ಗಣೇಶ ಚತುರ್ಥಿ: ದೇಶಿ ಗೋವಿನ ಸಗಣಿಯಿಂದ ಗಣೇಶ ವಿಗ್ರಹ ನಿರ್ಮಾಣ

ಗಣೇಶನ ಹಬ್ಬಕ್ಕೆ ದಿನಗಣನೆ ಶುರುವಾಗಿದ್ದು ಯುವಕರಿಂದ ಹಿರಿಯರವರೆಗೂ ವಿಘ್ನ ವಿನಾಯಕನನ್ನ ಮನೆಗೆ ತಂದು ಪೂಜಿಸಲು ಸಿದ್ದರಾಗಿದ್ದಾರೆ. ಗಣೇಶ ಹಬ್ಬಕ್ಕಾಗಿ ಮನೆಗಳಲ್ಲಿ ತಯಾರಿ ಜೋರಾಗಿಯೇ ನಡೆಯುತ್ತಿದೆ. ಮಣ್ಣಿನ ಗಣೇಶ ವಿಗ್ರಹಕ್ಕೆ ಬೇಡಿಕೆ ಹೆಚ್ಚಾಗಿದೆ. ಇದರ ನಡುವೆ ಸಗಣಿಯಿಂದ ಗಣೇಶ ವಿಗ್ರಹಗಳನ್ನು ತಯಾರಿಸಲಾಗುತ್ತಿದ್ದು, ಕಣ್ಮನ ಸಳೆಯುತ್ತಿವೆ.

| Updated By: ವಿವೇಕ ಬಿರಾದಾರ

Updated on: Sep 04, 2024 | 10:21 AM

 Ganesha chaturthi 2024: Ganesha idol made from cow dung, Kannada News

ಗಣೇಶನ ಹಬ್ಬಕ್ಕೆ ದಿನಗಣನೆ ಶುರುವಾಗಿದ್ದು ಯುವಕರಿಂದ ಹಿರಿಯರವರೆಗೂ ವಿಘ್ನ ವಿನಾಯಕನನ್ನ ಮನೆಗೆ ತಂದು ಪೂಜಿಸಲು ಸಿದ್ದರಾಗಿದ್ದಾರೆ. ಗಣೇಶ ಹಬ್ಬಕ್ಕಾಗಿ ಮನೆಗಳಲ್ಲಿ ತಯಾರಿ ಜೋರಾಗಿಯೇ ನಡೆಯುತ್ತಿದೆ. ಮಣ್ಣಿನ ಗಣೇಶ ವಿಗ್ರಹಕ್ಕೆ ಬೇಡಿಕೆ ಹೆಚ್ಚಾಗಿದೆ. ಇದರ ನಡುವೆ ಸಗಣಿಯಿಂದ ಗಣೇಶ ವಿಗ್ರಹಗಳನ್ನು ತಯಾರಿಸಲಾಗುತ್ತಿದ್ದು, ಕಣ್ಮನ ಸಳೆಯುತ್ತಿವೆ.

1 / 7
 Ganesha chaturthi 2024: Ganesha idol made from cow dung, Kannada News

ಗಣೇಶನನ್ನು ಪೂಜಿಸುವ ಭಕ್ತರಿಗಾಗಿ ಪರಿಸರ ಸ್ನೇಹಿ ದೇಶಿಯ ಗೋವಿನ ಸಗಣಿಯಿಂದ ಗಣೇಶ ವಿಗ್ರಹಗಳು ನಿರ್ಮಾಣವಾಗಿದ್ದು ವಿನೂತನ ಗಣೇಶ ವಿಗ್ರಹಗಳು ಕಣ್ಮನ ಸೆಳೆಯುತ್ತಿವೆ. ಗೋವಿನ ಸಗಣಿಯಿಂದ ಗಣೇಶನ ವಿಗ್ರಹಗಳನ್ನು ತಯಾರಿಸಲಾಗುತ್ತಿದೆ.

2 / 7
 Ganesha chaturthi 2024: Ganesha idol made from cow dung, Kannada News

ಪರಿಸರ ಸ್ನೇಹಿ ಗಣೇಶನನ್ನ ಕೂರಿಸುವಂತೆ ಪರಿಸರ ಪ್ರೇಮಿಗಳು ಮತ್ತು ಸರ್ಕಾರ ಜಾಗೃತಿ ಮೂಡಿಸುತ್ತಿದೆ. ಗಣೇಶನ ವಿಸರ್ಜನೆಯಿಂದ ಕೆರೆ, ಬಾವಿ ನೀರಿಗೆ ಹಾನಿಯಾಗುವುದನ್ನು ತಡೆಯಲು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಮಣ್ಯದ ರಾಷ್ಟ್ರೋತ್ಥಾನ ಗೋಶಾಲೆಯಲ್ಲಿ ಸಗಣಿಯಿಂದ ಗಣೇಶ ವಿಗ್ರಹ ತಯಾರಿಸಲಾಗುತ್ತಿದೆ.

3 / 7
 Ganesha chaturthi 2024: Ganesha idol made from cow dung, Kannada News

ಸಗಣಿಯಿಂದ ಗಣೇಶ ವಿಗ್ರಹ ತಯಾರಿಕೆಯಲ್ಲಿ ಸಿಬ್ಬಂದಿ ನಿರತರಾಗಿದ್ದಾರೆ. ಕಳೆದ ಮೂರು ವರ್ಷದಿಂದ ಗೋವಿನ ಸಗಣಿಯಲ್ಲಿ ವಿವಿಧ ಬಗೆಯ ಗಣೇಶ ವಿಗ್ರಹಗಳನ್ನು ತಯಾರು ಮಾಡಿ ಮಾರುಕಟ್ಟೆಗೆ ಗೋಶಾಲೆ ಸಿಬ್ಬಂದಿ ಕಳುಹಿಸುತ್ತಿದೆ. ಅದರಂತೆ ಈ ಭಾರಿಯೂ ಸಗಣಿಯಿಂದ ಗಣೇಶ ವಿಗ್ರಹಗಳು ತಯಾರಾಗಿದ್ದು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ.

4 / 7
 Ganesha chaturthi 2024: Ganesha idol made from cow dung, Kannada News

ಮಣ್ಣಿನ ಗಣೇಶನ ಮಾದರಿಯಲ್ಲಿ ಸಗಣಿಯಿಂದ ಗಣೇಶನ ವಿಗ್ರಹಗಳನ್ನು ಸಿದ್ದಪಡಿಸಿದ್ದು ನೀರಿನ ಬಣ್ಣಗಳಿಂದ ಗಣೇಶನಿಗೆ ಅಲಂಕಾರವನ್ನ ಮಾಡಲಾಗಿದೆ. ಜೊತೆಗೆ ಈಗಾಗಲೆ ಕಳೆದ ಎರಡು ವರ್ಷಗಳಿಂದ ಗೋಶಾಲೆಯಲ್ಲಿ ಸಗಣಿ ಗಣೇಶನ ವಿಗ್ರಹಗಳನ್ನು ತಯಾರು ಮಾಡುತ್ತಿರುವುದರಿಂದ ಬೆಂಗಳೂರು ನಗರ ಸೇರಿದಂತೆ ವಿವಿಧೆಡೆಯಿಂದ ಸಗಣಿ ಗಣೇಶನ ವಿಗ್ರಹಗಳಿಗೆ ಬೇಡಿಕೆ ಹೆಚ್ಚಿದೆ.

5 / 7
 Ganesha chaturthi 2024: Ganesha idol made from cow dung, Kannada News

ಸಗಣಿ ಗಣೇಶನ ವಿಗ್ರಹವನ್ನು ಕೂರಿಸಿದರೆ ಒಳ್ಳೆಯದಾಗುತ್ತದೆ. ಪರಿಸರಕ್ಕೆ ಹಾನಿಯಾಗದೆ ಪರಿಸರ ಸ್ನೇಹಿಯಾಗಿ ಹಬ್ಬ ಆಚರಣೆ ಮಾಡಿದಂತಾಗುತ್ತದೆ ಎಂದು ಪರಿಸರ ಪ್ರೇಮಿಗಳು ಸಗಣಿ ಗಣೇಶ ವಿಗ್ರಹಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

6 / 7
 Ganesha chaturthi 2024: Ganesha idol made from cow dung, Kannada News

ಒಟ್ಟಾರೆಯಾಗಿ ಗಣೇಶ ಚತುರ್ಥಿ ಸಮೀಪಿಸುತ್ತಿರುವ ಬೆನ್ನಲ್ಲೆ ಮಾರುಕಟ್ಟೆಗೆ ವಿವಿಧ ಬಗೆಯ ಪರಿಸರ ಸ್ನೇಹಿ ಗಣೇಶ ವಿಗ್ರಹಗಳಯ ಲಗ್ಗೆಯಿಡುತ್ತಿವೆ. ಪರಿಸರ ಸ್ನೇಹಿ ಗಣಪನನ್ನು ಪೂಜಿಸುವ ಮೂಲಕ ಈ ಭಾರಿಯ ಗಣೇಶನ ಹಬ್ಬವನ್ನ ಮತ್ತಷ್ಟು ಪರಿಸರ ಸ್ನೇಹಿಯಾಗಿ ಆಚರಿಸಿ.

7 / 7
Follow us