Article 370: ಭಾರತದ ಸಂವಿಧಾನದಲ್ಲಿ 370ನೇ ವಿಧಿಯ ಪಾತ್ರವೇನು?, ಈ ಪರಿಚ್ಛೇದ ಏನು ಹೇಳುತ್ತೆ?
ಭಾರತದ ಸಂವಿಧಾನ(Indian Constitution)ವು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಹೀಗೆ ಪ್ರತಿ ಅಂಗದ ಅಧಿಕಾರದ ವ್ಯಾಖ್ಯೆಯನ್ನು ನೀಡುವುದಲ್ಲದೆ Article 370: ಅವುಗಳ ಜವಾಬ್ದಾರಿಯನ್ನು ಕೂಡ ಖಚಿತಪಡಿಸುತ್ತದೆ. ಜಮ್ಮು ಮತ್ತು ಕಾಶ್ಮೀರ( Jammu and Kashmir)ಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ(Article 370) ಇದೀಗ ಮತ್ತೊಮ್ಮೆ ಚರ್ಚೆಗೆ ಬಂದಿದೆ. 2019 ರಲ್ಲಿ ಕೇಂದ್ರ ಸರ್ಕಾರವು 370 ನೇ ವಿಧಿಯನ್ನು ರದ್ದುಮಾಡುವ ಮೂಲಕ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕಿತ್ತು. ಸರ್ಕಾರದ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದವು.
ಭಾರತದ ಸಂವಿಧಾನ(Indian Constitution)ವು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಹೀಗೆ ಪ್ರತಿ ಅಂಗದ ಅಧಿಕಾರದ ವ್ಯಾಖ್ಯೆಯನ್ನು ನೀಡುವುದಲ್ಲದೆ ಅವುಗಳ ಜವಾಬ್ದಾರಿಯನ್ನು ಕೂಡ ಖಚಿತಪಡಿಸುತ್ತದೆ. ಜಮ್ಮು ಮತ್ತು ಕಾಶ್ಮೀರ( Jammu and Kashmir)ಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ(Article 370) ಇದೀಗ ಮತ್ತೊಮ್ಮೆ ಚರ್ಚೆಗೆ ಬಂದಿದೆ. 2019 ರಲ್ಲಿ ಕೇಂದ್ರ ಸರ್ಕಾರವು 370 ನೇ ವಿಧಿಯನ್ನು ರದ್ದುಮಾಡುವ ಮೂಲಕ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕಿತ್ತು. ಸರ್ಕಾರದ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದವು.
ಹಲವು ಸುತ್ತಿನ ವಾದ-ವಿವಾದಗಳ ನಂತರ ಇಂದು ಸೋಮವಾರ ಸುಪ್ರೀಂ ಕೋರ್ಟ್ ಈ ವಿಷಯಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ನೀಡಿದ್ದು, ಕೇಂದ್ರದ ನಿರ್ಧಾರವನ್ನೇ ಸುಪ್ರೀಂ ಎತ್ತಿ ಹಿಡಿದಿದೆ. ಹಾಗಾದರೆ ಸಂವಿಧಾನದ 370ನೇ ಪರಿಚ್ಛೇದ ಎಂದರೇನು? ಎಂಬುದರ ಕುರಿತು ನೋಡೋಣ ಜಮ್ಮು ಕಾಶ್ಮೀರವು ತನ್ನದೇ ಪ್ರತ್ಯೇಕ ಸಂವಿಧಾನ ರಚಿಸಿಕೊಳ್ಳುವ, ತನ್ನದೇ ಪ್ರತ್ಯೇಕ ಕಾಯ್ದೆ-ಕಾನೂನನ್ನು ರೂಪಿಸಿಕೊಳ್ಳುವ ಅಧಿಕಾರವನ್ನು ಈ ವಿಧಿ ಆ ರಾಜ್ಯಕ್ಕೆ ನೀಡಿತ್ತು. ಆ ಪ್ರಕಾರ ಜಮ್ಮು-ಕಾಶ್ಮೀರ ತನ್ನದೇ ಪ್ರತ್ಯೇಕ ಸಂವಿಧಾನವನ್ನು ರಚಿಸಿಕೊಂಡಿತ್ತು. ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನ ರಚಿಸಿಕೊಳ್ಳುವ ಅಧಿಕಾರ ನೀಡುವ ಬಗ್ಗೆ ಸಂವಿಧಾನ ರಚನಾ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಗಿತ್ತು.
ಸಂವಿಧಾನದ 370ನೇ ಪರಿಚ್ಛೇದ
ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ಬಳಿಕ ದೇಶದ ಎಲ್ಲಾ 500 ಸಂಸ್ಥಾನಗಳು ಭಾರತ ಒಕ್ಕೂಟವನ್ನು ಸೇರಿರಲಿಲ್ಲ, ಹಾಗೆಯೇ ಹೊರಗಿರುವ ಸಂಸ್ಥಾನಗಳಲ್ಲಿ ಜಮ್ಮು ಕಾಶ್ಮೀರ ಕೂಡ ಒಂದಾಗಿತ್ತು. ಆದರೆ ಪಾಕಿಸ್ತಾನದ ಆಕ್ರಮಣದ ಬಳಿಕ 1948ರ ಮಾರ್ಚ್ನಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಭಾರತದೊಂದಿಗೆ ವಿಲೀನ ಮಾಡಲು ರಾಜ ಹರಿಸಿಂಗ್ ಒಪ್ಪಿಕೊಂಡು ಸಹಿ ಹಾಕಿದ್ದರು. ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನ ನೀಡುವ, ವಿಶೇಷ ಅಧಿಕಾರ ನೀಡುವ ಹಲವು ವಿಷಯಗಳಲ್ಲಿ ಪ್ರತ್ಯೇಕ ಕಾನೂನು ರಚಿಸಿಕೊಳ್ಳುವ ಅಧಿಕಾರವನ್ನು ನೀಡಬೇಕು ಎನ್ನುವ ಷರತ್ತುಗಳೊಂದಿಗೆ ಅದನ್ನು 370ನೇ ವಿಧಿಗೆ ಸೇರಿಸಲಾಗಿತ್ತು.
ಸಂವಿಧಾನದ 21ನೇ ಪರಿಚ್ಛೇದದಲ್ಲಿ 370ನೇ ವಿಧಿಯ ಬಗ್ಗೆ ಉಲ್ಲೇಖಿಸಲಾಗಿದೆ, ಹಾಗೆಯೇ ಇದರಲ್ಲಿ ಜಮ್ಮು ಮತ್ತು ಕಾಶ್ಮೀರ ಶಾಸನಸಭೆ ನಿರ್ಣಯದ ಮೂಲಕ ಅಂಗೀಕರಿಸುವವರೆಗೆ ಅಲ್ಲಿನ ಆಡಳಿತಕ್ಕೆ ಅಗತ್ಯವಾದ ಅವಕಾಶವನ್ನು ಒದಗಿಸುವುದು ಇದರ ಉದ್ದೇಶವಾಗಿದೆ.
ರಾಜ್ಯದಲ್ಲಿ ಆಡಳಿತ ನಡೆಸುವ ಸರ್ಕಾರದ ಒಪ್ಪಿಗೆ ಕೂಡ ಮುಖ್ಯ 370ನೇ ವಿಧಿ ಇರುವ ಕಶ್ಮೀರದಲ್ಲಿ ಪೌರತ್ವ, ನಿರ್ದಿಷ್ಟ ಆಸ್ತಿಯ ಮಾಲೀಕತ್ವ, ಮೂಲಭೂತ ಹಕ್ಕುಗಳ ಅನುಷ್ಠಾನ ಮುಂತಾದ ವಿಚಾರಗಳಲ್ಲಿ ವಿಶೇಷ ಕಾನೂನುಗಳಿರುತ್ತವೆ.
ರಕ್ಷಣೆ, ಹಣಕಾಸು, ವಿದೇಶಾಂಗ ವ್ಯವಹಾರ ಹಾಗೂ ಸಂಪರ್ಕ ಕ್ಷೇತ್ರಗಳಲ್ಲಿ ಭಾರತದ ಸಂವಿಧಾನ ವಿಧಿ ವಿಧಾನಗಳಂತೆ ನಡೆದುಕೊಳ್ಳಬೇಕಾಗುತ್ತದೆ. ಭಾರತದ ಗಣರಾಜ್ಯದ ಅಂಗವಾದರೂ ಪ್ರತ್ಯೇಕ ಸಂವಿಧಾನವನ್ನು ಹೊಂದಬಹುದು.
370ನೇ ಪರಿಚ್ಛೇದ ತಾತ್ಕಾಲಿಕ 370ನೇ ಪರಿಚ್ಛೇದ ತಾತ್ಕಾಲಿಕವಾಗಿರುತ್ತದೆ, ಆದರೆ ದೇಶದ ರಕ್ಷಣೆ, ಮಾಹಿತಿ ಮತ್ತು ಪ್ರಸಾರ ಹಕ್ಕುಗಳ ಇಲಾಖೆಗಳ ನಿಯಮಗಳು, ವಿದೇಶಾಂಗ ವ್ಯವಹಾರ, ಮಾತ್ರ ಇತರೆ ರಾಜ್ಯಗಳಿಗೆ ಅನ್ವಯವಾಗುವಂತೆ 370 ಪರಿಚ್ಛೇದ ಅನ್ವಯವಾಗುವ ರಾಜ್ಯಕ್ಕೂ ನೇರವಾಗಿ ಅನ್ವಯವಾಗುತ್ತದೆ. 370ನೇ ಪರಿಚ್ಛೇದವು ತಾತ್ಕಾಲಿಕವಾಗಿದ್ದು, ಇದು ಪರಿವರ್ತನೆಯ ಅಧಿಕಾರವೆ ಹೊರತೂ ಶಾಶ್ವತ ಅಧಿಕಾರವಲ್ಲ. ಇದು ಕಾಶ್ಮೀರಕ್ಕೆ ಮಾತ್ರವಲ್ಲ, ಉಳಿದ ಎಲ್ಲಾ ರಾಜ್ಯಗಳಿಗೂ ಅನ್ವಯವಾಗುತ್ತದೆ.
ನೆಹರೂ ಪ್ರಮಾದ ನೆಹರೂ ಮಾಡಿದ ಸಣ್ಣ ಪ್ರಮಾದ ಮೊದಲ ಪ್ರಧಾನಿ ಜವಾಹರ್ಲಾಲ್ ನೆಹರೂ ಮಾಡಿದ ಸಣ್ಣ ತಾಂತ್ರಿಕ ತಪ್ಪಿನಿಂದ ಜಮ್ಮು ಮತ್ತು ಕಾಶ್ಮೀರವು ಭಾರತ ಇತರೆ ರಾಜ್ಯಗಳಂತೆ ಸೇರ್ಪಡೆಯಾಗುವ ಕೈತಪ್ಪಿತ್ತು. ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಬದಲಿಗೆ ಸದರ ಇ ರಿಯಾಸತ್ ಎಂದು ಕರೆಯಲಾಗುತ್ತಿತ್ತು.
ಪ್ರತ್ಯೇಕ ನಾಗರಿಕತೆ ಹೊಂದಿರುತ್ತಾರೆ ಈ ವಿಧಿಯಡಿ ಜಮ್ಮು ಮತ್ತು ಕಾಶ್ಮೀರ ತನ್ನದೇ ಪ್ರತ್ಯೇಕ ಕಾನೂನುಗಳನ್ನು ಹೊಂದಿದೆ. ಈ ರಾಜ್ಯದಲ್ಲಿ ಆಸ್ತಿ ಹೊಂದಿರುವವರು ಪ್ರತ್ಯೇಕ ಕಾನೂನು ಪಾಲಿಸಬೇಕು ಹಾಗೂ ಪ್ರತ್ಯೇಕ ನಾಗರಿಕತೆ ಹೊಂದಿರುತ್ತಾರೆ. ಅವರ ಮೂಲಭೂತ ಹಕ್ಕುಗಳೂ ಬೇರೆಯಾಗಿವೆ. ಈ ರಾಜ್ಯದ ಮೇಲೆ ಕೇಂದ್ರ ಸರ್ಕಾರಕ್ಕೆ ಕೇವಲ ರಕ್ಷಣೆ, ಸಂಪರ್ಕ ಹಾಗೂ ವಿದೇಶಾಂಗ ಸಂಬಂಧಗಳ ವಿಷಯದಲ್ಲಿ ಮಾತ್ರ ಅಧಿಕಾರವಿರುತ್ತದೆ.
ಬೇರೆ ರಾಜ್ಯಗಳಿಗೂ ಇದೆ ವಿಶೇಷ ಸ್ಥಾನ ಸಂವಿಧಾನದ 371ನೇ ವಿಧಿ ಮತ್ತು ಉಪವಿಧಿಗಳಲ್ಲಿ ಕೆಲವು ರಾಜ್ಯಗಳ ಕೆಲವು ಪ್ರದೇಶಗಳಿಗೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಮಹಾರಾಷ್ಟ್ರದ ವಿದರ್ಭಾ ಮತ್ತು ಮರಾಠವಾಡ, ಗುಜರಾತ್ನ ಕಚ್ ಮತ್ತು ಸೌರಾಷ್ಟ್ರ, ನಾಗಾಲ್ಯಾಂಡ್, ಅಸ್ಸಾಂ, ಮಣಿಪುರ, ಆಂಧ್ರಪ್ರದೇಶದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪನೆ, ಸಿಕ್ಕಿಂ, ಮಿಜೋರಾಂ, ಅರುಣಾಚಲಪ್ರದೇಶ, ಗೋವಾ ಇವುಗಳಿಗೆ ವಿಶೇಷ ಅವಕಾಶ ಹಾಗೂ ಸ್ಥಾನಮಾನಗಳನ್ನು ನೀಡಲಾಗಿದೆ. 1949 ಅಕ್ಟೋಬರ್ 17 ರಂದು ಸಂವಿಧಾನಕರಡು ರಚನಾ ಸಭೆಯಲ್ಲಿ ಈ ವಿಧಿಯ ಕುರಿತು ಚರ್ಚೆ ನಡೆದಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ