AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀಟ್ ಅಕ್ರಮಕ್ಕೆ ನಂದನ್ ನಿಲೇಕಣಿ ಪರಿಹಾರ; ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಎಐ ಆಧಾರಿತ ಪರೀಕ್ಷೆಗೆ ಬೆಂಬಲ

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ಬಳಿಕ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)ಯನ್ನು ಸುಧಾರಿಸಲು ರಚಿಸಲಾದ ಉನ್ನತ ಸಮಿತಿಯ ಮುಖ್ಯಸ್ಥರಾದ ನಂದನ್ ನಿಲೇಕಣಿ ಅವರು ಸಂದರ್ಶನವೊಂದರಲ್ಲಿ ಪರೀಕ್ಷಾ ಸುಧಾರಣೆಗಳ ಬಗ್ಗೆ ಚರ್ಚಿಸಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಯುವುದು ಹೇಗೆ ಎಂಬುದರ ಕುರಿತು ಅವರು ಮಾತನಾಡಿದ್ದು, ಭವಿಷ್ಯದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಹಾವಳಿಯನ್ನು ಸಂಪೂರ್ಣವಾಗಿ ತಡೆಯಲು ಎಐ ಆಧಾರಿತ ಕೊನೆಯ ಕ್ಷಣದ ಪ್ರಶ್ನೆ ಸೃಷ್ಟಿ ಮತ್ತು ಕಂಪ್ಯೂಟರ್ ಆಧಾರಿತ ಪರೀಕ್ಷಾ ಪದ್ಧತಿಯೇ ಅತ್ಯಂತ ಪರಿಪೂರ್ಣ ಮಾರ್ಗ ಎಂಬುದು ನೀಲೇಕಣಿ ಅವರ ಪ್ರಮುಖ ವಾದವಾಗಿದೆ.

ನೀಟ್ ಅಕ್ರಮಕ್ಕೆ ನಂದನ್ ನಿಲೇಕಣಿ ಪರಿಹಾರ; ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಎಐ ಆಧಾರಿತ ಪರೀಕ್ಷೆಗೆ ಬೆಂಬಲ
ನಂದನ್ ನಿಲೇಕಣಿImage Credit source: PTI
ಸುಷ್ಮಾ ಚಕ್ರೆ
|

Updated on: Oct 13, 2026 | 3:20 PM

Share

ನವದೆಹಲಿ, ಅಕ್ಟೋಬರ್ 13: ಭಾರತದ ಉನ್ನತ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪದೇ ಪದೇ ಉಂಟಾಗುತ್ತಿರುವ ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಯಲು ಸಾಂಪ್ರದಾಯಿಕ ಪ್ರಶ್ನೆಪತ್ರಿಕೆಗಳ ಬದಲಿಗೆ ಎಐ ಮೂಲಕ ಪ್ರಶ್ನೆಗಳನ್ನು ತಯಾರಿಸುವ ವ್ಯವಸ್ಥೆ ಹಾಗೂ ದೇಶಾದ್ಯಂತ ಕಂಪ್ಯೂಟರ್ ಆಧಾರಿತ ಪರೀಕ್ಷಾ (ಸಿಬಿಟಿ) ವಿಧಾನವನ್ನು ಜಾರಿಗೆ ತರಬೇಕೆಂದು ಇನ್​ಫೋಸಿಸ್ ಸಹ ಸಂಸ್ಥಾಪಕ ನಂದನ್ ನಿಲೇಕಣಿ ಸಲಹೆ ನೀಡಿದ್ದಾರೆ. ಸಾಂಪ್ರದಾಯಿಕ ಪದ್ಧತಿಯಲ್ಲಿ ಪರೀಕ್ಷೆಗೆ ಹಲವು ದಿನಗಳ ಮೊದಲೇ ಮುದ್ರಿತ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿ ಸುರಕ್ಷಿತ ಕೊಠಡಿಗಳಲ್ಲಿ ಇಡಲಾಗುತ್ತದೆ. ಈ ಅವಧಿಯಲ್ಲಿ ಆರ್ಥಿಕ ಲಾಭದ ದುರಾಸೆಗಾಗಿ ಪತ್ರಿಕೆಗಳು ಸೋರಿಕೆಯಾಗುವ ಅಪಾಯವಿರುತ್ತದೆ ಎಂದು ಎನ್​ಟಿಎ ಸುಧಾರಣೆಗಾಗಿ ಸರ್ಕಾರ ರಚಿಸಿರುವ ಉನ್ನತ ಮಟ್ಟದ ಸಮಿತಿಯ ಮುಖ್ಯಸ್ಥರೂ ಆಗಿರುವ ನಂದನ್ ನಿಲೇಕಣಿ ಕಳವಳ ವ್ಯಕ್ತಪಡಿಸಿದ್ದಾರೆ.

ಬೃಹತ್ ಪ್ರಮಾಣದ ಪ್ರಶ್ನೆಗಳ ಬ್ಯಾಂಕ್ ಸಿದ್ಧಪಡಿಸುವುದು, ಪರೀಕ್ಷೆ ನಡೆಯುವ ದಿನ ಕೊನೆಯ ಕ್ಷಣದಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಬಳಸಿ ಪ್ರಶ್ನೆಗಳನ್ನು ಸಿದ್ಧಪಡಿಸುವುದು ಇದಕ್ಕೆ ಪರ್ಯಾಯ ಮಾರ್ಗವಾಗಿದೆ. ಇದರಿಂದ ಮೊದಲೇ ‘ಒಂದೇ ನಿರ್ದಿಷ್ಟ ಪ್ರಶ್ನೆಪತ್ರಿಕೆ’ ಎಂಬುದು ಇಲ್ಲದಿರುವುದರಿಂದ ಸೋರಿಕೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂಬುದು ನಂದನ್ ನಿಲೇಕಣಿ ಅವರ ಅಭಿಪ್ರಾಯವಾಗಿದೆ.

ಇದನ್ನೂ ಓದಿ: ಎಐನಿಂದ ದೊಡ್ಡ ಕಂಪನಿಗಳಲ್ಲಿ ಕೆಲಸಕ್ಕೆ ಕತ್ತರಿ ಬೀಳಬಹುದು; ಲಕ್ಷಾಂತರ ಸಣ್ಣ ಕಂಪನಿಗಳಿಂದ ಉದ್ಯೋಗಸೃಷ್ಟಿ: ನಂದನ್ ನಿಲೇಕಣಿ

ಕಂಪ್ಯೂಟರ್ ಆಧಾರಿತ ಪರೀಕ್ಷಾ ಜಾಲದ ವಿಸ್ತರಣೆ:

ಪೇಪರ್ ಆಧಾರಿತ ಪರೀಕ್ಷೆಗಳ ಬದಲಿಗೆ ಡಿಜಿಟಲ್ ಮಾಧ್ಯಮದ ಮೂಲಕವೇ ಎಲ್ಲಾ ಪ್ರಮುಖ ಪರೀಕ್ಷೆಗಳನ್ನು ನಡೆಸುವುದು ಅತ್ಯಗತ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ ದೇಶದಲ್ಲಿ ವಿದ್ಯಾರ್ಥಿಗಳು ಆನ್‌ಲೈನ್ ಪರೀಕ್ಷೆ ಬರೆಯಲು ಸುಮಾರು 1.5 ಲಕ್ಷ ಕೇಂದ್ರಗಳ ಜಾಲವಿದ್ದು, ಇಂತಹ ಡಿಜಿಟಲ್ ಪರೀಕ್ಷಾ ಕೇಂದ್ರಗಳ ಮೂಲಸೌಕರ್ಯವನ್ನು ದೇಶಾದ್ಯಂತ ಇನ್ನಷ್ಟು ವಿಸ್ತರಿಸುವ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.

ಇವೆಲ್ಲವೂ ಕೇವಲ ತಾತ್ಕಾಲಿಕ ಕ್ರಮಗಳಲ್ಲದೆ ಸಂಪೂರ್ಣ ವ್ಯವಸ್ಥೆಯನ್ನು ಬದಲಾಯಿಸುವ ದೀರ್ಘಕಾಲೀನ ಪರಿಹಾರಗಳಾಗಿವೆ ಎಂದಿರುವ ನಂದನ್ ನಿಲೇಕಣಿ, ತಮ್ಮ ಸಮಿತಿಯು ರೂಪಿಸಲಿರುವ ಈ ನೂತನ ತಾಂತ್ರಿಕ ಹಾಗೂ ಪಾರದರ್ಶಕ ಶಿಫಾರಸುಗಳನ್ನು ತ್ವರಿತವಾಗಿ ಜಾರಿಗೆ ತರಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಶೇಷ ಆಸಕ್ತಿ ಮತ್ತು ಉತ್ಸಾಹ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಪರೀಕ್ಷಾ ವ್ಯವಸ್ಥೆ ಸುಧಾರಿಸಲು ನಂದನ್ ನಿಲೇಕಣಿ ಅಧ್ಯಕ್ಷತೆಯಲ್ಲಿ ಟ್ಯಾಸ್ಕ್ ಫೋರ್ಸ್ ರಚನೆ

‘ಬ್ಲೂಮ್‌ಬರ್ಗ್ ನ್ಯೂ ಎಕನಾಮಿ ಫೋರಂ 2026’ ಕಾರ್ಯಕ್ರಮದಲ್ಲಿ ಮಾತನಾಡಿದ ನಂದನ್ ನಿಲೇಕಣಿ, ಪ್ರಶ್ನೆಪತ್ರಿಕೆ ಸೋರಿಕೆಯು ಪರಿಹರಿಸಬಹುದಾದ ಸಮಸ್ಯೆಯಾಗಿದ್ದು, ತಂತ್ರಜ್ಞಾನದ ಸೂಕ್ತ ಬಳಕೆಯ ಅಗತ್ಯವಿದೆ ಎಂದರು. “ನಾವು ವ್ಯವಸ್ಥಿತವಾಗಿ ಇದರ ಮೂಲ ಕಾರಣಗಳನ್ನು ಪರಿಶೀಲಿಸಿ, ತಂತ್ರಜ್ಞಾನ ಬಳಸಿ ಪರಿಹಾರ ಕಂಡುಕೊಂಡರೆ ಇವು ಖಂಡಿತವಾಗಿಯೂ ಪರಿಹರಿಸಬಹುದಾದ ಸಮಸ್ಯೆಗಳು” ಎಂದು ಅವರು ಹೇಳಿದ್ದಾರೆ.

ಮೇ ತಿಂಗಳಿನಲ್ಲಿ ನಡೆದ ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ವೈದ್ಯಕೀಯ ಪ್ರವೇಶ ಪರೀಕ್ಷೆ ರದ್ದಾಗಿ ಮರುಪರೀಕ್ಷೆ ನಡೆಸಬೇಕಾಯಿತು. ದೇಶಾದ್ಯಂತ ವಿದ್ಯಾರ್ಥಿಗಳ ತೀವ್ರ ಪ್ರತಿಭಟನೆಗೆ ಕಾರಣವಾಗಿದ್ದ ಈ ಘಟನೆಯ ಬಳಿಕ ಆಗಿನ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಜುಲೈನಲ್ಲಿ ರಚಿಸಲಾದ ಟಾಸ್ಕ್ ಫೋರ್ಸ್‌ನ ಮುಖ್ಯಸ್ಥರಾಗಿ ನೀಲೇಕಣಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ
ಗಜೇಂದ್ರಗಡ: ಹೈಟೆಕ್ ಅಗ್ನಿಶಾಮಕ ಠಾಣೆ ಇದ್ದರೂ ಸಿಬ್ಬಂದಿ ಇಲ್ಲದೆ ವ್ಯರ್ಥ!
ಗಜೇಂದ್ರಗಡ: ಹೈಟೆಕ್ ಅಗ್ನಿಶಾಮಕ ಠಾಣೆ ಇದ್ದರೂ ಸಿಬ್ಬಂದಿ ಇಲ್ಲದೆ ವ್ಯರ್ಥ!
ಇಂಡಿಯಾ- ವೆಸ್ಟ್ ಇಂಡೀಸ್ ಪಂದ್ಯಕ್ಕೆ  ಡಿಸಿಎಂಗೆ ವೆಂಕಟೇಶ್ ಪ್ರಸಾದ್ ಆಹ್ವಾನ
ಇಂಡಿಯಾ- ವೆಸ್ಟ್ ಇಂಡೀಸ್ ಪಂದ್ಯಕ್ಕೆ  ಡಿಸಿಎಂಗೆ ವೆಂಕಟೇಶ್ ಪ್ರಸಾದ್ ಆಹ್ವಾನ
ಸರ್ಕಾರ ನಿಮ್ಮೊಂದಿಗಿದೆ ಪ್ರತಿಭಟನೆ ಕೈಬಿಡಿ ಎಂದು ರೈತರಿಗೆ ಜೋಶಿ ಮನವಿ!
ಸರ್ಕಾರ ನಿಮ್ಮೊಂದಿಗಿದೆ ಪ್ರತಿಭಟನೆ ಕೈಬಿಡಿ ಎಂದು ರೈತರಿಗೆ ಜೋಶಿ ಮನವಿ!
ಹೈಕಮಾಂಡ್ ತಲುಪಿದ ಸ್ಟಿಂಗ್ ವಿಚಾರ: ಕ್ಯಾಬಿನೆಟ್ ಪ್ರಸ್ತಾಪಕ್ಕೆ ಗರಂ
ಹೈಕಮಾಂಡ್ ತಲುಪಿದ ಸ್ಟಿಂಗ್ ವಿಚಾರ: ಕ್ಯಾಬಿನೆಟ್ ಪ್ರಸ್ತಾಪಕ್ಕೆ ಗರಂ
ಹುನಗುಂದದಲ್ಲಿ ರೈತರ ಪ್ರತಿಭಟನೆ: ರಾಯಚೂರು-ಸೊಲ್ಲಾಪುರ ಹೆದ್ದಾರಿ ಬಂದ್
ಹುನಗುಂದದಲ್ಲಿ ರೈತರ ಪ್ರತಿಭಟನೆ: ರಾಯಚೂರು-ಸೊಲ್ಲಾಪುರ ಹೆದ್ದಾರಿ ಬಂದ್
ರಾಹುಲ್ ಗಾಂಧಿ ನಿವಾಸದಲ್ಲಿ ವಿಪಕ್ಷ ನಾಯಕರ ಹೈ-ಟೀ
ರಾಹುಲ್ ಗಾಂಧಿ ನಿವಾಸದಲ್ಲಿ ವಿಪಕ್ಷ ನಾಯಕರ ಹೈ-ಟೀ
ಕ್ಯಾಪ್ಟನ್ ಟೀಕಿಸಿದ ತಂಡವನ್ನೇ ಆಯ್ಕೆ ಮಾಡಿಕೊಂಡ ಕುಮಾರಿ
ಕ್ಯಾಪ್ಟನ್ ಟೀಕಿಸಿದ ತಂಡವನ್ನೇ ಆಯ್ಕೆ ಮಾಡಿಕೊಂಡ ಕುಮಾರಿ
ಹೈದರಾಬಾದ್‌ನಲ್ಲಿ ಮೈ ಹೋಮ್ ವ್ಯೋಮ ಗ್ರ್ಯಾಂಡ್ ಲಾಂಚ್
ಹೈದರಾಬಾದ್‌ನಲ್ಲಿ ಮೈ ಹೋಮ್ ವ್ಯೋಮ ಗ್ರ್ಯಾಂಡ್ ಲಾಂಚ್