AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಗೆರೆ ದಾಟದಿದ್ದರೂ ನೋ ಬಾಲ್ ಎಂದ ಅಂಪೈರ್: ಕಾರಣವೇನು?

IPL 2025 DC vs RR: ಇಂಡಿಯನ್ ಪ್ರೀಮಿಯರ್ ಲೀಗ್​ನ 32ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್​ಗಳಲ್ಲಿ 188 ರನ್ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡ ಕೂಡ 188 ರನ್ ಕಲೆಹಾಕಿತು. ಇದರೊಂದಿಗೆ ಪಂದ್ಯವು ಸೂಪರ್ ಓವರ್​ನ ರೋಚಕ ಪೈಪೋಟಿಗೆ ಸಾಗಿತು. ಸೂಪರ್ ಓವರ್​ನಲ್ಲಿ ಗೆಲ್ಲುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ 2 ಅಂಕಗಳನ್ನು ಪಡೆದುಕೊಂಡಿದೆ.

ಝಾಹಿರ್ ಯೂಸುಫ್
|

Updated on: Apr 17, 2025 | 8:04 AM

Share
IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ನ 32ನೇ ಪಂದ್ಯವು ಹಲವು ಕಾರಣಗಳಿಂದ ಗಮನ ಸೆಳೆದಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯವು ಮೊದಲು ಟೈ ಆಯಿತು. ಆ ಬಳಿಕ ಸೂಪರ್ ಓವರ್​ನತ್ತ ಸಾಗಿದ ಪಂದ್ಯದಲ್ಲಿ ನೋ ಬಾಲ್, ಫ್ರೀ ಹಿಟ್ ಹಾಗೂ ರನೌಟ್​ಗಳು ಕಂಡು ಬಂದವು. ಅದರಲ್ಲೂ ಮಿಚೆಲ್ ಸ್ಟಾರ್ಕ್ (Mitchell Starc) ಸೂಪರ್​ ಓವರ್​ನಲ್ಲಿ​ ಗೆರೆ ದಾಟದಿದ್ದರೂ ಅಂಪೈರ್ ನೋ ಬಾಲ್ ಕೊಟ್ಟಿದ್ದೇಕೆ ಎಂಬ ಪ್ರಶ್ನೆ ಮೂಡುವುದು ಸಹಜ.

1 / 5
ಕ್ರಿಕೆಟ್​ನಲ್ಲಿ ಲೈನ್ ಣೊಬಾಲ್​ಗಳಲ್ಲಿ ಎರಡು ವಿಧವಿದೆ. ಇಲ್ಲಿ ಚೆಂಡೆಸೆಯುವಾಗ ಪಾದವು ಗೆರೆ ದಾಟಿದರೆ ನೋ ಬಾಲ್ ನೀಡುವುದು ಸಾಮಾನ್ಯ. ಇದಾಗ್ಯೂ ಸೈಡ್ ನೋ ಬಾಲ್ ಎಂಬ ನಿಯಮ ಕೂಡ ಇದೆ. ಅಂದರೆ ಚೆಂಡೆಸೆಯುವಾಗ ಬೌಲರ್​ನ ಹಿಂದಿನ ಪಾದವು ರಿಟರ್ನ್ ಕ್ರೀಸ್‌ನೊಳಗೆ (ಸೈಡ್ ಲೈನ್​) ಇರಬೇಕು.

2 / 5
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಸೂಪರ್ ಓವರ್​ನ 4ನೇ ಎಸೆತಯುವಾಗ ಮಿಚೆಲ್ ಸ್ಟಾರ್ಕ್ ಅವರ ಹಿಂದಿನ ಎಡ ಪಾದವು ರಿಟರ್ನ್ ಕ್ರೀಸ್​ಗೆ ತಾಗಿದೆ. ಇಲ್ಲಿ ಹಿಂಪಾದವು ಕ್ರೀಸ್​ನ ಹೊರಗೆ ಹೋಗಬೇಕೆಂದಿಲ್ಲ. ಬದಲಾಗಿ ಅದಕ್ಕೆ ತಾಗಿದರೂ ನೋ ಬಾಲ್ ಆಗಿರುತ್ತದೆ. ಅಂದರೆ ಬೌಲರ್​ ರಿಟರ್ನ್​ ಕ್ರೀಸ್​ನ ಒಳಗಿಂದಲೇ ಬೌಲಿಂಗ್ ಮಾಡಬೇಕೆಂಬ ನಿಯಮವಿದೆ.

3 / 5
ಎಂಸಿಸಿ ನಿಯಮ 21.5.1 ರ ಪ್ರಕಾರ, 'ಬೌಲರ್ ಚೆಂಡನ್ನು ಎಸೆಯುವಾಗ ಅವನ ಹಿಂದಿನ ಪಾದವು ರಿಟರ್ನ್ ಕ್ರೀಸ್‌ನೊಳಗೆ ಇರಬೇಕು. ಅಲ್ಲದೆ ರಿಟರ್ನ್​ ಕ್ರೀಸ್​ ಅನ್ನು ಮುಟ್ಟಿರಬಾರದು. ಕಾಲು ಗೆರೆಯನ್ನು ತಾಗಿದರೂ ಅದು ನೋ ಬಾಲ್ ಆಗಿರುತ್ತದೆ. ಹೀಗೆ ನೋ ಬಾಲ್ ಆದರೂ ಫ್ರೀ ಹಿಟ್ ಸಿಗುತ್ತದೆ. ಈ ನಿಯಮದ ಅನ್ವಯ ಮಿಚೆಲ್ ಸ್ಟಾರ್ಕ್​ ಅವರ ಕಾಲು ರಿಟರ್ನ್ ಕ್ರೀಸ್​ಗೆ ತಾಗುತ್ತಿದ್ದಂತೆ ಥರ್ಡ್​ ಅಂಪೈರ್ ನೋಬಾಲ್ ನೀಡಿದ್ದಾರೆ.

4 / 5
ಇನ್ನು ಈ ಪಂದ್ಯದ ಸೂಪರ್ ಓವರ್​ನಲ್ಲಿ ಮೊದಲು ಬ್ಯಾಟ್ ಮಾಡಿದ ರಾಜನ್ಥಾನ್ ರಾಯಲ್ಸ್ ತಂಡವು 5 ಎಸೆತಗಳಲ್ಲಿ 2 ವಿಕೆಟ್ ಕಳೆದುಕೊಂಡು 11 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 4 ಎಸೆತಗಳಲ್ಲಿ 1 ಫೋರ್ ಹಾಗೂ 1 ಸಿಕ್ಸ್​ನೊಂದಿಗೆ 13 ರನ್​ ಬಾರಿಸಿ ರೋಚಕ ಗೆಲುವು ದಾಖಲಿಸಿತು.

5 / 5
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!

ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು

ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್

ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 

VIDEO: ಇದು WPL ಇತಿಹಾಸದ ಅತ್ಯಂತ ದುಬಾರಿ ಓವರ್..!

ಬಿಗ್ ಬಾಸ್​ಗೆ ಮಲ್ಲಮ್ಮ; ಅಟ್ಯಾಚ್​​ಮೆಂಟ್ ಈಗ ಉಳಿದಿಲ್ಲ ಎಂದ ಧ್ರುವಂತ್

VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!

ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ

ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​

ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ