AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈಫಲ್ಯದಿಂದ ನಿರಾಶರಾಬೇಕಿಲ್ಲ, ಈ ಹಿನ್ನಡೆಯನ್ನು ಹಿಮ್ಮೆಟ್ಟಿಸಿ ಪುಟಿದೇಳುವ ಕ್ಷಮತೆ ಇಸ್ರೋ ಸಮುದಾಯಕ್ಕಿದೆ: ಮಾಧವನ್ ನಾಯರ್

ನಾಯರ್ ಅವರು 2003ರಲ್ಲಿ ಇಸ್ರೋ ಚೇರ್ಮನ್ ಆದ ನಂತರದ ಆರು ವರ್ಷಗಳ ಅವಧಿಯಲ್ಲಿ 25 ಮಿಶನ್​ಗಳನ್ನೂ ಯಶಸ್ವೀಯಾಗಿ ಸಾಧಿಸಲಾಗಿತ್ತು. ಈ ಬಗೆಯ ವೈಫಲ್ಯಗಳು ಅಸಹಜವೇನೂ ಅಲ್ಲ, ಇಸ್ರೋ ವಿಜ್ಞಾನಿಗಳು ಯಾವ ಕಾರಣಕ್ಕೂ ಎದೆಗುಂದಬಾರದು ಎಂದು ಅವರು ಬೆಂಗಳೂರಿನಲ್ಲಿ ಗುರುವಾರ ಹೇಳಿದರು.

ವೈಫಲ್ಯದಿಂದ ನಿರಾಶರಾಬೇಕಿಲ್ಲ, ಈ ಹಿನ್ನಡೆಯನ್ನು ಹಿಮ್ಮೆಟ್ಟಿಸಿ ಪುಟಿದೇಳುವ ಕ್ಷಮತೆ ಇಸ್ರೋ ಸಮುದಾಯಕ್ಕಿದೆ: ಮಾಧವನ್ ನಾಯರ್
ಜಿ ಮಾಧವನ್ ನಾಯರ್
TV9 Web
| Edited By: |

Updated on: Aug 13, 2021 | 12:12 AM

Share

ಬೆಂಗಳೂರು: ಭಾರತದ ಪ್ರಖ್ಯಾತ ಬಾಹ್ಯಾಕಾಶ ವಿಜ್ಞಾನಿ ಜಿ ಮಾಧವನ್ ನಾಯರ್ ಅವರು ಜಿಎಸ್ಎಲ್ವಿ-ಎಫ್10 ಲಾಂಚ್ ವಿಫಲಗೊಂಡ ಬಗ್ಗೆ ಆಘಾತ ವ್ಯಕ್ತಪಡಿಸಿರುವರಾದರೂ ಈ ಹಿನ್ನಡೆಯನ್ನು ಹಿಮ್ಮೆಟ್ಟಿ ಪುಟಿದೇಳುವ ಸಾಮರ್ಥ್ಯ ಮತ್ತು ಕ್ಷಮತೆ ಇಸ್ರೋ ಮತ್ತು ಅದರ ವಿಜ್ಞಾನಿಗಳಿಗಿದೆ ಎಂದರು. ಮೊದಲೇ ನಿಗದಿಯಾದಂತೆ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಜಿಎಸ್ಎಲ್ವಿ ರಾಕೆಟ್ ಅನ್ನು ಭೂ ಪರಿವಿಕ್ಷಣಾ ಉಪಗ್ರಹದೊಂದಿಗೆ ಗುರುವಾರ ಬೆಳಗ್ಗೆ 5:43ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಹಾರಿಬಿಡಲಾಗಿತ್ತು.

‘ಉಪಗ್ರಹವನ್ನು ಹಾರಿಬಿಟ್ಟಾಗ ಅದರ ಮೊದಲ ಮತ್ತು ಎರಡನೇ ಹಂತದ ಚಟುವಟಿಕೆ ಸಾಮಾನ್ಯವಾಗಿತ್ತು. ಆದರೆ ತಾಂತ್ರಿಕ ದೋಷದಿಂದಾಗಿ ಕ್ರಯೋಜಿನಿಕ್ ಅಪ್ಪರ್ ಸ್ಟೇಜ್ನಲ್ಲಿ ಹೊತ್ತಿಕೊಳ್ಳುವಿಕೆ (ಇಗ್ನಿಷನ್) ಸಾಧ್ಯವಾಗಲಿಲ್ಲ. ಹಾಗಾಗಿ ಉಪಗ್ರಹ ಉಡಾವಣೆಯ ಉದ್ದೇಶಿತ ಗುರಿ ಈಡೇರಲಿಲ್ಲ’ ಅಂತ ಇಸ್ರೋ ಹೇಳಿಕೆಯೊಂದರಲ್ಲಿ ತಿಳಿಸಿತ್ತು.

ನಾಯರ್ ಅವರು 2003ರಲ್ಲಿ ಇಸ್ರೋ ಚೇರ್ಮನ್ ಆದ ನಂತರದ ಆರು ವರ್ಷಗಳ ಅವಧಿಯಲ್ಲಿ 25 ಮಿಶನ್​ಗಳನ್ನೂ ಯಶಸ್ವೀಯಾಗಿ ಸಾಧಿಸಲಾಗಿತ್ತು. ಈ ಬಗೆಯ ವೈಫಲ್ಯಗಳು ಅಸಹಜವೇನೂ ಅಲ್ಲ, ಇಸ್ರೋ ವಿಜ್ಞಾನಿಗಳು ಯಾವ ಕಾರಣಕ್ಕೂ ಎದೆಗುಂದಬಾರದು ಎಂದು ಅವರು ಬೆಂಗಳೂರಿನಲ್ಲಿ ಗುರುವಾರ ಹೇಳಿದರು.

‘ಇದೊಂದು ಸಂಕೀರ್ಣ ಮಿಶನ್ ಆಗಿತ್ತು. ಸಾಮಾನ್ಯವಾಗಿ ಕ್ರಯೋಜೆನಿಕ್ ಹಂತವು ಬೇರೆಲ್ಲ ರಾಕೆಟ್ ಪ್ರೊಪಲ್ಶನ್ಗಳಿಗೆ ಹೋಲಿಸಿದರೆ ಅತ್ಯಂತ ಕಷ್ಟಕರವಾಗಿದೆ,’ ಎಂದು ಪ್ರೆಸ್ ಟ್ರಸ್ಟ್ ಆಫ್ಗೆ ನೀಡಿದ ಸಂದರ್ಶನದಲ್ಲಿ ನಾಯರ್ ಹೇಳಿದ್ದಾರೆ.

ಕ್ರಯೋಜೆನಿಕ್ ತಂತ್ರಜ್ಞಾನದಲ್ಲಿ ಇಸ್ರೋ ಪರಿಣಿತಿ ಸಾಧಿಸಿದೆ, ಬೇರೆ ಯೂರೋಪಿಯನ್ ರಾಷ್ಟ್ರಗಳಿಗೆ ಹೋಲಿಸಿದರೆ ಇಸ್ರೋದ ಸಾಧನೆ ಕೆಟ್ಟದ್ದಾಗೇನೂ ಇಲ್ಲ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಬಹಳ ಮುಂದುವರಿದ ರಾಷ್ಟ್ರವಾಗಿರುವ ರಷ್ಯಾದಲ್ಲಿ ಕ್ರಯೋಜೆನಿಕ್ ಸ್ಟೇಜ್ ವೈಫಲ್ಯ ಶೇಕಡಾ 20ರ ವ್ಯಾಪ್ತಿಯಲ್ಲಿದೆ ಎಂದು ನಾಯರ್ ಹೇಳಿದರು.

‘ಕ್ರಯೋಜೆನಕ್ ಹಂತದ ಎಂಟನೇ ಲಾಂಚ್ ಇದಾಗಿದೆ. ಮೊದಲನೆಯದರಲ್ಲಿ ಸಮಸ್ಯೆ ತಲೆದೋರಿ ಅಸಫಲಗೊಂಡಿತ್ತು. ನಂತರ ನಡೆದ ಲಾಂಚ್ಗಳು ಪಠ್ಯಪುಸ್ತಕದಲ್ಲಿ ವಿವರಿಸಿರುವ ರೀತಿ ಪ್ರದರ್ಶನ ನೀಡಿದವು. ಇಂಥ ಯಾವುದೇ ಸಂಕೀರ್ಣ ವ್ಯವಸ್ಥೆಯಲ್ಲಿ ವೈಫಲ್ಯದ ಸೀಮಿತ ಸಾಧ್ಯತೆಯಿರುತ್ತದೆ. ಆದರೆ ನಾವು ನಿರಾಶರಾಗಬೇಕಿಲ್ಲ. ಆದರೆ ಈ ಸಂದರ್ಭದಲ್ಲಿ ನಾನು ಹೇಳಬಯಸುವ ಮತ್ತೊಂದು ವಿಷಯವೆಂದರೆ, ನಾವು ವೈಫಲ್ಯದ ತಳಕ್ಕೆ ಹೋಗಿ ಅದನ್ನು ಸರಿಪಡಿಸಬೇಕು, ಇಂಥ ವೈಫಲ್ಯ ಮರುಕಳಿಸದಂತೆ ಜಾಗ್ರತೆ ವಹಿಸಬೇಕು,’ ಎಂದು ನಾಯರ್ ಹೇಳಿದರು.

‘ಇದು ನಮ್ಮೆಲ್ಲರಿಗೆ ಆಘಾತಕಾರಿ ಸಂಗತಿಯಾಗಿದೆ. ಆದರೆ ಈ ಆಘಾತದಿಂದ ನಾವು ಬೇಗ ಚೇತರಿಸಿಕೊಳ್ಳಲಿದ್ದೇವೆ. ಇಂಥ ಕ್ಲಿಷ್ಟ ಪರಿಸ್ಥಿತಿ ಮತ್ತು ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯ ಇಸ್ರೋ ಸಮುದಾಯಕ್ಕಿದೆ,’ ಎಂದು ನಾಯರ್ ಹೇಳಿದರು.

EOS-03 ಅತ್ಯಾಧುನಿಕ ಕುಶಾಗ್ರಮತಿ ಭೂ ಪರಿವೀಕ್ಷಣೆ ಉಪಗ್ರಹವಾಗಿದ್ದು ಇದನ್ನು GSLV-F10 ನಿಂದ ಜಿಯೋಸಿಂಕ್ರೊನಸ್ ಟ್ರಾನ್ಸ್‌ಫರ್ ಆರ್ಬಿಟ್‌ನಲ್ಲಿ ಇರಿಸಬೇಕಿತ್ತು. ಅದಾದ ನಂತರ ಉಪಗ್ರಹವು ತನ್ನ ಆನ್‌ಬೋರ್ಡ್ ಪ್ರೊಪಲ್ಶನ್ ವ್ಯವಸ್ಥೆಯನ್ನು ಬಳಸಿಕೊಂಡು ಅಂತಿಮ ಭೂಸ್ಥಿರ ಕಕ್ಷೆಯನ್ನು ತಲುಪಬೇಕಿತ್ತು.

ಇಒಎಸ್-03 ಉಪಗ್ರಹವು ನೈಸರ್ಗಿಕ ವಿಪತ್ತುಗಳಾದ ಚಂಡಮಾರುತ, ಮೇಘಸ್ಫೋಟ, ಬಿರುಗಾಳಿ ಮೊದಲಾದವುಗಳನ್ನು ತ್ವರಿತ ಗತಿಯಲ್ಲಿ ನಿಗ್ರಾಣಿ ಮಾಡುವುದಕ್ಕೆಂದು ಜಿಯೋಸಿಂಕ್ರೊನಾಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಜಿಎಸ್ಎಲ್ವಿ) ಮೂಲಕ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೆಂದ್ರದಿಂದ ಅಂತರಿಕ್ಷಕ್ಕೆ ಹಾರಿಬಿಡಲಾಗಿತ್ತು

ಇದನ್ನೂ ಓದಿ:  ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿರುವವರನ್ನು ಪ್ರೇರೇಪಿಸಲು ಕಸ್ಟಮೈಸ್ಡ್ ಮರ್ಕಂಡೈಸ್ ಲಾಂಚ್ ಮಾಡಿದ ಇಸ್ರೋ

‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ