CSK ಹೆಸರಿಗೆ ವಿಶ್ವ ದಾಖಲೆ… RCB ಪಾಲಿಗೆ ಹೀನಾಯ ದಾಖಲೆ
Royal Challengers Bengaluru vs Chennai Super Kings: ಐಪಿಎಲ್ನ 11ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ತಂಡವು 20 ಓವರ್ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 250 ರನ್ಗಳು. ಈ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 207 ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಆರ್ಸಿಬಿ 43 ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ಸೋಲಿನ ಹೊರತಾಗಿಯೂ ಸಿಎಸ್ಕೆ ಭರ್ಜರಿ ವಿಶ್ವ ದಾಖಲೆ ನಿರ್ಮಿಸಿದೆ.
Updated on: Apr 06, 2026 | 2:09 PM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 11ನೇ ಪಂದ್ಯದಲ್ಲಿ ಬರೋಬ್ಬರಿ 30 ಸಿಕ್ಸರ್ಗಳು ಮೂಡಿಬಂದಿವೆ. ಈ ಮೂವತ್ತು ಸಿಕ್ಸರ್ಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ 19 ಸಿಕ್ಸ್ ಬಾರಿಸಿದರೆ, ಚೆನ್ನೈ ಸೂಪರ್ ಕಿಂಗ್ಸ್ (CSK) ಕೇವಲ 11 ಸಿಕ್ಸ್ ಸಿಡಿಸಿದ್ದರು. ಇದಾಗ್ಯೂ ಸಿಎಸ್ಕೆ ತಂಡದ ಹೆಸರಿಗೆ ವಿಶೇಷ ವಿಶ್ವ ದಾಖಲೆ ಸೇರ್ಪಡೆಯಾಗಿದೆ.

ಹೌದು, ಟಿ20 ಕ್ರಿಕೆಟ್ ಇತಿಹಾಸದಲ್ಲೇ ಇನಿಂಗ್ಸ್ವೊಂದರಲ್ಲಿ 9 ಬ್ಯಾಟರ್ಗಳು ಸಿಕ್ಸ್ ಸಿಡಿಸಿದ ವಿಶ್ವ ದಾಖಲೆಯೊಂದನ್ನು ಚೆನ್ನೈ ಸೂಪರ್ ಕಿಂಗ್ಸ್ ತನ್ನದಾಗಿಸಿಕೊಂಡಿದೆ. ಅಂದರೆ ಆರ್ಸಿಬಿ ವಿರುದ್ಧ ಸಿಎಸ್ಕೆ ತಂಡದ 9 ಬ್ಯಾಟರ್ಗಳು ಸಿಕ್ಸ್ ಬಾರಿಸಿದ್ದರು. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಯಾವುದೇ ತಂಡಕ್ಕೂ ಸಾಧ್ಯವಾಗದ ಅಪರೂಪದ ದಾಖಲೆಯೊಂದನ್ನು ಚೆನ್ನೈ ಸೂಪರ್ ಕಿಂಗ್ಸ್ ನಿರ್ಮಿಸಿದೆ.

ಚೆನ್ನೈ ಸೂಪರ್ ಕಿಂಗ್ಸ್ ಪರ ಸಿಕ್ಸರ್ ಬಾರಿಸಿದವರು: ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸರ್ಫರಾಝ್ ಖಾನ್, ಕಾರ್ತಿಕ್ ಶರ್ಮಾ, ಶಿವಂ ದುಬೆ, ಜೇಮೀ ಓವರ್ಟನ್, ಪ್ರಶಾಂತ್ ವೀರ್, ನೂರ್ ಅಹ್ಮದ್ ಮತ್ತು ಅಂಶುಲ್ ಕಾಂಬೋಜ್. ಇನ್ನು ಸಿಕ್ಸ್ ಬಾರಿಸದೇ ಇದ್ದ ಇಬ್ಬರೆಂದರೆ ಆಯುಷ್ ಮ್ಹಾತ್ರೆ ಹಾಗೂ ಮ್ಯಾಟ್ ಹೆನ್ರಿ.

ಇತ್ತ ಟಿ20 ಕ್ರಿಕೆಟ್ನಲ್ಲಿ ಪಂದ್ಯವೊಂದರಲ್ಲಿ 9 ಬ್ಯಾಟರ್ಗಳಿಂದ ಸಿಕ್ಸ್ ಹೊಡೆಸಿಕೊಂಡ ಮೊದಲ ತಂಡವೆಂಬ ಹೀನಾಯ ದಾಖಲೆಯೊಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾಗಿದೆ. ಅಂದರೆ ಆರ್ಸಿಬಿಯನ್ನು ಹೊರತುಪಡಿಸಿ ಯಾವುದೇ ತಂಡವು ಇನಿಂಗ್ಸ್ವೊಂದರಲ್ಲಿ 9 ಬ್ಯಾಟರ್ಗಳಿಂದ ಸಿಕ್ಸ್ ಹೊಡೆಸಿಕೊಂಡಿರಲಿಲ್ಲ.

ಈ ಸಿಕ್ಸರ್ಗಳ ದಾಖಲೆಯ ಹೊರತಾಗಿಯೂ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈ ಪಂದ್ಯದಲ್ಲಿ ಸೋಲನುಭವಿಸಿದೆ. ಈ ಮ್ಯಾಚ್ನಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 20 ಓವರ್ಗಳಲ್ಲಿ 250 ರನ್ ಕಲೆಹಾಕಿದರೆ, ಸಿಎಸ್ಕೆ ತಂಡವು 19.4 ಓವರ್ಗಳಲ್ಲಿ 207 ರನ್ಗಳಿ ಆಲೌಟ್ ಆಯಿತು. ಈ ಮೂಲಕ ಆರ್ಸಿಬಿ ತಂಡವು 43 ರನ್ಗಳ ಭರ್ಜರಿ ಜಯ ಸಾಧಿಸಿದೆ.




