AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಯನಾಡಿನಲ್ಲಿ ಗುಡ್ಡ ಕುಸಿತ; ಮಾಧವ್ ಗಾಡ್ಗೀಳ್ ಸಮಿತಿಯ ವರದಿ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ?

ಕೇರಳದ ವಯನಾಡ್ ಗುಡ್ಡ ಕುಸಿತ ದುರಂತದ ಬಗ್ಗೆ ಚರ್ಚೆಯಾಗುತ್ತಿರುವ ಈ ಹೊತ್ತಲ್ಲಿ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ (EAS) ವಿವೇಚನಾರಹಿತ ಕಲ್ಲುಗಣಿಗಾರಿಕೆ ಮತ್ತು ನಿರ್ಮಾಣ ಚಟುವಟಿಕೆಗಳ ವಿರುದ್ಧ ನಿರ್ದಿಷ್ಟವಾಗಿ ಎಚ್ಚರಿಕೆ ನೀಡಿದ್ದ 13 ವರ್ಷಗಳ ಹಿಂದಿನ ವರದಿ ಮತ್ತೊಮ್ಮೆ ಬೆಳಕಿಗೆ ಬಂದಿದೆ. ವೈತಿರಿ ತಾಲೂಕಿನಲ್ಲಿರುವ ಮೇಪ್ಪಾಡಿ, ಮಂಗಳವಾರ ಭೂಕುಸಿತದಲ್ಲಿ ಹಾನಿಗೊಳಗಾದ ಗ್ರಾಮಗಳಾದ ಮುಂಡಕೈ, ಚೂರಲ್ ಮಲ, ಅಟ್ಟಮಾಲ ಮತ್ತು ನೂಲ್ಪುಳ ಗ್ರಾಮ ಸಮಿತಿಯು ಗುರುತಿಸಿರುವ ಕೇರಳದ 18 ಪರಿಸರ ಸೂಕ್ಷ್ಮ ಸ್ಥಳಗಳಲ್ಲಿ ಒಂದಾಗಿದೆ.

ವಯನಾಡಿನಲ್ಲಿ ಗುಡ್ಡ ಕುಸಿತ; ಮಾಧವ್ ಗಾಡ್ಗೀಳ್ ಸಮಿತಿಯ ವರದಿ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ?
ವಯನಾಡ್ ಭೂಕುಸಿತ
ರಶ್ಮಿ ಕಲ್ಲಕಟ್ಟ
|

Updated on: Jul 30, 2024 | 6:59 PM

Share

ಬೆಂಗಳೂರು ಜುಲೈ 30: ಕೇರಳದ (Kerala) ವಯನಾಡಿನ (Wayanad Lanslides) ಚೂರಲ್​​ಮಲ ಮತ್ತು ಮುಂಡಕೈ ಪ್ರದೇಶದಲ್ಲಿ ಗುಡ್ಡ ಕುಸಿದು ಸಂಭವಿಸಿದ ದುರಂತದಲ್ಲಿ ಸಾವಿನ ಸಂಖ್ಯೆ 104 ಆಗಿದೆ. ಇಲ್ಲಿವರೆಗೆ 34 ಮೃತದೇಹಗಳ ಗುರುತು ಪತ್ತೆಯಾಗಿದ್ದು ರಕ್ಷಣಾ ಕಾರ್ಯಗಳು ನಡೆಯುತ್ತಿವೆ. ವಯನಾಡ್ ಗುಡ್ಡ ಕುಸಿತ ದುರಂತದ ಬಗ್ಗೆ ಚರ್ಚೆಯಾಗುತ್ತಿರುವ ಈ ಹೊತ್ತಲ್ಲಿ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ (EAS) ವಿವೇಚನಾರಹಿತ ಕಲ್ಲುಗಣಿಗಾರಿಕೆ ಮತ್ತು ನಿರ್ಮಾಣ ಚಟುವಟಿಕೆಗಳ ವಿರುದ್ಧ ನಿರ್ದಿಷ್ಟವಾಗಿ ಎಚ್ಚರಿಕೆ ನೀಡಿದ್ದ 13 ವರ್ಷಗಳ ಹಿಂದಿನ ವರದಿ ಮತ್ತೊಮ್ಮೆ ಬೆಳಕಿಗೆ ಬಂದಿದೆ. ಮಾಧವ್ ಗಾಡ್ಗೀಳ್ ನೇತೃತ್ವದ ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿಯು ಆಗಸ್ಟ್ 2011 ರಲ್ಲಿ ಕೇಂದ್ರಕ್ಕೆ ಸಲ್ಲಿಸಿದ ವರದಿಯಲ್ಲಿ ಮೆಪ್ಪಾಡಿಯಲ್ಲಿ ಪರಿಸರ ವಿರೋಧಿ ಚಟುವಟಿಕೆಗಳ ವಿರುದ್ಧ ನಿರ್ದಿಷ್ಟವಾಗಿ ಎಚ್ಚರಿಕೆ ನೀಡಿತ್ತು.

ವೈತಿರಿ ತಾಲೂಕಿನಲ್ಲಿರುವ ಮೇಪ್ಪಾಡಿ, ಮಂಗಳವಾರ ಭೂಕುಸಿತದಲ್ಲಿ ಹಾನಿಗೊಳಗಾದ ಗ್ರಾಮಗಳಾದ ಮುಂಡಕೈ, ಚೂರಲ್ ಮಲ, ಅಟ್ಟಮಾಲ ಮತ್ತು ನೂಲ್ಪುಳ ಗ್ರಾಮ ಸಮಿತಿಯು ಗುರುತಿಸಿರುವ ಕೇರಳದ 18 ಪರಿಸರ ಸೂಕ್ಷ್ಮ ಸ್ಥಳಗಳಲ್ಲಿ (ESL) ಒಂದಾಗಿದೆ. ಆದಾಗ್ಯೂ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ಇದನ್ನು ಜಾರಿಗೆ ತರಲು ಉತ್ಸುಕರಾಗಿರಲಿಲ್ಲ ಮತ್ತು ಬದಲಿಗೆ ಪ್ರಸ್ತಾವನೆಗಳನ್ನು ದುರ್ಬಲಗೊಳಿಸುವ ಗುರಿಯನ್ನು ಹೊಂದಿರುವ ಕ್ರಮಗಳಿಗೆ ಮುಂದಾದವು.

ತನ್ನ ವರದಿಯಲ್ಲಿ, ಮಾಧವ್ ಗಾಡ್ಗೀಳ್ ನೇತೃತ್ವದ ಸಮಿತಿಯು ಪಶ್ಚಿಮ ಘಟ್ಟಗಳಾದ್ಯಂತ ಪರಿಸರ ಸೂಕ್ಷ್ಮ ಪ್ರದೇಶಗಳು ಮತ್ತು ವಲಯಗಳನ್ನು ವರ್ಗೀಕರಿಸಲು ಪ್ರಸ್ತಾಪಿಸಿದೆ. ಅಂದಹಾಗೆ ESZ – I ಮತ್ತು ESZ – II ಪ್ರದೇಶಗಳಲ್ಲಿ ನಿರ್ಮಾಣ ಚಟುವಟಿಕೆಗಳ ಮೇಲೆ ಸ್ಪಷ್ಟವಾದ ನಿರ್ಬಂಧಗಳು ಮತ್ತು ನಿಬಂಧನೆಗಳು ಇದ್ದವು.

“ನಾವು ESZ-I ನಲ್ಲಿ ಕಲ್ಲುಗಣಿಗಾರಿಕೆ ಮತ್ತು ಕೆಂಪು ವರ್ಗದ ಕೈಗಾರಿಕೆಗಳಿಗೆ (60 ಮತ್ತು ಅದಕ್ಕಿಂತ ಹೆಚ್ಚಿನ ಮಾಲಿನ್ಯ ಸೂಚ್ಯಂಕ ಸ್ಕೋರ್ ಹೊಂದಿರುವ ಕೈಗಾರಿಕಾ ವಲಯಗಳು) ಅವಕಾಶ ನೀಡಬಾರದು ಎಂದು ಪ್ರಸ್ತಾಪಿಸಿದ್ದೇವೆ. ಹಾಗೆಯೇ ಕಲ್ಲುಗಣಿಗಾರಿಕೆಗೆ ಅನುಮತಿ ಇರುವ ಪ್ರದೇಶಗಳಲ್ಲಿ, ಕ್ವಾರಿಗಳು ಜನವಸತಿಯಿಂದ ಕನಿಷ್ಠ 100 ಮೀಟರ್ ದೂರದಲ್ಲಿರಬೇಕು ಎಂದು ನಾವು ಸೂಚಿಸಿದ್ದೇವೆ.ಆದರೆ, ನಂತರ ಸರ್ಕಾರವು ದೂರವನ್ನು ಕೇವಲ 50 ಮೀಟರ್‌ಗೆ ಇಳಿಸಿತು  ಎಂದು WGEEP ಸದಸ್ಯ ಪರಿಸರವಾದಿ ವಿಎಸ್ ವಿಜಯನ್ ಹೇಳಿದ್ದಾರೆ.

ಕೇಂದ್ರ ಸರ್ಕಾರವು ನಂತರ ಗಾಡ್ಗೀಳ್ ವರದಿಯನ್ನು ತಿರಸ್ಕರಿಸಿ, ಮತ್ತೊಂದು ವರದಿಯನ್ನು ತರಲು ಕಸ್ತೂರಿರಂಗನ್ ನೇತೃತ್ವದ ಮತ್ತೊಂದು ಸಮಿತಿಯನ್ನು ನೇಮಿಸಿತು. ಗಾಡ್ಗೀಳ್ ಸಮಿತಿಯು ಸಂಪೂರ್ಣ ಪಶ್ಚಿಮ ಘಟ್ಟಗಳನ್ನು ಇಎಸ್‌ಎ ಎಂದು ಸೂಚಿಸಲು ಶಿಫಾರಸು ಮಾಡಿತ್ತು. ಆದಾಗ್ಯೂ, ಕಸ್ತೂರಿರಂಗನ್ ಸಮಿತಿಯು ಇಎಸ್ಎಗಳ ವ್ಯಾಪ್ತಿಯನ್ನು ಪಶ್ಚಿಮ ಘಟ್ಟಗಳ 37 ಪ್ರತಿಶತಕ್ಕೆ ಇಳಿಸಿತು.

ಆಗ ಉಮ್ಮನ್ ಚಾಂಡಿ ನೇತೃತ್ವದ ರಾಜ್ಯ ಸರ್ಕಾರವು ಡಬ್ಲ್ಯುಜಿಇಇಪಿ ವರದಿಯನ್ನು ವಿರೋಧಿಸಿತ್ತು ಮತ್ತು ಸ್ವತಂತ್ರ ವರದಿಯನ್ನು ತರಲು ಉಮ್ಮನ್ ವಿ ಉಮ್ಮನ್ ನೇತೃತ್ವದ ಮತ್ತೊಂದು ಸಮಿತಿಗೆ ಒಪ್ಪಿಸಿತ್ತು. ಆ ಸಮಯದಲ್ಲಿ, ಗಾಡ್ಗೀಳ್ ವರದಿಯ ಅನುಷ್ಠಾನಕ್ಕೆ ಒಲವು ತೋರಿದ ಕೆಲವೇ ಕೆಲವು ರಾಜಕಾರಣಿಗಳಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಪಿಟಿ ಥಾಮಸ್ ಒಬ್ಬರು.

“ವಾಸ್ತವವಾಗಿ, ಗಾಡ್ಗೀಳ್ ವರದಿಯು ಪಶ್ಚಿಮ ಘಟ್ಟಗಳ ಪರಿಸರ ಪ್ರಾಮುಖ್ಯತೆಯನ್ನು ಗುರುತಿಸಿದೆ. ಆದರೆ, ಕ್ಷುಲ್ಲಕ ರಾಜಕೀಯ ಕಾರಣಗಳಿಗಾಗಿ ಸರ್ಕಾರಗಳು ಅದನ್ನು ವಿರೋಧಿಸಿದವು. ಪರಿಸರ ದುರ್ಬಲ ಪ್ರದೇಶವನ್ನು ಕೇವಲ ಸರ್ಕಾರಿ ಆದೇಶದಿಂದ ದುರ್ಬಲವಲ್ಲ ಎಂದು ಹೇಗೆ ಕರೆಯಬಹುದು? ಪ್ರಸ್ತುತ ಎಡ ಸರ್ಕಾರವು ಆ ನಡೆಗಳೊಂದಿಗೆ ಮುಂದುವರಿಯುತ್ತಿದೆ. ಇದರ ಭಾಗವಾಗಿ ಅಕ್ರಮ ಕಲ್ಲುಗಣಿಗಾರಿಕೆಯನ್ನು ಸಕ್ರಮಗೊಳಿಸುವ ಪ್ರಯತ್ನವೂ ನಡೆದಿದೆ. ಇಡುಕ್ಕಿಯಲ್ಲಿ 1,500 ಚದರ ಅಡಿವರೆಗಿನ ಅನಧಿಕೃತ ನಿರ್ಮಾಣಗಳನ್ನು ಸರ್ಕಾರ ಕ್ರಮಬದ್ಧಗೊಳಿಸಿದ ಕೇವಲ ಒಂದು ದಿನದ ನಂತರ ಭಾರೀ ಮಳೆ ಪ್ರಾರಂಭವಾಯಿತು ಎಂದು ಥಾಮಸ್ ಹೇಳಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

WGEEP ವರದಿಯ ಪ್ರಕಾರ ಪರಿಸರ ಸೂಕ್ಷ್ಮ ಸ್ಥಳಗಳು

ಮಂಡಕೋಲ್, ಪಣತ್ತಡಿ, ಪೈತಲ್ಮಲ, ಬ್ರಹ್ಮಗಿರಿ – ತಿರುನೆಲ್ಲಿ, ವಯನಾಡ್, ಬಾಣಾಸುರ ಸಾಗರ್ – ಕುಟ್ಟಿಯಾಡಿ, ನಿಲಂಬೂರ್ – ಮೇಪಾಡಿ, ಸೈಲೆಂಟ್ ವ್ಯಾಲಿ – ಹೊಸ ಅಮರಂಬಲಂ, ಸಿರುವಣಿ, ನೆಲ್ಲಿಯಂಪತಿ, ಪೀಚಿ – ವಝನಿ, €ಆತಿರಪಲ್ಲಿ – ವಜಚಲ್, ಪೂಯಂಕುಟ್ಟಿ – ಮುನ್ನಾರ್, ಏಲಕ್ಕಿ ಬೆಟ್ಟಗಳು, ಪೆರಿಯಾರ್, ಕುಳತ್ತುಪ್ಪುಳ, ಅಗಸ್ತ್ಯ ಮಾಲಾ, ಸಂರಕ್ಷಿತ ಪ್ರದೇಶಗಳ ಸುತ್ತಮುತ್ತಲಿನ ESAಗಳು.

ಇದನ್ನೂ ಓದಿ: Wayanad landslides: ವಯನಾಡಿನಲ್ಲಿ ಗುಡ್ಡ ಕುಸಿತ; ಕೊಚ್ಚಿ ಹೋಯ್ತು ಮುಂಡಕೈ, ಚೂರಲ್​​​ಮಲ ಪ್ರದೇಶ

ESZ-I, II ಪ್ರದೇಶಗಳು

ಗಾಡ್ಗೀಳ್ ನೇತೃತ್ವದ ಸಮಿತಿಯ ವರದಿಯ ಪ್ರಕಾರ, ವೈತಿರಿ, ಮಾನಂತವಾಡಿ ಮತ್ತು ಸುಲ್ತಾನ್ ಬತ್ತೇರಿಗಳು ESZ – I ಅಡಿಯಲ್ಲಿ ಬರುತ್ತವೆ. ಅದೇ ರೀತಿ ಮಲಪ್ಪುರಂನ ಪೆರಿಂತಲ್ಮಣ್ಣ ಮತ್ತು ತಿರೂರ್ ತಾಲೂಕುಗಳು ESZ – II ಅಡಿಯಲ್ಲಿ ಬರುವ ತಾಲೂಕುಗಳಲ್ಲಿ ಸೇರಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ