Sudha Murty: ಈ ರೀತಿ ಎಂದೂ ಆಗಿರಲಿಲ್ಲ; ರಕ್ಷಾ ಬಂಧನದ ಕುರಿತ ಪೋಸ್ಟ್ ವಿವಾದಕ್ಕೆ ಸುಧಾ ಮೂರ್ತಿ ಬೇಸರ
ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಮತ್ತು ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ರಕ್ಷಾ ಬಂಧನದ ಹಿನ್ನೆಲೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದ ಪೋಸ್ಟ್ ಒಂದು ಭಾರೀ ವೈರಲ್ ಆಗಿತ್ತು. ಇದು ಎಲ್ಲೆಡೆ ತೀವ್ರ ಚರ್ಚೆಯನ್ನು ಹುಟ್ಟುಹಾಕಿತು. ಹಾಗಾದರೆ, ಏನು ಈ ವಿವಾದ? ಇಲ್ಲಿದೆ ಪೂರ್ತಿ ಮಾಹಿತಿ.
ನವದೆಹಲಿ: ಸುಧಾ ಮೂರ್ತಿ ಎಂದರೆ ಗೊತ್ತಿಲ್ಲದವರೇ ಇಲ್ಲ. ತಮ್ಮ ಸರಳ ವ್ಯಕ್ತಿತ್ವದಿಂದ ಮನೆಮಾತಾಗಿರುವ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿತ್ತು. ಆದರೆ, ಎಲ್ಲ ರಾಜಕೀಯ ಪಕ್ಷದವರಿಂದಲೂ ಗೌರವ ಸಂಪಾದಿಸಿದ್ದ ಸುಧಾ ಮೂರ್ತಿ ರಕ್ಷಾಬಂಧನದ ಹಿನ್ನೆಲೆಯಲ್ಲಿ ಮಾಡಿದ್ದ ಪೋಸ್ಟ್ ಒಂದು ಭಾರೀ ವಿವಾದ ಸೃಷ್ಟಿಸಿದೆ.
ಇನ್ಫೋಸಿಸ್ ಫೌಂಡೇಶನ್‌ನ ಅಧ್ಯಕ್ಷೆ ಸುಧಾ ಮೂರ್ತಿ ಅವರು ರಕ್ಷಾ ಬಂಧನದ ಸಂದರ್ಭವನ್ನು ಆಚರಿಸಲು ಎಕ್ಸ್ನಲ್ಲಿ ವಿಡಿಯೋ ಸಂದೇಶವನ್ನು ಹಂಚಿಕೊಂಡಿದ್ದಾರೆ. ಅವರು ಈ ಹಬ್ಬದ ಆಚರಣೆಯ ಮೂಲವನ್ನು ವಿವರಿಸಿದ್ದಾರೆ. ಈ ವಿಡಿಯೋದಲ್ಲಿ ಅವರ ಮಾತಿನ ಸಾರಾಂಶ ಹೀಗಿದೆ… ರಕ್ಷಾ ಬಂಧನ ಅಥವಾ ರಾಖಿ ಹಬ್ಬ ನನ್ನ ಪ್ರಕಾರ ಸಹೋದರಿಗೆ ದಾರವನ್ನು ಕಟ್ಟುವ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಇದು ದೊಡ್ಡ ಆಚರಣೆಯಲ್ಲದಿರಬಹುದು. ಆದರೆ, ಕಷ್ಟದ ಸಮಯದಲ್ಲಿ ನನಗೆ ಸಹಾಯ ಮಾಡಲು ನೀವು ಯಾವಾಗಲೂ ಇರಬೇಕೆಂದು ಸೂಚಿಸುವ ಸರಳವಾದ ದಾರ ಇದಾಗಿದೆ ಎಂದಿದ್ದಾರೆ.
ಇದನ್ನೂ ಓದಿ: Raksha Bandhan: ದೆಹಲಿಯಲ್ಲಿ ಶಾಲಾ ಮಕ್ಕಳೊಂದಿಗೆ ರಕ್ಷಾ ಬಂಧನ ಆಚರಿಸಿದ ಪ್ರಧಾನಿ ಮೋದಿ
16ನೇ ಶತಮಾನದಲ್ಲಿ ರಾಣಿ ಕರ್ಣಾವತಿ ಸಮಸ್ಯೆಯಲ್ಲಿ ಸಿಲುಕಿದ್ದರು. ಅವರ ಸಾಮ್ರಾಜ್ಯದ ಮೇಲೆ ದಾಳಿ ಮಾಡಲಾಗಿತ್ತು. ಈ ವೇಳೆ ಕರ್ಣಾವತಿ ರಾಖಿಯೊಂದನ್ನು ಮೊಘಲ್ ದೊರೆ ಹುಮಾಯುನ್‌ಗೆ ಕಳುಹಿಸಿಕೊಟ್ಟು ಸಹೋದರನಾಗಿ ನನ್ನ ರಕ್ಷಣೆಗೆ ಬರಬೇಕು ಎಂದು ಕೋರಿದ್ದರು. ರಕ್ಷಾ ಬಂಧನದ ಕುರಿತು ಅರಿವಿಲ್ಲದ ಹುಮಾಯುನ್ ಈ ಕುರಿತು ತನ್ನ ಆಸ್ಥಾನದಲ್ಲಿದ್ದ ಹಿಂದೂ ಸೇವಕರ ಬಳಿ ಕೇಳಿ ತಿಳಿದುಕೊಂಡು ಕರ್ಣಾವತಿಯ ರಕ್ಷಣೆಗೆ ಮುಂದಾಗಿದ್ದರು. ಈ ಘಟನೆಯನ್ನು ಉಲ್ಲೇಖಿಸಿರುವ ಸುಧಾ ಮೂರ್ತಿ ಅಂದು ಆರಂಭಗೊಂಡ ರಕ್ಷಾ ಬಂಧನದ ಹಬ್ಬ ಈಗಲೂ ಮುಂದುವರಿಯುತ್ತಿದೆ ಎಂದು ಪೋಸ್ಟ್ ಮಾಡಿದ್ದರು.
Raksha Bandhan has a rich history. When Rani Karnavati was in danger, she sent a thread to King Humayun as a symbol of sibling-hood, asking for his help. This is where the tradition of the thread began and it continues to this day. pic.twitter.com/p98lwCZ6Pp
— Smt. Sudha Murty (@SmtSudhaMurty) August 19, 2024
ಈ ಪೋಸ್ಟ್ಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಮೂಲಕ ಸುಧಾ ಮೂರ್ತಿ ಮೊದಲ ಬಾರಿಗೆ ಟ್ರೋಲ್ ಆಗಿದ್ದರು. ರಕ್ಷಾ ಬಂಧನಕ್ಕೆ ಬಹಳ ಶ್ರೀಮಂತ ಇತಿಹಾಸವಿದೆ. ರಾಣಿ ಕರ್ಣಾವತಿ ಆಪತ್ತಿನಲ್ಲಿದ್ದಾಗ, ರಾಜ ಹುಮಾಯೂನ್‌ಗೆ ಒಡಹುಟ್ಟಿದವರ ಸಂಕೇತವಾಗಿ ರಾಖಿಯನ್ನು ಕಳುಹಿಸಿದ್ದರು. ಅಂದಿನಿಂದ ರಕ್ಷಾಬಂಧನದ ಸಂಪ್ರದಾಯ ಮುಂದುವರೆದುಕೊಂಡು ಬಂದಿದೆ ಎಂದು ಸುಧಾ ಮೂರ್ತಿ ಹೇಳಿದ್ದರು.
It’s a real surprise for me that you as a writer is telling this crap Raksha Bandan is related with Krishna & Draupati Please educate yourself
— Anu Satheesh 🇮🇳🚩 (@AnuSatheesh5) August 19, 2024
ಎಕ್ಸ್ ಬಳಕೆದಾರರೊಬ್ಬರು ಈ ವಿಡಿಯೋಗೆ ಕಮೆಂಟ್ ಮಾಡಿದ್ದು, “ಈ ಘಟನೆ ಎಂದಿಗೂ ಸಂಭವಿಸಲಿಲ್ಲ. ನಿಮ್ಮ ಐತಿಹಾಸಿಕ ಜ್ಞಾನವನ್ನು ಸುಧಾರಿಸಲು ವಾರಕ್ಕೆ 100 ಗಂಟೆಗಳ ಕಾಲ ಓದಿ” ಎಂದಿದ್ದಾರೆ. ಮತ್ತೊಬ್ಬರು, “ನೀವು ದಿನಕ್ಕೆ 20 ಗಂಟೆಗಳ ಕಾಲ ಇತಿಹಾಸವನ್ನು ಓದಬೇಕು” ಎಂದು ಟೀಕಿಸಿದ್ದಾರೆ.
It never happened, read 100 hours a week to improve your historical knowledge..
— 🦁 (@AndColorPockeT) August 19, 2024
ಇನ್ನೊಬ್ಬರು ರಕ್ಷಾಬಂಧನದ ಇತಿಹಾಸದ ಬಗ್ಗೆ ಕಮೆಂಟ್ ಮಾಡಿದ್ದು, ನೀವು ಬರಹಗಾರರಾಗಿ ಈ ರೀತಿ ಕೆಟ್ಟದ್ದನ್ನು ಹೇಳುತ್ತಿರುವುದು ನನಗೆ ನಿಜವಾಗಿ ಆಶ್ಚರ್ಯವಾಗಿದೆ. ರಕ್ಷಾ ಬಂಧನವು ಕೃಷ್ಣ ಮತ್ತು ದ್ರೌಪದಿಗೆ ಸಂಬಂಧಿಸಿದೆ. ದಂತಕಥೆಯ ಪ್ರಕಾರ, ಶ್ರೀಕೃಷ್ಣನು ಒಮ್ಮೆ ತಪ್ಪಾಗಿ ಸುದರ್ಶನ ಚಕ್ರವನ್ನು ಬಳಸುವಾಗ ಅವನ ಬೆರಳಿಗೆ ಗಾಯ ಮಾಡಿಕೊಂಡನು. ಅವನ ನೋವನ್ನು ಗಮನಿಸಿದ ದ್ರೌಪದಿ ಅವನ ಗಾಯವನ್ನು ಮುಚ್ಚುವ ಸಲುವಾಗಿ ತನ್ನ ಸೀರೆಯ ಒಂದು ಭಾಗವನ್ನು ಹರಿದು ಹಾಕಿದಳು. ಅದರಿಂದ ಪ್ರಭಾವಿತನಾದ ಕೃಷ್ಣನು ಯಾವಾಗಲೂ ಅವಳನ್ನು ರಕ್ಷಿಸುವುದಾಗಿ ವಾಗ್ದಾನ ಮಾಡಿದನು. ಅಂದಿನಿಂದ ರಕ್ಷಾ ಬಂಧನದ ಸಂಪ್ರದಾಯ ಶುರುವಾಯಿತು ಎಂದಿದ್ದಾರೆ.
The story I shared on Raksha Bandhan is just one of many tales associated with the festival and certainly not its origin. As I have said in the video clip, this was already a custom of the land. My intention was to highlight one of the many stories I learnt about when growing up,…
— Smt. Sudha Murty (@SmtSudhaMurty) August 19, 2024
ಈ ಬಗ್ಗೆ ಸುಧಾ ಮೂರ್ತಿ ಸ್ಪಷ್ಟನೆ ನೀಡಿದ್ದು, ರಕ್ಷಾ ಬಂಧನದಂದು ನಾನು ಹಂಚಿಕೊಂಡ ಕಥೆಯು ಹಬ್ಬಕ್ಕೆ ಸಂಬಂಧಿಸಿದ ಅನೇಕ ಕಥೆಗಳಲ್ಲಿ ಒಂದಾಗಿದೆ. ಆದರೆ, ಅದಕ್ಕೆ ನಾನಾ ರೀತಿಯ ಪ್ರತಿಕ್ರಿಯೆಗಳು ಬಂದಿವೆ. ಈ ರೀತಿ ನನಗೆ ಹಿಂದೆಂದೂ ಅನುಭವವಾಗಿರಲಿಲ್ಲ. ಖಂಡಿತವಾಗಿಯೂ ಇದೊಂದೇ ಮೂಲಕತೆಯಲ್ಲ. ಈ ಬಗ್ಗೆ ನಾನು ವೀಡಿಯೊದಲ್ಲಿ ಉಲ್ಲೇಖಿಸಿದ್ದೇನೆ. “ಇದು ಈಗಾಗಲೇ ಭೂಮಿಯ ಸಂಪ್ರದಾಯವಾಗಿತ್ತು. ನಾನು ಬೆಳೆದ ಪರಿಸರದ ಅನೇಕ ಕಥೆಗಳಲ್ಲಿ ಒಂದನ್ನು ರಕ್ಷಾ ಬಂಧನದ ಹಿಂದಿನ ಸುಂದರವಾದ ಸಂಕೇತದ ಬಗ್ಗೆ ಹೈಲೈಟ್ ಮಾಡುವುದು ನನ್ನ ಉದ್ದೇಶವಾಗಿತ್ತು.” ಎಂದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ