Chennaveera Kanavi Death: ಕಾವ್ಯಕುಶಲಿ ಚೆನ್ನವೀರ ಕಣವಿಯವರಿಗೆ ಸುನೀತಗಳೆಂದರೆ ಇಷ್ಟಾರ್ಥ ಸಿದ್ಧಿಯಂತೆ

Tribute To Chennaveera Kanavi : ‘ಬೇರೆ ಭಾಷೆಗಳಿಂದ ಬಂದ ಛಂದೋ ರೂಪಗಳು ಕೆಲವೊಮ್ಮೆ ಕನ್ನಡದಲ್ಲಿ ಸಪ್ಪೆ ಎನಿಸುತ್ತವೆ. ಆದರೆ ಕಣವಿಯವರ ಸುನೀತಗಳು ಕನ್ನಡದ ಮಣ್ಣಿನ ದೀಕ್ಷೆ ಪಡೆದು ಸಹಜವಾಗಿ ಅರಳಿಕೊಂಡಿವೆ. ಶಾಸ್ತ್ರೀಯ ಸಂಗೀತಗಾರರು ರಾಗವೊಂದನ್ನು ಆತ್ಮಸಾಥ್ ಮಾಡಿಕೊಳ್ಳುವಂತೆ ಕಣವಿಯವರು ‘ಸುನೀತ’ವನ್ನು ಆತ್ಮಸಾಥ್ ಮಾಡಿಕೊಂಡಿದ್ದರು’ ಡಾ. ವಿಕ್ರಮ ವಿಸಾಜಿ

Chennaveera Kanavi Death: ಕಾವ್ಯಕುಶಲಿ ಚೆನ್ನವೀರ ಕಣವಿಯವರಿಗೆ ಸುನೀತಗಳೆಂದರೆ ಇಷ್ಟಾರ್ಥ ಸಿದ್ಧಿಯಂತೆ
ಡಾ. ಚೆನ್ನವೀರ ಕಣವಿ ಮತ್ತು ಡಾ. ವಿಕ್ರಮ ವಿಸಾಜಿ
Follow us
ಶ್ರೀದೇವಿ ಕಳಸದ
|

Updated on: Feb 16, 2022 | 12:48 PM

ಚೆನ್ನವೀರ ಕಣವಿ | Chennaveera Kanavi: ಬೇಂದ್ರೆಯವರ ಕಾವ್ಯರಚನೆಯ ವಿಧಾನವನ್ನು ಕಣವಿಯವರು ಬರೆದ ಕವಿತೆಯು ಶಕ್ತಿಯುತವಾಗಿ ಹಿಡಿದಿದೆ. ಒಳದನಿಗೆ ನಾದ ಕೂಡಿಸುವ ಅಥವಾ ಹುಡುಕುವ ನಿರಂತರ ಕ್ರಿಯೆಯೆ ಬೆಂದ್ರೆಯವರ ಕಾವ್ಯದ ಪಯಣವಾಗಿತ್ತು. ಅವರ ಕವಿತೆಗಳನ್ನು ಓದಿದವರಿಗೆ ಬೇಂದ್ರೆಯವರ ನಾದಗುಣ ಮತ್ತು ದರ್ಶನಗುಣ ಅಪರಿಚಿತವೇನಲ್ಲ. ನೆಲಕೆ ನೀರು ಬರಿಸುವ ಹಾಗೆ – ಬೇಂದ್ರೆಯವರ ಕಾವ್ಯದ ಒರತೆ, ಅಂತಃಕರಣದ ಜಲ, ಜೀವಂತಿಕೆ ಉಕ್ಕಿಸುವ ರೀತಿಗೆ ಸಮರ್ಥ ಸೂಚಕ. ಮುಂದಿನ ಸಾಲುಗಳು ಬೇಂದ್ರೆಯವರ ಕಾವ್ಯದ ಮಾಂತ್ರಿಕತೆ, ಬೆಡಗನ್ನು ಚಿತ್ರಿಸಿದೆ. ಅವರ ಕಾವ್ಯದ ಅಗಾಧ ಕಲ್ಪನಾ ಶಕ್ತಿ ಕಣವಿಯವರ ಕಲ್ಪನೆಯಲ್ಲಿ ರೇಖಿಸಲ್ಪಟ್ಟಿದೆ; ‘ಕಡಲ ಗುಟುಕರಿಸಿ ಚಿಕ್ಕೆಗಳ ಮುಕ್ಕಳಿಸುವರು’. ಎಲ್ಲಿಂದೆಲ್ಲಿಗೊ ಜಿಗಿಯುವ, ಸ್ವರ್ಗ-ನರಕಗಳನ್ನು ತಾಕುವ, ಯುಗಯುಗಗಳನ್ನು ಸಂಧಿಸುವ ಬೇಂದ್ರೆಯವರ ಕಾವ್ಯಗುಣಕ್ಕೆ ಇದಕ್ಕಿಂತ ಸೂಕ್ತವಾದ ನಿದರ್ಶನ ಇನ್ನೊಂದಿರಲಾರದು. ಡಾ. ವಿಕ್ರಮ ವಿಸಾಜಿ, ಲೇಖಕ, ಅನುವಾದಕ

*

(ಭಾಗ – 4)

ಅಂಬಿಕಾತನಯರ ವಯಸ್ಸು, ಅವರ ಕಾವ್ಯದ ವಯಸ್ಸು ಊಹೆಗೆ ನಿಲುಕಲಾರದ್ದು. ಅದರ ಲೆಕ್ಕ ಹಾಕುತ್ತ ಕೂಡುವುದರಲ್ಲಿ ಅರ್ಥವಿಲ್ಲ. ಬೇಂದ್ರೆಯವರಿಗೂ ಅದರ ಖಬರಿಲ್ಲ. ಜಗದಂಬೆ ಹಡಲಿಗೆ ಹೊತ್ತು ಕುಣಿವ ಅವರಿಗೆ ಇದಕ್ಕೆಲ್ಲ ಪುರುಸೊತ್ತು ಎಲ್ಲಿದೆ?. ಅವರ ಕಾವ್ಯವ್ಯಕ್ತಿತ್ವ ತಾನು ನಡೆದದ್ದನ್ನೆಲ್ಲ ಸಾಧನಕೇರಿ ಮಾಡುತ್ತದೆ ಮತ್ತು ನುಡಿದುದನ್ನೆಲ್ಲ ಕಾವ್ಯವಾಗಿಸುತ್ತದೆ. ಹೀಗೆ ವ್ಯಕ್ತಿತ್ವದ ಸೂಕ್ಷ್ಮಗ್ರಹಿಕೆ ಕಣವಿಯವರ ಇನ್ನೂ ಹಲವು ಕವಿತೆಗಳಲ್ಲಿದೆ. ಲಂಕೇಶ್ ಕುರಿತು ಬರೆದಿರುವ ‘ನೀಲುವಿಗೊಂದು ಶಾಲು’ ಕವಿತೆ ಕೂಡ ತನ್ನ ಚುರುಕಾದ ನೋಟದಿಂದ ಗಮನ ಸೆಳೆಯುತ್ತದೆ.

ಕನ್ನಡದಲ್ಲಿ ಬಂದ ಸುನೀತಗಳಲ್ಲೂ ಕಣವಿಯವರದೇ ಮೇಲುಗೈ. ಸುನೀತದ ಆಕೃತಿಯನ್ನು ಬಳಸಿಕೊಂಡ ಬಗೆ ಕಣವಿಯವರ ಕಾವ್ಯಶಿಸ್ತಿಗೆ ಒಂದು ನಿದರ್ಶನ. ಬೇರೆ ಭಾಷೆಗಳಿಂದ ಬಂದ ಛಂದೋ ರೂಪಗಳು ಕೆಲವೊಮ್ಮೆ ಕನ್ನಡದಲ್ಲಿ ಸಪ್ಪೆ ಎನಿಸುತ್ತವೆ. ಆದರೆ ಕಣವಿಯವರಲ್ಲಿ ಮಾತ್ರ ಹಾಗಾಗುವುದಿಲ್ಲ. ಅವು ಕನ್ನಡದ ಮಣ್ಣಿನ ದೀಕ್ಷೆ ಪಡೆದು ಸಹಜವಾಗಿ ಅರಳಿಕೊಂಡಿವೆ. ಶಾಸ್ತ್ರೀಯ ಸಂಗೀತಗಾರರು ರಾಗವೊಂದನ್ನು ಆತ್ಮಸಾಥ್ ಮಾಡಿಕೊಳ್ಳುವಂತೆ ಕಣವಿಯವರು ‘ಸುನೀತ’ ಕಾವ್ಯಪದ್ಧತಿಯನ್ನು ಆತ್ಮಸಾಥ್ ಮಾಡಿಕೊಂಡಿದ್ದರು. ಹೀಗಾಗಿ ಸ್ವೀಕರಣದ ಎಲ್ಲ ಕೃತಕತೆ ಮೀರಿ ಇವು ಹೊಳೆದಿವೆ ಮತ್ತು ಬೆಳೆದಿವೆ. ಕುಶಲ ಶಿಲ್ಪಿಯಂತೆ, ಸಂಗೀತಗಾರನಂತೆ ಕಣವಿಯವರು ‘ಸುನೀತ’ವನ್ನು ಸಾಣೆ ಹಿಡಿದಿದ್ದರು.

ಭಾಗ – 2 : Chennaveera Kanavi Death: ‘ಶಾಂತಿಪ್ರಿಯರೆ, ಸಂಭಾವಿತರೆ, ಸಹಿಷ್ಣುತಾವಾದಿಗಳೆ; ಹಾದಿಬೀದಿಗಳೆ ಹೇಳುತ್ತಿವೆ ಕಥೆಯ’

ಸುನೀತಗಳು ಚೆನ್ನವೀರ ಕಣವಿಯವರ ಇಷ್ಟಾರ್ಥ ಸಿದ್ಧಿಗಳು. ಕಳೆದ ಆರು ದಶಕಗಳಿಂದ ಅವರ ಕಾವ್ಯಜೀವನದ ಅವಿಭಾಜ್ಯ ಅಂಗವಾಗಿ ಸುನೀತವು ಮುಂದುವರೆಯಿತು. ಇದು ಅಚ್ಚರಿ ಮತ್ತು ಅಪರೂಪದ ಸಂಗತಿ. ಈ ಮೂಲಕ ಕನ್ನಡಕ್ಕೆ ಹೊಸ ಶೈಲಿಯೊಂದು ಒದಗಿದೆ. ಒಂದು ಭಾಷೆಗೂ ಆ ಭಾಷೆಯಲ್ಲಿ ಹುಟ್ಟಿಕೊಂಡಿರುವ ಛಂದಸ್ಸಿಗೂ ಗಾಢವಾದ ನಂಟಿರುತ್ತದೆ. ಆದರೆ ಯಾವುದೇ ಛಂದಸ್ಸು ಇನ್ನೊಂದು ಭಾಷೆಗೆ ಚಲಿಸಿ ಹೊಸ ಲಕ್ಷಣಗಳನ್ನು ಮೈಗೂಡಿಸಿಕೊಂಡಿರುತ್ತದೆ. ಅಷ್ಟೇ ಯಾಕೆ ಒಂದೇ ಭಾಷೆಯ ವಿವಿಧ ಕವಿಗಳಲ್ಲೂ ಅದು ಬಗೆಬಗೆಯಾಗಿ ಅರಳುವುದುಂಟು. ಅಂದರೆ, ಛಂದಸ್ಸಿಗಿರುವ ಈ ಫ್ಲೆಕ್ಸಿಬಲ್ ಗುಣವನ್ನು ಮರೆಯದೇ ವಿವಿಧ ಭಾಷೆಗಳಲ್ಲಿ ಅದು ಮೂಡಿನಿಂತ ಕ್ರಮವನ್ನು ಅರಿಯಬೇಕಾಗಿದೆ. ಇಲ್ಲವಾದರೆ ಸಾನೆಟ್ ನಮ್ಮದಲ್ಲ ಅನ್ನುವ ಸಂಗತಿಯೇ ಮುಖ್ಯವಾಗಿ, ಸಾನೆಟ್ ಹೇಗೆ ನಮ್ಮದಾಯಿತು ಅನ್ನುವ ಸಂಗತಿ ಹಿಂದೆ ಸರಿಯುತ್ತದೆ. ಈ ಎರಡನೆಯದನ್ನು ಪರಿಶೀಲಿಸುವ ಅನಿವಾರ್ಯತೆಯನ್ನು ಕಣವಿಯವರು ಸುನೀತಗಳು ಉಂಟುಮಾಡಿದ್ದು ಒಂದು ಸಾಧನೆಯೆ ಸರಿ. ನಮ್ಮದಲ್ಲದ ಛಂದಸ್ಸನ್ನು ನಾವು ಬಳಸಬಾರದೆಂದರೆ ಕೆಲಮಟ್ಟಿಗೆ ನಮ್ಮ ಕಾವ್ಯ ಭಾಷೆ ಬಡವಾಯಿತೆಂದೇ ಅರ್ಥ. ಉದ್ದಕ್ಕೂ ಕನ್ನಡ ಕಾವ್ಯ ಬೇರೆ ಬೇರೆ ಭಾಷೆಗಳ ಛಂದಸ್ಸುಗಳೊಂದಿಗೆ ಒಡನಾಟವಿಟ್ಟುಕೊಂಡು ಬೆಳೆದುಬಂದ ಚರಿತ್ರೆ ನಮ್ಮ ಕಣ್ಣೆದುರಿಗಿದೆ. ಇದನ್ನೆಲ್ಲ ತಾಳ್ಮೆಯಿಂದ ಅರಿತು ಕನ್ನಡ ಕಾವ್ಯದ ಯಶಸ್ಸನ್ನು ಪರಿಶೀಲಿಸಬೇಕಾಗಿದೆಯೇನೋ.

ಭಾಗ 3 : Chennaveera Kanavi Death: ‘ವ್ಯಕ್ತಿಗೀತೆ’; ಬೇಂದ್ರೆಯವರಿಗೆ ಎಪ್ಪತ್ತು ತುಂಬಿದಾಗ ಕಣವಿಯವರು ಬರೆದ ಧೀಮಂತ ಕವಿತೆ

ಭಾಗ 1 : Chennaveer Kanavi Death: ಬಾಳುವುದೆಂದರೆ, ಕೊಡುವುದೆಂದರೆ, ಕೊಂಬುದೆಂದರೆ, ಮಾಗುವುದೆಂದರೆ..

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ