National Defence: ತುಮಕೂರಿನಲ್ಲಿ ಸಿದ್ಧವಾಗಲಿದೆ ಲಘು ಯುದ್ಧವಿಮಾನ: ಭಾರತದ ರಕ್ಷಣಾ ಪಡೆಗಳಿಗೆ ಹೊಸ ಬಲ

Light Utility Helicopter: ಮುಂದಿನ ದಿನಗಳಲ್ಲಿ ಭಾರತದ ರಕ್ಷಣಾ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿರುವ ಹಗುರ ಹೆಲಿಕಾಪ್ಟರ್ ಉತ್ಪಾದನೆಯ ಸ್ಥಿತಿಗತಿ ಬಗ್ಗೆ ಈ ಲೇಖನದಲ್ಲಿ ಚರ್ಚಿಸಿದ್ದಾರೆ ರಕ್ಷಣಾ ವಿದ್ಯಮಾನಗಳ ವಿಶ್ಲೇಷಕ ಗಿರೀಶ್ ಲಿಂಗಣ್ಣ.

National Defence: ತುಮಕೂರಿನಲ್ಲಿ ಸಿದ್ಧವಾಗಲಿದೆ ಲಘು ಯುದ್ಧವಿಮಾನ: ಭಾರತದ ರಕ್ಷಣಾ ಪಡೆಗಳಿಗೆ ಹೊಸ ಬಲ
ಎಚ್​ಎಎಲ್ ಅಭಿವೃದ್ಧಿಪಡಿಸಿರುವ ಲಘು ಯುದ್ಧ ವಿಮಾನ
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Oct 24, 2021 | 5:45 PM

ಲಘು ಯುದ್ಧ ವಿಮಾನಗಳನ್ನು ಅಭಿವೃದ್ಧಿಪಡಿಸಿರುವ ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್, ಈಗ ಮೂರೂ ಪಡೆಗಳಿಗಾಗಿ ಎರಡು ಮಾದರಿಯ ಹೆಲಿಕಾಪ್ಟರ್‌ಗಳನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸುತ್ತಿದೆ. ಭೂಸೇನೆ ಮತ್ತು ವಾಯುಪಡೆಗೆ ಹಗುರ ಬಹೂಪಯೋಗಿ ಹೆಲಿಕಾಪ್ಟರ್ (Light Utility Helicopter – LUH) ಮತ್ತು ನೌಕಾಪಡೆಗೆ Kamov Ka-226 T ಹೆಲಿಕಾಪ್ಟರ್​ಗಾಗಿ ಯೋಜನೆ ಸಿದ್ಧವಾಗಿದೆ. ಈ ಪೈಕಿ ಎರಡನೆಯದು ಇನ್ನಷ್ಟೇ ಅನಾವರಣಗೊಳ್ಳಬೇಕಿದೆ. ಮುಂದಿನ ದಿನಗಳಲ್ಲಿ ಭಾರತದ ರಕ್ಷಣಾ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿರುವ ಹಗುರ ಹೆಲಿಕಾಪ್ಟರ್ ಉತ್ಪಾದನೆಯ ಸ್ಥಿತಿಗತಿ ಬಗ್ಗೆ ಈ ಲೇಖನದಲ್ಲಿ ಚರ್ಚಿಸಿದ್ದಾರೆ ರಕ್ಷಣಾ ವಿದ್ಯಮಾನಗಳ ವಿಶ್ಲೇಷಕ ಗಿರೀಶ್ ಲಿಂಗಣ್ಣ.

ಲಘು ಹೆಲಿಕಾಪ್ಟರ್ ಎನ್ನುವುದು​ ಹೊಸ ತಲೆಮಾರಿನ ರೋಟರ್‌ಕ್ರಾಫ್ಟ್ ಆಗಿದ್ದು, ಇದನ್ನು ಭಾರತೀಯ ಸಶಸ್ತ್ರ ಪಡೆಗಳಿಗಾಗಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿದೆ. ಇವು ಕ್ರಮವಾಗಿ ವಾಯುಪಡೆ ಮತ್ತು ಭೂಸೇನೆಯಲ್ಲಿ ಹಳೆಯದಾಗಿರುವ ಚೀತಾ ಮತ್ತು ಚೇತಕ್ ಹೆಲಿಕಾಪ್ಟರ್‌ಗಳ ಬದಲಿಗೆ ಬಳಕೆಯಾಗಲಿವೆ.

ಮೂರು ಟನ್ ವರ್ಗದ ಲಘು ಹೆಲಿಕಾಪ್ಟರ್​ ಅನ್ನು ಎಚ್​ಎಎಲ್​ನ ರೋಟರಿ ವಿಂಗ್ ಸಂಶೋಧನಾ ಮತ್ತು ವಿನ್ಯಾಸ ಕೇಂದ್ರವು (RWR ಹಾಗೂ DC) ದೇಶೀಯವಾಗಿ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿದೆ. RWR ಹಾಗೂ DC ಈ ಹಿಂದೆ ಅತ್ಯಾಧುನಿಕ ಹಗುರ ಹೆಲಿಕಾಪ್ಟರ್ (Advanced Light Utility Helicopter – ALH) ಮತ್ತು ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್ (LCH) ಗಳನ್ನು ಅಭಿವೃದ್ಧಿಪಡಿಸಿತ್ತು. LUH ಬಹೂಪಯೋಗಿ ಕಾಪ್ಟರ್ ಆಗಿದ್ದು, ಇದನ್ನು ಸೈನಿಕರು, ಯಂತ್ರ ಮತ್ತು ಸರಕುಗಳ ಸಾಗಾಣಿಕೆ, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಲು ಹಾಗೂ ತುರ್ತು ವೈದ್ಯಕೀಯ ಸೇವೆಗೆ ಬಳಸಬಹುದು.

ಭವಿಷ್ಯದಲ್ಲಿ ಇದು ಬೆಲ್ಜಿಯಂ 2.75 ಇಂಚಿನ ರಾಕೆಟ್‌ಗಳು ಮತ್ತು ಮಿಸ್ಟ್ರಲ್ ATAM ಕ್ಷಿಪಣಿಗಳೊಂದಿಗೆ ಶಸ್ತ್ರಸಜ್ಜಿತವಾಗಲಿದೆ. ಈ ಹೆಲಿಕಾಪ್ಟರ್​ಗೆ ಫ್ರೆಂಚ್ ಕಂಪನಿ ಸಫ್ರಾನ್ ತಯಾರಿಸಿರುವ ಸಿಂಗಲ್ ಟರ್ಬೊ ಶಾಫ್ಟ್ ಹೆಲಿಕಾಪ್ಟರ್ ಎಂಜಿನ್ (SHE) ‘Ardiden 1U’ ಅಳವಡಿಸಲಾಗುವುದು. ಇದು ಎತ್ತರದ ಕಾರ್ಯಾಚರಣೆಗಳಿಗೆ ಸೂಕ್ತವಾಗಿದೆ. HAL ಪ್ರಕಾರ, LUH ಸ್ಮಾರ್ಟ್ ಕಾಕ್‌ಪಿಟ್ ಡಿಸ್‌ಪ್ಲೇ ವ್ಯವಸ್ಥೆ (ಗ್ಲಾಸ್ ಕಾಕ್‌ಪಿಟ್), ಅತ್ಯಾಧುನಿಕ ಆರೋಗ್ಯ ಮತ್ತು ಬಳಕೆ ಉಸ್ತುವಾರಿ ವ್ಯವಸ್ಥೆಯನ್ನು (HUMS) ಹೊಂದಿದೆ.

LUH

ರಷ್ಯಾ ನಿರ್ಮಿತ ಲಘು ಯುದ್ಧ ಹೆಲಿಕಾಪ್ಟರ್

235 ಕಿಮೀ ವೇಗ, 500 ಕಿಮೀ ಹಾರಾಟ ಸಮುದ್ರ ಮಟ್ಟದ ಹಾರಾಟದ ಸಮಯದಲ್ಲಿ ಈ ಚಾಪರ್ ಗರಿಷ್ಠ 235 ಕಿಮೀ ವೇಗವನ್ನು ಸಾಧಿಸಬಲ್ಲದು. ಇದು 350 ಕಿಮೀ ಹಾರಾಟದ ವ್ಯಾಪ್ತಿಯನ್ನು ಹೊಂದಿದ್ದು, ಆಂತರಿಕ ಇಂಧನ ಟ್ಯಾಂಕ್‌ಗಳ ಏಕೀಕರಣದೊಂದಿಗೆ 500 ಕಿಮೀವರೆಗೆ ವಿಸ್ತರಿಸಬಹುದು. LUHನ ಮೂರು ಮಾದರಿಗಳನ್ನೂ ಪರೀಕ್ಷಿಸಲಾಗಿದೆ. ಜನವರಿ 2020ರ ವೇಳೆಗೆ ವಿವಿಧ ಪರಿಸರ ಪರಿಸ್ಥಿತಿಗಳಲ್ಲಿ 550ಕ್ಕೂ ಹೆಚ್ಚು ಹಾರಾಟ ಪರೀಕ್ಷೆಗಳನ್ನು ನಡೆಸಲಾಗಿದೆ.

ಮೂರು ಪಡೆಗಳಿಗೆ ಒಟ್ಟಾಗಿ 394 ಹೆಲಿಕಾಪ್ಟರ್‌ಗಳ ಅಗತ್ಯವಿರುತ್ತದೆ. ಈ ಪೈಕಿ 187 ದೇಶೀಯ ಉತ್ಪಾದಿಸಿದ LUH ಆಗಿರುತ್ತವೆ. ಈ ಪೈಕಿ 126 ಹೆಲಿಕಾಪ್ಟರ್​ಗಳನ್ನು ಭೂಸೇನೆಗೆ ಸೇರಿಸಿಕೊಳ್ಳಲಾಗುತ್ತದೆ, ಉಳಿದ 61 ವಾಯುಪಡೆಯಲ್ಲಿರುತ್ತದೆ.

197 Ka 226T ಹೆಲಿಕಾಪ್ಟರ್‌ಗಳನ್ನು ಇಂಡೋ-ರಷ್ಯನ್ ಹೆಲಿಕಾಪ್ಟರ್ ಲಿಮಿಟೆಡ್, ಎಚ್‌ಎಎಲ್ ಜಂಟಿಯಾಗಿ ತಯಾರಿಸುತ್ತಿವೆ. ತುಮಕೂರು ಜಿಲ್ಲೆ ಗುಬ್ಬಿ ಬಳಿಯಿರುವ ಎಚ್​ಎಎಲ್​ನ ಹೊಸ ಕಾರ್ಖಾನೆಯಲ್ಲಿ ಸ್ಥಾಪಿಸಲಾಗುವುದು ಹೆಲಿಕಾಪ್ಟರ್ ಉತ್ಪಾದನಾ ಘಟಕದಲ್ಲಿ LUH ನಿರ್ಮಾಣ ಕಾರ್ಯ ನಡೆಯಲಿದೆ. 600 ಎಕರೆಗೂ ಹೆಚ್ಚು ಹಸಿರು ಕ್ಷೇತ್ರದಲ್ಲಿ ವಿಸ್ತರಿಸಿರುವ ಚಾಪರ್ ಉತ್ಪಾದನಾ ಘಟಕವು ಪರೀಕ್ಷಾ ಸೌಲಭ್ಯವನ್ನೂ ಹೊಂದಿದೆ. HAL ಅಧಿಕಾರಿಗಳ ಪ್ರಕಾರ, ಬೆಂಗಳೂರು ಮತ್ತು ತುಮಕೂರು ಸೌಲಭ್ಯಗಳು ಸೇರಿ ಒಟ್ಟು 100 LUHಗಳನ್ನು ಉತ್ಪಾದಿಸಬಹುದು. ಒಪ್ಪಂದಕ್ಕೆ ಸಹಿ ಹಾಕಿದ ಮೂರು ವರ್ಷಗಳಲ್ಲಿ ಮೊದಲ ಹೆಲಿಕಾಪ್ಟರ್‌ಗಳನ್ನು ನೀಡುವುದಾಗಿ ಕಂಪನಿ ಹೇಳಿದೆ. ನೌಕಾಪಡೆಯ ನಿರ್ದಿಷ್ಟ ವಿನಂತಿಯ ಮೇರೆಗೆ, ಅದರ ಆವಶ್ಯಕತೆಗಳನ್ನು ಪೂರೈಸಲು HAL ಜಂಟಿಯಾಗಿ 140 ka226T ಅವಳಿ ಎಂಜಿನ್ ಮಲ್ಟಿರೋಲ್ ಯುಟಿಲಿಟಿ ಹೆಲಿಕಾಪ್ಟರ್‌ಗಳನ್ನು ಉತ್ಪಾದಿಸುತ್ತದೆ. ಇದು ಒಂದು ಬಿಲಿಯನ್ ಡಾಲರ್ ಯೋಜನೆಯ ಒಂದು ಭಾಗವಾಗಿದೆ. ಭಾರತೀಯ ರಕ್ಷಣಾ ಸಚಿವಾಲಯವು ರಷ್ಯಾದೊಂದಿಗೆ 200 Ka 226T ಮಿಲಿಟರಿ ಹೆಲಿಕಾಪ್ಟರ್‌ಗಳನ್ನು ತಂತ್ರಜ್ಞಾನದ ವರ್ಗಾವಣೆಯೊಂದಿಗೆ ಖರೀದಿಸಲು ಒಪ್ಪಂದಕ್ಕೆ ಸಹಿ ಹಾಕಿತು.

ಆ ಪ್ರಕಾರ 60 ಹೆಲಿಕಾಪ್ಟರ್‌ಗಳನ್ನು ಫ್ಲೈವೇ ಸ್ಥಿತಿಯಲ್ಲಿ ಖರೀದಿಸಲಾಗುವುದು ಮತ್ತು ಉಳಿದವುಗಳನ್ನು ಭಾರತದಲ್ಲಿ ತಯಾರಿಸಲಾಗುವುದು. ತಯಾರಿಕೆಗೆ ಇದ್ದ ಅಡ್ಡಿಗಳನ್ನು ಕಾಮೋವ್ (Kamov) ನಿವಾರಿಸಿಕೊಂಡಿದ್ದು, Ka-226T ಯುಟಿಲಿಟಿ ಹೆಲಿಕಾಪ್ಟರ್‌ಗಳಲ್ಲಿ ಸ್ಥಳೀಯ ಉತ್ಪನ್ನಗಳು-ತಾಂತ್ರಿಕತೆಯ ಬಳಕೆ ಶೇ 27ರಿಂದ 32 ಇರುತ್ತದೆ.

LUH

ಎಚ್​ಎಎಲ್ ನಿರ್ಮಿತ ಲಘು ಯುದ್ಧ ಹೆಲಿಕಾಪ್ಟರ್

ಸ್ಥಳೀಯ ಉತ್ಪನ್ನ ಬಳಕೆ ನಿಯಮ ಹೆಲಿಕಾಪ್ಟರ್ ಜೋಡಣೆಯಲ್ಲಿ ಭಾರತವು ಪ್ರಸ್ತಾಪಿಸಿರುವ ಶೇ 70ರಷ್ಟು ಸ್ಥಳೀಕರಣದ ಟೆಂಡರ್ ಆವಶ್ಯಕತೆಗಿಂತ ರಷ್ಯಾದ ಪ್ರಸ್ತಾವನೆಯು (ಶೇ 62) ಕಡಿಮೆ ಇತ್ತು. ಆದರೂ ಈ ಒಪ್ಪಂದ ಅಂತಿಮ ಹಂತಕ್ಕೆ ಬಂದಿದ್ದು, ಮುಂದಿನ ಕೆಲಸಗಳು ಆರಂಭವಾಗಿವೆ. ರಷ್ಯಾದ ಶೇ 70ರಷ್ಟು ಪಾಲು ಸಫ್ರಾನ್ ನಿರ್ಮಿತ ಎಂಜಿನ್ ಮತ್ತು ಇತರ ದೇಶಗಳ ಏವಿಯಾನಿಕ್ಸ್​ಗಳನ್ನು ಹೊರತುಪಡಿಸಿದೆ. ಮೊದಲ ಹಂತದಲ್ಲಿ ಭಾರತೀಯ ಉತ್ಪಾದಿತ ಬಿಡಿಭಾಗಗಳ ಬಳಕೆ ಕೇವಲ ಶೇ 3.3, ಎರಡನೇ ಹಂತದಲ್ಲಿ ಶೇ 15 ಮತ್ತು ಮೂರು ಮತ್ತು ನಾಲ್ಕನೇ ಹಂತದಲ್ಲಿ ಕ್ರಮವಾಗಿ ಶೇ 25 ಮತ್ತು ಶೇ 35 ಇರುತ್ತದೆ.

ಡ್ಯುಯಲ್ ಎಂಜಿನ್, ಬಾಲರಹಿತ ವಿನ್ಯಾಸ, ಹೆಚ್ಚು ಸಾಗಾಟ ಸಾಮರ್ಥ್ಯ ಮತ್ತು ಬಹುಮುಖ್ಯವಾಗಿ, ಮಡಚಬಹುದಾದ ರೆಕ್ಕೆಗಳನ್ನು ಹೊಂದಿದ್ದು, ನೌಕಾಪಡೆಯಲ್ಲಿ Ka226T ಹೆಚ್ಚಿನ ಬೇಡಿಕೆ ಪಡೆಯಲು ಕಾರಣವಾಗಿದೆ. ಈ ಸೌಲಭ್ಯಗಳು ಸ್ಥಳೀಯ ಲಘು ಹೆಲಿಕಾಪ್ಟರ್​ನಲ್ಲಿ ಇರುವುದಿಲ್ಲ. ಉತ್ಪಾದನೆಯನ್ನು ಸ್ವದೇಶಿಗೊಳಿಸುವ ಪ್ರಕ್ರಿಯೆಯಲ್ಲಿರುವ ರಕ್ಷಣಾ ಸಚಿವಾಲಯವು 2ನೇ ಹಂತದಿಂದ ದೇಶೀಯ ಉತ್ಪಾದನೆಯ ಪ್ರಮಾಣವನ್ನು ಶೇ 70ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸುತ್ತಿದೆ.

ಇದೀಗ ಆಗಿರುವ ಒಪ್ಪಂದದ ಪ್ರಕಾರ, ಎರಡನೇ ಹಂತದಲ್ಲಿ ದೇಶೀಕರಣವು ಶೇ 35ರವರೆಗೆ ಇರುತ್ತದೆ. ಆದರೂ, ಈ ಗಣನೀಯ ವಿಳಂಬವು ಸೇನಾ ಕಾರ್ಯಾಚರಣೆಗಳಿಗೆ ತೊಡಕಾಗುತ್ತಿರುವುದರಿಂದ, ಭಾರತೀಯ ಸೇನೆಯು ಈಗ ಸ್ವದೇಶಿ ನೀತಿಯಿಂದ ವಿನಾಯಿತಿ ನೀಡಿ, ಒಪ್ಪಂದವನ್ನು ಉಳಿಸಿಕೊಳ್ಳುವಂತೆ ಕೋರಿ ಸಚಿವಾಲಯವನ್ನು ಸಂಪರ್ಕಿಸಲು ಯೋಜಿಸುತ್ತಿದೆ. ರಷ್ಯಾವು Kamov-Ka 226T Climberನ ಹೊಸ ರೂಪಾಂತರವನ್ನು ತಯಾರಿಸಿದ್ದು, 2015ರ ಒಪ್ಪಂದದ ಅಡಿಯಲ್ಲಿ ಭಾರತಕ್ಕೆ ಮಾರಾಟ ಮಾಡಲು ಉದ್ದೇಶಿಸಿತ್ತು. ಮಾಸ್ಕೋದಲ್ಲಿ ನಡೆದ MAKS2021 ಅಂತಾರಾಷ್ಟ್ರೀಯ ಏರ್ ಶೋನಲ್ಲಿ ಇದನ್ನು ಪ್ರದರ್ಶಿಸಲಾಯಿತು. ಇದು ಶೀಘ್ರದಲ್ಲೇ ಪರೀಕ್ಷಾ ಹಾರಾಟವನ್ನು ನಡೆಸಲಿದೆ. ಭಾರತದೊಂದಿಗೆ ಒಪ್ಪಂದವು ವಿಶ್ವದ ವಿವಿಧೆಡೆ ಗ್ರಾಹಕರನ್ನು ಕಂಡುಕೊಳ್ಳಲು ಅಡ್ಡಿಯಾಗುವುದಿಲ್ಲ ಎಂದು ರಷ್ಯಾ ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: National Defence: ತೇಜಸ್ ಮೇಲೆ ವಾಯುಪಡೆಯ ಭರವಸೆ, ಬದಿಗೆ ಸರಿಯುತ್ತಿದೆ ಮಿರಾಜ್ ವಿಮಾನಗಳ ಬಳಕೆ ಇದನ್ನೂ ಓದಿ: ಭಾರತೀಯ ನೌಕಾಪಡೆ ಹೊಸ ಶಕ್ತಿ ತುಂಬಲಿದೆ ಎಂಕೆ 54 ಟಾರ್ಪೆಡೊ: ಅಮೆರಿಕದೊಂದಿಗೆ 423 ಕೋಟಿ ಒಪ್ಪಂದ

Published On - 5:45 pm, Sun, 24 October 21

ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ