AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

5 State Assembly Election Exit Poll Results 2026: ಅಸ್ಸಾಂ, ಬಂಗಾಳದಲ್ಲಿ ಬಿಜೆಪಿಗೆ ಭರ್ಜರಿ ಜಯ, ಕೇರಳ, ತಮಿಳುನಾಡಿನಲ್ಲಿ ಕಾಂಗ್ರೆಸ್ ಮೈತ್ರಿಗೆ ಗೆಲುವು; ಎಕ್ಸಿಟ್ ಪೋಲ್ ಸಮೀಕ್ಷೆ ಇಲ್ಲಿದೆ

5 State Assembly Election Exit Poll Results 2026 in Kannada : ಏಪ್ರಿಲ್ 9ರಂದು ಅಸ್ಸಾಂನ 126 ಕ್ಷೇತ್ರಗಳು, ಕೇರಳದ 140 ಕ್ಷೇತ್ರಗಳು ಮತ್ತು ಪುದುಚೇರಿಯ 30 ಕ್ಷೇತ್ರಗಳಿಗೆ ಏಕಕಾಲದಲ್ಲಿ ವಿಧಾನಸಭಾ ಚುನಾವಣೆ ನಡೆಯಿತು. ಏಪ್ರಿಲ್ 23ರಂದು ತಮಿಳುನಾಡಿನ ಎಲ್ಲಾ 234 ಕ್ಷೇತ್ರಗಳಿಗೆ ಮತದಾನ ನಡೆಯಿತು. ಪಶ್ಚಿಮ ಬಂಗಾಳದಲ್ಲಿ 152 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಏಪ್ರಿಲ್ 23ರಂದು ನಡೆಯಿತು. ಎರಡನೇ ಮತ್ತು ಅಂತಿಮ ಹಂತದ ಮತದಾನ ಇಂದು ನಡೆಯಿತು. ಈ 5 ರಾಜ್ಯಗಳ ಚುನಾವಣಾ ಫಲಿತಾಂಶ ಮೇ 4ರಂದು ಹೊರಬೀಳಲಿದೆ. ಆದರೆ, ಅದಕ್ಕೂ ಮುನ್ನ ಇಂದು ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿದೆ. ಎಕ್ಸಿಟ್ ಪೋಲ್ ಪ್ರಕಾರ ಯಾವ ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬುದರ ವಿವರ ಇಲ್ಲಿದೆ.

5 State Assembly Election Exit Poll Results 2026: ಅಸ್ಸಾಂ, ಬಂಗಾಳದಲ್ಲಿ ಬಿಜೆಪಿಗೆ ಭರ್ಜರಿ ಜಯ, ಕೇರಳ, ತಮಿಳುನಾಡಿನಲ್ಲಿ ಕಾಂಗ್ರೆಸ್ ಮೈತ್ರಿಗೆ ಗೆಲುವು; ಎಕ್ಸಿಟ್ ಪೋಲ್ ಸಮೀಕ್ಷೆ ಇಲ್ಲಿದೆ
5 State Assembly Election Exit Poll Results
ಸುಷ್ಮಾ ಚಕ್ರೆ
|

Updated on:Apr 29, 2026 | 7:36 PM

Share

ನವದೆಹಲಿ, ಏಪ್ರಿಲ್ 29: ಈಗಾಗಲೇ ಅಸ್ಸಾಂ, ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ಮತ್ತು ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆ (Assermbly Electiopns 2026) ನಡೆದಿದೆ. ಮೇ 4ರಂದು ಮತ ಎಣಿಕೆ ನಡೆಯಲಿದ್ದು, ಅದೇ ದಿನ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. 5 ರಾಜ್ಯಗಳ ಚುನಾವಣಾ ಫಲಿತಾಂಶಗಳ ಮೊದಲು ಎಲ್ಲರ ಗಮನವು ಚುನಾವಣೋತ್ತರ ಸಮೀಕ್ಷೆಗಳ (Exit Poll Results) ಮೇಲೆ ಇದೆ. ಇದಿಗ ಎಕ್ಸಿಟ್ ಪೋಲ್ ಫಲಿತಾಂಶ ಪ್ರಕಟವಾಗಿದ್ದು, ಯಾವ ಸಮೀಕ್ಷೆ ಏನು ಹೇಳುತ್ತದೆ ಎಂಬುದರ ಮಾಹಿತಿ ಇಲ್ಲಿದೆ.

ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿಯ ಎಕ್ಸಿಟ್ ಪೋಲ್ ಹೊರಬಿದ್ದಿದೆ. ಎಕ್ಸಿಟ್ ಪೋಲ್ ಪ್ರಕಾರ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಬಿಜೆಪಿ ಗೆಲುವಿನ ನಗು ಬೀರಲಿದೆ. ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಕಾಂಗ್ರೆಸ್ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ. ಕೇರಳದಲ್ಲಿ ಕಾಂಗ್ರೆಸ್ ಬೆಂಬಲಿತ ಯುಡಿಎಫ್ ಬಹುಮತ ಪಡೆಯಲಿದ್ದು, ಬಿಜೆಪಿ ಹೀನಾಯ ಸೋಲನ್ನು ಅನುಭವಿಸಲಿದೆ.  ಪುದುಚೇರಿಯಲ್ಲಿ ಬಿಜೆಪಿ ಮತ್ತೊಮ್ಮೆ ಸರ್ಕಾರ ರಚಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: Tamil Nadu Elections: 74 ವರ್ಷದ ದಾಖಲೆ ಮುರಿದ ತಮಿಳುನಾಡು; ಇಂದಿನ ಚುನಾವಣೆಯಲ್ಲಿ ಶೇ. 84ರಷ್ಟು ಮತದಾನ

ಕೇರಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ಏಪ್ರಿಲ್ 9ರಂದು ಮತದಾನ ನಡೆದರೆ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ಮೊದಲ ಹಂತದಲ್ಲಿ ಏಪ್ರಿಲ್ 23 ರಂದು ಮತದಾನ ನಡೆಯಿತು. ಇಂದು ಪಶ್ಚಿಮ ಬಂಗಾಳದ 2ನೇ ಮತ್ತು ಕೊನೆಯ ಹಂತದ ಮತದಾನ ನಡೆದಿದೆ. ನಿಖರವಾದ ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ.

ಕೇರಳದಲ್ಲಿ ಬಿಜೆಪಿ 10 ರಿಂದ 14 ಸ್ಥಾನಗಳನ್ನು ಗಳಿಸಲಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 146 ರಿಂದ 161 ಸ್ಥಾನಗಳನ್ನು ಪಡೆಯಲಿದೆ. ತಮಿಳುನಾಡಿನಲ್ಲಿ ಡಿಎಂಕೆ ಪ್ಲಸ್ 120 ರಿಂದ 140 ಸ್ಥಾನಗಳನ್ನು ಪಡೆಯಲಿದೆ. ಅಸ್ಸಾಂನಲ್ಲಿ ಬಿಜೆಪಿ ಪ್ಲಸ್ 88 ರಿಂದ 100 ಸ್ಥಾನಗಳನ್ನು ಪಡೆಯಲಿದೆ ಎಂದು ಎಕ್ಸಿಟ್ ಪೋಲ್ ಸಮೀಕ್ಷೆಗಳು ಅಂದಾಜಿಸಿವೆ.

ಅಸ್ಸಾಂ ರಾಜ್ಯದಲ್ಲಿ ಯಾರಿಗೆ ಬಹುಮತ?

ಜೆವಿಸಿ ಸಮೀಕ್ಷೆ:

ಎನ್​ಡಿಎ: 88–101 ಸ್ಥಾನಗಳು

ಕಾಂಗ್ರೆಸ್: 23 ಮತ್ತು 33 ಸ್ಥಾನಗಳು

ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ:

ಬಿಜೆಪಿ: 88-100 ಸ್ಥಾನಗಳು

ಕಾಂಗ್ರೆಸ್: 24-36 ಸ್ಥಾನಗಳು

ವೋಟ್ ವೈಬ್ ಸಮೀಕ್ಷೆ:

ಬಿಜೆಪಿ: 90-100

ಕಾಂಗ್ರೆಸ್: 23-33

ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ:

ಬಿಜೆಪಿ: 88-101

ಕಾಂಗ್ರೆಸ್: 23-33

ಚಾಣಕ್ಯ ಸ್ಟ್ರಾಟಜೀಸ್:

ಬಿಜೆಪಿ: 88-98 ಕಾಂಗ್ರೆಸ್: 22-32

ಮ್ಯಾಟ್ರಿಜ್ ಸಮೀಕ್ಷೆ

ಬಿಜೆಪಿ: 85-95

ಕಾಂಗ್ರೆಸ್: 25-32

PMARQ ಸಮೀಕ್ಷೆ:

ಬಿಜೆಪಿ: 82-94

ಕಾಂಗ್ರೆಸ್: 30-40

ಕೇರಳದಲ್ಲಿ ಯಾರಿಗೆ ಸಿಗಲಿದೆ ಅಧಿಕಾರ?

ಆಕ್ಸಿಸ್ ಮೈ ಇಂಡಿಯಾ

ಯುಡಿಎಫ್: 78–90

ಎಲ್‌ಡಿಎಫ್: 49–62

ಎನ್‌ಡಿಎ: 0–3

ಮ್ಯಾಟ್ರಿಜ್ ಸಮೀಕ್ಷೆ:

ಯುಡಿಎಫ್: 70–75

ಎಲ್‌ಡಿಎಫ್: 60–65

ಎನ್‌ಡಿಎ: 3-5

ವೋಟ್‌ವೈಬ್ ಸಮೀಕ್ಷೆ:

ಎಲ್‌ಡಿಎಫ್: 58-68

ಯುಡಿಎಫ್: 70-80

ಎನ್‌ಡಿಎ: 0-4

ಪೀಪಲ್ಸ್ ಪಲ್ಸ್ ಸಮೀಕ್ಷೆ: ಎಲ್‌ಡಿಎಫ್: 55-65

ಯುಡಿಎಫ್: 75-85

ಎನ್​ಡಿಎ: 0-3

ಪುದುಚೇರಿಯ ಎಕ್ಸಿಟ್ ಪೋಲ್ ಹೇಳೋದೇನು?

ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ

ಬಿಜೆಪಿ: 16- 20

ಕಾಂಗ್ರೆಸ್: 6 – 8

ಇತರೆ: 3- 7

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 6:55 pm, Wed, 29 April 26

Follow Us
Sushma Chakre
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
ಬೆಂಗಳೂರು ಅಂತಾರಾಷ್ಟ್ರೀಯ ಸ್ಟೇಡಿಯಂ ಗುದ್ದಲಿ ಪೂಜೆಗೆ ಕ್ರಿಕೆಟ್ ದಿಗ್ಗಜರು
ಬೆಂಗಳೂರು ಅಂತಾರಾಷ್ಟ್ರೀಯ ಸ್ಟೇಡಿಯಂ ಗುದ್ದಲಿ ಪೂಜೆಗೆ ಕ್ರಿಕೆಟ್ ದಿಗ್ಗಜರು
ಹೈದರಾಬಾದ್​ಗೆ ಕೊಹ್ಲಿ ಆಗಮನ; ಅಭಿಮಾನಿಗಳಿಂದ ಅನ್ನ ಸಂತರ್ಪಣೆ
ಹೈದರಾಬಾದ್​ಗೆ ಕೊಹ್ಲಿ ಆಗಮನ; ಅಭಿಮಾನಿಗಳಿಂದ ಅನ್ನ ಸಂತರ್ಪಣೆ
ವರುಣಾರ್ಭಟಕ್ಕೆ ಚಿಕ್ಕಮಗಳೂರಲ್ಲಿ ಹೊಳೆಯಂತಾದ ರಸ್ತೆಗಳು
ವರುಣಾರ್ಭಟಕ್ಕೆ ಚಿಕ್ಕಮಗಳೂರಲ್ಲಿ ಹೊಳೆಯಂತಾದ ರಸ್ತೆಗಳು
ಹರಿಹರ ಪಂಚಮಸಾಲಿ ಪೀಠ ವಿವಾದ ಬಗ್ಗೆ ಯತ್ನಾಳ್ ಸ್ಫೋಟಕ ಹೇಳಿಕೆ
ಹರಿಹರ ಪಂಚಮಸಾಲಿ ಪೀಠ ವಿವಾದ ಬಗ್ಗೆ ಯತ್ನಾಳ್ ಸ್ಫೋಟಕ ಹೇಳಿಕೆ
ಕಾರು ಗುದ್ದಿದ ರಭಸಕ್ಕೆ ಆಟೋ ಅಪ್ಪಚ್ಚಿ: 10 ಮಂದಿಗೆ ಗಾಯ
ಕಾರು ಗುದ್ದಿದ ರಭಸಕ್ಕೆ ಆಟೋ ಅಪ್ಪಚ್ಚಿ: 10 ಮಂದಿಗೆ ಗಾಯ
ನಮ್ಮ ಮೆಟ್ರೋ ನೀಲಿ ಮಾರ್ಗಕ್ಕೆ  ಸೌರಶಕ್ತಿ ಬಳಕೆಗೆ ಶಿಫಾರಸು: ಲಾಭ ಏನು?
ನಮ್ಮ ಮೆಟ್ರೋ ನೀಲಿ ಮಾರ್ಗಕ್ಕೆ  ಸೌರಶಕ್ತಿ ಬಳಕೆಗೆ ಶಿಫಾರಸು: ಲಾಭ ಏನು?
ರೀಷ್ಮಾ ನಾಣಯ್ಯಗಿಂತ ಒಳ್ಳೆ ಡ್ಯಾನ್ಸರ್ ಇಲ್ಲ ಬಿಡಿ, ವಿಡಿಯೋ ನೋಡಿ
ರೀಷ್ಮಾ ನಾಣಯ್ಯಗಿಂತ ಒಳ್ಳೆ ಡ್ಯಾನ್ಸರ್ ಇಲ್ಲ ಬಿಡಿ, ವಿಡಿಯೋ ನೋಡಿ
1.85 ಕೆಜಿ ಚಿನ್ನ ಬ್ಯಾಗ್​​​​​ನಲ್ಲಿ ತುಂಬಿಕೊಂಡು ಹೋದ ದೃಶ್ಯ ಇಲ್ಲಿದೆ
1.85 ಕೆಜಿ ಚಿನ್ನ ಬ್ಯಾಗ್​​​​​ನಲ್ಲಿ ತುಂಬಿಕೊಂಡು ಹೋದ ದೃಶ್ಯ ಇಲ್ಲಿದೆ
ವಿಶ್ವನಾಥ ವಿರುದ್ಧ ಎಫ್‌ಐಆರ್: ಸಿದ್ದರಾಮಯ್ಯ ಪುತ್ರನ ವಿರುದ್ಧ ಸ್ಫೋಟಕ ಆರೋಪ
ವಿಶ್ವನಾಥ ವಿರುದ್ಧ ಎಫ್‌ಐಆರ್: ಸಿದ್ದರಾಮಯ್ಯ ಪುತ್ರನ ವಿರುದ್ಧ ಸ್ಫೋಟಕ ಆರೋಪ
ರೈಲ್ವೆ ಕ್ರಾಸಿಂಗ್‌ನಲ್ಲಿ ಬಸ್‌ ಹಾಗೂ ಕಾರಿಗೆ ರೈಲು ಡಿಕ್ಕಿ
ರೈಲ್ವೆ ಕ್ರಾಸಿಂಗ್‌ನಲ್ಲಿ ಬಸ್‌ ಹಾಗೂ ಕಾರಿಗೆ ರೈಲು ಡಿಕ್ಕಿ