AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈತರಿಗೆ ಒಳ್ಳೆ ಸುದ್ದಿ; ಕೇಂದ್ರ ಸರ್ಕಾರದಿಂದ ಚಳಿಗಾಲದ ಈ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ಅನುಮೋದನೆ

ಗೋಧಿಯ ಎಂಎಸ್‌ಪಿ ಪ್ರತಿ ಕ್ವಿಂಟಾಲ್‌ಗೆ 150 ರೂ. ಆಗಿದ್ದು, ಬೆಲೆ 2,275 ರೂ.ನಿಂದ 2,425 ರೂ.ಗೆ ಏರಿಕೆಯಾಗಿದೆ. ಸಾಸಿವೆಗೆ ಎಂಎಸ್‌ಪಿ 300 ಆಗಿದ್ದು, ಬೆಲೆ 5,950 ರೂ.ಗೆ ಏರಿಕೆಯಾಗಿದೆ. ಚನಾ 210 ರೂ. ಎಂಎಸ್​ಪಿ ಆಗಿದ್ದು, ಬೆಲೆ 5,650 ರೂ. ಆಗಿದೆ. ಹಾಗೆಯೇ, ಬಾರ್ಲಿ, ಮಸೂರ್, ಕುಸುಬೆಗಳ ಮೇಲಿನ ಎಂಎಸ್‌ಪಿಯನ್ನು ಕ್ರಮವಾಗಿ 1,980 ರೂ., 6,700 ಮತ್ತು 5,940 ರೂ.ಗೆ ಹೆಚ್ಚಿಸಲಾಗಿದೆ.

ರೈತರಿಗೆ ಒಳ್ಳೆ ಸುದ್ದಿ; ಕೇಂದ್ರ ಸರ್ಕಾರದಿಂದ ಚಳಿಗಾಲದ ಈ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ಅನುಮೋದನೆ
ಗೋಧಿ
ಸುಷ್ಮಾ ಚಕ್ರೆ
|

Updated on:Oct 16, 2024 | 3:57 PM

Share

ನವದೆಹಲಿ: ಮುಂಬರುವ ಮಾರುಕಟ್ಟೆ ಋತು 2025-26ಕ್ಕೆ ರಾಬಿ ಬೆಳೆಗಳಿಗೆ ಹೊಸ ಕನಿಷ್ಠ ಬೆಂಬಲ ಬೆಲೆಗಳನ್ನು (MSP) ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ. ರೈತರಿಗೆ ಉತ್ತಮ ಆದಾಯವನ್ನು ಖಚಿತಪಡಿಸಿಕೊಳ್ಳಲು ಮತ್ತು ರಾಬಿ ಋತುವಿನಲ್ಲಿ ಪ್ರಮುಖ ಬೆಳೆಗಳ ಕೃಷಿಯನ್ನು ಉತ್ತೇಜಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಪರಿಷ್ಕೃತ ಎಂಎಸ್‌ಪಿ ದರಗಳು ರೈತರ ಉತ್ಪನ್ನಗಳಿಗೆ ನ್ಯಾಯಯುತ ಬೆಲೆಯನ್ನು ನೀಡುವ ಗುರಿಯನ್ನು ಹೊಂದಿವೆ.

ಮಾನ್ಸೂನ್ ಮುಗಿದ ನಂತರ ಚಳಿಗಾಲದಲ್ಲಿ ರಾಬಿ ಬೆಳೆಯನ್ನು ಬಿತ್ತಲಾಗುತ್ತದೆ ಮತ್ತು ಬೇಸಿಗೆಯಲ್ಲಿ ಕೊಯ್ಲು ಮಾಡಲಾಗುತ್ತದೆ. ಅಕ್ಟೋಬರ್​ನಿಂದ ಏಪ್ರಿಲ್ ತಿಂಗಳವರೆಗೆ ಈ ಬೆಳೆಗಳ ಅವಧಿ ಇರುತ್ತದೆ. ಗೋಧಿ, ಬಾರ್ಲಿ, ಸಾಸಿವೆ, ಹಸಿರು ಬಟಾಣಿ, ಜೀರಿಗೆ, ಕೊತ್ತಂಬರಿ, ಓಟ್ಸ್ ಮುಂತಾದವು ರಾಬಿ ಬೆಳೆಗಳಾಗಿವೆ. 2025-26ರ ಮಾರ್ಕೆಟಿಂಗ್ ಸೀಸನ್‌ಗಾಗಿ ರಬಿ ಬೆಳೆಗಳಿಗೆ ಹೆಚ್ಚಿನ ಕನಿಷ್ಟ ಬೆಂಬಲ ಬೆಲೆ (MSP)ಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ. ರೈತರಿಗೆ ಉತ್ತಮ ಆದಾಯವನ್ನು ನೀಡಲು ಮತ್ತು ರಾಬಿ ಋತುವಿನಲ್ಲಿ ಪ್ರಮುಖ ಬೆಳೆಗಳ ಕೃಷಿಯನ್ನು ಉತ್ತೇಜಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಇದನ್ನೂ ಓದಿ: ದೆಹಲಿಯ ಪ್ರಧಾನಮಂತ್ರಿ ಗತಿಶಕ್ತಿ ಅನುಭೂತಿ ಕೇಂದ್ರಕ್ಕೆ ಪ್ರಧಾನಿ ಮೋದಿ ದಿಢೀರ್​ ಭೇಟಿ

ಪ್ರಮುಖ ರಾಬಿ ಬೆಳೆಯಾದ ಗೋಧಿಗೆ MSPಯನ್ನು ಕ್ವಿಂಟಾಲ್‌ಗೆ 150 ರೂ. ಹೆಚ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ ಗೋಧಿ ಪ್ರತಿ ಕ್ವಿಂಟಾಲ್‌ಗೆ ಹೊಸ ಬೆಲೆ 2,425 ರೂ.ಗೆ ತಲುಪಿದೆ. ಹಿಂದಿನ ಹಂಗಾಮಿನಲ್ಲಿ 2,275 ರೂ. ಇತ್ತು. ದೇಶದ ಅನೇಕ ಭಾಗಗಳಲ್ಲಿ ಗೋಧಿ ಪ್ರಧಾನ ಬೆಳೆಯಾಗಿದೆ. ಹೀಗಾಗಿ, ಈ ಹೆಚ್ಚಳವು ರೈತರಿಗೆ ಪ್ರಯೋಜನವನ್ನು ನೀಡುತ್ತದೆ. ವಿಶೇಷವಾಗಿ ಗೋಧಿ ಪ್ರಮುಖ ಬೆಳೆಯಾಗಿರುವ ಉತ್ತರ ಭಾರತದ ರೈತರಿಗೆ ಇದರಿಂದ ಪ್ರಯೋಜನವಾಗಲಿದೆ.

ರಾಬಿ ಬೆಳೆಯಾದ ಸಾಸಿವೆ MSP 300 ರೂ.ಗಳಷ್ಟು ಹೆಚ್ಚಾಗಿದೆ. ಈ ಮೂಲಕ ಪ್ರತಿ ಕ್ವಿಂಟಾಲ್‌ಗೆ 5,650 ರೂ.ನಿಂದ 5,950 ರೂ. ಆಗಿದೆ. ಸಾಸಿವೆಯನ್ನು ರಾಜಸ್ಥಾನ, ಹರಿಯಾಣ ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತದೆ. ಇದು ರೈತರು ಮತ್ತು ಗ್ರಾಹಕರು ಇಬ್ಬರಿಗೂ ಪ್ರಮುಖ ಎಣ್ಣೆಬೀಜದ ಬೆಳೆಯಾಗಿದೆ. ಸಾಸಿವೆಗೆ ಹೆಚ್ಚಿನ MSP ಸಿಕ್ಕಿರುವುದು ರೈತರಿಗೆ ಉತ್ತಮ ಆದಾಯವನ್ನು ನೀಡುತ್ತದೆ ಮತ್ತು ಈ ಎಣ್ಣೆಬೀಜದ ಹೆಚ್ಚಿನ ಕೃಷಿಯನ್ನು ಪ್ರೋತ್ಸಾಹಿಸುತ್ತದೆ.

ಇದನ್ನೂ ಓದಿ: ಭಾರತ ವಿಶ್ವದ 5G ಪವರ್​ಹೌಸ್ ಆಗಿ ಹೊರಹೊಮ್ಮಿದೆ; ಐಎಂಸಿಯಲ್ಲಿ ಪ್ರಧಾನಿ ಮೋದಿ

ಕಡಲೆಯ MSP 210 ರೂ. ಏರಿಕೆ ಕಂಡಿದೆ. ಹೊಸ ದರ ಕ್ವಿಂಟಾಲ್‌ಗೆ 5,650 ರೂ. ಆಗಿದೆ. ಕಡಲೆ ಕಾಳು ಭಾರತದಲ್ಲಿ ಪ್ರಮುಖ ದ್ವಿದಳ ಧಾನ್ಯವಾಗಿದೆ ಮತ್ತು ಇದನ್ನು ದೇಶಾದ್ಯಂತ ವ್ಯಾಪಕವಾಗಿ ಸೇವಿಸಲಾಗುತ್ತದೆ. ಈ ಹೆಚ್ಚಳದೊಂದಿಗೆ, ಭಾರತೀಯ ಆಹಾರದಲ್ಲಿ ಪ್ರೋಟೀನ್‌ನ ಪ್ರಮುಖ ಮೂಲವಾಗಿರುವ ಬೇಳೆಕಾಳುಗಳ ಹೆಚ್ಚಿನ ಉತ್ಪಾದನೆಯನ್ನು ಉತ್ತೇಜಿಸುವ ಗುರಿಯನ್ನು ಸರ್ಕಾರ ಹೊಂದಿದೆ. ವಿಶೇಷವಾಗಿ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ಕಡಲೆಯನ್ನು ಬೆಳೆಯುವ ರೈತರು MSPಯ ಏರಿಕೆಯಿಂದ ಪ್ರಯೋಜನ ಪಡೆಯುತ್ತಾರೆ.

MSP ಅಥವಾ ಕನಿಷ್ಠ ಬೆಂಬಲ ಬೆಲೆ ಎಂಬುದು ರೈತರಿಂದ ಕೆಲವು ಕೃಷಿ ಉತ್ಪನ್ನಗಳನ್ನು ಖರೀದಿಸಲು ಸರ್ಕಾರ ನಿಗದಿಪಡಿಸಿದ ಬೆಲೆಯಾಗಿದೆ. ಇದರಿಂದ ರೈತರು ತಮ್ಮ ಬೆಳೆಗಳಿಗೆ ನ್ಯಾಯಯುತ ಬೆಲೆಯನ್ನು ಪಡೆಯುತ್ತಾರೆ. ಮಾರುಕಟ್ಟೆ ಬೆಲೆಗಳು ಕಡಿಮೆಯಾಗಿದ್ದರೂ ಸಹ ಅವರು ಆರ್ಥಿಕ ನಷ್ಟಕ್ಕೆ ಒಳಗಾಗದಂತೆ ರಕ್ಷಿಸಲು ಈ ಎಂಎಸ್​ಪಿ ಸಹಾಯ ಮಾಡುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:53 pm, Wed, 16 October 24

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ