AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: ಫಿಲ್ ಸಾಲ್ಟ್ ಜೊತೆ ಮೊಹಮ್ಮದ್ ಸಿರಾಜ್ ಕಿರಿಕ್

Siraj and Salt Fight Video: ಈ ಕಠಿಣ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಡೇವಿಡ್ ವಾರ್ನರ್ ಹಾಗೂ ಫಿಲ್ ಸಾಲ್ಟ್ ಭರ್ಜರಿ ಆರಂಭ ಒದಗಿಸಿದ್ದರು. ಆರಂಭದಲ್ಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಈ ಜೋಡಿ ಆರ್​ಸಿಬಿ ಬೌಲರ್​ಗಳ ಬೆಂಡೆತ್ತಿದರು.

TV9 Web
| Edited By: |

Updated on: May 06, 2023 | 10:59 PM

Share
IPL 2023 DC vs RCB: ಐಪಿಎಲ್​ನ 50ನೇ ಪಂದ್ಯದಲ್ಲಿ ಆರ್​ಸಿಬಿ ವೇಗಿ ಮೊಹಮ್ಮದ್ ಸಿರಾಜ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟರ್ ಫಿಲ್ ಸಾಲ್ಟ್ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ಮೊದಲು ಬ್ಯಾಟಿಂಗ್ ಮಾಡಿತ್ತು.

1 / 9
ವಿರಾಟ್ ಕೊಹ್ಲಿ (55) ಹಾಗೂ ಮಹಿಪಾಲ್ ಲೋಮ್ರರ್​ (54) ಅವರ ಅರ್ಧಶತಕದ ನೆರವಿನಿಂದ ಆರ್​ಸಿಬಿ ತಂಡವು ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 180 ರನ್​ ಕಲೆಹಾಕಿತು.

2 / 9
ಈ ಕಠಿಣ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಡೇವಿಡ್ ವಾರ್ನರ್ ಹಾಗೂ ಫಿಲ್ ಸಾಲ್ಟ್ ಭರ್ಜರಿ ಆರಂಭ ಒದಗಿಸಿದ್ದರು. ಆರಂಭದಲ್ಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಈ ಜೋಡಿ ಆರ್​ಸಿಬಿ ಬೌಲರ್​ಗಳ ಬೆಂಡೆತ್ತಿದರು.

3 / 9
ಅದರಲ್ಲೂ ಮೊಹಮ್ಮದ್ ಸಿರಾಜ್ ಎಸೆದ 5ನೇ ಓವರ್​ನ ಮೊದಲೆರಡು ಎಸೆತಗಳಲ್ಲಿ ಸಾಲ್ಟ್ ಭರ್ಜರಿ ಸಿಕ್ಸ್ ಸಿಡಿಸಿದರು. ಇನ್ನು 3ನೇ ಎಸೆತದಲ್ಲಿ ಫೋರ್ ಬಾರಿಸಿದರು. ಆದರೆ ಸಿರಾಜ್ 4ನೇ ಎಸೆತವನ್ನು ಬೌನ್ಸರ್ ಎಸೆದರು.

4 / 9
ಅತ್ತ ಮಾರಕ ಬೌನ್ಸರ್​ಗೆ ಉತ್ತರಿಸಲಾಗದೇ ಫಿಲ್ ಸಾಲ್ಟ್ ಅದೇನೋ ಗೊಣಗಿದ್ದಾರೆ. ಇತ್ತ ಮೊದಲೇ ಸಿಕ್ಸ್-ಫೋರ್ ಹೊಡೆಸಿಕೊಂಡು ಕುಪಿತಗೊಂಡಿದ್ದ ಮೊಹಮ್ಮದ್ ಸಿರಾಜ್ ಅವರ ಸಹನೆಯ ಕಟ್ಟೆ ಒಡೆದಿದೆ.

5 / 9
ಅಲ್ಲದೆ ಸೀದಾ ಹೋಗಿ ಫಿಲ್ ಸಾಲ್ಟ್ ಜೊತೆಗೆ ಕಿರಿಕ್​ಗೆ ಇಳಿದಿದ್ದಾರೆ. ಹಾಗೆಯೇ ಮಾತಿನ ಚಕಮಕಿ ನಡುವೆ ಸಾಲ್ಟ್​ಗೆ ಮುಚ್ಕೊಂಡಿರಬೇಕು ಎಂದು ಕೈ ತೋರಿಸಿ ಸೂಚನೆ ನೀಡಿದ್ದಾರೆ. ಇದರ ನಡುವೆ ​ನಾನ್​ ಸ್ಟ್ರೈಕ್​ನಲ್ಲಿದ್ದ ಡೇವಿಡ್ ವಾರ್ನರ್ ಬಂದು ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದರು.

6 / 9
ಆದರೆ ಮೊದಲೇ ಸಿಡಿಮಿಡಿಗೊಂಡಿದ್ದ ಸಿರಾಜ್ ವಾರ್ನರ್ ಜೊತೆಗೂ ವಾಗ್ವಾದಕ್ಕೆ ಇಳಿದರು. ಅಷ್ಟರಲ್ಲಿ ನಾಯಕ ಫಾಫ್ ಡುಪ್ಲೆಸಿಸ್ ಹಾಗೂ ಅಂಪೈರ್ ಮಧ್ಯಪ್ರವೇಶಿಸಿ ಜಗಳವನ್ನು ಕೊನೆಗೊಳಿಸಿದರು. ಇದೀಗ ಸಿರಾಜ್ ಅವರ ಈ ಕೋಪತಾಪದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

7 / 9
ಅಂದಹಾಗೆ ಈ ಅತಿರೇಕದ ವರ್ತನೆಗೆ ಮೊಹಮ್ಮದ್ ಸಿರಾಜ್​ಗೆ ದಂಡ ವಿಧಿಸುವ ಸಾಧ್ಯತೆ ಹೆಚ್ಚಿದೆ. ಐಪಿಎಲ್​ ನೀತಿ ಸಂಹಿತೆ ಲೆವೆಲ್-1 ಫೈನ್ ಬಿದ್ದರೆ ಸಿರಾಜ್ 12 ಲಕ್ಷ ರೂ. ದಂಡ ಪಾವತಿಸಬೇಕಾಗಿ ಬರಬಹುದು. ಅಥವಾ ಪಂದ್ಯ ಶುಲ್ಕದ ಶೇ.50 ರಷ್ಟು ದಂಡ ವಿಧಿಸಬಹುದು.

8 / 9
ಒಟ್ಟಿನಲ್ಲಿ ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ನಡುವಣ ಚಕಮಕಿ ಮರೆಯುವ ಮುನ್ನವೇ ಇದೀಗ ಸಿರಾಜ್ ಸಾಲ್ಟ್ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ. ಇದರಿಂದ ಫೇರ್​ಪ್ಲೇ ಪಾಯಿಂಟ್ಸ್​ನಲ್ಲಿ ಆರ್​ಸಿಬಿ 9ನೇ ಸ್ಥಾನಕ್ಕಿಳಿದಿದೆ.

9 / 9
Web contact
Web contact

TV9 Kannada

Read More
Follow Us
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ

ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್

ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ

ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ

ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ

ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ

ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ

ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ

ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ

ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ