ಭಾರತ ಅಮೆರಿಕ ನೇತೃತ್ವದ ಆರ್ಟೆಮಿಸ್ ತಂಡದ ಭಾಗವಾಗಬೇಕಿದೆ: ನಾಸಾದ ಉನ್ನತ ಅಧಿಕಾರಿ
ಆರ್ಟೆಮಿಸ್ ಒಪ್ಪಂದಗಳಿಗೆ ಸಹಿ ಮಾಡುವುದು ಭಾರತಕ್ಕೆ ಆದ್ಯತೆಯಾಗಿರಬೇಕು ಎಂದು ನಾನು ಭಾವಿಸುತ್ತೇನೆ. ಅಂದರೆ, ಭಾರತವು ಜಾಗತಿಕ ಶಕ್ತಿ ಎಂದು ನಾಸಾ ಭಾವಿಸುತ್ತದೆ. ಇದು ಬಾಹ್ಯಾಕಾಶಕ್ಕೆ ಸ್ವತಂತ್ರ ಪ್ರವೇಶವನ್ನು ಹೊಂದಿರುವ ಕೆಲವೇ ದೇಶಗಳಲ್ಲಿ ಒಂದಾಗಿದ್ದು, ಅಭಿವೃದ್ಧಿ ಹೊಂದುತ್ತಿರುವ ಉಡಾವಣಾ ಉದ್ಯಮವನ್ನು ಹೊಂದಿದೆ
ಜಾಗತಿಕ ಶಕ್ತಿಯಾಗಿರುವ ಮತ್ತು ಬಾಹ್ಯಾಕಾಶಕ್ಕೆ ಸ್ವತಂತ್ರ ಪ್ರವೇಶ ಹೊಂದಿರುವ ಕೆಲವೇ ದೇಶಗಳಲ್ಲಿ ಒಂದಾಗಿರುವ ಭಾರತ, ನಾಗರಿಕ ಬಾಹ್ಯಾಕಾಶ ಪರಿಶೋಧನೆಯಲ್ಲಿ ಸಮಾನ ಮನಸ್ಕ ರಾಷ್ಟ್ರಗಳನ್ನು ಒಟ್ಟುಗೂಡಿಸುವ ಆರ್ಟೆಮಿಸ್ (Artemis) ತಂಡದ ಭಾಗವಾಗಬೇಕಾಗಿದೆ ಎಂದು ನಾಸಾದ (NASA) ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ. 1967 ರ ಬಾಹ್ಯಾಕಾಶ ಒಪ್ಪಂದದ (OST) ಆಧಾರದಲ್ಲಿ, ಆರ್ಟೆಮಿಸ್ ಒಪ್ಪಂದಗಳು 21 ನೇ ಶತಮಾನದಲ್ಲಿ ನಾಗರಿಕ ಬಾಹ್ಯಾಕಾಶ ಪರಿಶೋಧನೆ ಮತ್ತು ಬಳಕೆಗೆ ಮಾರ್ಗದರ್ಶನ ನೀಡಲು ವಿನ್ಯಾಸಗೊಳಿಸಲಾಗಿದೆ. 2025 ರ ವೇಳೆಗೆ ಮಾನವರನ್ನು ಚಂದ್ರನತ್ತ ಕಳುಹಿಸುವ ಅಮೆರಿಕ ನೇತೃತ್ವದ ಪ್ರಯತ್ನವಾಗಿದೆ. ಮೇ 2023 ರ ಹೊತ್ತಿಗೆ, ಆರ್ಟೆಮಿಸ್ ಒಪ್ಪಂದಗಳಿಗೆ 25 ರಾಷ್ಚ್ರಗಳು ಸಹಿ ಹಾಕಿದ್ದಾರೆ. 26ನೇ ದೇಶ ಭಾರತ ಆಗಬಹುದು ಎಂದು ನಾಸಾ ನಿರ್ವಾಹಕರ ಕಚೇರಿಯೊಳಗಿನ ತಂತ್ರಜ್ಞಾನ, ನೀತಿ ಮತ್ತು ಕಾರ್ಯತಂತ್ರದ ಸಹಾಯಕ ನಿರ್ವಾಹಕರಾದ ಭವ್ಯ ಲಾಲ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಆರ್ಟೆಮಿಸ್ ಒಪ್ಪಂದಗಳಿಗೆ ಸಹಿ ಮಾಡುವುದು ಭಾರತಕ್ಕೆ ಆದ್ಯತೆಯಾಗಿರಬೇಕು ಎಂದು ನಾನು ಭಾವಿಸುತ್ತೇನೆ. ಅಂದರೆ, ಭಾರತವು ಜಾಗತಿಕ ಶಕ್ತಿ ಎಂದು ನಾಸಾ ಭಾವಿಸುತ್ತದೆ. ಇದು ಬಾಹ್ಯಾಕಾಶಕ್ಕೆ ಸ್ವತಂತ್ರ ಪ್ರವೇಶವನ್ನು ಹೊಂದಿರುವ ಕೆಲವೇ ದೇಶಗಳಲ್ಲಿ ಒಂದಾಗಿದ್ದು, ಅಭಿವೃದ್ಧಿ ಹೊಂದುತ್ತಿರುವ ಉಡಾವಣಾ ಉದ್ಯಮವನ್ನು ಹೊಂದಿದೆ.ಇದು ಆರ್ಟೆಮಿಸ್ ತಂಡದ ಭಾಗವಾಗಿರಬೇಕು ಎಂದು ಅವರು ಹೇಳಿದ್ದಾರೆ.
ಹಾಗಾಗಿ, ಒಂದೇ ರೀತಿಯ ಮೌಲ್ಯಗಳನ್ನು ಹೊಂದಿರುವ ಸಮಾನ ಮನಸ್ಕ ದೇಶಗಳು ಒಟ್ಟಾಗಿ ಅನ್ವೇಷಿಸಲು ಅವಕಾಶವನ್ನು ಹೊಂದಿರುವುದು ಪ್ರಯೋಜನವಾಗಿದೆ ಎಂದು ಲಾಲ್ ಹೇಳಿದರು.
ಇದನ್ನೂ ಓದಿ: 9 Years Of PM Modi: ನರೇಂದ್ರ ಮೋದಿ ಪ್ರಧಾನಿಯಾಗಿ 9 ವರ್ಷ ಪೂರೈಕೆ: ಬಿಜೆಪಿ ನಾಯಕರಿಂದ ರಾಜ್ಯ ಪ್ರವಾಸ
ಪ್ರಯೋಜನವೆಂದರೆ ಭಾರತವು ಜಾಗತಿಕ ಬಾಹ್ಯಾಕಾಶ ಶಕ್ತಿ ಎಂದು ಘೋಷಿಸುತ್ತದೆ ಮತ್ತು ಸುಸ್ಥಿರ ಅನ್ವೇಷಣೆ, ಬಾಹ್ಯಾಕಾಶದ ಜವಾಬ್ದಾರಿಯುತ ಬಳಕೆ, ಸಹಕಾರ ಮತ್ತು ಪಾರದರ್ಶಕತೆಯಂತಹ ವಿಷಯಗಳನ್ನು ಗೌರವಿಸುತ್ತದೆ ಎಂದು ಅವರು ಹೇಳಿದರು. ಮಥುರಾದಲ್ಲಿ ಹುಟ್ಟಿ ನವದೆಹಲಿಯಲ್ಲಿ ಬೆಳೆದ ಲಾಲ್, ಈ ಹಿಂದೆ ನಾಸಾದ ಕಾರ್ಯನಿರ್ವಹಣಾ ಮುಖ್ಯ ತಂತ್ರಜ್ಞರಾಗಿ ಸೇವೆ ಸಲ್ಲಿಸಿದ್ದರು. ನಾಸಾದ 60 ವರ್ಷಗಳ ಇತಿಹಾಸದಲ್ಲಿ ಈ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆಯಾಗಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:50 pm, Sat, 17 June 23