ಎಲ್ಲವನ್ನು ಸುಲಭವಾಗಿ ಗಳಿಸುತ್ತಾರೆ. ಕಣ್ಣಿನ ಬಣ್ಣವು ಕಂದು ಆಗಿದ್ದರೆ ಆ ವ್ಯಕ್ತಿಗಳು ಜೀವನದಲ್ಲಿ ಅಂದುಕೊಂಡದ್ದನ್ನು ಸುಲಭವಾಗಿ ಪಡೆಯುತ್ತಾರೆ.
  • ಕಪ್ಪು ಬಣ್ಣದ ಕಣ್ಣು: ನಮ್ಮ ಸುತ್ತಮುತ್ತಲಿನಲ್ಲಿರುವ ಬಹುತೇಕರ ಕಣ್ಣಿನ ಬಣ್ಣ ಕಪ್ಪಾಗಿರುತ್ತದೆ. ಕಪ್ಪು ಬಣ್ಣದ ಕಣ್ಣುವುಳ್ಳವರು ಕಠಿಣ ಪರಿಶ್ರಮ, ಜವಾಬ್ದಾರಿ ಮತ್ತು ನಿಷ್ಠಾವಂತರಾಗಿರುತ್ತಾರೆ. ಈ ಜನರು ದುಡ್ಡು ಮಾಡುವುದರಲ್ಲಿ ಒಂದು ಹೆಜ್ಜೆ ಮುಂದೆ ಇರುತ್ತಾರೆ. ಭವಿಷ್ಯದ ಬಗ್ಗೆ ಯೋಚಿಸದೇ ವರ್ತಮಾನದಲ್ಲಿ ಬದುಕುವ ವ್ಯಕ್ತಿತ್ವ ಇವರಾದ್ದಾಗಿರುತ್ತದೆ.
  • ತಿಳಿ ಹಸಿರು ಕಣ್ಣು : ಕಣ್ಣಿನ ಬಣ್ಣವು ತಿಳಿ ಹಸಿರಾಗಿದ್ದರೆ ಈ ವ್ಯಕ್ತಿಗಳು ಉಳಿದವರಿಗಿಂತ ಹೆಚ್ಚು ಆಕರ್ಷಕವಾಗಿ ಕಾಣಿಸಿಕೊಳ್ಳುತ್ತಾರೆ. ಈ ವ್ಯಕ್ತಿಗಳನ್ನು ಸೌಂದರ್ಯದಲ್ಲಿ ಮಾತ್ರವಲ್ಲ, ಬುದ್ಧಿವಂತಿಕೆಯಲ್ಲಿಯೂ ಯಾರು ಮೀರಿಸಲಾಗದು. ತನ್ನ ಬುದ್ಧಿವಂತಿಕೆಯಿಂದಲೇ ಜನರ ಮೆಚ್ಚುಗೆಯನ್ನು ಗಳಿಸುತ್ತಾರೆ.
  • ನೀಲಿ ಬಣ್ಣದ ಕಣ್ಣು : ಈ ವ್ಯಕ್ತಿಗಳು ಜೀವನದಲ್ಲಿ ಉನ್ನತ ಸ್ಥಾನಮಾನ, ಅಪಾರ ಹಣ ಮತ್ತು ಖ್ಯಾತಿಯನ್ನು ಪಡೆಯುತ್ತಾರೆ. ಆದರೆ ಈ ವ್ಯಕ್ತಿಗಳ ಒಂದು ದುರ್ಬಲತೆಯೆಂದರೆ ಯೋಚಿಸದೆ ನಿರ್ಧಾರವನ್ನು ತೆಗೆದುಕೊಳ್ಳುವುದು. ಇದರಿಂದ ಇಲ್ಲ ಸಲ್ಲದ ಸಮಸ್ಯೆಗಳನ್ನು ಮೈ ಮೇಲೆ ಎಳೆದುಕೊಂಡು ತೊಂದರೆಗೆ ಸಿಲುಕಿ ಹಾಕಿಕೊಳ್ಳುವುದೇ ಹೆಚ್ಚು ಎನ್ನಬಹುದು.
  • ಬೂದು ಬಣ್ಣದ ಕಣ್ಣು : ಬೂದು ಬಣ್ಣದ ಕಣ್ಣುಗಳನ್ನು ಹೊಂದಿರುವ ವ್ಯಕ್ತಿಗಳು ಅತ್ಯಂತ ಪ್ರಭಾವಶಾಲಿಗಳು ಮತ್ತು ಶಕ್ತಿವಂತರಾಗಿರುತ್ತಾರೆ. ಈ ಜನರು ಹೆಚ್ಚು ಭಾವನಾತ್ಮಕವಾಗಿರುವುದರಿಂದ ಸಣ್ಣ ಸಣ್ಣ ವಿಷಯಗಳನ್ನು ಮನಸ್ಸಿಗೆ ಹಚ್ಚಿಕೊಳ್ಳುತ್ತಾರೆ. ಆದರೆ ಕನಸುಗಳನ್ನು ನನಸು ಮಾಡುವ ಸಲುವಾಗಿ ಶ್ರಮ ವಹಿಸಿ ದುಡಿಯುವ ವ್ಯಕ್ತಿತ್ವ ಇವರಾದ್ದಾಗಿರುತ್ತದೆ. ಈ ವ್ಯಕ್ತಿಗಳಲ್ಲಿ ನಾಯಕತ್ವ ಗುಣವು ಹೆಚ್ಚಿರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ