ಪ್ರಿಯಾಂಕಾ ಉಪೇಂದ್ರ ನಟನೆಯ ‘ಉಗ್ರಾವತಾರ’ ಸಿನಿಮಾಗೆ 25 ದಿನಗಳ ಸಂಭ್ರಮ

‘ಉಗ್ರಾವತಾರ’ ಸಿನಿಮಾ ನವೆಂಬರ್​ 1ರಂದು ರಿಲೀಸ್​ ಆಗಿತ್ತು. ಪ್ರಿಯಾಂಕಾ ಉಪೇಂದ್ರ ಅಭಿನಯದ ಈ ಸಿನಿಮಾ 25 ದಿನಗಳನ್ನು ಪೂರೈಸಿರುವುದು ತಂಡದ ಸಂತಸಕ್ಕೆ ಕಾರಣ ಆಗಿದೆ. ಈ ಸಂಭ್ರಮದಲ್ಲಿ ಸಕ್ಸಸ್ ಮೀಟ್ ಮಾಡಿದ್ದಾರೆ. ಪ್ರಿಯಾಂಕಾ ಉಪೇಂದ್ರ, ನಿರ್ದೇಶಕ ಗುರುಮೂರ್ತಿ, ನಿರ್ಮಾಪಕ ಸತೀಶ್​ ಹಾಗೂ ಚಿತ್ರತಂಡದವರು ಭಾಗಿ ಆಗಿದ್ದರು.

ಮದನ್​ ಕುಮಾರ್​
|

Updated on: Nov 25, 2024 | 7:38 PM

ನಟಿ ಪ್ರಿಯಾಂಕಾ ಉಪೇಂದ್ರ ಅವರು ಮುಖ್ಯ ಭೂಮಿಕೆ ನಿಭಾಯಿಸಿರುವ ‘ಉಗ್ರಾವತಾರ’ ಸಿನಿಮಾ ಯಶಸ್ವಿ ಆಗಿದೆ. ನವೆಂಬರ್​ 1ರಂದು ಈ ಸಿನಿಮಾ ಬಿಡುಗಡೆ ಆಗಿತ್ತು. ಈಗ ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿದ್ದು, ಚಿತ್ರತಂಡದವರು ಸಂಭ್ರಮಿಸಿದ್ದಾರೆ. ಇದೇ ಖುಷಿಯಲ್ಲಿ ಎಲ್ಲರಿಗೂ ನೆನಪಿನ ಕಾಣಿಕೆ ನೀಡಲಾಗಿದೆ.

1 / 5
‘ಉಗ್ರಾವತಾರ’ ಸಿನಿಮಾದ ನಿರ್ಮಾಪಕ ಸತೀಶ್ ಹಾಗೂ ನಿರ್ದೇಶಕ ಗುರುಮೂರ್ತಿ ಅವರು ಸಕ್ಸಸ್​ ಮೀಟ್​ ಆಯೋಜಿಸಿ ಮಾತನಾಡಿದರು. ‘ಪ್ರಿಯಾಂಕಾ ಉಪೇಂದ್ರ ಅವರ ಡೆಡಿಕೇಶನ್ ಹಾಗೂ ಶ್ರಮದಿಂದ ಈ ಗೆಲುವು ಸಿಕ್ಕಿದೆ. ಎಲ್ಲಾ ಕಡೆಗಳಲ್ಲಿ ಚೆನ್ನಾಗಿ ಓಡುತ್ತಿದೆ’ ಎಂದು ನಿರ್ದೇಶಕ ಗುರುಮೂರ್ತಿ ಹೇಳಿದ್ದಾರೆ.

2 / 5
ಸಕ್ಸಸ್​ ಮೀಟ್​ನಲ್ಲಿ ಪ್ರಿಯಾಂಕಾ ಉಪೇಂದ್ರ ಮಾತನಾಡಿ, ‘ಇದು ನನ್ನ ಜೀವನದಲ್ಲಿ ಮೈಲಿಗಲ್ಲು ಎನ್ನಬಹುದು. ಸಾಹಸಮಯ ಪಾತ್ರ ನನಗೆ ಸೂಟ್ ಆಗುವುದಿಲ್ಲ ಎಂದು ಎಲ್ಲರೂ ಹೇಳಿದ್ದರು. ಆದರೆ ಆಗೋಲ್ಲ ಎಂದಿದ್ದನ್ನು ಮಾಡಬೇಕೆಂದು ಬಯಸುತ್ತೇನೆ ನಾನು. ಇದರ ಕ್ರೆಡಿಟ್ ಸಂಪೂರ್ಣ ತಂಡಕ್ಕೆ ಸಲ್ಲಬೇಕು’ ಎಂದರು.

3 / 5
‘ಮುಖ್ಯವಾಗಿ ಮಾಧ್ಯಮದ ಸಹಕಾರ ಮರೆಯಲಾಗದು. ಮಹಿಳಾ ಪ್ರಧಾನ ಸಿನಿಮಾಗಳು ಇತ್ತೀಚಿನ ದಿನಗಳಲ್ಲಿ ಕಡಿಮೆ ಆಗಿದೆ. ಅಂಥದ್ದರಲ್ಲಿ ಉಗ್ರಾವತಾರ ಸಿನಿಮಾ 25 ದಿನಕ್ಕೆ ಕಾಲಿಟ್ಟಿರುವುದು ಹೆಮ್ಮೆಯ ಸಂಗತಿ. ಮುಂದೆಯೂ ಒಳ್ಳೆಯ ಕಥೆ, ಸಂದೇಶವಿರುವ ಸಿನಿಮಾಗಳಲ್ಲಿ ನಟಿಸಲು ಪ್ರಯತ್ನಿಸುತ್ತೇನೆ’ ಎಂದರು ಪ್ರಿಯಾಂಕಾ.

4 / 5
ಗೀತಸಾಹಿತಿ ಕಿನ್ನಾಳ್‌ರಾಜ್, ನಿರ್ಮಾಪಕಿ ಅಕ್ಷತಾ ಸತೀಶ್, ನಟರಾದ ಸೂರ್ಯ ಪ್ರವೀಣ್, ಅಭಿಲಾಷ್, ದರ್ಶನ್, ಜತ್ತಿ, ಅಂಕಿತಾ ಜಯರಾಮ್, ಚರಣ್, ವಲ್ಲಿ, ಪೂಜಾ, ಸಂಕಲನಕಾರ ಯುಡಿವಿ ವೆಂಕಿ, ಸಾಹಸ ನಿರ್ದೇಶಕರಾದ ಮಾಸ್‌ ಮಾದ, ಅಶೋಕ್, ಛಾಯಾಗ್ರಾಹಕ ನಂದಕಿಶೋರ್ ಮುಂತಾದವರು ಸಕ್ಸಸ್​ ಮೀಟ್​ನಲ್ಲಿ ಭಾಗಿಯಾದರು.

5 / 5
Follow us