WITT Summit 2026: ನಾಳೆಯಿಂದ ವಿಟ್ ಶೃಂಗಸಭೆ ಆರಂಭ; ಪ್ರಧಾನಿ ಮೋದಿ ಸೇರಿ ಮಹಾನ್ ದಿಗ್ಗಜರು ಭಾಗಿ
“ವಾಟ್ ಇಂಡಿಯಾ ಥಿಂಕ್ಸ್ ಟುಡೇ ಶೃಂಗಸಭೆ 2026” ಟಿವಿ9 ನೆಟ್ವರ್ಕ್ನ ಪ್ರತಿಷ್ಠಿತ ಕಾರ್ಯಕ್ರಮದ ನಾಲ್ಕನೇ ಆವೃತ್ತಿ ಮಾರ್ಚ್ 23 ಮತ್ತು 24ರಂದು ನವದೆಹಲಿಯಲ್ಲಿ ನಡೆಯಲಿದೆ. ಈ ಶೃಂಗಸಭೆ ಭಾರತ ಮತ್ತು ಜಗತ್ತು ಎಂಬ ಥೀಮ್ ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ದಿಗ್ಗಜರು ಭಾಗವಹಿಸಲಿದ್ದಾರೆ. ಯಾರೆಲ್ಲಾ ಭಾಗವಹಿಸಲಿದ್ದಾರೆ ಎಂಬ ಮಾಹಿತಿ ಇಲ್ಲಿದೆ.

ನವದೆಹಲಿ, ಮಾರ್ಚ್ 22: ಟಿವಿ9 ನೆಟ್ವರ್ಕ್ನ ಪ್ರತಿಷ್ಠಿತ ಕಾರ್ಯಕ್ರಮ “ವಾಟ್ ಇಂಡಿಯಾ ಥಿಂಕ್ಸ್ ಟುಡೇ ಶೃಂಗಸಭೆ 2026” (WITT Summit) ನಾಲ್ಕನೇ ಆವೃತ್ತಿ ಮಾರ್ಚ್ 23 ಮತ್ತು 24ರಂದು ನವದೆಹಲಿಯಲ್ಲಿ ನಡೆಯಲಿದೆ. ಈ ಶೃಂಗಸಭೆಯಲ್ಲಿ ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸುತ್ತಿದ್ದು, ಆ ಮೂಲಕ ಸತತ ಮೂರನೇ ಬಾರಿ ಮುಖ್ಯ ಅತಿಥಿಯಾಗಿ ಎಲ್ಲರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಶೃಂಗಸಭೆಯಲ್ಲಿ ಬೇರೆ ಬೇರೆ ಕ್ಷೇತ್ರಗಳ ದಿಗ್ಗಜರು ಪಾಲ್ಗೊಳ್ಳಲಿದ್ದಾರೆ. ದೇಶದ ಜ್ವಲಂತ ವಿಷಯಗಳ ಬಗ್ಗೆ ಗಂಭೀರ ಚರ್ಚೆಗಳು ನಡೆಯಲಿವೆ.
ವಾಟ್ ಇಂಡಿಯಾ ಥಿಂಕ್ಸ್ ಟುಡೇ ಶೃಂಗಸಭೆಯೂ ಭಾರತ ಮತ್ತು ಜಗತ್ತು ಎಂಬ ಥೀಮ್ ಹೊಂದಿದೆ. ಈ ಸಮಿಟ್, ಉದ್ಯಮಿಗಳು, ಚಿಂತಕರು ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳ ದಿಗ್ಗಜರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಮೂಲಕ ಇಂದಿನ ಭಾರತದ ಅಭಿವೃದ್ಧಿಯ ಬಗ್ಗೆ ಚರ್ಚೆಗಳು ನಡೆಯಲಿವೆ.
ಯಾರೆಲ್ಲಾ ಭಾಗಿ?
ಶೃಂಗಸಭೆಯಲ್ಲಿ ‘ಮೌಲ್ಯಗಳು vs ಮೌಲ್ಯಮಾಪನ: ವ್ಯವಹಾರ ನಿರ್ವಹಣೆ’ ಎಂಬ ಸೆಷನ್ ಆಯೋಜಿಸಲಾಗಿದೆ. ಈ ಸಂವಾದದಲ್ಲಿ TiE ದೆಹಲಿ NCR ನ ಕಾರ್ಯನಿರ್ವಾಹಕ ನಿರ್ದೇಶಕಿ ಉಪಾಸನಾ ಶರ್ಮಾ, ಸಹ-ಸಂಸ್ಥಾಪಕಿ ಅರ್ಪಣಾ ಶಾಹಿ, ಗ್ಯಾಬಿಟ್, ಸ್ಕೈ ಏರ್ ಮೊಬಿಲಿಟಿಯ ಸ್ಥಾಪಕ ಮತ್ತು ಸಿಇಒ ಅಂಕಿತ್ ಕುಮಾರ್ ಮತ್ತು ಫಂಡಮೆಂಟಮ್ ಇನ್ವೆಸ್ಟ್ಮೆಂಟ್ ಅಡ್ವೈಸರ್ಸ್ನ ಸಹ-ಸಂಸ್ಥಾಪಕ ಆಶಿಶ್ ಕುಮಾರ್ ಭಾಗವಹಿಸಲಿದ್ದಾರೆ.
ಇದನ್ನೂ ಓದಿ: WITT Summit 2026: ರಾಜಕೀಯದಿಂದ ಕ್ರೀಡೆಯವರೆಗೆ; ವಿಟ್ ಶೃಂಗಸಭೆಯ 2ನೇ ದಿನದ ಆಕರ್ಷಣೆಗಳಿವು
TERIನ ಮಹಾನಿರ್ದೇಶಕಿ ಡಾ. ವಿಭಾ ಧವನ್, AM ಗ್ರೀನ್‌ನ ಮುಖ್ಯ ತಂತ್ರಜ್ಞಾನ ಅಧಿಕಾರಿ ಮತ್ತು ಕಾರ್ಯನಿರ್ವಾಹಕ ಉಪಾಧ್ಯಕ್ಷ ಡಾ. ಎಸ್.ಎಸ್.ವಿ. ರಾಮಕುಮಾರ್, DCM ಶ್ರೀರಾಮ್ ಲಿಮಿಟೆಡ್‌ನ ನಿರ್ದೇಶಕ ಕೆ.ಕೆ. ಶರ್ಮಾ ಮತ್ತು ಟೆಕ್ ಮಹೀಂದ್ರಾದ ಮುಖ್ಯ ಅಧಿಕಾರಿ ಸಂದೀಪ್ ಚಂದನಾ ಅವರು ‘Energy Conundrum – India’s Way Out’ ಎಂಬ ವಿಷಯದ ಮೇಲೆ ಚರ್ಚೆ ನಡೆಸಲಿದ್ದಾರೆ.
ಶೃಂಗಸಭೆಯಲ್ಲಿ ‘ದಿ ಗ್ರೀನ್ ಪಿವೋಟ್’ ಎಂಬ ವಿಷಯದ ಮೇಲೆ ಸೆಷನ್ ನಡೆಯಲಿದೆ. ಬಯೋ ಸೊಲ್ಯೂಷನ್ಸ್‌ನ ಅಧ್ಯಕ್ಷ ಪ್ರವೀಣ್ ಪರಪತಿ, ಡಾ. ವಿಭಾ ಧವನ್ ಮತ್ತು ಐಪಿಇ ಗ್ಲೋಬಲ್‌ನ ಜಾಗತಿಕ ವಲಯ ಮುಖ್ಯಸ್ಥ (ಸಿಸಿಎಸ್) ಅಬಿನಾಶ್ ಮೊಹಂತಿ ಅವರು ತಮ್ಮ ವಿಚಾರಧಾರೆಗಳನ್ನು ಹಂಚಿಕೊಳ್ಳಲಿದ್ದಾರೆ.
‘ದಿ ಸಸ್ಟೈನಬಿಲಿಟಿ ಇಂಪರೇಟಿವ್’ ಎಂಬ ವಿಷಯದ ಕುರಿತು ಜಾಕ್ಸನ್ ಗ್ರೀನ್‌ನ ಉಪಾಧ್ಯಕ್ಷ ಮತ್ತು ಜಾಗತಿಕ ಸಿಇಒ ಬಿಕೇಶ್ ಓಗ್ರಾ, ಇಪಿಟಿಎ ಮಹಾನಿರ್ದೇಶಕ ಮತ್ತು ಮಾಜಿ ಐಎಎಸ್ ಅಧಿಕಾರಿ ಜಿ.ಪಿ. ಉಪಾಧ್ಯಾಯ; ಐಐಟಿ ಕಾನ್ಪುರದ ಪ್ರಾಧ್ಯಾಪಕ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯ ಕಾರ್ಯದರ್ಶಿ ದುರ್ಗಾ ಶಂಕರ್ ಮಿಶ್ರಾ, ಜೆಎಸ್‌ಎ ಅಡ್ವೊಕೇಟ್ ಹಾಗೂ ಸಾಲಿಸಿಟರ್ಸ್‌ನ ಪಾಲುದಾರ ಅಮಿತ್ ಕಪೂರ್ ಮತ್ತು ಐಇಇಎಂಎ ಅಧ್ಯಕ್ಷ ವಿಕ್ರಮ್ ಗಂಡೋತ್ರಾ ಮಾತನಾಡಲಿದ್ದಾರೆ.
ಇನ್ನು ಶೃಂಗಸಭೆಯಲ್ಲಿ ಕ್ರಿಕೆಟ್ ದಂತಕಥೆ ಸೌರವ್ ಗಂಗೂಲಿ, ಯುವ ಭಾರತೀಯ ಕ್ರಿಕೆಟಿಗರಾದ ಅಕ್ಷರ್ ಪಟೇಲ್ ಮತ್ತು ಅರ್ಶ್ದೀಪ್ ಸಿಂಗ್ ಕೂಡ ಭಾಗವಹಿಸಲಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:24 pm, Sun, 22 March 26
