ಬಿಷಪ್ ಫ್ರಾಂಕೋ ಮುಳಕ್ಕಲ್ ಪ್ರಕರಣ: ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ ಸನ್ಯಾಸಿನಿಗೆ ಕಾನ್ವೆಂಟಿನಲ್ಲಿಯೂ ಒತ್ತಡದ ಪರಿಸ್ಥಿತಿ

ಬೇಸಿಗೆ ರಜೆಗಾಗಿ ಹೈಕೋರ್ಟ್ ಮುಚ್ಚುವ ಮೊದಲು ಕೇರಳ ಸರ್ಕಾರವು ಏಪ್ರಿಲ್ 7 ರೊಳಗೆ ತನ್ನ ಮೇಲ್ಮನವಿ ಸಲ್ಲಿಸುವ ನಿರೀಕ್ಷೆಯಿದೆ.

ಬಿಷಪ್ ಫ್ರಾಂಕೋ ಮುಳಕ್ಕಲ್ ಪ್ರಕರಣ: ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ ಸನ್ಯಾಸಿನಿಗೆ ಕಾನ್ವೆಂಟಿನಲ್ಲಿಯೂ ಒತ್ತಡದ ಪರಿಸ್ಥಿತಿ
ಬಿಷಪ್ ಫ್ರಾಂಕೋ ಮುಳಕ್ಕಲ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Mar 31, 2022 | 9:19 PM

ಬಿಷಪ್ ಫ್ರಾಂಕೋ ಮುಳಕ್ಕಲ್ (Bishop Franco Mulakkal)ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿರುವ ಸನ್ಯಾಸಿನಿಯರು ವಿಚಾರಣಾ ನ್ಯಾಯಾಲಯವು ಪ್ರಕರಣದಲ್ಲಿ ಮುಳಕ್ಕಲ್ ನ್ನು ಖುಲಾಸೆಗೊಳಿಸಿದ ವಿರುದ್ಧ ಕೇರಳ ಹೈಕೋರ್ಟ್‌ಗೆ (Kerala High Court)ಅರ್ಜಿ ಸಲ್ಲಿಸಿದ್ದರೂ ಸಹ, ಅವರು ಕಾನ್ವೆಂಟ್‌ನ ಆವರಣದಲ್ಲಿಒತ್ತಡ ಪರಿಸ್ಥಿತಿಯಲ್ಲಿ ವಾಸಿಸುತ್ತಿದ್ದಾರೆ. ಮಿಷನರೀಸ್ ಆಫ್ ಜೀಸಸ್‌ಗೆ ಸೇರಿದ ಕಾನ್ವೆಂಟ್ ಕುರವಿಲಂಗಾಡು (Kuravilangadu)  ಸೇಂಟ್ ಫ್ರಾನ್ಸಿಸ್ ಮಿಷನ್ ಹೋಮ್‌ನಿಂದ ಹೊರಬರಲು ಸನ್ಯಾಸಿನಿ ಮತ್ತು ಅವರ ನಾಲ್ವರು ಆಪ್ತ ಸಹಾಯಕರು ಒತ್ತಡವನ್ನು ಎದುರಿಸುತ್ತಿದ್ದಾರೆ.  ಸಂತ್ರಸ್ತೆ ಸನ್ಯಾಸಿನಿ ಮಾರ್ಚ್ 28 ರಂದು ಕೇರಳ ಹೈಕೋರ್ಟ್‌ನಲ್ಲಿ ಸಲ್ಲಿಸಿದ ಮೇಲ್ಮನವಿಯ ನಂತರ ಕೇರಳ ಸರ್ಕಾರವು ಜನವರಿ 14 ರಂದು ವಿಚಾರಣಾ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವಂತೆ ಅಡ್ವೊಕೇಟ್ ಜನರಲ್ ಮತ್ತು ಪ್ರಾಸಿಕ್ಯೂಷನ್‌ಗಳ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿದೆ. ವಿಚಾರಣಾ ನ್ಯಾಯಾಲಯವು ಜಲಂಧರ್‌ನ ರೋಮನ್ ಕ್ಯಾಥೋಲಿಕ್ ಡಯಾಸಿಸ್‌ನ ಮಾಜಿ ಬಿಷಪ್ ಮೇಲಿದ್ದ ಅತ್ಯಾಚಾರ ಪ್ರಕರಣದಿಂದ ಖುಲಾಸೆಗೊಳಿಸಿತ್ತು.  ಸೇವ್ ಅವರ್ ಸಿಸ್ಟರ್ಸ್ ಫೋರಂನ ಸಂಚಾಲಕರಾದ ಫಾ ಅಗಸ್ಟಿನ್ ವ್ಯಾಟೋಲಿ ಪ್ರಕಾರ, ಸನ್ಯಾಸಿನಿಯರಿಗೆ ದೇಶದ ವಿವಿಧ ಕಾನ್ವೆಂಟ್‌ಗಳಿಗೆ ವರ್ಗಾವಣೆ ಆದೇಶವನ್ನು ಸ್ವೀಕರಿಸಲು ಮೌಖಿಕ ನಿರ್ದೇಶನವನ್ನು ನೀಡಲಾಗಿದೆ. ಸನ್ಯಾಸಿನಿಯರಿಗೆ ಪ್ರತ್ಯೇಕ ಆದೇಶವನ್ನು ನೀಡಲಾಯಿತು, 2019 ರಲ್ಲಿ ಮೊದಲ ಬಾರಿಗೆ ಕುರವಿಲಂಗಾಡ್ ಕಾನ್ವೆಂಟ್ ಬಿಟ್ಟು ದೇಶದ ಬೇರೆಡೆಗೆ ಹೋಗುವಂತೆ ಹೇಳಲಾಯಿತು. ಇದು ಅವರ ಹೋರಾಟವನ್ನು ಹಾಳುಮಾಡುವ ಉದ್ದೇಶ ಹೊಂದಿತ್ತು.

ಆದಾಗ್ಯೂ, ಸಾಕ್ಷಿ ಸಂರಕ್ಷಣಾ ಯೋಜನೆಯಡಿ ನೀಡಲಾದ ಪೊಲೀಸ್ ರಕ್ಷಣೆಯ ಬೆಂಬಲದೊಂದಿಗೆ ಅವರು ಪ್ರತಿಕೂಲ ವಾತಾವರಣದಲ್ಲಿ ಉಳಿಯುವುದನ್ನು ಮುಂದುವರೆಸಿದರು. ಕಳೆದ ವಾರ, ಆದೇಶವನ್ನು ಸ್ವೀಕರಿಸಲು ಅವರಿಗೆ ಮೌಖಿಕ ನಿರ್ದೇಶನವನ್ನು ನೀಡಲಾಯಿತು. ಮುಂದಿನ ದಿನಗಳಲ್ಲಿ ಒತ್ತಡ ತೀವ್ರಗೊಳ್ಳುವುದು ನಿಶ್ಚಿತ. ಬದುಕುಳಿದವರು ಮತ್ತು ನಾಲ್ವರು ಸನ್ಯಾಸಿನಿಯರು ಸಾಕಷ್ಟು ಒತ್ತಡ ಮತ್ತು ಭಯವನ್ನು ಅನುಭವಿಸುತ್ತಿದ್ದಾರೆ ಎಂದು ಅವರು ಹೇಳಿದರು. ರೋಮನ್ ಕ್ಯಾಥೋಲಿಕ್ ಡಯಾಸಿಸ್‌ನಲ್ಲಿನ ಅತ್ಯಂತ ಪ್ರಭಾವಿ ಹೆಸರುಗಳ ವಿರುದ್ಧದ ಹೋರಾಟದ ಸಮಯದಲ್ಲಿ ಸನ್ಯಾಸಿನಿಯರಿಗೆ SOS ಬೆಂಬಲವನ್ನು ನೀಡಲಾಗಿತ್ತು.

ಸಂತ್ರಸ್ತೆ ಮತ್ತು ಕುರವಿಲಂಗಾಡ್‌ನಲ್ಲಿ ನಾಲ್ವರು ಸನ್ಯಾಸಿನಿಯರು, ಸಿಸ್ಟರ್ ಲಿಸ್ಸಿ ವಡಕೆಲ್ ಮತ್ತು ಸಿಸ್ಟರ್ ಲೂಸಿ ಕಲಾಪ್ಪುರರಲ್ಲದೆ, ಫ್ರಾನ್ಸಿಸ್ಕನ್ ಕ್ಲಾರಿಸ್ಟ್ ಸಭೆಯ ಸದಸ್ಯರು ಸನ್ಯಾಸಿನಿಯರಿಗೆ ನ್ಯಾಯಕ್ಕಾಗಿ ಹೋರಾಡಿದ್ದಕ್ಕಾಗಿ ಸಮುದಾಯದಿಂದ ಬಹಿಷ್ಕಾರವನ್ನು ಎದುರಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಬೇಸಿಗೆ ರಜೆಗಾಗಿ ಹೈಕೋರ್ಟ್ ಮುಚ್ಚುವ ಮೊದಲು ಕೇರಳ ಸರ್ಕಾರವು ಏಪ್ರಿಲ್ 7 ರೊಳಗೆ ತನ್ನ ಮೇಲ್ಮನವಿ ಸಲ್ಲಿಸುವ ನಿರೀಕ್ಷೆಯಿದೆ. ತೀರ್ಪಿನ ನಂತರ ಕೊಟ್ಟಾಯಂನ ಚರ್ಚ್‌ನಲ್ಲಿ ಪವಿತ್ರ ಮಾಸ್ ನೇತೃತ್ವ ವಹಿಸಿದ್ದ ಮುಳಕ್ಕಲ್ ಈಗ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ. ವಿಚಾರಣಾ ಕೋರ್ಟ್ ತೀರ್ಪು ಸಂತ್ರಸ್ತ ಸನ್ಯಾಸಿನಿಯ ವ್ಯಕ್ತಿತ್ವಕ್ಕೆ ಕಳಂಕ ತಂದಿದ್ದಕ್ಕೆ ಟೀಕೆಗಳನ್ನು ಎದುರಿಸಿತು.

ಜನವರಿಯಲ್ಲಿ ಕೈಬರಹದಲ್ಲಿ ಬರೆದ ಒಗ್ಗಟ್ಟಿನ ಟಿಪ್ಪಣಿಗಳನ್ನು ಕಳುಹಿಸುವ ಮೂಲಕ ಸನ್ಯಾಸಿನಿಯರಿಗೆ ಬೆಂಬಲವನ್ನು ವ್ಯಕ್ತಪಡಿಸುವ ಅಭಿಯಾನವು ಭಾರಿ ಹಿಟ್ ಆಯಿತು. ಸನ್ಯಾಸಿನಿಯರಿಗೆ ಸೆಲೆಬ್ರಿಟಿಗಳು ಮತ್ತು ಸಾಮಾನ್ಯ ವ್ಯಕ್ತಿಗಳಿಂದ ನೂರಾರು ಪತ್ರಗಳು ಒಗ್ಗಟ್ಟನ್ನು ವ್ಯಕ್ತಪಡಿಸಿದವು. “ಸನ್ಯಾಸಿಗಳು ಸತ್ಯವನ್ನು ಗೌರವಿಸುವ ಜನರಿದ್ದಾರೆ ಎಂಬ ಅಂಶದ ಬಗ್ಗೆ ಅರಿವಿದೆ. ಅದು ಅವರನ್ನು ಮುಂದೆಕರೆದೊಯ್ಯುತ್ತದೆ” ಎಂದು ಫಾದರ್ ವಟ್ಟೋಲಿ ಹೇಳಿದರು.

ಜೂನ್ 28, 2018 ರಂದು ಸನ್ಯಾಸಿನಿಯ ದೂರಿನ ಆಧಾರದ ಮೇಲೆ ಮುಳಕ್ಕಲ್ ವಿರುದ್ಧ ಅತ್ಯಾಚಾರ, ಅಕ್ರಮ ಬಂಧನ, ಅಸ್ವಾಭಾವಿಕ ಅಪರಾಧಗಳು ಮತ್ತು ಕ್ರಿಮಿನಲ್ ಬೆದರಿಕೆ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿದಾಗ ಪ್ರಕರಣ ಪ್ರಾರಂಭವಾಯಿತು. ಬಿಷಪ್ ವಿರುದ್ಧದ ದೂರುಗಳನ್ನು ಚರ್ಚ್ ನಿರ್ಲಕ್ಷಿಸಿದ ನಂತರ ಸನ್ಯಾಸಿನಿ ಪೊಲೀಸ್ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಕೇರಳ: ಕ್ರೈಸ್ತ ಸನ್ಯಾಸಿನಿಯ ಅತ್ಯಾಚಾರ ಪ್ರಕರಣ; ಆರೋಪಿ ಬಿಷಪ್ ಫ್ರಾಂಕೋ ಮುಳಯ್ಕಲ್ ತಪ್ಪಿತಸ್ಥನಲ್ಲ ಎಂದ ಕೋರ್ಟ್

ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ