Taj Mahal Rooms Pictures ತಾಜ್ ಮಹಲ್​​ನ ಮುಚ್ಚಿದ ಕೊಠಡಿಗಳ ಚಿತ್ರ ಬಿಡುಗಡೆ ಮಾಡಿದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ

ಮರುಸ್ಥಾಪನೆ ಕಾರ್ಯದ ಫೋಟೊಗಳನ್ನು ಎಎಸ್‌ಐ ಜನವರಿ ನ್ಯೂಸ್ ಲೆಟರ್​​ನಲ್ಲಿ ಪ್ರಕಟಿಸಿದ್ದು, ಅದನ್ನು ಮೇ 5 ರಂದು ಅವರ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ

Taj Mahal Rooms Pictures  ತಾಜ್ ಮಹಲ್​​ನ ಮುಚ್ಚಿದ ಕೊಠಡಿಗಳ ಚಿತ್ರ ಬಿಡುಗಡೆ ಮಾಡಿದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ
ತಾಜ್ ಮಹಲ್​​ನ ಮುಚ್ಚಿದ ಕೊಠಡಿಗಳು
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:May 17, 2022 | 3:40 PM

ದೆಹಲಿ: ತಾಜ್‌ಮಹಲ್‌ನ (Taj Mahal) 22 ಮುಚ್ಚಿದ ಕೊಠಡಿಗಳ ವಿವಾದದ ನಡುವೆ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI)ತಾಜ್ ಮಹಲ್​​ನ ಕೆಲವು ಭೂಗತ ಕೊಠಡಿಗಳ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಇದನ್ನು ಜನವರಿಯಲ್ಲಿ ಪುನಃಸ್ಥಾಪನೆ ಕಾರ್ಯಕ್ಕಾಗಿ ತೆರೆಯಲಾಗಿತ್ತು. ಅಲಹಾಬಾದ್ ಹೈಕೋರ್ಟ್ (Allahabad High Court) ಕಳೆದ ವಾರ ತಾಜ್ ಮಹಲ್‌ನ ಇತಿಹಾಸ ಮತ್ತು ಅದರ 22 ಕೊಠಡಿಗಳ ತೆರೆಯುವ ಬಾಗಿಲುಗಳ ಬಗ್ಗೆ ಸತ್ಯಶೋಧನೆ ತನಿಖೆಯನ್ನು ಕೋರಿ ಸಲ್ಲಿಸಿದ ಮನವಿಯನ್ನು ವಜಾಗೊಳಿಸಿದೆ. “ಸತ್ಯ, ಅದು ಏನೇ ಇರಲಿ, ಅರ್ಜಿದಾರರು ತಮ್ಮ ಯಾವ ಕಾನೂನು ಅಥವಾ ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂಬುದನ್ನು ಸೂಚಿಸಲು ವಿಫಲರಾಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.  ಮರುಸ್ಥಾಪನೆ ಕಾರ್ಯದ ಫೋಟೊಗಳನ್ನು ಎಎಸ್‌ಐ ಜನವರಿ ನ್ಯೂಸ್ ಲೆಟರ್​​ನಲ್ಲಿ ಪ್ರಕಟಿಸಿದ್ದು, ಅದನ್ನು ಮೇ 5 ರಂದು ಅವರ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಅಂದರೆ ನ್ಯಾಯಾಲಯದ ಆದೇಶ ಬರುವುದಕ್ಕಿಂತ ಮೊದಲು  ಎಎಸ್‌ಐ ಸೂಪರಿಂಟೆಂಡಿಂಗ್ ಪುರಾತತ್ವಶಾಸ್ತ್ರಜ್ಞ (ಆಗ್ರಾ ವೃತ್ತ) ರಾಜ್ ಕುಮಾರ್ ಪಟೇಲ್ ಅವರು ಡಿಸೆಂಬರ್ 2021 ಮತ್ತು ಮಾರ್ಚ್ 2022 ರ ನಡುವೆ ಅಧಿಕಾರಿಗಳು ಮಾಡಿದ ಪುನಃಸ್ಥಾಪನೆ ಕಾರ್ಯದ ಚಿತ್ರಗಳು ಈಗ ಎಎಸ್‌ಐ ನ ವೆಬ್‌ಸೈಟ್‌ನಲ್ಲಿ “ಎಲ್ಲರಿಗೂ ವೀಕ್ಷಿಸಲು” ಲಭ್ಯವಿದೆ ಎಂದು ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. “ತಾಜ್ ಮಹಲ್‌ನ ನದಿ ತೀರದಲ್ಲಿರುವ ಭೂಗತ ಕೊಠಡಿಗಳ ನಿರ್ವಹಣಾ ಕಾರ್ಯವನ್ನು ಕೆಲವು ತಿಂಗಳ ಹಿಂದೆ ಕೈಗೆತ್ತಿಕೊಳ್ಳಲಾಗಿತ್ತು. ಕೊಳೆತ ಮತ್ತು ಶಿಥಿಲಗೊಂಡ ಸುಣ್ಣದ ಪ್ಲಾಸ್ಟರ್ ಅನ್ನು ತೆಗೆದುಹಾಕಲಾಯಿತು ಮತ್ತು ಹೊಸ ಕೋಟ್ ಅನ್ನು ಹಾಕಲಾಯಿತು. ಇದನ್ನು ಹಾಕುವ ಮುನ್ನ ಸಾಂಪ್ರದಾಯಿಕ ಸುಣ್ಣದ ಲೇಪನ ನಡೆಯಿತು” ಎಂದು ಎಎಸ್‌ಐ ವೆಬ್‌ಸೈಟ್ ಹೇಳಿದೆ.

ತಾಜ್‌ಮಹಲ್‌ನ 22 ಕೊಠಡಿಗಳನ್ನು ತೆರೆಯುವಂತೆ ಮನವಿ ಈ ತಿಂಗಳ ಆರಂಭದಲ್ಲಿ ಬಿಜೆಪಿಯ ಅಯೋಧ್ಯೆ ಘಟಕದ ಮಾಧ್ಯಮ ಉಸ್ತುವಾರಿ ರಜನೀಶ್ ಸಿಂಗ್, ಹಿಂದೂ ದೇವತೆಗಳ ವಿಗ್ರಹಗಳ ಉಪಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ತಾಜ್ ಮಹಲ್‌ನಲ್ಲಿ ಮುಚ್ಚಿದ 22 ಬಾಗಿಲುಗಳ ತನಿಖೆಗೆ ಎಎಸ್‌ಐಗೆ ನಿರ್ದೇಶನಗಳನ್ನು ಕೋರಿದ್ದರು. ಸತ್ಯಶೋಧನಾ ಸಮಿತಿಯ ವರದಿ ಮತ್ತು ಎಎಸ್‌ಐ ವರದಿಯನ್ನು ಸಲ್ಲಿಸುವಂತೆ ಮನವಿಯಲ್ಲಿ ಕೋರಲಾಗಿದೆ.

ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಡಿ.ಕೆ.ಉಪಾಧ್ಯಾಯ ಮತ್ತು ಸುಭಾಷ್ ವಿದ್ಯಾರ್ಥಿ ಅವರ ಲಖನೌ ಪೀಠವು, “ಅರ್ಜಿದಾರರು ಸಂಪೂರ್ಣವಾಗಿ ನ್ಯಾಯಸಮ್ಮತವಲ್ಲದ ವಿಷಯದ ಬಗ್ಗೆ ತೀರ್ಪು ನೀಡುವಂತೆ ನಮಗೆ ಕರೆ ನೀಡಿದ್ದಾರೆ ಎಂದು ನಾವು ಅಭಿಪ್ರಾಯಪಟ್ಟಿದ್ದೇವೆ ಎಂದು ಹೇಳಿದ್ದಾರೆ.

“ಮೊದಲ ಪ್ರಾರ್ಥನೆ (ತಾಜ್ ಮಹಲ್​​ನ “ನೈಜ ಇತಿಹಾಸ” ಅಧ್ಯಯನ ಮಾಡಲು ಸತ್ಯಶೋಧನಾ ಸಮಿತಿಯನ್ನು ರಚಿಸುವುದು) ಈ ನ್ಯಾಯಾಲಯದಿಂದ ನಿರ್ಣಯಿಸಲಾಗುವುದಿಲ್ಲ” ಎಂದು ಪೀಠ ಹೇಳಿದೆ.

ಈ ಕಟ್ಟಡವು ನಿಜವಾಗಿಯೂ ಹಳೆಯ ಶಿವ ದೇವಾಲಯವಾಗಿದೆ ಎಂದು ಕೆಲವು ಇತಿಹಾಸಕಾರರ ಹೇಳಿಕೆಗಳನ್ನು ಅರ್ಜಿದಾರರು ಉಲ್ಲೇಖಿಸಿದ್ದು, ವಿಶೇಷ ತಂಡವನ್ನು ರಚಿಸಲು ಮತ್ತು ಶತಮಾನಗಳಿಂದ ಬೀಗ ಹಾಕಿರುವ ಕೊಠಡಿಗಳನ್ನು ಪರೀಕ್ಷಿಸಲು ಎಎಸ್ಐಗೆ ಅನುಮತಿ ನೀಡುವಂತೆ ನ್ಯಾಯಾಲಯವನ್ನು ಒತ್ತಾಯಿಸಿದರು. ತಾಜ್ ಮಹಲ್ ಅನ್ನು ಶಿವ ದೇವಾಲಯವನ್ನಾಗಿ ಮಾಡುವುದು ಅರ್ಜಿಯ ಉದ್ದೇಶವಲ್ಲ. ಆದರೆ ಸಾಮಾಜಿಕ ಸಾಮರಸ್ಯಕ್ಕಾಗಿ ಮುಚ್ಚಿದ ಬಾಗಿಲುಗಳ ಹಿಂದಿನ ಸತ್ಯವನ್ನು ಬಹಿರಂಗಪಡಿಸುವುದು ಎಂದು ಸಿಂಗ್ ಈ ಹಿಂದೆ ಹೇಳಿದ್ದರು.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 2:56 pm, Tue, 17 May 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್