AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮಿಳುನಾಡು: ವಾಲ್ಪಾರೈ ಘಾಟ್​ನಲ್ಲಿ ಹತ್ತಾರು ಅಡಿ ಆಳದ ಪ್ರಪಾತಕ್ಕೆ ಉರುಳಿದ ಪ್ರವಾಸಿಗರ ವ್ಯಾನ್, ಕೇರಳದ 9 ಮಂದಿ ಸಾವು

ತಮಿಳುನಾಡಿನ ವಾಲ್ಪಾರೈ-ಪೊಳ್ಳಾಚಿ ಘಾಟ್ ರಸ್ತೆಯ ಹೇರ್ ಪಿನ್ ಬೆಂಡ್‌ನಲ್ಲಿ ಪ್ರವಾಸಿ ವ್ಯಾನ್ ಪ್ರಪಾತಕ್ಕೆ ಬಿದ್ದ ಪರಿಣಾಮ ಕೇರಳದ ಮಲಪ್ಪುರಂ ಮೂಲದ ಒಂಬತ್ತು ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ಐವರು ಸರ್ಕಾರಿ ಶಾಲಾ ಶಿಕ್ಷಕಿಯರಿದ್ದು, ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಈ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

ತಮಿಳುನಾಡು: ವಾಲ್ಪಾರೈ ಘಾಟ್​ನಲ್ಲಿ ಹತ್ತಾರು ಅಡಿ ಆಳದ ಪ್ರಪಾತಕ್ಕೆ ಉರುಳಿದ ಪ್ರವಾಸಿಗರ ವ್ಯಾನ್, ಕೇರಳದ 9 ಮಂದಿ ಸಾವು
ಸಾಂದರ್ಭಿಕ ಚಿತ್ರImage Credit source: shutterstock.com
ಗಣಪತಿ ಶರ್ಮಾ
|

Updated on: Apr 18, 2026 | 6:56 AM

Share

ಕೊಯಮತ್ತೂರು, ಏಪ್ರಿಲ್ 18: ತಮಿಳುನಾಡಿನ (Tamil Nadu) ಪ್ರಸಿದ್ಧ ಪ್ರವಾಸಿ ತಾಣವಾದ ವಾಲ್ಪಾರೈ-ಪೊಳ್ಳಾಚಿ ಘಾಟ್ (Valparai Ghat) ರಸ್ತೆಯಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕೇರಳ ಮೂಲದ ಒಂಬತ್ತು ಪ್ರವಾಸಿಗರು ಮೃತಪಟ್ಟಿದ್ದಾರೆ. ಪ್ರವಾಸಿಗರು ಪ್ರಯಾಣಿಸುತ್ತಿದ್ದ ವ್ಯಾನ್ ಚಾಲಕನ ನಿಯಂತ್ರಣ ತಪ್ಪಿ ಹತ್ತಾರು ಅಡಿ ಆಳದ ಪ್ರಪಾತಕ್ಕೆ ಉರುಳಿದ್ದರಿಂದ ಈ ದುರಂತ ಸಂಭವಿಸಿದೆ. ಮೃತಪಟ್ಟವರಲ್ಲಿ ಕೇರಳದ ಮಲಪ್ಪುರಂ ಜಿಲ್ಲೆಯ ಪಾಂಗು ಎಂಬಲ್ಲಿನ ಸರ್ಕಾರಿ ಎಲ್‌ಪಿ ಶಾಲೆಯ ಐವರು ಶಿಕ್ಷಕಿಯರು ಸೇರಿದ್ದಾರೆ.

ಮೃತರನ್ನು ಅಜಿತಾ (54), ರಮ್ಲಾ (52), ಸುಹ್ರಾ (43), ಆಶಾ (41), ಮಜೀತ್ (43), ಸಜಿತಾ (45), ಶಕೀಲಾ (37), ರುಕಿಯಾ (39) ಮತ್ತು ಹಿಶಾಂ (12) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಚಾಲಕ ಸೇರಿ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಕೊಯಮತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತ ಸಂಭವಿಸಿದ್ದು ಹೇಗೆ?

ಕೇರಳದ ಪೆರಿಂತಲ್ಮಣ ಮೂಲದ 13 ಸದಸ್ಯರ ತಂಡ ವಾಲ್ಪಾರೈ ಪ್ರವಾಸ ಮುಗಿಸಿ ವಾಪಸಾಗುತ್ತಿತ್ತು. ಚಾಲಕ ಸೇರಿದಂತೆ 13 ಮಂದಿ ಈ ಪ್ರವಾಸಿಗರ ಗುಂಪಿನ ಭಾಗವಾಗಿದ್ದರು. ಪ್ರಾಥಮಿಕ ವರದಿಗಳ ಪ್ರಕಾರ, ಭಾರಿ ತಿರುವಿನಲ್ಲಿ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡಿದ್ದಾನೆ. ಸಂಜೆ 5:15ರ ಸುಮಾರಿಗೆ 13ನೇ ಹೇರ್ ಪಿನ್ ಬೆಂಡ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ವಾಹನವು ರಸ್ತೆಯಿಂದ ಕೆಳಕ್ಕೆ ಜಾರಿ 9ನೇ ಹೇರ್ ಪಿನ್ ಬೆಂಡ್ ವರೆಗೆ ಉರುಳಿದೆ. ಕಡಿದಾದ ಭೂಪ್ರದೇಶ ಮತ್ತು ದಟ್ಟ ಅರಣ್ಯದ ಕಾರಣದಿಂದ ರಕ್ಷಣಾ ಕಾರ್ಯಾಚರಣೆ ಅತ್ಯಂತ ಸವಾಲಿನದ್ದಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಎನ್​ಡಿಎಗೆ ದೊಡ್ಡ ಸೋಲು; ಮಹಿಳಾ ಮೀಸಲಾತಿ ಮಸೂದೆಗೆ ಸಿಗದ ಬಹುಮತ

ಕೊಯಮತ್ತೂರು ಜಿಲ್ಲಾಧಿಕಾರಿ ಪವನಕುಮಾರ್ ಜಿ. ಗಿರಿಯಪ್ಪನವರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ, ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕಡಂಪರೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಪ್ರಧಾನಿ ಮೋದಿ ಸಂತಾಪ

ಪ್ರಧಾನಿ ನರೇಂದ್ರ ಮೋದಿ ಅವರು ಈ ದುರಂತಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ. ತಮಿಳುನಾಡಿನ ಕೊಯಮತ್ತೂರಿನಲ್ಲಿ ಸಂಭವಿಸಿದ ಅಪಘಾತದ ಬಗ್ಗೆ ತಿಳಿದು ತುಂಬಾ ದುಃಖವಾಯಿತು. ಈ ಅಪಘಾತದಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡವರ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸುತ್ತೇನೆ. ಗಾಯಾಳುಗಳು ಬೇಗನೆ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿಯವರು ಸಂದೇಶದಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ: ಲಾಯರ್ ಹೇಳಿದ್ದಿಷ್ಟು
ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ: ಲಾಯರ್ ಹೇಳಿದ್ದಿಷ್ಟು
ಶಿಕ್ಷೆ ಪ್ರಕಟವಾಗುತ್ತಿದ್ದಂತೆಯೇ ಸ್ಫೋಟಕ ವಿಚಾರ ಬಿಚ್ಚಿಟ್ಟ ಹೋರಾಟಗಾರ
ಶಿಕ್ಷೆ ಪ್ರಕಟವಾಗುತ್ತಿದ್ದಂತೆಯೇ ಸ್ಫೋಟಕ ವಿಚಾರ ಬಿಚ್ಚಿಟ್ಟ ಹೋರಾಟಗಾರ
ದರ್ಶನ್ ಅಂದು ಆ ಮಾತು ಹೇಳಲು ಬಿಡಲಿಲ್ಲ: ಮಾಜಿ ಮ್ಯಾನೇಜರ್
ದರ್ಶನ್ ಅಂದು ಆ ಮಾತು ಹೇಳಲು ಬಿಡಲಿಲ್ಲ: ಮಾಜಿ ಮ್ಯಾನೇಜರ್
ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ: ನನ್ನ ಮಾತು ಸತ್ಯವಾಗಿದೆ ಎಂದ BSY
ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ: ನನ್ನ ಮಾತು ಸತ್ಯವಾಗಿದೆ ಎಂದ BSY
ರಾಹುಲ್ ಗಾಂಧಿಯ ಭಾಷಣವೇ ದೊಡ್ಡ ತಲೆನೋವು; ಕಂಗನಾ ರಣಾವತ್ ಟೀಕೆ
ರಾಹುಲ್ ಗಾಂಧಿಯ ಭಾಷಣವೇ ದೊಡ್ಡ ತಲೆನೋವು; ಕಂಗನಾ ರಣಾವತ್ ಟೀಕೆ
ಜಮಖಂಡಿ ಕಾರಾಗೃಹಕ್ಕೆ ಎಡಿಜಿಪಿ ಭೇಟಿ: ಏನೇನೆಲ್ಲ ಪರಿಶೀಲಿಸಿದ್ರು ನೋಡಿ
ಜಮಖಂಡಿ ಕಾರಾಗೃಹಕ್ಕೆ ಎಡಿಜಿಪಿ ಭೇಟಿ: ಏನೇನೆಲ್ಲ ಪರಿಶೀಲಿಸಿದ್ರು ನೋಡಿ
ಗಾಜಿಯಾಬಾದ್‌ನಲ್ಲಿ ಗುಡಿಸಲುಗಳು ಬೆಂಕಿಗಾಹುತಿ; ಪೆಟಾದಿಂದ ಪ್ರಾಣಿಗಳ ರಕ್ಷಣೆ
ಗಾಜಿಯಾಬಾದ್‌ನಲ್ಲಿ ಗುಡಿಸಲುಗಳು ಬೆಂಕಿಗಾಹುತಿ; ಪೆಟಾದಿಂದ ಪ್ರಾಣಿಗಳ ರಕ್ಷಣೆ
ಮೈಮೇಲೆ ಸೊಳ್ಳೆ ಪರದೆ ಹಾಕಿಕೊಂಡು ನೈಟ್ ಡ್ಯೂಟಿ ಮಾಡಿದ ಸೆಕ್ಯೂರಿಟಿ ಗಾರ್ಡ್
ಮೈಮೇಲೆ ಸೊಳ್ಳೆ ಪರದೆ ಹಾಕಿಕೊಂಡು ನೈಟ್ ಡ್ಯೂಟಿ ಮಾಡಿದ ಸೆಕ್ಯೂರಿಟಿ ಗಾರ್ಡ್
ಪ್ರಧಾನಿ ಮೋದಿ ಮತ್ತು ನನಗೆ ಇಬ್ರಿಗೂ ‘ಹೆಂಡತಿ’ ಕಾಟ ಇಲ್ಲ : ರಾಹುಲ್ ಗಾಂಧಿ
ಪ್ರಧಾನಿ ಮೋದಿ ಮತ್ತು ನನಗೆ ಇಬ್ರಿಗೂ ‘ಹೆಂಡತಿ’ ಕಾಟ ಇಲ್ಲ : ರಾಹುಲ್ ಗಾಂಧಿ
ಮನೆಗೆ ನುಗ್ಗಿ ಮಂಚದ ಕೆಳಗೆ ಅವಿತು ಕುಳಿತ ಚಿರತೆ; ಹೌಹಾರಿದ ಕುಟುಂಬಸ್ಥರು!
ಮನೆಗೆ ನುಗ್ಗಿ ಮಂಚದ ಕೆಳಗೆ ಅವಿತು ಕುಳಿತ ಚಿರತೆ; ಹೌಹಾರಿದ ಕುಟುಂಬಸ್ಥರು!