World Suicide Prevention Day 2024 : ನಮ್ಮ ಆತ್ಮೀಯರು ಆತ್ಮಹತ್ಯೆ ಮಾಡಿಕೊಂಡಾಗ ಆ ನೋವಿನಿಂದ ಹೊರಬರುವುದು ಹೇಗೆ? ಇಲ್ಲಿದೆ ತಜ್ಞರ ಸಲಹೆ

ನಿನ್ನೆ ನನ್ನೊಂದಿಗೆ ಚೆನ್ನಾಗಿಯೇ ಮಾತನಾಡುತ್ತಿದ್ದ ವ್ಯಕ್ತಿಯೂ ಇವತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವ ಸುದ್ದಿಯೂ ಕಿವಿಗೆ ಅಪ್ಪಳಿಸಿದರೆ ಅದನ್ನು ಅರಗಿಸಿಕೊಳ್ಳುವುದು ಕಷ್ಟವೇ. ಆತ್ಮೀಯ ವ್ಯಕ್ತಿಗಳು ಆತ್ಮಹತ್ಯೆಗೆ ಬಲಿಯಾದಾಗ ಸುತ್ತಮುತ್ತಲಿನ ವ್ಯಕ್ತಿಗಳಿಗೆ ಆ ನೋವಿನಿಂದ ಹೊರಬರಲು ಸಮಯ ತೆಗೆದುಕೊಳ್ಳುತ್ತದೆ. ಕುಟುಂಬಗಳು, ಸ್ನೇಹಿತರು ಮತ್ತು ಪ್ರೀತಿಪಾತ್ರರ ಮೇಲೆ ಬೀರುವ ಪರಿಣಾಮವಂತೂ ಅಧಿಕ. ವ್ಯಕ್ತಿಯ ದುಡುಕಿನ ನಿರ್ಧಾರದಿಂದ ವ್ಯಕ್ತಿಯನ್ನು ಕಳೆದುಕೊಂಡ ನೋವಿನಿಂದ ಕುಟುಂಬಸ್ಥರು ಹೊರಬರುವುದು ಹೇಗೆ ಎನ್ನುವುದರ ತಜ್ಞರು ಕೆಲವು ಸಲಹೆಗಳನ್ನು ನೀಡಿದ್ದಾರೆ.

World Suicide Prevention Day 2024 : ನಮ್ಮ ಆತ್ಮೀಯರು ಆತ್ಮಹತ್ಯೆ ಮಾಡಿಕೊಂಡಾಗ ಆ ನೋವಿನಿಂದ ಹೊರಬರುವುದು ಹೇಗೆ? ಇಲ್ಲಿದೆ ತಜ್ಞರ ಸಲಹೆ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 10, 2024 | 12:47 PM

ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಕರಣಗಳು ಜಾಗತಿಕವಾಗಿ ತೀವ್ರ ಕಳವಳಕ್ಕೆ ಕಾರಣವಾಗಿದೆ. ಪ್ರತಿ ವರ್ಷ ವಿಶ್ವದಾದ್ಯಂತ ಲಕ್ಷಾಂತರ ಜನರು ಆತ್ಮಹತ್ಯೆಯಿಂದ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಭಾರತದಲ್ಲೂ ಇದೊಂದು ಆತಂಕಕಾರಿ ಸಮಸ್ಯೆಯಾಗಿ ಹೊರಹೊಮ್ಮುತ್ತಿದೆ. ವರದಿಯ ಪ್ರಕಾರ, ಭಾರತದಲ್ಲಿ ವಾರ್ಷಿಕ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಮಾಣ ವೇಗವಾಗಿ ಹೆಚ್ಚುತ್ತಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ 2024 ರ ದತ್ತಾಂಶವನ್ನು ಆಧರಿಸಿ, ಒಟ್ಟು ಆತ್ಮಹತ್ಯೆಗಳ ಸಂಖ್ಯೆಯು ವಾರ್ಷಿಕವಾಗಿ 2% ರಷ್ಟು ಹೆಚ್ಚಾಗಿದೆ.

ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳ ಹೆಚ್ಚಳದ ಪ್ರಮಾಣವು 4% ಕ್ಕಿಂತ ಹೆಚ್ಚಾಗಿದೆ. ಈ ಅಂಕಿ ಅಂಶಗಳು ಆತಂಕಕ್ಕೆ ಕಾರಣವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿ ವರ್ಷ 720,000 ಕ್ಕೂ ಹೆಚ್ಚು ವ್ಯಕ್ತಿಗಳು ಆತ್ಮಹತ್ಯೆಯಿಂದ ಸಾಯುತ್ತಾರೆ. ಆತ್ಮಹತ್ಯೆಯಿಂದ ಸಾಯುವ ಜನರು ಆಗಾಗ್ಗೆ ತೀವ್ರವಾದ ಭಾವನಾತ್ಮಕ ನೋವು, ಹತಾಶತೆಯನ್ನು ಅನುಭವಿಸುತ್ತಾರೆ ಎಂದು ಮನೋವೈದ್ಯ ಡಾ ರಾಹುಲ್ ರೈ ಕಕ್ಕರ್ ಹೇಳಿದ್ದಾರೆ.

2012 ರಲ್ಲಿ ಡೈಲಾಗ್ಸ್ ಇನ್ ಕ್ಲಿನಿಕಲ್ ನ್ಯೂರೋಸೈನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಆತ್ಮೀಯರನ್ನು ಕಳೆದುಕೊಂಡ ಜನರಲ್ಲಿ ಖಿನ್ನತೆ, ಒತ್ತಡ, ಅಸ್ವಸ್ಥತೆ ಮತ್ತು ಆತ್ಮಹತ್ಯಾ ನಡವಳಿಕೆಗಳು ಕಾಣಿಸಿಕೊಳ್ಳುವ ಅಪಾಯವು ಹೆಚ್ಚಾಗಿರುತ್ತದೆ. ಆತ್ಮೀಯರು ಆತ್ಮಹತ್ಯೆಗೆ ಶರಣಾದ ಸಂದರ್ಭದಲ್ಲಿ ಆ ನೋವನ್ನು ಮರೆಯಲು ಕೆಲವು ತಂತ್ರಗಳನ್ನು ಆರಿಸಿಕೊಳ್ಳುವುದು ಮುಖ್ಯವಾಗಿರುತ್ತದೆ ಎಂದು ಡಾ ರಾಹುಲ್ ರೈ ಕಕ್ಕರ್ ತಿಳಿಸಿದ್ದಾರೆ.

* ಮನಸ್ಸಿನ ಎಲ್ಲಾ ನೋವನ್ನು ಹೊರಹಾಕಿ : ನಿಮ್ಮ ಆತ್ಮೀಯರನ್ನು ಕಳೆದುಕೊಂಡಾಗ ಆ ದುಃಖ ಹಾಗೂ ನೋವು ವಿವರಿಸಲು ಅಸಾಧ್ಯವಾಗಿರುತ್ತದೆ. ಈ ಸಮಯದಲ್ಲಿ ನಿಮಗೆ ನೀವು ಸಮಯವನ್ನು ನೀದುವುದರೊಂದಿಗೆ ವಾಸ್ತವವನ್ನು ಒಪ್ಪಿಕೊಳ್ಳುವುದು ಮುಖ್ಯ ಎನ್ನುತ್ತಾರೆ ತಜ್ಞರು.

* ಮಾನಸಿಕ ಬೆಂಬಲ ವ್ಯವಸ್ಥೆಯ ಜೊತೆಗಿರಿ : ಆತ್ಮೀಯರನ್ನು ಕಳೆದುಕೊಂಡು ಒಬ್ಬರೇ ಒಂಟಿಯಾಗಿ ದುಃಖ ಪಟ್ಟರೆ ಮಾನಸಿಕವಾಗಿ ಕುಗ್ಗಿ ಆ ಸಂದರ್ಭವನ್ನು ನಿಭಾಯಿಸಲು ಅಸಾಧ್ಯವಾಗಬಹುದು. ಈ ಸಮಯದಲ್ಲಿ ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರ ಬೆಂಬಲವು ಅತ್ಯಗತ್ಯವಾಗಿದೆ.

* ಆರೋಗ್ಯ ತಜ್ಞರ ಸಲಹೆಯಿರಲಿ : ಆತ್ಮೀಯರನ್ನು ಕಳೆದುಕೊಂಡ ದುಃಖದಿಂದ ಹೊರಬರಲು ಸಾಧ್ಯವಾಗದೇ ಇದ್ದಲ್ಲಿ ಆರೋಗ್ಯ ತಜ್ಞರ ಸಲಹೆಗಳನ್ನು ಪಡೆದುಕೊಂಡು ಚಿಕಿತ್ಸೆ ಪಡೆದುಕೊಳ್ಳುವುದು ಸೂಕ್ತವಾಗಿದೆ.

* ಮಾನಸಿಕ ಬೆಂಬಲ ನೀಡುವ ವ್ಯಕ್ತಿಯೊಂದಿಗೆ ಸಮಯ ಕಳೆಯಿರಿ : ಇತರರೊಂದಿಗೆ ಬೆರೆಯುವುದರಿಂದ ಆತ್ಮೀಯರ ಆತ್ಮಹತ್ಯೆ ನೋವಿನಿಂದ ಹೊರಬರಬಹುದು. ನಿಮಗೆ ಸದಾ ಬೆಂಬಲ ನೀಡುವ ವ್ಯಕ್ತಿಗಳ ಜೊತೆಗೆ ಬೆರೆಯುವುದರೊಂದಿಗೆ ಆ ದುಃಖವನ್ನು ಮರೆಯಲು ಸಾಧ್ಯವಾಗುತ್ತದೆ ಎನ್ನುತ್ತಾರೆ ತಜ್ಞರು.

* ವಾಸ್ತವವನ್ನು ಒಪ್ಪಿಕೊಳ್ಳಿ : ತಜ್ಞರು ಹೇಳುವಂತೆ ಆತ್ಮೀಯ ವ್ಯಕ್ತಿಯ ಆತ್ಮಹತ್ಯೆಯಂತಹ ಕಹಿ ಘಟನೆಯನ್ನು ಒಪ್ಪಿಕೊಳ್ಳಬೇಕು. ಆ ವ್ಯಕ್ತಿಯೂ ಯಾಕಾಗಿ ಈ ಕೆಟ್ಟ ಆಲೋಚನೆಗೆ ಕೈ ಹಾಕಿದರೂ ಎನ್ನುವುದಕ್ಕೆ ಸ್ಪಷ್ಟವಾದ ಉತ್ತರ ಹಾಗೂ ಕಾರಣವಿಲ್ಲದಿರಬಹುದು. ಆದರೆ ವಾಸ್ತವವನ್ನು ಒಪ್ಪಿಕೊಳ್ಳುವುದು ಸಂದರ್ಭದಲ್ಲಿ ನಿಭಾಯಿಸಲು ಸಹಾಯ ಮಾಡುತ್ತದೆ

* ವ್ಯಕ್ತಿ ಜೊತೆಗೆ ಒಳ್ಳೆಯ ನೆನಪುಗಳನ್ನು ಮೆಲುಕು ಹಾಕಿ : ಆತ್ಮೀಯ ವ್ಯಕ್ತಿಯ ನೆನಪು ಕಾಡುವುದು ಸಹಜ. ಆದರೆ ಆತ್ಮಹತ್ಯೆಯನ್ನು ನೆನಪಿಸಿಕೊಳ್ಳದೆ ಆ ವ್ಯಕ್ತಿಯ ಜೊತೆಗೆ ಒಂದೊಳ್ಳೆ ನೆನಪುಗಳನ್ನು ನಿಮ್ಮೊಂದಿಗೆ ಸದಾ ಇರಲಿ. ಈ ಮೂಲಕ ಕಹಿ ನೆನಪನ್ನು ಮರೆಯುವುದನ್ನು ಕಲಿಯಿರಿ.

* ಸ್ವಯಂ ಸಹಾನುಭೂತಿವಿರಲಿ : ಆತ್ಮೀಯರ ಆತ್ಮಹತ್ಯೆಯ ಬಳಿಕ ಕೋಪ, ದುಃಖ ಹಾಗೂ ಅಪರಾಧದಂತಹ ಭಾವನೆಗಳನ್ನು ಅನುಭವಿಸುವುದು ಸಹಜ. ನಿಮ್ಮ ಮೇಲೆ ನೀವೇ ಸ್ವಯಂ ಸಹಾನುಭೂತಿಯನ್ನು ತೋರಿ. ನಿಮ್ಮ ಪ್ರೀತಿಪಾತ್ರರ ಜೀವನವನ್ನು ತೆಗೆದುಕೊಳ್ಳುವ ನಿರ್ಧಾರಕ್ಕೆ ನೀವು ಜವಾಬ್ದಾರರಲ್ಲ.

* ಸ್ಮಾರಕ ನಿರ್ಮಿಸಿ ಗೌರವ ಸಲ್ಲಿಸಿ : ನಿಮ್ಮ ಪ್ರೀತಿಪಾತ್ರರನ್ನು ಸ್ಮಾರಕ ನಿರ್ಮಿಸಿ ಗೌರವ ಸಲ್ಲಿಸುವುದು. ಮರವನ್ನು ನೆಡುವುದು, ಫೋಟೋ ಆಲ್ಬಮ್ ಅನ್ನು ರಚಿಸುವುದು ಅಥವಾ ಅವರ ನೆನಪಿಗಾಗಿ ಈವೆಂಟ್ ಅನ್ನು ಆಯೋಜಿಸುವುದು ಹೀಗೆ ಮನಸ್ಸಿಗೆ ನೆಮ್ಮದಿಯನ್ನು ಕಂಡುಕೊಳ್ಳಬಹುದು.

ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಂಡವರಲ್ಲಿ ಮಹಿಳೆಯರಿಗಿಂತ ಪುರುಷರೇ ಅಧಿಕ: ಅಂಕಿಅಂಶದಿಂದ ಬಹಿರಂಗ

* ಸುಧಾರಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ ಎನ್ನುವುದು ತಿಳಿದಿರಲಿ : ಆತ್ಮಹತ್ಯೆಯಿಂದ ವ್ಯಕ್ತಿಯನ್ನು ಕಳೆದುಕೊಂಡ ವೇಳೆ ನಮ್ಮನ್ನು ನಾವು ಮಾನಸಿಕವಾಗಿ ಸದೃಢರಾಗುವುದು ದೀರ್ಘ ಪ್ರಕ್ರಿಯೆಯಾಗಿದ್ದು, ಈ ವೇಳೆಯಲ್ಲಿ ತಾಳ್ಮೆಯಿಂದಿರುವುದು ಮುಖ್ಯ. ನೀವು ಕಡಿಮೆ ನೋವನ್ನು ಅನುಭವಿಸುತ್ತೀರಿ, ಆದರೆ ನಿಮ್ಮ ಪ್ರೀತಿಪಾತ್ರರನ್ನು ನೀವು ಮರೆತುಬಿಡುತ್ತೀರಿ ಎಂದರ್ಥವಲ್ಲ.

* ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ : ಅತಿಯಾದ ದುಃಖದಿಂದ ಊಟ ತಿಂಡಿ ಹಾಗೂ ನಿದ್ದೆಯೂ ಕಡಿಮೆಯಾಗಬಹುದು. ಸಾಕಷ್ಟು ನಿದ್ದೆ ಮತ್ತು ನಿಯಮಿತವಾಗಿ ಊಟ ಮಾಡುವುದು ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಗತ್ಯ. ಅಮೇರಿಕನ್ ಸೈಕಲಾಜಿಕಲ್ ಅಸೋಸಿಯೇಷನ್ ​​ಪ್ರಕಾರ, ನಿಮ್ಮ ಬಗ್ಗೆ ನೀವೇ ಕಾಳಜಿ ವಹಿಸುವುದರಿಂದ ಸೃಜನಾತ್ಮಕ ಚಟುವಟಿಕೆಗಳನ್ನು ಭಾಗವಹಿಸುವುದರಿಂದ ಕಹಿ ನೋವನ್ನು ಮರೆಯಲು ಸಾಧ್ಯವಾಗುತ್ತದೆ ಎನ್ನುತ್ತಾರೆ ತಜ್ಞರು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬೆಳಗಾವಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ
ಬೆಳಗಾವಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ
ಪ್ರಭಾಕರ್ ಜೊತೆ ಸರಿಗಮ ವಿಜಿಗೆ ಇತ್ತು ಒಳ್ಳೆಯ ಒಡನಾಟ
ಪ್ರಭಾಕರ್ ಜೊತೆ ಸರಿಗಮ ವಿಜಿಗೆ ಇತ್ತು ಒಳ್ಳೆಯ ಒಡನಾಟ
ಕಾಂಗ್ರೆಸ್​ನ ನೂತನ ಪ್ರಧಾನ​ ಕಚೇರಿ‘ಇಂದಿರಾ ಭವನ’ ಉದ್ಘಾಟಿಸಿದ ಸೋನಿಯಾ
ಕಾಂಗ್ರೆಸ್​ನ ನೂತನ ಪ್ರಧಾನ​ ಕಚೇರಿ‘ಇಂದಿರಾ ಭವನ’ ಉದ್ಘಾಟಿಸಿದ ಸೋನಿಯಾ
ಹೋಲಿ ಡಿಪ್ ಆಧ್ಯಾತ್ಮಿಕ ಅನುಭೂತಿಯನ್ನು ನೀಡುತ್ತದೆ: ರಷ್ಯನ್ ಮಹಿಳೆ
ಹೋಲಿ ಡಿಪ್ ಆಧ್ಯಾತ್ಮಿಕ ಅನುಭೂತಿಯನ್ನು ನೀಡುತ್ತದೆ: ರಷ್ಯನ್ ಮಹಿಳೆ
ನೂತನ ಎಐಸಿಸಿ ಕಟ್ಟಡಕ್ಕೆ ಇಂದಿರಾ ಗಾಂಧಿ ಭವನ್ ಎಂದು ಹೆಸರಿಡಲಾಗಿದೆ
ನೂತನ ಎಐಸಿಸಿ ಕಟ್ಟಡಕ್ಕೆ ಇಂದಿರಾ ಗಾಂಧಿ ಭವನ್ ಎಂದು ಹೆಸರಿಡಲಾಗಿದೆ
ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
Daily Horoscope: ಈ ರಾಶಿಯವರು ಇಂದು ಮಕ್ಕಳಿಂದ ಶುಭ ಸುದ್ದಿ ಕೇಳುವರು
Daily Horoscope: ಈ ರಾಶಿಯವರು ಇಂದು ಮಕ್ಕಳಿಂದ ಶುಭ ಸುದ್ದಿ ಕೇಳುವರು
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ