ಅಯೋಧ್ಯೆಯಲ್ಲಿ ದಾಖಲೆಯ ದೀಪಾವಳಿ ಅದ್ದೂರಿಯಾಗಿ ಆಯ್ತು! ಇನ್ನು ರಾಮ ಮಂದಿರ ನಿರ್ಮಾಣ ಅಪ್ಡೇಟ್ ಏನು?
ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಭಕ್ತಾದಿಗಳಿಗೆ ದೇಗುಲದ ಬಗ್ಗೆ ಆಶಾದಾಯಕ ಸುದ್ದಿ ನೀಡಿದೆ. ಡಿಸೆಂಬರ್ 2023 ರ ವೇಳೆಗೆ ದೇವಾಲಯದ ಮೊದಲ ಮಹಡಿ ಸಿದ್ಧವಾಗಲಿದೆ. ಆ ನಂತರ ಜನವರಿ 14, 2024 ರಂದು ಮಕರ ಸಂಕ್ರಾಂತಿಯಂದು ದೇವಾಲಯದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನೆರವೇರಲಿದೆ.
ದೀಪಾವಳಿಯ ನಂತರ ಶ್ರೀರಾಮತೀರ್ಥ ಕ್ಷೇತ್ರ ಟ್ರಸ್ಟ್ (shri ram teerth kshetra trust) ರಾಮ ಮಂದಿರ ನಿರ್ಮಾಣದ (ayodhya ram temple) ಬಗ್ಗೆ ಭಕ್ತರಿಗೆ ಸಿಹಿಸುದ್ದಿ ನೀಡಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುತ್ತಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ಮಂದಿರ ನಿರ್ಮಾಣದ ಶೇ.50 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಕಾಮಗಾರಿ ಪ್ರಗತಿ ತೃಪ್ತಿಕರವಾಗಿದೆ ಎಂದು ಹೇಳಿದೆ. ಮಂದಿರ ನಿರ್ಮಾಣದ ಪ್ರಗತಿಯನ್ನು ಪರಿಶೀಲಿಸಬಹುದಾದ ಸ್ಥಳಕ್ಕೆ ಭೇಟಿ ನೀಡಲು ದೀಪಾವಳಿಯ ನಂತರ ಮಂಗಳವಾರ ಮಾಧ್ಯಮಗಳಿಗೆ ಟ್ರಸ್ಟ್ ಅವಕಾಶ ನೀಡಿತು. ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಮಾತನಾಡಿ, ‘ಮುಖ್ಯ ದೇವಾಲಯದ ಶೇ. 40 ಮತ್ತು ಒಟ್ಟಾರೆ ಸಂಕೀರ್ಣದ ಶೇ. 50 ರಷ್ಟು ಕಾರ್ಯ ಪೂರ್ಣಗೊಂಡಿದೆ, ನಿರ್ಮಾಣ ಕಾಮಗಾರಿಯ ಪ್ರಗತಿ ಮತ್ತು ಗುಣಮಟ್ಟದಿಂದ ನಮಗೆ ತೃಪ್ತಿ ಇದೆ ಎಂದರು.
ಭೇಟಿಯ ವೇಳೆ, ಕಳೆದ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಮಂದಿರ ನಿರ್ಮಾಣ ಕಾಮಗಾರಿಯ ಅವಲೋಕನ ನಡೆಸಿದ ಸ್ಥಳಕ್ಕೆ ಸುದ್ದಿಗಾರರನ್ನೂ ಕರೆದೊಯ್ದರು. ದೇಗುಲ ನಿರ್ಮಾಣಕ್ಕೆ 1,800 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ರೈ ಹೇಳಿದರು. ಡಿಸೆಂಬರ್ 2023 ರ ವೇಳೆಗೆ ದೇವಾಲಯದ ಮೊದಲ ಮಹಡಿ ಸಿದ್ಧವಾಗಲಿದೆ ಎಂದು ಅವರು ಹೇಳಿದರು. ಆ ನಂತರ ಜನವರಿ 14, 2024 ರಂದು ಮಕರ ಸಂಕ್ರಾಂತಿಯಂದು ದೇವಾಲಯದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನೆರವೇರಲಿದೆ. ಮುಂದೆ ಮಂದಿರವನ್ನು ಭಕ್ತರಿಗೆ ತೆರೆಯಲಾಗುವುದು ಎಂದು ಹೇಳಿದರು.
ವರದಿಯನ್ನು ಪ್ರಧಾನಿ ಕಚೇರಿಗೆ (ಪಿಎಂಒ) ಕಳುಹಿಸಲಾಗಿದೆ:
ಈ ವರ್ಷದ ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಶಂಕುಸ್ಥಾಪನೆಗೆ ಎರಡು ವರ್ಷಗಳು ಪೂರ್ಣಗೊಂಡಿವೆ. ಪ್ರಧಾನಿ ನರೇಂದ್ರ ಮೋದಿ ಅವರು 5 ಆಗಸ್ಟ್ 2020 ರಂದು ರಾಮ ಮಂದಿರದ ಶಂಕುಸ್ಥಾಪನೆ ಮಾಡಿದ್ದರು. ಕಳೆದ ತಿಂಗಳು, ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿದ ವರದಿಯನ್ನು ಪ್ರಧಾನ ಮಂತ್ರಿ ಕಚೇರಿಗೆ (ಪಿಎಂಒ) ಕಳುಹಿಸಲಾಗಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅನ್ನು ಉಲ್ಲೇಖಿಸಿ, ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷ ನಿಪೇಂದ್ರ ಮಿಶ್ರಾ ಅವರು ಮಂದಿರದ ನಿರ್ಮಾಣದ ಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದಾರೆ.
ದೇವಾಲಯದ ಗರ್ಭಗುಡಿ ಹಾಗೂ ನೆಲ ಅಂತಸ್ತಿನ ಕಾಮಗಾರಿ ಭರದಿಂದ ಸಾಗಿದೆ. ಆಧಾರ ಕಂಬಗಳ (ಪ್ಲಿಂತ್ -plinth) ಕಾಮಗಾರಿಯೂ ಪೂರ್ಣಗೊಂಡಿದೆ. ಸ್ತಂಭವನ್ನು 5 ಅಡಿ ಅಗಲ ಮತ್ತು 2.5 ಅಡಿ ಎತ್ತರದ 17000 ಕಲ್ಲುಗಳಿಂದ ಮಾಡಲಾಗಿದೆ. ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗುತ್ತಿರುವ ಗ್ರಾನೈಟ್ ಕಲ್ಲಿನ ಪ್ರತಿಯೊಂದರ ತೂಕ ಸುಮಾರು ಮೂರು ಟನ್ ಎಂದು ತಿಳಿದು ಬಂದಿದೆ. ಕಲ್ಲು ಎತ್ತಲು ನಾಲ್ಕು ಟವರ್ ಕ್ರೇನ್‌ಗಳು ಮತ್ತು ಹಲವಾರು ಮೊಬೈಲ್ ಕ್ರೇನ್‌ಗಳು ಮತ್ತು ಇತರ ಉಪಕರಣಗಳನ್ನು ಅಳವಡಿಸಲಾಗಿದೆ.
ಪ್ರಯಾಣಿಕರ ಸೌಕರ್ಯಕ್ಕಾಗಿ ಕೇಂದ್ರ ನಿರ್ಮಾಣ:
ದೇವಸ್ಥಾನದ ಆವರಣದಲ್ಲಿ ಏಕಕಾಲಕ್ಕೆ 5,000 ಭಕ್ತರಿಗೆ ನಿರೀಕ್ಷಣಾ ಕೊಠಡಿ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಉಪಯುಕ್ತ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಯಾತ್ರಾರ್ಥಿಗಳಿಗಾಗಿ ಆವರಣದಲ್ಲಿ ಯಾತ್ರಿಕರ ಸೌಲಭ್ಯ ಕೇಂದ್ರವನ್ನು ಸ್ಥಾಪಿಸಲಾಗುವುದು. ಭಕ್ತರು ತಮ್ಮ ವೈಯಕ್ತಿಕ ವಸ್ತುಗಳನ್ನು ಯಾತ್ರಾ ಕೇಂದ್ರದಲ್ಲಿ ಉಚಿತವಾಗಿ ಠೇವಣಿ ಮಾಡಬಹುದು ಎಂದು ಅವರು ವಿವರಿಸಿದರು.
On the eve of Deepawali, Hon'ble Prime Minister Shri @narendramodi performed Darshan-Pujan of Bhagwan Shri Ramlala Sarkar at Shri Ram Janmabhumi Mandir in Ayodhya ji. He later also participated in Deepotsav at Ram ki Paidi. pic.twitter.com/kMJSnrhsFG
— Shri Ram Janmbhoomi Teerth Kshetra (@ShriRamTeerth) October 23, 2022
Published On - 5:19 pm, Tue, 25 October 22