AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮಿತ್ ಶಾ ಸ್ವಾಗತಕ್ಕೆ ಕ್ಲಸ್ಟರ್ ನಾಯಕರ ಲೈನ್ ಆಪ್ ವಿಚಾರ: ಪ್ರತಾಪ್ ಸಿಂಹ-ಪ್ರೀತಮ್ ಗೌಡ ನಡುವೆ ವಾಕ್ಸಮರ

ಲೋಕಸಭೆ ಚುನಾವಣೆಯನ್ನು ಮುಂದಿಟ್ಟುಕೊಂಡು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಮೈಸೂರಿಗೆ ಭೇಟಿ ನೀಡಿದ್ದಾರೆ. ಅಮಿತ್ ಶಾ ಸ್ವಾಗತಕ್ಕೆ ಕ್ಲಸ್ಟರ್ ನಾಯಕರ ಲೈನ್ ಆಪ್ ಮಾಡಲಾಗಿತ್ತು. ಆದರೆ ಈ ವಿಚಾರದಲ್ಲಿ ಸಂಸದ ಪ್ರತಾಪ್ ಸಿಂಹ ಹಾಗೂ ಮಾಜಿ ಶಾಸಕ ಪ್ರೀತಮ್ ಗೌಡ ನಡುವೆ ವಾಗ್ವಾದ ನಡೆದಿದೆ. ಈ ವಾಗ್ವಾದವು ಬಿಜೆಪಿ ನಾಯಕರು ಮಧ್ಯಪ್ರವೇಶಿಸುವಂತೆ ಮಾಡಿದೆ.

ಅಮಿತ್ ಶಾ ಸ್ವಾಗತಕ್ಕೆ ಕ್ಲಸ್ಟರ್ ನಾಯಕರ ಲೈನ್ ಆಪ್ ವಿಚಾರ: ಪ್ರತಾಪ್ ಸಿಂಹ-ಪ್ರೀತಮ್ ಗೌಡ ನಡುವೆ ವಾಕ್ಸಮರ
ಅಮಿತ್ ಶಾ ಸ್ವಾಗತ ವಿಚಾರದಲ್ಲಿ ಪ್ರತಾಪ್ ಸಿಂಹ-ಪ್ರೀತಮ್ ಗೌಡ ನಡುವೆ ವಾಕ್ಸಮರ
Follow us
ರಾಮ್​, ಮೈಸೂರು
| Updated By: Rakesh Nayak Manchi

Updated on: Feb 11, 2024 | 10:23 AM

ಮೈಸೂರು, ಫೆ.11: ಬಿಜೆಪಿ ಚಾಣಕ್ಯ ಎಂದೇ ಹೆಸರಾಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಲೋಕಸಭಾ ಚುನಾವಣೆಯನ್ನು (Lok Sabha Elections) ಮುಂದಿಟ್ಟುಕೊಂಡು ಮೈಸೂರಿಗೆ ಆಗಮಿಸಿದ್ದಾರೆ. ಇವರನ್ನು ಸ್ವಾಗತಿಸಲು ವಿಮಾನ ನಿಲ್ದಾಣದಲ್ಲಿ ಕ್ಲಸ್ಟರ್ ನಾಯಕರ ಲೈನ್​ಅಪ್ ಮಾಡಲಾಗಿತ್ತು. ಈ ವಿಚಾರದಲ್ಲಿ ಸಂಸದ ಪ್ರತಾಪ್ ಸಿಂಹ (Pratap Simha) ಹಾಗೂ ಮಾಜಿ ಶಾಸಕ ಪ್ರೀತಮ್ ಗೌಡ (Preetham Gowda) ವಿಚಾರವಾಗಿ ವಾಗ್ವಾದ ನಡೆದಿದೆ.

ಅಮಿತ್ ಶಾ ಸ್ವಾಗತಕ್ಕೆ ಕ್ಲಸ್ಟರ್ ನಾಯಕರ ಲೈನ್ ಆಪ್ ಉಸ್ತುವಾರಿಯನ್ನು ಮಾಜಿ ಶಾಸಕ ಪ್ರೀತಮ್ ಗೌಡ ಹೊತ್ತುಕೊಂಡಿದ್ದರು. ಆದರೆ, ಪ್ರತಾಪ್ ಸಿಂಹ ಮತ್ತಿತರರನ್ನು ಕಡೆಗಣಿಸಲಾಗಿದೆ. ತಮ್ಮನ್ನು ಸೇರಿದಂತೆ ಮೈಸೂರು ಕ್ಲಸ್ಟರ್​ನ ಪ್ರಮುಖ ನಾಯಕರನ್ನು ಪಟ್ಟಿಗೆ ಸೇರಿಸಿಕೊಳ್ಳುವ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದ ಹಿನ್ನೆಲೆ ಪ್ರತಾಪ್ ಸಿಂಹ ಅವರು ಪ್ರೀತಮ್ ಗೌಡ ಅವರನ್ನು ನೇರವಾಗಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಬರದಿಂದ ನಲುಗುತ್ತಿರುವ ನಾಡಿಗೆ ಬರಿಗೈಯಲ್ಲಿ ಬಂದಿರಾ?: ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಪೋಸ್ಟರ್ ಅಭಿಯಾನ

ಪ್ರತಾಪಸಿಂಹ ಪ್ರಶ್ನೆಗೆ ತಾನು ಮಾಡಿದ್ದೇ ಸರಿ ಅನ್ನೋ ರೀತಿಯಲ್ಲಿ ಪ್ರೀತಮ್ ಗೌಡ ಅವರು ಉತ್ತರ ಕೊಟ್ಟಿದ್ದಾರೆ. ಈ ವೇಳೆ ಪ್ರತಾಪ್ ಸಿಂಹ ಹಾಗೂ ಪ್ರೀತಂ ಗೌಡ ನಡುವೆ ಮಾತಿನ ಚಕಮಕಿ ನಡೆದಿದೆ. ಕೂಡಲೇ ಮಧ್ಯಪ್ರವೇಶಿಸಿದ ಬಿಜೆಪಿ ನಾಯಕರು ಇಬ್ಬರು ನಾಯಕರನ್ನು ಸಮಾಧಾನ ಮಾಡಿದ್ದಾರೆ.

ಅಮಿತ್ ಶಾ ಕಾರ್ಯಕ್ರಮದಲ್ಲಿ ಬದಲಾವಣೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಲಾಗಿದೆ. ಈ ಹಿಂದಿನ ವೇಳಾಪಟ್ಟಿಯಂತೆ ಅಮಿತ್ ಶಾ ಅವರು ಬೆಳಗ್ಗೆ 11 ಗಂಟೆ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ನೆರವೇರಿಸಲಿದ್ದರು. ಬಳಿಕ ಸುತ್ತೂರು ಮಠಕ್ಕೆ ಭೇಟಿ ನೀಡಲಿದ್ದರು. ಬದಲಾದ ವೇಳಾಪಟ್ಟಿಯಂತೆ, ಅಮಿತ್ ಶಾ ಅವರು ಮಧ್ಯಾಹ್ನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ. ಇದಕ್ಕೂ ಮುನ್ನ ಸುತ್ತೂರು ಮಠಕ್ಕೆ ಭೇಟಿ ನೀಡಲಿದ್ದಾರೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜಮೀರ್ ಜೊತೆ ಸಿಎಂ ಸಹ ನೈತಿಕ ಹೊಣೆಹೊತ್ತು ರಾಜೀನಾಮೆ ಸಲ್ಲಿಸಲಿ: ಅಶೋಕ
ಜಮೀರ್ ಜೊತೆ ಸಿಎಂ ಸಹ ನೈತಿಕ ಹೊಣೆಹೊತ್ತು ರಾಜೀನಾಮೆ ಸಲ್ಲಿಸಲಿ: ಅಶೋಕ
ಮೈ ಕೈ ಮುಟ್ಟಿ ಎಳೆದಾಡಿದ ಗಾಂಜಾ ಗ್ಯಾಂಗ್​, ಭಯಾನಕ ಸಂಗತಿ ಬಿಚ್ಚಿಟ್ಟ ಯುವತಿ
ಮೈ ಕೈ ಮುಟ್ಟಿ ಎಳೆದಾಡಿದ ಗಾಂಜಾ ಗ್ಯಾಂಗ್​, ಭಯಾನಕ ಸಂಗತಿ ಬಿಚ್ಚಿಟ್ಟ ಯುವತಿ
ಹಾಸನದಲ್ಲಿ 2 ವರ್ಷದಲ್ಲಿ 507 ಜನರಿಗೆ ಹೃದಯಾಘಾತ: ಕಾರಣ ಬಿಚ್ಚಿಟ್ಟ DHO
ಹಾಸನದಲ್ಲಿ 2 ವರ್ಷದಲ್ಲಿ 507 ಜನರಿಗೆ ಹೃದಯಾಘಾತ: ಕಾರಣ ಬಿಚ್ಚಿಟ್ಟ DHO
ಕಾಂಗ್ರೆಸ್ ಏನು ಮಾಡಿದೆ ಅಂತ ತೋರಿಸ್ತೇವೆ, ಕುಮಾರಸ್ವಾಮಿ ಬರಲಿ: ರವಿ ಗಣಿಗ
ಕಾಂಗ್ರೆಸ್ ಏನು ಮಾಡಿದೆ ಅಂತ ತೋರಿಸ್ತೇವೆ, ಕುಮಾರಸ್ವಾಮಿ ಬರಲಿ: ರವಿ ಗಣಿಗ
ಸಚಿವ ಕೃಷ್ಣಭೈರೇಗೌಡ ಸಭೆಯಲ್ಲಿ ರೀಲ್ಸ್ ನೋಡುತ್ತಾ ಕುಳಿತ ಅಧಿಕಾರಿಗಳು
ಸಚಿವ ಕೃಷ್ಣಭೈರೇಗೌಡ ಸಭೆಯಲ್ಲಿ ರೀಲ್ಸ್ ನೋಡುತ್ತಾ ಕುಳಿತ ಅಧಿಕಾರಿಗಳು
ಚಿಕ್ಕಮಗಳೂರಿನಲ್ಲಿ ಪ್ರವಾಸಿಗರ ಹುಚ್ಚಾಟ: ಸೀತಾಳಯ್ಯನಗಿರಿಯಲ್ಲಿ ಹೊಡೆದಾಟ
ಚಿಕ್ಕಮಗಳೂರಿನಲ್ಲಿ ಪ್ರವಾಸಿಗರ ಹುಚ್ಚಾಟ: ಸೀತಾಳಯ್ಯನಗಿರಿಯಲ್ಲಿ ಹೊಡೆದಾಟ
ಗೋಕರ್ಣದಲ್ಲಿ ಮತಾಂತರ ಶಂಕೆ: ಬಡವರು, ರೋಗ ಪಿಡಿತರೇ ಟಾರ್ಗೆಟ್!
ಗೋಕರ್ಣದಲ್ಲಿ ಮತಾಂತರ ಶಂಕೆ: ಬಡವರು, ರೋಗ ಪಿಡಿತರೇ ಟಾರ್ಗೆಟ್!
ಬಿಜೆಪಿ ಮತ್ತು ನಾನು ಪರಸ್ಪರ ಅವಲಂಬಿತರಾಗಿದ್ದೇವೆ: ಬಸನಗೌಡ ಯತ್ನಾಳ್
ಬಿಜೆಪಿ ಮತ್ತು ನಾನು ಪರಸ್ಪರ ಅವಲಂಬಿತರಾಗಿದ್ದೇವೆ: ಬಸನಗೌಡ ಯತ್ನಾಳ್
ರಾಷ್ಟ್ರಪತಿ ಭೇಟಿಗೆ ತೆರಳುವೆ, ಮೋದಿ ಭೇಟಿಗೂ ಸಮಯ ಕೇಳಿದ್ದೇನೆ: ಸಿಎಂ
ರಾಷ್ಟ್ರಪತಿ ಭೇಟಿಗೆ ತೆರಳುವೆ, ಮೋದಿ ಭೇಟಿಗೂ ಸಮಯ ಕೇಳಿದ್ದೇನೆ: ಸಿಎಂ
ರಾಜ್ಯ ರಾಜ್ಯಕಾರಣದಲ್ಲಿ ಯಡಿಯೂರಪ್ಪ ಸಕ್ರಿಯರಾಗುವ ಹಿಂದೆ ಕಾರಣವಿದೆಯೇ?
ರಾಜ್ಯ ರಾಜ್ಯಕಾರಣದಲ್ಲಿ ಯಡಿಯೂರಪ್ಪ ಸಕ್ರಿಯರಾಗುವ ಹಿಂದೆ ಕಾರಣವಿದೆಯೇ?