Sign In

By signing in or creating an account, you agree with Associated Broadcasting Company's Terms & Conditions and Privacy Policy.

Shivaji Maharaj Jayanti 2023: ಶಿವಾಜಿ ಮಹಾರಾಜರ ಪರಾಕ್ರಮದ ಕಥೆಗಳು ಪ್ರತಿಧ್ವನಿಸುವ ಈ ಕೋಟೆಗಳಿಗೆ ಭೇಟಿ ನೀಡಿ

ಇಂದು (ಫೆಬ್ರವರಿ 19, 2023)ರಂದು, ಶಿವಾಜಿ ಮಹಾರಾಜರ 393 ನೇ ಜನ್ಮದಿನವಾಗಿದೆ. ಶಿವಾಜಿ ಹುಟ್ಟೂರಿನಲ್ಲಿರುವ ಕೋಟೆ, ತೋರ್ಣ ಕೋಟೆ, ಕೋರಿಗಡ್ ಮತ್ತು ರಾಯಗಡ ಕೋಟೆಗಳ ಕುರಿತು ಮಾಹಿತಿ ಇಲ್ಲಿದೆ.

Shivaji Maharaj Jayanti 2023: ಶಿವಾಜಿ ಮಹಾರಾಜರ ಪರಾಕ್ರಮದ ಕಥೆಗಳು ಪ್ರತಿಧ್ವನಿಸುವ ಈ ಕೋಟೆಗಳಿಗೆ ಭೇಟಿ ನೀಡಿ
ಛತ್ರಪತಿ ಶಿವಾಜಿ ಮಹಾರಾಜ್​​​Image Credit source: explore.India
Follow us
ಅಕ್ಷತಾ ವರ್ಕಾಡಿ
|

Updated on:Feb 19, 2023 | 4:32 PM

ಮಹಾರಾಷ್ಟ್ರ ಐತಿಹಾಸಿಕ ಪ್ರಬಲ ಕೋಟೆಗಳು ಮಹಾನ್ ಮರಾಠ ಚಕ್ರವರ್ತಿಯ ಕಥೆಗಳನ್ನು ಸಾರಿ ಹೇಳುತ್ತದೆ. ಕೋಟೆಗಳಲ್ಲಿನ ಕಾಲುದಾರಿಗಳು, ಬಂದೀಖಾನೆಗಳು ಮತ್ತು ಗೋಡೆಗಳು ಈಗಲೂ ಯುದ್ಧಕಾಲದ ಕಥೆಗಳು ಮತ್ತು ಮರಾಠ ಚಕ್ರವರ್ತಿ ಛತ್ರಪತಿ ಶಿವಾಜಿಯ ಶೌರ್ಯವನ್ನು ಪ್ರತಿಧ್ವನಿಸುತ್ತವೆ. ಇಂದು (ಫೆಬ್ರವರಿ 19, 2023)ರಂದು, ಶಿವಾಜಿ ಮಹಾರಾಜರ 393 ನೇ ಜನ್ಮದಿನವನ್ನು ಆಚರಿಸಲಾಗುತ್ತದೆ. ಶಿವಾಜಿ ಹುಟ್ಟೂರಿನಲ್ಲಿರುವ ಕೋಟೆಯಿಂದ ಹಿಡಿದು  ತನ್ನ 16 ನೇ ವಯಸ್ಸಿನಲ್ಲಿ ವಶಪಡಿಸಿಕೊಂಡ ಕೋಟೆಯ ವರೆಗಿನ ಶಿವಾಜಿಯ ಪರಾಕ್ರಮವನ್ನು ಸಾರುವ ಕೋಟೆಗಳ ಐತಿಹಾಸಿಕ ವಿವರಗಳು ಇಲ್ಲಿವೆ.

ಛತ್ರಪತಿ ಶಿವಾಜಿ ಮಹಾರಾಜರ ಪರಂಪರೆಯನ್ನು ಹೊಂದಿರುವ ಕೋಟೆಗಳು:

ಶಿವನೇರಿ ಕೋಟೆ:

ಶಿವನೇರಿ ಛತ್ರಪತಿ ಶಿವಾಜಿಯ ಜನ್ಮಸ್ಥಳವಾಗಿದೆ. ಶಿವನೇರಿ ಮಹಾರಾಷ್ಟ್ರದ ಹೆಮ್ಮೆಯ ಮತ್ತೊಂದು ಬೆಟ್ಟದ ಕೋಟೆಯಾಗಿದೆ. ಮಂತ್ರಮುಗ್ಧಗೊಳಿಸುವ ನೋಟಗಳ ಹೊರತಾಗಿ, ಈ ಕೋಟೆ ಆವರಣದಲ್ಲಿ ಕೊಳಗಳು ಮತ್ತು ದೇವಾಲಯಗಳಿಗೆ ಭೇಟಿ ನೀಡಬಹುದು.

ಲೋಹಗಢ್ ಕೋಟೆ:

ಮರಾಠಿಯಲ್ಲಿ ಲೋಹಗಢ್ ಕೋಟೆ ಎಂದರೆ ಕಬ್ಬಿಣದ ಕೋಟೆ ಎಂಬ ಅರ್ಥವನ್ನು ನೀಡುತ್ತದೆ. ಈ ಕೋಟೆ ಲೋನಾವ್ಲಾದ ಸಹ್ಯಾದ್ರಿ ಶ್ರೇಣಿಯ ತಪ್ಪಲಿನಲ್ಲಿ ಸುಮಾರು 1,033 ಮೀ ಎತ್ತರದಲ್ಲಿದೆ. ಇದನ್ನು ಸುಮಾರು 18 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂಬ ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ. ಮಳೆಗಾಲದಲ್ಲಿ ನೀವು ಇಲ್ಲಿಗೆ ಭೇಟಿ ನೀಡಿದರೆ ಸುಂದರ ಹಸಿರ ಹೊದಿಕೆಗಳಿಂದ ಕೋಟೆಯನ್ನು ಕಣ್ತುಂಬಿಸಿಕೊಳ್ಳಬಹುದಾಗಿದೆ. ಜೊತೆಗೆ ದಾರಿಯುದ್ದಕ್ಕೂ ಕೆಲವು ಅದ್ಭುತ ಜಲಪಾತಗಳನ್ನು ಕಾಣಬಹುದು.

ಸಿಂಧುದುರ್ಗ ಕೋಟೆ:

ಸುಮಾರು 1664 ರಲ್ಲಿ ಛತ್ರಪತಿ ಶಿವಾಜಿ ನಿರ್ಮಿಸಿದ ಈ ಭವ್ಯವಾದ ಕೋಟೆಯು ಸುಮಾರು 44 ಎಕರೆಗಳಷ್ಟು ವಿಸ್ತಾರವಾಗಿದೆ. ನೀವು ಎಂದಾದರೂ ಮಹಾರಾಷ್ಟ್ರಕ್ಕೆ ಭೇಟಿ ನೀಡಿದಾಗ ಈ ಕೋಟೆಗೆ ಭೇಟಿ ನೀಡಿ.

ರಾಯಗಡ ಕೋಟೆ:

ಸುಮಾರು 2700 ಅಡಿ ಎತ್ತರದಲ್ಲಿರುವ ಈ ಕೋಟೆಯು 1400 ಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಹೊಂದಿದೆ. ಈ ಭವ್ಯ ಕೋಟೆಯು ಶಿವಾಜಿ ಮಹರಾಜರ ಸಾಹಸದ ಕಥೆಯನ್ನು ಸಾರಿ ಹೇಳುತ್ತದೆ. ಈ ಚಾರಣದ ಒಂದು ಪ್ರಮುಖ ಅಂಶವೆಂದರೆ ನೀವು ರೋಪ್‌ವೇಯಲ್ಲಿ ಕುಳಿತು ಕೋಟೆಯನ್ನು ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳಬಹುದು.

ಇದನ್ನೂ ಓದಿ: 5000 ವರ್ಷಗಳ ಹಿಂದಿನ ಪುರಾತನ ಹೋಟೆಲಿನ ಅವಶೇಷಗಳು ಪತ್ತೆ

ತೋರ್ಣ ಕೋಟೆ:

ಪುಣೆಯಲ್ಲಿ ನೋಡಲೇಬೇಕಾದ ಕೋಟೆಗಳಲ್ಲಿ ಒಂದಾದ ತೊರ್ನಾ ಕೋಟೆಯನ್ನು ಪ್ರಚಂಡಗಡ ಎಂದೂ ಕರೆಯುತ್ತಾರೆ. ಇದು ಸಮುದ್ರ ಮಟ್ಟದಿಂದ 1,403 ಮೀ ಎತ್ತರದಲ್ಲಿದೆ. ಇದು ಪುಣೆಯ ಅತಿ ಎತ್ತರದ ಬೆಟ್ಟದ ಕೋಟೆಯಾಗಿದೆ. ಇದು ಶಿವಾಜಿ ಮಹಾರಾಜರು 1643 ರಲ್ಲಿ 16 ನೇ ವಯಸ್ಸಿನಲ್ಲಿ ವಶಪಡಿಸಿಕೊಂಡ ಮೊದಲ ಕೋಟೆಯಾಗಿದೆ. ಕೋಟೆಯೊಳಗೆ ಗೋಪುರಗಳು ಮತ್ತು ಸ್ಮಾರಕಗಳು ಭಾರತದ ಶ್ರೀಮಂತ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆಯಾಗಿದೆ.

ಕೋರಿಗಡ್ ಕೋಟೆ:

ಕೊರೈಗಡ್ ಎಂದೂ ಕರೆಯಲ್ಪಡುವ ಕೋರಿಗಡ್ ಕೋಟೆಯು ಲೋನಾವಾಲಾದಿಂದ 20-ಕಿಲೋಮೀಟರ್ ದೂರದಲ್ಲಿ ಮತ್ತು ಪೇತ್ ಶಾಹಪುರ್ ಎಂಬ ಹಳ್ಳಿಯ ಸಮೀಪದಲ್ಲಿದೆ. ಛತ್ರಪತಿ ಶಿವಾಜಿಯ ಆಳ್ವಿಕೆಯ ಸಮಯದಲ್ಲಿ ಈ ಕೋಟೆಯನ್ನು ನಿರ್ಮಿಸಲಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

Published On - 4:26 pm, Sun, 19 February 23

ಕಲಬುರಗಿ: ಕಾರ್ಮಿಕನ ಮೃತದೇಹವನ್ನು ಪ್ರಾಣಿ ತರಹ ಎಳೆದೊಯ್ದ ಸಿಮೆಂಟ್​ ಕಂಪನಿ
ಕಲಬುರಗಿ: ಕಾರ್ಮಿಕನ ಮೃತದೇಹವನ್ನು ಪ್ರಾಣಿ ತರಹ ಎಳೆದೊಯ್ದ ಸಿಮೆಂಟ್​ ಕಂಪನಿ
Daily Devotional: ಸ್ವಾತಿ ನಕ್ಷತ್ರ ಮಹತ್ವ ಹಾಗೂ ಫಲ ತಿಳಿಯಿರಿ
Daily Devotional: ಸ್ವಾತಿ ನಕ್ಷತ್ರ ಮಹತ್ವ ಹಾಗೂ ಫಲ ತಿಳಿಯಿರಿ
Daily horoscope: ಬುಧವಾರ ಯಾವ ರಾಶಿಯವರಿಗೆ ಶುಭ, ಅಶುಭ ತಿಳಿಯಿರಿ
Daily horoscope: ಬುಧವಾರ ಯಾವ ರಾಶಿಯವರಿಗೆ ಶುಭ, ಅಶುಭ ತಿಳಿಯಿರಿ
ಟಿವಿ ಶೋಗಳಲ್ಲಿ ಚೈತ್ರಾ ಕುಂದಾಪುರ ಬ್ಯುಸಿ; ಅಭಿಮಾನಿಗಳಿಗೆ ಒಂದು ಪ್ರಶ್ನೆ
ಟಿವಿ ಶೋಗಳಲ್ಲಿ ಚೈತ್ರಾ ಕುಂದಾಪುರ ಬ್ಯುಸಿ; ಅಭಿಮಾನಿಗಳಿಗೆ ಒಂದು ಪ್ರಶ್ನೆ
ಪುಟ್ಟ ಅಭಿಮಾನಿಗೆ ಮುತ್ತಿಟ್ಟು, ಸೆಲ್ಫಿ ತೆಗೆದುಕೊಂಡ ಜಗನ್ ಮೋಹನ್ ರೆಡ್ಡಿ
ಪುಟ್ಟ ಅಭಿಮಾನಿಗೆ ಮುತ್ತಿಟ್ಟು, ಸೆಲ್ಫಿ ತೆಗೆದುಕೊಂಡ ಜಗನ್ ಮೋಹನ್ ರೆಡ್ಡಿ
ವಿಮಾನದಲ್ಲಿ ಕೂತ ಮಹಿಳೆಯರ ಮುಖದಲ್ಲಿ ಸಂತಸ, ಸಂಭ್ರಮ ಜೊತೆ ಗಾಬರಿ
ವಿಮಾನದಲ್ಲಿ ಕೂತ ಮಹಿಳೆಯರ ಮುಖದಲ್ಲಿ ಸಂತಸ, ಸಂಭ್ರಮ ಜೊತೆ ಗಾಬರಿ
ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದ ಪವನ್ ಕಲ್ಯಾಣ್; ವಿಡಿಯೋ ನೋಡಿ
ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದ ಪವನ್ ಕಲ್ಯಾಣ್; ವಿಡಿಯೋ ನೋಡಿ
ಮಹಾಕುಂಭಮೇಳ ವಾರದ ನಂತರ ಮಹಾಶಿವರಾತ್ರಿಯಂದು ಸಂಪನ್ನಗೊಳ್ಳಲಿದೆ
ಮಹಾಕುಂಭಮೇಳ ವಾರದ ನಂತರ ಮಹಾಶಿವರಾತ್ರಿಯಂದು ಸಂಪನ್ನಗೊಳ್ಳಲಿದೆ
ಯುವತಿ ಹೇಳುವ ಮಾತುಗಳು ಗೊಂದಲ ಹುಟ್ಟಿಸುತ್ತವೆ, ಸ್ಪಷ್ಟ ಚಿತ್ರಣ ಸಿಗಲ್ಲ
ಯುವತಿ ಹೇಳುವ ಮಾತುಗಳು ಗೊಂದಲ ಹುಟ್ಟಿಸುತ್ತವೆ, ಸ್ಪಷ್ಟ ಚಿತ್ರಣ ಸಿಗಲ್ಲ
ಮಹಾಕುಂಭದಲ್ಲಿ ಕುಟುಂಬದೊಂದಿಗೆ ಪವಿತ್ರ ಸ್ನಾನ ಮಾಡಿದ ಸಚಿವ ಪ್ರಲ್ಹಾದ್ ಜೋಶಿ
ಮಹಾಕುಂಭದಲ್ಲಿ ಕುಟುಂಬದೊಂದಿಗೆ ಪವಿತ್ರ ಸ್ನಾನ ಮಾಡಿದ ಸಚಿವ ಪ್ರಲ್ಹಾದ್ ಜೋಶಿ