Agni-1 Ballistic Missile: ಅಗ್ನಿ-1 ಬ್ಯಾಲಿಸ್ಟಿಕ್ ಕ್ಷಿಪಣಿಯ ಅಪ್ರತಿಮ ಶಕ್ತಿ; ಅಭ್ಯಾಸ ಉಡಾವಣೆ ಯಶಸ್ವಿ; ಕೆಲವೇ ದೇಶಗಳ ಸಾಲಿಗೆ ಭಾರತ

India Carries Out Training Lauch of Agni-1 Ballistic Missile: ಅಗ್ನಿ-1 ಬ್ಯಾಲಿಸ್ಟಿಕ್ ಕ್ಷಿಪಣಿಯ ಅಭ್ಯಾಸ ಉಡಾವಣೆಯನ್ನು ಜೂನ್ 1ರಂದು ನಡೆಸಲಾಗಿದೆ. ಮಹತ್ತರ ಕಾರ್ಯತಂತ್ರದ ಆಯುಧದ ಎಲ್ಲ ಕಾರ್ಯಾತ್ಮಕ ಹಾಗೂ ತಾಂತ್ರಿಕ ಅಂಶಗಳ ಸಾಮರ್ಥ್ಯಗಳನ್ನು ಸಾಬೀತುಪಡಿಸಿದೆ. ಈ ಬಗ್ಗೆ ಗಿರೀಶ್ ಲಿಂಗಣ್ಣ ಬರೆದ ಒಂದು ವರದಿ.

Agni-1 Ballistic Missile: ಅಗ್ನಿ-1 ಬ್ಯಾಲಿಸ್ಟಿಕ್ ಕ್ಷಿಪಣಿಯ ಅಪ್ರತಿಮ ಶಕ್ತಿ; ಅಭ್ಯಾಸ ಉಡಾವಣೆ ಯಶಸ್ವಿ; ಕೆಲವೇ ದೇಶಗಳ ಸಾಲಿಗೆ ಭಾರತ
ಅಗ್ನಿ-1 ಕ್ಷಿಪಣಿ
Follow us
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Jun 02, 2023 | 1:03 PM

ಜೂನ್ 1, ಗುರುವಾರದಂದು ಭಾರತದ ರಕ್ಷಣಾ ಸಚಿವಾಲಯ ತಾನು ಅಗ್ನಿ-1 ಬ್ಯಾಲಿಸ್ಟಿಕ್ ಕ್ಷಿಪಣಿಯ ಅಭ್ಯಾಸ ಉಡಾವಣೆಯನ್ನು (Agni-1 Ballistic Missile Training Launch) ಯಶಸ್ವಿಯಾಗಿ ನಡೆಸಿರುವುದಾಗಿ ಘೋಷಿಸಿದೆ. ಸಚಿವಾಲಯ, ಈ ಉಡಾವಣೆಯನ್ನು ಒರಿಸ್ಸಾ ರಾಜ್ಯದಲ್ಲಿರುವ, ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಹೆಸರಿಸಲಾಗಿರುವ ದ್ವೀಪದಿಂದ ನಡೆಸಿರುವುದಾಗಿ ಮಾಹಿತಿ ನೀಡಿದೆ. ಈ ಯಶಸ್ವಿ ಅಭ್ಯಾಸ ಪ್ರಯೋಗ ಈ ಮಹತ್ತರ ಕಾರ್ಯತಂತ್ರದ ಆಯುಧದ ಎಲ್ಲ ಕಾರ್ಯಾತ್ಮಕ ಹಾಗೂ ತಾಂತ್ರಿಕ ಅಂಶಗಳ ಸಾಮರ್ಥ್ಯಗಳನ್ನು ಸಾಬೀತುಪಡಿಸಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ ಮಧ್ಯಮ ವ್ಯಾಪ್ತಿ ಹೊಂದಿರುವ ಅಗ್ನಿ-1 ಬ್ಯಾಲಿಸ್ಟಿಕ್ ಕ್ಷಿಪಣಿಯ ಅಭ್ಯಾಸ ಉಡಾವಣೆಯನ್ನು ಜೂನ್ 1ರಂದು ಒಡಿಶಾದ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ನೆರವೇರಿಸಿದೆ ಎಂದು ಸಚಿವಾಲಯ ವರದಿ ಮಾಡಿದೆ.

ಸಚಿವಾಲಯ ತನ್ನ ಹೇಳಿಕೆಯಲ್ಲಿ ಈ ಕ್ಷಿಪಣಿ ಅತ್ಯಂತ ನಿಖರವಾಗಿ ತನ್ನ ಗುರಿಯನ್ನು ತಲುಪಲು ಸಾಧ್ಯವಾಯಿತು ಎಂದು ತಿಳಿಸಿದೆ. ಈ ಬಳಕೆದಾರರ ತರಬೇತಿ ಉಡಾವಣೆ ಕ್ಷಿಪಣಿಯ ಎಲ್ಲ ತಾಂತ್ರಿಕ ಮತ್ತು ಕಾರ್ಯಾಚರಣಾ ಅಂಶಗಳನ್ನು ಯಶಸ್ವಿಯಾಗಿಸಿದೆ.

ಸಮುದ್ರ ಆಧಾರಿತ ಈ ಕ್ಷಿಪಣಿಯ ಪರೀಕ್ಷಾ ಪ್ರಯೋಗವು ಯಾವುದೇ ರೀತಿಯ ಶತ್ರುಗಳ ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ತಲೆದೋರುವ ಅಪಾಯಗಳನ್ನು ಕಡಿಮೆಗೊಳಿಸುವ ಉದ್ದೇಶವನ್ನು ಹೊಂದಿದೆ. ಆ ಮೂಲಕ ಈ ಸಾಮರ್ಥ್ಯ ಹೊಂದಿರುವ ಕೆಲವೇ ರಾಷ್ಟ್ರಗಳ ಸಾಲಿಗೆ ಭಾರತವೂ ಸೇರ್ಪಡೆಗೊಂಡಿದೆ.

ಇದನ್ನೂ ಓದಿ: ಇನ್ನೂ ಜಾನುವಾರು ಮೂಳೆಯ ಬಳಕೆ ಸಕ್ಕರೆಯ ಬಣ್ಣ ತೆಗೆಯುವ ವಿಧಾನವೇ?

1980ರ ದಶಕದ ಪೂರ್ವಭಾಗದಲ್ಲಿ, ಇಂಟಗ್ರೇಟೆಡ್ ಗೈಡೆಡ್ ಮಿಸೈಲ್ ಡೆವಲಪ್‌ಮೆಂಟ್ ಪ್ರೋಗ್ರಾಮ್ (ಐಜಿಎಂಡಿಪಿ) ಯೋಜನೆಯನ್ನು ಡಾ. ಕಲಾಂ ಅವರ ನೇತೃತ್ವದಲ್ಲಿ ಆರಂಭಿಸಲಾಯಿತು. ಭಾರತದ ಕ್ಷಿಪಣಿ ಮತ್ತು ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಕಲಾಂ ಅವರ ಪಾತ್ರ ಅತ್ಯಂತ ಮಹತ್ತರವಾಗಿದೆ. ಅಗ್ನಿ ಕ್ಷಿಪಣಿ ಸರಣಿಯೂ ಸಹ ಈ ಕಾರ್ಯಕ್ರಮದ ಭಾಗವಾಗಿದ್ದು, ಇಂದಿಗೂ ಭಾರತ ಇದರ ವಿವಿಧ ಆವೃತ್ತಿಯನ್ನು ಅಭಿವೃದ್ಧಿ ಪಡಿಸುತ್ತಿದೆ.

ಅಗ್ನಿ – 1 ಬ್ಯಾಲಿಸ್ಟಿಕ್ ಕ್ಷಿಪಣಿ

ಅಗ್ನಿ ಎಂಬ ಪದಕ್ಕೆ ಬೆಂಕಿ ಎಂಬ ಅರ್ಥವಿದೆ. ಭಾರತ ಅಗ್ನಿ ಸರಣಿಯ ವಿವಿಧ ಆವೃತ್ತಿಗಳ ಕ್ಷಿಪಣಿಗಳನ್ನು ಅಭಿವೃದ್ಧಿ ಪಡಿಸಿದೆ. ಡಿಸೆಂಬರ್ ತಿಂಗಳಲ್ಲಿ, ಭಾರತ ಅಗ್ನಿ-5 ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿತು. ಈ ಕ್ಷಿಪಣಿ ಬಹುತೇಕ 5,000 ಕಿಲೋಮೀಟರ್ ದೂರದಲ್ಲಿರುವ ಗುರಿಗಳ ಮೇಲೆ ದಾಳಿ ನಡೆಸಬಲ್ಲದು.

ಅಗ್ನಿ-1 ಬ್ಯಾಲಿಸ್ಟಿಕ್ ಕ್ಷಿಪಣಿಯ ವೈಶಿಷ್ಟ್ಯಗಳು ಈ ಕೆಳಗಿನಂತಿವೆ:

  • ಅಗ್ನಿ-1 ಒಂದು ಏಕ ಹಂತದ, ಘನ ಇಂಧನ ಕ್ಷಿಪಣಿಯಾಗಿದ್ದು, ಅದನ್ನು ನಿರ್ವಹಿಸುವುದು ಮತ್ತು ಉಡಾವಣೆಗೊಳಿಸುವುದು ಅತ್ಯಂತ ಸುಲಭವಾಗಿದೆ.
  • ಇದೊಂದು ಸುಲಭವಾಗಿ ಒಯ್ಯಬಲ್ಲ ಕ್ಷಿಪಣಿಯಾಗಿದ್ದು, ಇದು ಅತ್ಯಂತ ಚಲನಶೀಲ ಕ್ಷಿಪಣಿ ಎನಿಸುತ್ತದೆ. ಆದ್ದರಿಂದ ಶತ್ರುಗಳಿಗೆ ಇದನ್ನು ಗುರಿಯಾಗಿಸಿ ದಾಳಿ ನಡೆಸುವುದು ಶತ್ರುಗಳಿಗೂ ಕಷ್ಟಕರವಾಗುತ್ತದೆ.
  • ಈ ಕ್ಷಿಪಣಿ 700-900 ಕಿಲೋಮೀಟರ್ ವ್ಯಾಪ್ತಿ ಹೊಂದಿದ್ದು, ಇದು ಪಾಕಿಸ್ತಾನ ಮತ್ತು ಚೀನಾಗಳನ್ನೂ ತನ್ನ ವ್ಯಾಪ್ತಿಗೆ ಒಳಗೊಂಡಿದೆ.
  • ಈ ಕ್ಷಿಪಣಿ ಅಣ್ವಸ್ತ್ರ ಸಿಡಿತಲೆಯನ್ನು ಕೊಂಡೊಯ್ಯಬಲ್ಲದಾಗಿದ್ದು, ಇದು ಭಾರತಕ್ಕೆ ಉತ್ತಮ ಅಣ್ವಸ್ತ್ರ ವಾಹಕವನ್ನು ಒದಗಿಸಿದೆ.
  • ಅಗ್ನಿ-1ರ ಇತ್ತೀಚಿನ ಅಭಿವೃದ್ಧಿಯಲ್ಲಿ ನೂತನ ಮಾರ್ಗದರ್ಶನ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಇದು ಹೆಚ್ಚು ನಿಖರತೆ ಹೊಂದಿದೆ, ಮತ್ತು ಹೆಚ್ಚಿನ ನಾಶದ ಸಾಮರ್ಥ್ಯದ ಸಿಡಿತಲೆಗಳನ್ನು ಒಯ್ಯಬಲ್ಲದಾಗಿದೆ.

ಅಗ್ನಿ-1 ಕ್ಷಿಪಣಿ ಭಾರತದ ಪರಮಾಣು ನಿರೋಧಕ ಶಕ್ತಿಯ ಪ್ರಮುಖ ಅಂಗವಾಗಿದ್ದು, ಈ ಪ್ರದೇಶದಲ್ಲಿ ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ. ಇದೊಂದು ಅತ್ಯಂತ ಸಮರ್ಥ ಕ್ಷಿಪಣಿಯಾಗಿದ್ದು, ಇದನ್ನು ಗುರಿಯಾಗಿಸುವುದು ಶತ್ರುಗಳಿಗೂ ಕಷ್ಟಕರವಾಗಿದೆ. ಅದರೊಡನೆ, ಇದು ದೂರ ವ್ಯಾಪ್ತಿಯ ಗುರಿಗಳ ಮೇಲೂ ದಾಳಿ ನಡೆಸಬಲ್ಲದು. ಈ ಕ್ಷಿಪಣಿಯ ಇತ್ತೀಚಿನ ಅಭಿವೃದ್ಧಿ ಅದನ್ನು ಇನ್ನಷ್ಟು ಸಮರ್ಥವಾಗಿಸಿದೆ ಮತ್ತು ಭಾರತದ ಸುರಕ್ಷತೆಯನ್ನು ಹೆಚ್ಚಿಸಿದೆ.

ಇದನ್ನೂ ಓದಿ: ಇಂದಿಗೂ ಕಾರ್ಯಾಚರಿಸುತ್ತಿವೆ ಹಾರಾಡುವ ಶವಪೆಟ್ಟಿಗೆಗಳ ಆಘಾತಕಾರಿ ಸತ್ಯ: ವೈಮಾನಿಕ ಉದ್ಯಮಕ್ಕೆ ಹೊಡೆತ ನೀಡುತ್ತಿರುವ ಹಳೆಯದಾದ ಮಿಗ್-21

ಅಗ್ನಿ-1 ಕ್ಷಿಪಣಿಯ ಕುರಿತಾದ ಹೆಚ್ಚುವರಿ ಮಾಹಿತಿಗಳು ಈ ಕೆಳಗಿನಂತಿವೆ

  • ಅಗ್ನಿ-1 ಕ್ಷಿಪಣಿಯನ್ನು ಮೊದಲ ಬಾರಿಗೆ 2002ರಲ್ಲಿ ಪರೀಕ್ಷಾರ್ಥವಾಗಿ ಉಡಾವಣೆಗೊಳಿಸಲಾಯಿತು. ಆ ಬಳಿಕ ಅದನ್ನು 11 ಬಾರಿ ಪರೀಕ್ಷಾ ಪ್ರಯೋಗ ನಡೆಸಲಾಯಿತು.
  • ಈ ಕ್ಷಿಪಣಿ 15 ಮೀಟರ್ ಉದ್ದವಿದ್ದು, 12 ಟನ್ ಭಾರವಿದೆ.
  • ಅಗ್ನಿ-1 ಕ್ಷಿಪಣಿಗೆ ಘನ ಇಂಧನ ರಾಕೆಟ್ ಮೋಟರ್ ಶಕ್ತಿ ನೀಡುತ್ತದೆ.
  • ಅಗ್ನಿ-1 ಬಹುತೇಕ 1,000 ಕೆಜಿಯಷ್ಟು ಅಣ್ವಸ್ತ್ರ ಸಿಡಿತಲೆಯನ್ನು ಒಯ್ಯಬಲ್ಲದು. ಇದು 700-900 ಕಿಲೋಮೀಟರ್ ವ್ಯಾಪ್ತಿ ಹೊಂದಿದೆ.
  • ಇದು ರಸ್ತೆಯಲ್ಲಿ ಕೊಂಡೊಯ್ಯಬಲ್ಲ ಕ್ಷಿಪಣಿಯಾಗಿದ್ದು, ಇದನ್ನು ವಿವಿಧ ಪ್ರದೇಶಗಳಿಂದ ಉಡಾವಣೆಗೊಳಿಸಬಹುದು.
  • ಇದು ಭಾರತದ ಕ್ಷಿಪಣಿ ನಿರೋಧಕ ವ್ಯವಸ್ಥೆಯ ಭಾಗವಾಗಿದ್ದು, ಇದನ್ನು ಭಾರತೀಯ ಸೇನೆಯ ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ (ಎಸ್ಎಫ್‌ಸಿ) ಬಳಸುತ್ತದೆ.
Girish Linganna

Author

ಲೇಖಕರು: ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಈ ವಿಭಾಗದಲ್ಲಿ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದಿವಾಕರ್ ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆ, ಬಂಡಾಯವೆದ್ದಿಲ್ಲ: ರೆಡ್ಡಿ
ದಿವಾಕರ್ ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆ, ಬಂಡಾಯವೆದ್ದಿಲ್ಲ: ರೆಡ್ಡಿ
ಬಿಜೆಪಿ ನಾಯಕ ಸಿಪಿ ಯೋಗೇಶ್ವರ್​ ಕಾಂಗ್ರೆಸ್​ ಸೇರ್ಪಡೆ, ಲೈವ್ ನೋಡಿ​
ಬಿಜೆಪಿ ನಾಯಕ ಸಿಪಿ ಯೋಗೇಶ್ವರ್​ ಕಾಂಗ್ರೆಸ್​ ಸೇರ್ಪಡೆ, ಲೈವ್ ನೋಡಿ​
ಯೋಗೇಶ್ವರ್ ಮನವೊಲಿಸಿದ ಸುರೇಶ್ ಬೆಳಗ್ಗೆಯೇ ಅಣ್ಣನ ಮನೆಯಲ್ಲಿ ಹಾಜರ್!
ಯೋಗೇಶ್ವರ್ ಮನವೊಲಿಸಿದ ಸುರೇಶ್ ಬೆಳಗ್ಗೆಯೇ ಅಣ್ಣನ ಮನೆಯಲ್ಲಿ ಹಾಜರ್!
ಕೊಹ್ಲಿ ಆರ್ಭಟಕ್ಕೆ 2 ವರ್ಷ: ಪಂದ್ಯ ಗೆದ್ದ ಬಳಿಕ ನಡೆದಿದ್ದೇನು?
ಕೊಹ್ಲಿ ಆರ್ಭಟಕ್ಕೆ 2 ವರ್ಷ: ಪಂದ್ಯ ಗೆದ್ದ ಬಳಿಕ ನಡೆದಿದ್ದೇನು?
‘ಬಿಗ್ ಬಾಸ್’ ಮನೆಯಲ್ಲಿ ಓಪನ್ ಆಗಿ ಶುರುವಾಯ್ತು ರಾಜಕೀಯ
‘ಬಿಗ್ ಬಾಸ್’ ಮನೆಯಲ್ಲಿ ಓಪನ್ ಆಗಿ ಶುರುವಾಯ್ತು ರಾಜಕೀಯ
ಧೈರ್ಯ ಸಾಹಸೇ ಲಕ್ಷ್ಮಿ ದೇವಿ ಮಂತ್ರದ ಹಿಂದಿನ ರಹಸ್ಯ ತಿಳಿಯಿರಿ
ಧೈರ್ಯ ಸಾಹಸೇ ಲಕ್ಷ್ಮಿ ದೇವಿ ಮಂತ್ರದ ಹಿಂದಿನ ರಹಸ್ಯ ತಿಳಿಯಿರಿ
Nithya Bhavishya: ಈ ರಾಶಿಯ ವ್ಯಾಪಾರಿಗಳು ಇಂದು ಶುಭ ಸುದ್ದಿ ಕೇಳುವರು
Nithya Bhavishya: ಈ ರಾಶಿಯ ವ್ಯಾಪಾರಿಗಳು ಇಂದು ಶುಭ ಸುದ್ದಿ ಕೇಳುವರು
ಸಹಿಸಲಾಗದ ನೋವಿನಿಂದ ಆಸ್ಪತ್ರೆಗೆ ಬಂದ ದರ್ಶನ್; ಮುಗಿಬಿದ್ದ ಅಭಿಮಾನಿಗಳು
ಸಹಿಸಲಾಗದ ನೋವಿನಿಂದ ಆಸ್ಪತ್ರೆಗೆ ಬಂದ ದರ್ಶನ್; ಮುಗಿಬಿದ್ದ ಅಭಿಮಾನಿಗಳು
ಮನೆಯೊಂದರ ಬೆಡ್​ರೂಂನಲ್ಲಿ 2 ಹಾವುಗಳ ಜಗಳ; ಬೆಚ್ಚಿ ಬೀಳಿಸುವ ವಿಡಿಯೋ ವೈರಲ್
ಮನೆಯೊಂದರ ಬೆಡ್​ರೂಂನಲ್ಲಿ 2 ಹಾವುಗಳ ಜಗಳ; ಬೆಚ್ಚಿ ಬೀಳಿಸುವ ವಿಡಿಯೋ ವೈರಲ್
ರಾತ್ರೋರಾತ್ರಿ ಬಳ್ಳಾರಿ ಜೈಲಿನಿಂದ ಆಂಬ್ಯುಲೆನ್ಸ್​ ಮೂಲಕ ದರ್ಶನ್ ಶಿಫ್ಟ್
ರಾತ್ರೋರಾತ್ರಿ ಬಳ್ಳಾರಿ ಜೈಲಿನಿಂದ ಆಂಬ್ಯುಲೆನ್ಸ್​ ಮೂಲಕ ದರ್ಶನ್ ಶಿಫ್ಟ್