World Youth Skill day 2021: ಸಾಂಕ್ರಾಮಿಕ ಸಮಯದಲ್ಲಿ ಕೌಶಲ್ಯ ಅಭಿವೃದ್ಧಿ ಎದುರಿಸಿದ ಅಡೆತಡೆಗಳು ಮತ್ತು ಸವಾಲುಗಳು
ವಿಶ್ವ ಯುವ ಕೌಶಲ್ಯ ದಿನ: ಏಕಾಏಕಿ ಆಕ್ರಮಿಸಿದ ಕೊರೊನಾ ವೈರಸ್ ಸಾಂಕ್ರಾಮಿದಿಂದಾಗಿ ಶಿಕ್ಷಣ ಮತ್ತು ತರಬೇತಿ ಕೆಂದ್ರಗಳು ಅಡೆತಡೆಗಳನ್ನು ಎದುರಿಸಬೇಕಾಯಿತು. 2020ರ ಸಪ್ಟೆಂಬರ್ನಲ್ಲಿ ಕೊರೊನಾ ಮಹಾಮಾರಿಯ ದಾಳಿಯಿಂದ ವ್ಯವಹಾರ ಸಂಸ್ಥೆಗಳು ಮುಚ್ಚಲ್ಪಟ್ಟವು. ಇದರಿಂದ ಚಟುವಟಿಕೆಗಳು ಕುಂಠಿತಗೊಂಡವು.
ವಿಶ್ವ ಸಂಸ್ಥೆ ಜುಲೈ 15ಅನ್ನು ವಿಶ್ವ ಯುವ ಕೌಶಲ್ಯ ದಿನವೆಂದು ಘೋಷಿಸಿತು. ಯುವ ಜನರು ಕೆಲಸದ ವಾತಾವರಣದಲ್ಲಿ ತೊಡಗಿಕೊಳ್ಳುವುದು, ಯುವ ಜನರ ಘನತೆ ಜತೆಗೆ ಶ್ರಮವನ್ನು ಗುರುತಿಸಿ ಈ ದಿನವನ್ನು ವಿಶ್ವ ಯುವ ಕೌಶಲ್ಯ ದಿನ(World Youth Skill day) ಎಂಬುದಾಗಿ ಆಚರಣೆ ಮಾಡಲಾಗುತ್ತದೆ. ಈ ದಿನವು ವೃತ್ತಿಪರ ಶಿಕ್ಷಣ, ತರಬೇತಿ ಸಂಸ್ಥೆಗಳು, ವ್ಯವಹಾರಗಳು, ಉದ್ಯೋಗ, ಕಾರ್ಮಿಕ ಸಂಘಗಳು ಮತ್ತು ಅಭಿವೃದ್ಧಿ ಏಜೆನ್ಸಿಗಳ ಜತೆಗೆ ಯುವ ಜನರು ಸಂವಹನ ನಡೆಸಲು ಅವಕಾಶವನ್ನು ಕಲ್ಪಿಸಿಕೊಡುತ್ತದೆ. ಜತೆಗೆ ಸುಸ್ಥಿರ ಅಭಿವೃದ್ಧಿಯಲ್ಲಿ ಸಾಗುತ್ತಿರುವಾಗ ಕೌಶಲ್ಯಗಳ ಪ್ರಾಮುಖ್ಯತೆಯನ್ನು ಸಾರು ದಿನ ಇದಾಗಿದೆ.
ಏಕಾಏಕಿ ಆಕ್ರಮಿಸಿದ ಕೊರೊನಾ ವೈರಸ್ ಸಾಂಕ್ರಾಮಿದಿಂದಾಗಿ ಶಿಕ್ಷಣ ಮತ್ತು ತರಬೇತಿ ಕೆಂದ್ರಗಳು ಅಡೆತಡೆಗಳನ್ನು ಎದುರಿಸಬೇಕಾಯಿತು. 2020ರ ಸಪ್ಟೆಂಬರ್ನಲ್ಲಿ ಕೊರೊನಾ ಮಹಾಮಾರಿಯ ದಾಳಿಯಿಂದ ವ್ಯವಹಾರ ಸಂಸ್ಥೆಗಳು ಮುಚ್ಚಲ್ಪಟ್ಟವು. ಇದರಿಂದ ಚಟುವಟಿಕೆಗಳು ಕುಂಠಿತಗೊಂಡವು.
ಮುಖ್ಯ ಸವಾಲುಗಳು ಮತ್ತು ಅಡೆತಡೆಗಳು ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ ಇಂಟರ್ನೆಟ್ ಉಪಯೋಗ ಶೇ.27ರಿಂದ 50ಕ್ಕೆ ಏರಿಕೆಯಾಗಿದೆ. ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದ ಯುವಕರು ಮೊಬೈಲ್, ಮತ್ತು ಇಂಟರ್ನೆಟ್ ವೆಬ್ಗಳಿಗೆ ಹೆಚ್ಚು ಹೊಂದಿಕೊಂಡರು. ಹಳೆದ ವರ್ಷದಲ್ಲಿ ಲಾಕ್ಡೌನ್ ಜಾರಿಗೊಳಿಸುವುದಕ್ಕಿಂತಲೂ ಮೊದಲು ಸುಮಾರು ಶೇ.25 ರಿಂದ 30 ವಿದ್ಯಾರ್ಥಿಗಳು ಸ್ಮಾರ್ಟ್ಫೋನ್ಗಳನ್ನು ಹೊಂದಿರಲಿಲ್ಲ. ಆದರೆ ತಂತ್ರಜ್ಞಾನ ಯುಗಕ್ಕೆ ಯುವಕರು ಹೆಚ್ಚು ಹೊಂದಿಕೊಳ್ಳುವ ಪರಿಸ್ಥಿತಿ ಎದುರಾಗಿತ್ತು. ಮೊದಲೆಲ್ಲಾ ಇಂಟರ್ನೆಟ್ ಕಾರ್ಯಕ್ರಮದ ಮೂಲಕ ಅವರನ್ನು ತಲುಪುವುದು ಕಷ್ಟವಾಗಿತ್ತು. ಆದರೆ ಸಾಂಕ್ರಾಮಿಕ ಸಮಯವು ವಿದ್ಯಾರ್ಥಿಗಳ ನಡುವೆ ಡಿಜಿಟಲ್ ಯುಗವನ್ನು ಹೆಚ್ಚಿಸಿದೆ.
ಕಡಿಮೆ ಉದ್ಯೋಗ ಅವಕಾಶ ಸಾಂಕ್ರಾಮಿಕ ಸಮಯದಲ್ಲಿ ಎಲ್ಲಾ ಉದ್ಯೋಗ ಸಂಸ್ಥೆಗಳು ಮುಚ್ಚಲ್ಪಟ್ಟವು. ಎಲ್ಲವೂ ಇಂಟರ್ನೆಟ್ ಮೂಲಕ ಡಿಜಿಟಲ್ ಯುಗಕ್ಕೆ ಹೊಂದಿಕೊಳ್ಳಬೇಕಾಯಿತು. ಇದು ಹೊಸ ಉದ್ಯೋಗಸ್ಥರಿಗೆ ಹೊಡೆತವನ್ನು ಉಂಟು ಮಾಡಿತು. ಲಾಕ್ಡೌನ್ ತೆರವುಗೊಳಿಸುತ್ತಿದ್ದಂತೆಯೇ ತರಬೇತಿ ಕಾರ್ಯಕ್ರಮಗಳಿಗೆ ಋಣಾತ್ಮಕ ಪರಿಣಾಮ ಬೀರಿತು. ಏಕೆಂದರೆ ಬೇಡಿಕೆ ಮತ್ತು ಪೂರೈಕೆಯ ನಡುವೆಯಲ್ಲಿನ ಇಳಿಕೆಯು ಚಟುವಟಿಕೆಗಳನ್ನು ಕುಂಠಿತಗೊಳಿಸಿತು.
ಹಾಗೆಯೇ ಮಕ್ಕಳು, ಪೋಷಕರು ಕಂಡುಕೊಂಡಿದ್ದು ಕೆಲವು ಯೋಜನೆಗಳನ್ನು ಅನಿವಾರ್ಯವಾಗಿ ಮುಂದೂಡಬೇಕಾದ ಪ್ರಸಂಗ ಎದುರಾಯಿತು. ಇದರಿಂದಾಗಿ ಉದ್ಯೋಗ ಅವಕಾಶಗಳು ಕಡಿಮೆಯಾದವು. ಸಣ್ಣ ಕೌಶಲ್ಯ ಅಭಿವೃದ್ಧಿ ಸಂಸ್ಥೆಗಳು ಹೆಚ್ಚು ಒತ್ತಡಕ್ಕೆ ಸಿಲುಕಿದವು. ಹಾಗಾಗಿ ಅದೆಷ್ಟೋ ಜನರ ಉದ್ಯೋಗ ಕಳೆದುಕೊಂಡರು.
ಇದನ್ನೂ ಓದಿ:
PM Modi: ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ