GSLV MkIII Rocket Mission: ಸಂವಹನ ಸೇವೆಗೆಂದೇ 36 ಉಪಗ್ರಹ ಹೊತ್ತು ಆಕಾಶಕ್ಕೆ ಹಾರಲಿದೆ GSLV MkIII

ISRO: ಭಾರತೀಯ ರಾಕೆಟ್ ಜಿಯೋ ಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ MkIII (GSLV MkIII) ನ ಉಡಾವಣೆಗೆ ಕ್ಷಣಗಣನೆ ಶುರುವಾಗಿದೆ. ಒನ್ ವೆಬ್ ಇದು ಇಂಡಿಯಾ ಭಾರ್ತಿ ಗ್ಲೋಬಲ್ ಮತ್ತು ಯುಕೆ ಸರ್ಕಾರದ ನಡುವಿನ ಜಂಟಿ ಉದ್ಯಮವಾಗಿದೆ.

GSLV MkIII Rocket Mission: ಸಂವಹನ ಸೇವೆಗೆಂದೇ 36 ಉಪಗ್ರಹ ಹೊತ್ತು ಆಕಾಶಕ್ಕೆ ಹಾರಲಿದೆ GSLV MkIII
GSLV MkIII
Follow us
TV9 Web
| Updated By: ಡಾ. ಭಾಸ್ಕರ ಹೆಗಡೆ

Updated on:Oct 22, 2022 | 3:54 PM

ಚನ್ನೈ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಭಾರತೀಯ ರಾಕೆಟ್ ಜಿಯೋ ಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ MkIII (GSLV MkIII) ನ ಉಡಾವಣೆಗೆ ಕ್ಷಣಗಣನೆ ಶುರುವಾಗಿದೆ. ಅಕ್ಟೋಬರ್ 23ರ ಮಧ್ಯರಾತ್ರಿ 12.7ಕ್ಕೆ ಉಡಾವಣೆ ಆರಂಭವಾಗಲಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ದೇಶದ ಏಕೈಕ ಬಾಹ್ಯಾಕಾಶ ಉಡಾವಣಾ ಕೇಂದ್ರದಲ್ಲಿ, ನೆಟ್‌ವರ್ಕ್ ಆಕ್ಸೆಸ್ ಅಸೋಸಿಯೇಟೆಡ್ ಲಿಮಿಟೆಡ್‌ನ (ಒನ್‌ವೆಬ್) 36 ಸಣ್ಣ ಬ್ರಾಡ್‌ಬ್ಯಾಂಡ್ ಸಂವಹನ ಉಪಗ್ರಹಗಳನ್ನು ಕಡಿಮೆ ಭೂಮಿಯ ಕಕ್ಷೆಯಲ್ಲಿ ಜೋಡಿಸಲು ರಾಕೆಟ್​ ಲಾಂಚ್ ಮಾಡಲಾಗುತ್ತೆ.

ಒನ್ ವೆಬ್ ಇದು ಇಂಡಿಯಾ ಭಾರ್ತಿ ಗ್ಲೋಬಲ್ ಮತ್ತು ಯುಕೆ ಸರ್ಕಾರದ ನಡುವಿನ ಜಂಟಿ ಉದ್ಯಮವಾಗಿದೆ. ಒನ್ ವೆಬ್ ಉಪಗ್ರಹ ಕಂಪನಿಯು ಸಂವಹನ ಸೇವೆಗಳನ್ನು ನೀಡಲು ಲೋ ಅರ್ಥ್ ಆರ್ಬಿಟ್ (LEO) ನಲ್ಲಿ 650 ಉಪಗ್ರಹಗಳನ್ನು ನಿಯೋಜಿಸಲು ಯೋಜಿಸಿದೆ. ಅಕ್ಟೋಬರ್ 23 ರಂದು ಮಧ್ಯರಾತ್ರಿ 12.07 ಕ್ಕೆ 36 ಉಪಗ್ರಹಗಳೊಂದಿಗೆ ರಾಕೆಟ್ ಉಡಾವಣೆಯಾಗಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈ ಹಿಂದೆ ಹೇಳಿತ್ತು. ರಾಕೆಟ್‌ನ ಉಡಾವಣೆಗೆ ಕ್ಷಣಗಣನೆಯು ಅದರ ಹಾರಾಟಕ್ಕೆ 24 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ ಎಂದು ಇಸ್ರೋ ಅಧಿಕಾರಿಯೊಬ್ಬರು ಐಎಎನ್‌ಎಸ್‌ಗೆ ತಿಳಿಸಿದ್ದಾರೆ.

ಕೌಂಟ್‌ಡೌನ್ ಸಮಯದಲ್ಲಿ, ರಾಕೆಟ್ ಮತ್ತು ಉಪಗ್ರಹ ವ್ಯವಸ್ಥೆಗಳನ್ನು ಪರಿಶೀಲಿಸಲಾಗುತ್ತದೆ. ರಾಕೆಟ್‌ಗೆ ಇಂಧನವನ್ನೂ ತುಂಬಿಸಲಾಗುತ್ತದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ಜಿಎಸ್​​ಎಲ್​ವಿ ರಾಕೆಟ್ ಅನ್ನು ವಾಣಿಜ್ಯ ಉಡಾವಣೆಗಾಗಿ ಬಳಸಲಾಗುತ್ತಿರುವುದರಿಂದ ಇಸ್ರೋಗೆ ಈ ಮಿಷನ್ ಐತಿಹಾಸಿಕವಾಗಿದೆ. ಮಹಾಮಾರಿ ಕೊರೊನಾ ನಂತರ ಮೊದಲ ಬಾರಿಗೆ ಉಡಾವಣೆಗೆ ವೀಕ್ಷಿಸಲು ಬಾಹ್ಯಾಕಾಶ ಸಂಸ್ಥೆ ಜನರಿಗೆ ವೀಕ್ಷಣೆ ಗ್ಯಾಲರಿಯನ್ನು ಓಪನ್ ಮಾಡಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:36 am, Sat, 22 October 22