ಭಾರತದಲ್ಲಿ 33 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ: ಸರ್ಕಾರದ ಅಂಕಿಅಂಶ

ಮಹಾರಾಷ್ಟ್ರ, ಬಿಹಾರ ಮತ್ತು ಗುಜರಾತ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ (WCD) ಸಚಿವಾಲಯವು ಆರ್​​ಟಿಐ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ತಿಳಿಸಿದೆ. 

ಭಾರತದಲ್ಲಿ 33 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ: ಸರ್ಕಾರದ ಅಂಕಿಅಂಶ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Nov 07, 2021 | 10:56 PM

ದೆಹಲಿ: ಭಾರತದಲ್ಲಿ 33 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಮತ್ತು ಅವರಲ್ಲಿ ಅರ್ಧಕ್ಕಿಂತ ಹೆಚ್ಚು ಮಕ್ಕಳು ತೀವ್ರ ಅಪೌಷ್ಟಿಕತೆಯ ವರ್ಗಕ್ಕೆ ಸೇರಿದ್ದಾರೆ. ಮಹಾರಾಷ್ಟ್ರ, ಬಿಹಾರ ಮತ್ತು ಗುಜರಾತ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ (WCD) ಸಚಿವಾಲಯವು ಆರ್​​ಟಿಐ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ತಿಳಿಸಿದೆ.  ಕೊವಿಡ್ ಸಾಂಕ್ರಾಮಿಕವು  ಬಡವರಲ್ಲಿ ಆರೋಗ್ಯ ಮತ್ತು ಪೌಷ್ಟಿಕಾಂಶದ ಬಿಕ್ಕಟ್ಟನ್ನು ಉಲ್ಬಣಗೊಳಿಸಬಹುದು ಎಂದು ಆತಂಕ ವ್ಯಕ್ತಪಡಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು 17,76,902 (17.76 ಲಕ್ಷ/1.7 ಮಿಲಿಯನ್) ತೀವ್ರವಾಗಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು (SAM) ಮತ್ತು ಅಕ್ಟೋಬರ್ 14, 2021ರ ಮಾಹಿತಿ ಪ್ರಕಾರ 15,46,420 (15.46 ಲಕ್ಷ/1.5 ಮಿಲಿಯನ್) ಮಧ್ಯಮ ತೀವ್ರ ಅಪೌಷ್ಟಿಕ (MAM) ಮಕ್ಕಳು ಇದ್ದಾರೆ ಎಂದು ಹೇಳಿದೆ.

ಒಟ್ಟು 33,23,322 (33.23 ಲಕ್ಷ/3.3 ಮಿಲಿಯನ್) ಎಂಬುದು 34 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ದತ್ತಾಂಶಗಳ ಸಂಗ್ರಹವಾಗಿದೆ ಎಂದು  ಆರ್‌ಟಿಐ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ಸಚಿವಾಲಯ ತಿಳಿಸಿದೆ. ಪೌಷ್ಟಿಕಾಂಶದ ಫಲಿತಾಂಶಗಳ ನೈಜ-ಸಮಯದ ಮೇಲ್ವಿಚಾರಣೆಗಾಗಿ ಆಡಳಿತ ಸಾಧನವಾಗಿ ಕಳೆದ ವರ್ಷ ಅಭಿವೃದ್ಧಿಪಡಿಸಿದ ಪೋಷಣ್ ಟ್ರ್ಯಾಕರ್ ಅಪ್ಲಿಕೇಶನ್‌ನಲ್ಲಿ ಸಂಖ್ಯೆಗಳನ್ನು ನೋಂದಾಯಿಸಲಾಗಿದೆ.

ಅಂಕಿಅಂಶಗಳು ಆತಂಕಕಾರಿಯಾಗಿದ್ದರೂ ಕಳೆದ ನವೆಂಬರ್‌ನ ಅಂಕಿಅಂಶಗಳೊಂದಿಗಿನ ಹೋಲಿಕೆಯು ಅವುಗಳನ್ನು ಇನ್ನಷ್ಟು ಹೆಚ್ಚಿಸುತ್ತದೆ. ನವೆಂಬರ್ 2020 ಮತ್ತು ಅಕ್ಟೋಬರ್ 14, 2021 ರ ನಡುವೆ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ಶೇ 91 ಪ್ರತಿಶತ ಏರಿಕೆ ಕಂಡುಬಂದಿದೆ. ಅಂದರೆ 9,27,606 (9.27 ಲಕ್ಷ) ರಿಂದ ಈಗ 17.76 ಲಕ್ಷಕ್ಕೆ ಏರಿದೆ.

ಆದಾಗ್ಯೂ, ಎರಡು ಸೆಟ್ ಅಂಕಿಅಂಶಗಳು ಡೇಟಾ ಸಂಗ್ರಹಣೆಯ ವಿಭಿನ್ನ ವಿಧಾನಗಳನ್ನು ಆಧರಿಸಿವೆ. ಕಳೆದ ವರ್ಷ ಗುರುತಿಸಲಾದ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಯನ್ನು (ಆರು ತಿಂಗಳಿಂದ ಆರು ವರ್ಷಗಳವರೆಗೆ) 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಎಣಿಕೆ ಮಾಡಿ ಕೇಂದ್ರಕ್ಕೆ ತಿಳಿಸಿವೆ. ಇತ್ತೀಚಿನ ಅಂಕಿಅಂಶಗಳು ಪೋಶನ್ ಟ್ರ್ಯಾಕರ್ ಮೂಲಕ, ಅಲ್ಲಿ ಅಂಗನವಾಡಿಗಳಿಂದ ನೇರವಾಗಿ ಸಂಖ್ಯೆಗಳನ್ನು ನಮೂದಿಸಲಾಗಿದೆ ಮತ್ತು ಮಕ್ಕಳ ವಯಸ್ಸಿನ ಗುಂಪನ್ನು ನಿರ್ದಿಷ್ಟಪಡಿಸಲಾಗಿಲ್ಲ.

ವಿಶ್ವ ಆರೋಗ್ಯ ಸಂಸ್ಥೆಯು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಎತ್ತರಕ್ಕೆ ಕಡಿಮೆ ತೂಕದಿಂದ ಅಥವಾ 115 mm ಗಿಂತ ಕಡಿಮೆ ಮಧ್ಯ ಮೇಲು ತೋಳು ಸುತ್ತಳತೆ ಅಥವಾ ಪೌಷ್ಟಿಕಾಂಶದ ಎಡಿಮಾದ ಉಪಸ್ಥಿತಿಯಿಂದ ವ್ಯಾಖ್ಯಾನಿಸುತ್ತದೆ. ಮಧ್ಯಮ ತೀವ್ರ ಅಪೌಷ್ಟಿಕತೆಯನ್ನು ಮಧ್ಯಮ ಕ್ಷೀಣತೆ ಅಥವಾ ಮಧ್ಯ-ಮೇಲಿನ-ತೋಳಿನ ಸುತ್ತಳತೆ (MUAC) 115 mm ಗಿಂತ ಹೆಚ್ಚು ಅಥವಾ ಸಮನಾಗಿರುತ್ತದೆ ಮತ್ತು 125 mm ಗಿಂತ ಕಡಿಮೆ ಎಂದು ವ್ಯಾಖ್ಯಾನಿಸಲಾಗಿದೆ.

ಮಧ್ಯಮ ತೀವ್ರ ಅಪೌಷ್ಟಿಕತೆ ಮತ್ತು ತೀವ್ರವಾದ ಅಪೌಷ್ಟಿಕತೆ ಇವೆರಡೂ ಮಗುವಿನ ಆರೋಗ್ಯದ ಮೇಲೆ ತೀವ್ರವಾದ ಆರೋಗ್ಯ ಪರಿಣಾಮಗಳನ್ನು ಹೊಂದಿವೆ. ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು ತಮ್ಮ ಎತ್ತರಕ್ಕೆ ತುಂಬಾ ಕಡಿಮೆ ತೂಕವನ್ನು ಹೊಂದಿರುತ್ತಾರೆ ಮತ್ತು ಅವರ ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆಯಿಂದಾಗಿ ರೋಗಗಳ ಸಂದರ್ಭದಲ್ಲಿ ಸಾಯುವ ಸಾಧ್ಯತೆ ಒಂಬತ್ತು ಪಟ್ಟು ಹೆಚ್ಚು. ಮಧ್ಯಮ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವವರು ಬಾಲ್ಯದಲ್ಲಿ ಅನಾರೋಗ್ಯ ಮತ್ತು ಮರಣದ ಅಪಾಯವನ್ನು ಹೆಚ್ಚಿಸುತ್ತಾರೆ.

ಪೋಷಣ್ ಟ್ರ್ಯಾಕರ್ ಅನ್ನು ಉಲ್ಲೇಖಿಸಿ ಆರ್​​ಟಿಐ ಉತ್ತರದ ಪ್ರಕಾರ, ಮಹಾರಾಷ್ಟ್ರವು 1,57,984 (1.57 ಲಕ್ಷ) ಮಧ್ಯಮ ತೀವ್ರ ಅಪೌಷ್ಟಿಕತೆ ಮಕ್ಕಳು ಮತ್ತು 4,58,788 (4.58 ಲಕ್ಷ) ತೀವ್ರ ಅಪೌಷ್ಟಿಕತೆ ಮಕ್ಕಳೊಂದಿಗೆ 6,16,772 (6.16 ಲಕ್ಷ) ಅಪೌಷ್ಟಿಕ ಮಕ್ಕಳ ಸಂಖ್ಯೆ ದಾಖಲಿಸಿದೆ. ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಬಿಹಾರದಲ್ಲಿ 4,75,824 (4.75 ಲಕ್ಷ) ಅಪೌಷ್ಟಿಕ ಮಕ್ಕಳು(3,23,741 ಮಧ್ಯಮ ತೀವ್ರ ಅಪೌಷ್ಟಿಕತೆ ಮಕ್ಕಳು ಮತ್ತು 1,52,083 ತೀವ್ರ ಅಪೌಷ್ಟಿಕತೆ ಮಕ್ಕಳು) ಇದ್ದಾರೆ.

ಗುಜರಾತ್ ನಲ್ಲಿ 1,55,101 (1.55 ಲಕ್ಷ) ಮಧ್ಯಮ ತೀವ್ರ ಅಪೌಷ್ಟಿಕತೆ ಮಕ್ಕಳು ಮತ್ತು 1,65,364 (1.65 ಲಕ್ಷ) ತೀವ್ರವಾದ ಅಪೌಷ್ಟಿಕತೆಯ ಮಕ್ಕಳೊಂದಿಗೆ 3,20,465 (3.20 ಲಕ್ಷ) ಅಪೌಷ್ಟಿಕ ಮಕ್ಕಳಿದ್ದು ಮೂರನೇ ಸ್ಥಾನದಲ್ಲಿದೆ.

ಅಂಕಿಅಂಶಗಳಿಗೆ ಪ್ರತಿಕ್ರಿಯಿಸಿದ ಮಕ್ಕಳ ಹಕ್ಕುಗಳು ಮತ್ತು ನೀವು (CRY) ಸಿಇಒ ಪೂಜಾ ಮರ್ವಾಹಾ, ಕೊವಿಡ್ ಸಾಂಕ್ರಾಮಿಕವು ಸುಮಾರು ಎಲ್ಲಾ ಸಾಮಾಜಿಕ-ಆರ್ಥಿಕ ಸೂಚಕಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಮತ್ತು ಕಳೆದ ದಶಕದಲ್ಲಿ ಮಾಡಿದ ಹೆಚ್ಚಿನ ಪ್ರಗತಿಯನ್ನು ರದ್ದುಗೊಳಿಸುವ ಆತಂವನ್ನುಂಟು ಮಾಡಿದೆ ಎಂದಿದ್ದಾರೆ.

ಐಸಿಡಿಎಸ್ (ಸಮಗ್ರ ಶಿಶು ಅಭಿವೃದ್ಧಿ ಯೋಜನೆ) ಮತ್ತು ಶಾಲೆಗಳಲ್ಲಿ ಮಧ್ಯಾಹ್ನದ ಊಟದಂತಹ ಸೇವೆಗಳು ಶಾಲೆಗಳನ್ನು ದೀರ್ಘಕಾಲದವರೆಗೆ ಮುಚ್ಚುವುದರಿಂದಾಗಿ ಅನಿಯಮಿತವಾಗಿವೆ. ಬಹು ಆಯಾಮದ ಬಡತನದಲ್ಲಿ ವಾಸಿಸುವ ಮಕ್ಕಳನ್ನು ಅಸಮಾನವಾಗಿ ತೀವ್ರವಾಗಿ ಪರಿಣಾಮ ಬೀರಿದೆ, ಏಕೆಂದರೆ ಅವರು ತಮ್ಮ ಹಕ್ಕುಗಳು ಮತ್ತು ಅರ್ಹತೆಗಳನ್ನು ಪೂರೈಸಲು ಈ ಸೇವೆಗಳ ಮೇಲೆ ಹೆಚ್ಚಾಗಿ ಅವಲಂಬಿತರಾಗಿದ್ದಾರೆ, ”ಎಂದು ಮರ್ವಾಹಾ ಪಿಟಿಐಗೆ ತಿಳಿಸಿದರು.

ಮಕ್ಕಳ ಪೌಷ್ಠಿಕಾಂಶದ ಸುರಕ್ಷತೆಯನ್ನು ಭದ್ರಪಡಿಸಲು ಬಜೆಟ್ ಹಂಚಿಕೆಗಳಲ್ಲಿನ ಸಮರ್ಪಕತೆಗೆ ಸಂಬಂಧಿಸಿದ ಸವಾಲುಗಳು ಮತ್ತು ಬಳಕೆಯಲ್ಲಿನ ಅಡಚಣೆಗಳನ್ನು ಪರಿಹರಿಸದ ಹೊರತು, ಸಾಂಕ್ರಾಮಿಕ ರೋಗದಿಂದ ಉಂಟಾದ ನಷ್ಟವನ್ನು ತಗ್ಗಿಸಲು ಭಾರತಕ್ಕೆ ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದರು.

ಇತರ ರಾಜ್ಯಗಳಲ್ಲಿ ಆಂಧ್ರಪ್ರದೇಶದಲ್ಲಿ 2,67,228 (2.76 ಲಕ್ಷ) ಅಪೌಷ್ಟಿಕ ಮಕ್ಕಳು (69,274 MAM ಮಕ್ಕಳು ಮತ್ತು 1,97,954 SAM ಮಕ್ಕಳು) ಮತ್ತು ಕರ್ನಾಟಕದಲ್ಲಿ 2,49,463 (2.49 ಲಕ್ಷ) ಇವುಗಳ ಪೈಕಿ 1,82,178 MAM ಮಕ್ಕಳು ಮತ್ತು 67,285 SAM ಮಕ್ಕಳು ಇದ್ದಾರೆ.

ಉತ್ತರ ಪ್ರದೇಶವು 1,86,640 (1.86 ಲಕ್ಷ) ಅಪೌಷ್ಟಿಕ ಮಕ್ಕಳನ್ನು ಹೊಂದಿದೆ. ಇದರಲ್ಲಿ 1,14,094 MAM ಮಕ್ಕಳು ಮತ್ತು 72,546 SAM ಮಕ್ಕಳು ಇದ್ದಾರೆ. ಆದರೆ ತಮಿಳುನಾಡಿನಲ್ಲಿ 1,78,060 (1.78 ಲಕ್ಷ ಮಕ್ಕಳು ಈ ಪೈಕಿ 1,20,076 MAM ಮಕ್ಕಳು ಮತ್ತು 57,984 SAM ಮಕ್ಕಳು, ಅಸ್ಸಾಂನಲ್ಲಿ 1,76,462 (1.76 ಲಕ್ಷ) ಅಪೌಷ್ಟಿಕತೆಯ ಪ್ರಕರಣಗಳಿವೆ. ಇದರಲ್ಲಿ 1,17,016 MAM ಮಕ್ಕಳು ಮತ್ತು 59,446 SAM ಮಕ್ಕಳು ಇದ್ದಾರೆ. ತೆಲಂಗಾಣದಲ್ಲಿ 1,52,524 ಮಕ್ಕಳ ಪೈಕಿ 95,033 MAM ಮತ್ತು 57,491 SAM ಮಕ್ಕಳು ಇದ್ದಾರೆ.

ದೆಹಲಿಯೂ ತೀರಾ ಹಿಂದುಳಿದಿಲ್ಲ. ರಾಷ್ಟ್ರ ರಾಜಧಾನಿಯಲ್ಲಿ SAM ಮತ್ತು MAM ಮಕ್ಕಳ ಒಟ್ಟು ಸಂಖ್ಯೆ 1,17,345 (1.17 ಲಕ್ಷ)ಇದೆ. ಇದರಲ್ಲಿ 20,122 MAM ಮತ್ತು 97,223 SAM ಮಕ್ಕಳು ಇದ್ದಾರೆ. ಅಪೌಷ್ಟಿಕತೆಯನ್ನು ಮೊದಲೇ ಗುರುತಿಸುವುದು ಮತ್ತು ಅಪೌಷ್ಟಿಕತೆ ಹದಗೆಡುವುದನ್ನು ತಡೆಯಲು ಸೂಕ್ತವಾದ ಚಿಕಿತ್ಸೆಯನ್ನು ಸ್ಥಾಪಿಸುವುದು ಬಹಳ ಮುಖ್ಯ ಎಂದು ಅಪೋಲೋ ಹಾಸ್ಪಿಟಲ್ಸ್ ಗ್ರೂಪ್‌ನ ಗುಂಪಿನ ವೈದ್ಯಕೀಯ ನಿರ್ದೇಶಕ ಮತ್ತು ಹಿರಿಯ ಮಕ್ಕಳ ವೈದ್ಯ ಅನುಪಮ್ ಸಿಬಲ್ ಹೇಳಿದ್ದಾರೆ.

“ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು ಸೋಂಕಿನ ಅಪಾಯವನ್ನು ಹೊಂದಿರುತ್ತಾರೆ, ಕಡಿಮೆ ಶಕ್ತಿಯನ್ನು ಹೊಂದಿರುತ್ತಾರೆ ಮತ್ತು ಶಾಲೆಯಲ್ಲಿ ಅವರ ಆನುವಂಶಿಕ ಸಾಮರ್ಥ್ಯಕ್ಕಿಂತ ಕಡಿಮೆ ಪ್ರದರ್ಶನ ನೀಡುತ್ತಾರೆ ಎಂದು ನಮಗೆ ತಿಳಿದಿದೆ. ಅಪೌಷ್ಟಿಕತೆಯ ನಿರ್ವಹಣೆಗೆ ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರಿಗೆ ಸಾಕಷ್ಟು ಪೋಷಣೆಯೊಂದಿಗೆ ಸಮಗ್ರ ವಿಧಾನದ ಅಗತ್ಯವಿದೆ, ಆರು ತಿಂಗಳ ಕಾಲ ವಿಶೇಷ ಸ್ತನ್ಯಪಾನ, ಜೀವನದ ಮೊದಲ ಕೆಲವು ವರ್ಷಗಳಲ್ಲಿ ಸೂಕ್ತವಾದ ಹಾಲುಣಿಸುವಿಕೆ ಮತ್ತು ಸಮತೋಲಿತ ಪೋಷಣೆಯ ಮೇಲೆ ಕೇಂದ್ರೀಕರಿಸುತ್ತದೆ ಎಂದು ಸಿಬಲ್ ಪಿಟಿಐಗೆ ತಿಳಿಸಿದರು.

ಇದನ್ನೂ ಓದಿ: Global Hunger Index 2021 ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತದ ಸ್ಥಾನ ಕುಸಿತ; ಈ ಸೂಚ್ಯಂಕ ಏನನ್ನು ಸೂಚಿಸುತ್ತದೆ?

156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ