ಕರ್ನಾಟಕ ರಾಜ್ಯೋತ್ಸವ 2021: ಕನ್ನಡನಾಡಿನ ಭಾಗವಾಗಿರುವ ಬೆಳಗಾವಿಯನ್ನು ಮಹಾರಾಷ್ಟ್ರ ತನ್ನದೆನ್ನುವುದು ಉದ್ಧಟನತದ ಪರಮಾವಧಿ!

Karnataka Rajyotsava 2021: 1881ರಲ್ಲಿ ನಡೆದ ಜನಗಣತಿಯ ಪ್ರಕಾರ ಆಗಿನ ಬೆಳಗಾಮ್ ನಲ್ಲಿ ಶೇಕಡಾ 64ಕ್ಕಿಂತ ಹೆಚ್ಚು ಜನ ಕನ್ನಡ ಮಾತಾಡುವವರಿದ್ದರೆ ಕೇವಲ ಶೇ. 26ರಷ್ಟು ಜನ ಮರಾಠಿ ಮಾತಾಡುವ ಜನ ಇದ್ದರು.

ಕರ್ನಾಟಕ ರಾಜ್ಯೋತ್ಸವ 2021: ಕನ್ನಡನಾಡಿನ ಭಾಗವಾಗಿರುವ ಬೆಳಗಾವಿಯನ್ನು ಮಹಾರಾಷ್ಟ್ರ ತನ್ನದೆನ್ನುವುದು ಉದ್ಧಟನತದ ಪರಮಾವಧಿ!
ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ
Follow us
TV9 Web
| Updated By: Digi Tech Desk

Updated on:Nov 01, 2021 | 9:35 AM

ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅವರ ಆಕಸ್ಮಿಕ ಮತ್ತು ಅಕಾಲಿಕ ಮರಣದಿಂದ ಈ ಬಾರಿಯ ಕನ್ನಡ ರಾಜ್ಯೋತ್ಸವ ನಿಸ್ಸಂದೇಹವಾಗಿ ಮಂಕಾಗಿದೆ. ಇಡೀ ಕನ್ನಡನಾಡು ಶೋಕ ಸಾಗರದಲ್ಲಿ ಮುಳುಗಿದೆ. ಯಾರಲ್ಲೂ ಉತ್ಸವ ಆಚರಿಸುವ ಮನಸ್ಸಾಗಲೀ ಲವಲವಿಕೆಯಾಗಲೀ ಇಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅವರ ಸಂಪುಟದ ಎಲ್ಲ ಸದಸ್ಯರು ರವಿವಾರ ಮುಂಜಾನೆ ಪುನೀತ್ ಅಂತಿಮ ಸಂಸ್ಕಾರ ನಡೆದ ಕಂಠೀರವ ಸ್ಟುಡಿಯೋನಲ್ಲಿದ್ದರು. ಬೊಮ್ಮಾಯಿ ಅವರಂತೂ ಶುಕ್ರವಾರ ಮಧ್ಯಾಹ್ನದಿಂದ ದೊಡ್ಮನೆ ಕುಟುಂಬದೊಂದಿಗಿದ್ದರು. ಈ ಹಿನ್ನೆಲೆಯಲ್ಲಿ ಕನ್ನಡ ರಾಜ್ಯೋತ್ಸವ ಈ ಸಲ ಒಂದು ಲೋ-ಕೀ ಅಫೇರ್ ಆಗಲಿದೆ.

ಅಪ್ಪು ಸಾವಿಗೆ ಮುಂಚೆ, ಕನ್ನಡನಾಡಿನ ಅವಿಭಾಜ್ಯ ಭಾಗವಾಗಿರುವ ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಸದಸ್ಯರು ಕನ್ನಡಿಗರ ಗಮನಕ್ಕೆ ಬಾರದ ಹಾಗೆ ಸಾಮಾಜಿಕ ಜಾಲತಾಣದ ಮೂಲಕ ಒಂದು ಚಟುವಟಿಕೆಯಲ್ಲಿ ಭಾಗಿಯಾಗಿದ್ದರು. ಬೆಳಗಾವಿಯಲ್ಲಿ ಕನ್ನಡಿಗರು ರಾಜ್ಯೋತ್ಸವ ಆಚರಿಸಿದರೆ ನಾವು ಕರಾಳ ದಿನ ಆಚರಿಸಬೇಕು ಮತ್ತು ಕನ್ನಡಿಗರು ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ ಅಡ್ಡಿಯನ್ನುಂಟು ಮಾಡಬೇಕು ಅಂತ ಅವರು ತಮ್ಮತಮ್ಮೊಳಗೆ ಸಂದೇಶಗಳನ್ನು ರವಾನಿಸಿಕೊಳ್ಳುತ್ತಿದ್ದರು.

ಹಾಗೆ ನೋಡಿದರೆ, ಇದು ಹೊಸ ವಿಷಯವೇನೂ ಅಲ್ಲ, ಪ್ರತಿ ರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಎಮ್ ಈ ಎಸ್ ಸದಸ್ಯರು ಪುಂಡಾಟಗಳನ್ನು ನಡೆಸುತ್ತಾರೆ ಮತ್ತು ಕನ್ನಡಿಗರಿಂದ ಉಗಿಸಿಕೊಂಡ ನಂತರ ಸುಮ್ಮನಾಗುತ್ತಾರೆ. ಈ ಬಾರಿಯೂ ಇದೇ ಆಗಲಿರುವುದರಿಂದ ಯಾರೂ ಚಿಂತಿಸುವ ಆಗತ್ಯವಿಲ್ಲ. ಕನ್ನಡಪರ ಸಂಘಟನೆಗಳು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿವೆ.

ಈ ಬೆಳವಣಿಗೆಯು ಗಡಿ ಜಿಲ್ಲೆ ಬೆಳಗಾವಿಗೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ದಶಕಗಳಿಂದ ಜಾರಿಯಲ್ಲಿರುವ ವ್ಯಾಜ್ಯದ ಮೇಲೆ ಬೆಳಕು ಚೆಲ್ಲುವ ಅವಕಾಶವನ್ನು ಕಲ್ಪಿಸಿದೆ. ಬೆಳಗಾವಿಯು ಆರಂಭದಿಂದಲೂ ಕರ್ನಾಟಕದ ಭಾಗವಾಗಿದ್ದರೂ ಅದು ನನಗೆ ಸೇರಿದ್ದು ಅಂತ ಮಹಾರಾಷ್ಟ್ರ ವಾದಿಸುತ್ತಾ, ಕ್ಯಾತೆ ತೆಗೆಯುತ್ತಾ ಬಂದಿದೆ.

ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಮರಾಠಿ ಮಾತಾಡುವ ಜನ ಬಹುಸಂಖ್ಯೆಯಲ್ಲಿರುವ ಕರ್ನಾಟಕದ ಭಾಗಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಲು ತಮ್ಮ ಸರ್ಕಾರ ಬದ್ಧವಾಗಿದೆ ಮತ್ತು ಹಾಗೆ ಮಾಡಿದರೆ, ಬೆಳಗಾಮ್ (ಮರಾಠಿ ಜನ ಬೆಳಗಾವಿಯನ್ನು ಹಾಗೇಯೇ ಕರೆಯೋದು) ಮತ್ತು ಇತರ ಪ್ರದೇಶಗಳನ್ನು ಕರ್ನಾಟಕದಿಂದ ಬೇರ್ಪಡಿಸುವ ಹೋರಾಟದಲ್ಲಿ ಹುತಾತ್ಮರಾದವರಿಗೆ ಸಮರ್ಪಕ ಶ್ರದ್ಧಾಂಜಲಿ ಅರ್ಪಿಸಿದಂತಾಗುತ್ತದೆ ಅಂತ ಇತ್ತೀಚಿಗೆ ಹೇಳಿದ್ದರು.

ಮಹಾರಾಷ್ಟ್ರದಲ್ಲಿ ತನ್ನ ಸ್ವಂತ ಬಲದಲ್ಲಿ ಅಧಿಕಾರ ಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಶಿವ ಸೇನಾ, ಬೆಳಗಾವಿ ಗಡಿ ವಿವಾದ ಆಗಾಗ ಪ್ರಸ್ತಾಪಿಸಿ ತನಗೆ ಆ ಪ್ರದೇಶದ ಬಗ್ಗೆ ಬೇರೆ ಪಕ್ಷಗಳಿಗಿಂತ ಹೆಚ್ಚಿನ ಕಕ್ಕುಲತೆ, ಆಸ್ಥೆ ಮತ್ತು ನಿಷ್ಠೆ ಇದೆ ಅಂತ ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತದೆ. ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಸಹ ವಿಷಯವನ್ನು ಕೆದಕುತ್ತಿರುತ್ತಾರೆ. ಬೆಳಗಾವಿ, ಕಾರವಾರ ಮತ್ತು ನಿಪ್ಪಾಣಿ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕೆನ್ನುವ ಕನಸು ಶಿವ ಸೇನೆಯ ಸಂಸ್ಥಾಪಕ ಬಾಳಾಸಾಹೇಬ ಠಾಕ್ರೆ ಅವರಿಗಿತ್ತು ಅಂತ ಪವಾರ್ ಎರಡು ವರ್ಷಗಳ ಹಿಂದೆ ಹೇಳಿದ್ದರು.

ಪವಾರ್ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕಿಯಿಸಿದ್ದ ಕರ್ನಾಟಕದ ಆಗಿನ ಮುಖ್ಯಮಂತ್ರಿ, ಲಕ್ಷ್ಮಣ ಸವದಿ ಅವರು, ಮುಂಬೈ ಕರ್ನಾಟಕದ ಭಾಗವಾಗಿದೆ ಮತ್ತು ಅದು ಇತ್ಯರ್ಥಗೊಳ್ಳುವವರೆಗೆ ಕೇಂದ್ರ ಸರ್ಕಾರ ಅದನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಬೇಕು, ಎಂದು ಹೇಳಿದ್ದರು.

ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬರುವ ಪಕ್ಷಗಳಿಗೆ ಬೆಳಗಾವಿಯನ್ನು ತಮ್ಮ ರಾಜ್ಯಕ್ಕೆ ಸೇರಿಸಬೇಕೆಂದು ಹೇಳುವುದು ಅಭ್ಯಾಸವಾಗಿಬಿಟ್ಟಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣವೊಂದು ಸರ್ವೋಚ್ಛ ನ್ಯಾಯಾಲಯದಲ್ಲಿದೆ.

ಕರ್ನಾಟಕ-ಮಹಾರಾಷ್ಟ್ರ ಗಡಿವಿವಾದ ಇತಿಹಾಸವನ್ನು ಸಹ ಈ ಸಂದರ್ಭದಲ್ಲಿ ಮೆಲಕು ಹಾಕುವುದು ಪ್ರಸ್ತುತವೆನಿಸುತ್ತದೆ. ಅಸಲಿಗೆ ಬೆಳಗಾವಿ ಹಿಂದೆ ಬಾಂಬೆ ಪ್ರಾಂತ್ಯದ ಭಾಗವಾಗಿತ್ತು. ಧಾರವಾಡ, ಮತ್ತು ಉತ್ತರ-ಕನ್ನಡ ಜಿಲ್ಲೆಗಳು ಸಹ ಬಾಂಬೆ ಪ್ರಾಂತ್ಯಕ್ಕೆ ಸೇರಿದ್ದವು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಬೆಳಗಾವಿ ಬಾಂಬೆ ರಾಜ್ಯಕ್ಕೆ ಸೇರಿತು. ಆದರೆ, 1881ರಲ್ಲಿ ನಡೆದ ಜನಗಣತಿಯ ಪ್ರಕಾರ ಆಗಿನ ಬೆಳಗಾಮ್ ನಲ್ಲಿ ಶೇಕಡಾ 64ಕ್ಕಿಂತ ಹೆಚ್ಚು ಜನ ಕನ್ನಡ ಮಾತಾಡುವವರಿದ್ದರೆ ಕೇವಲ ಶೇ. 26ರಷ್ಟು ಜನ ಮರಾಠಿ ಮಾತಾಡುವ ಜನ ಇದ್ದರು.

1940 ರ ದಶಕದಲ್ಲಿ ಆಗಿನ ಬಾಂಬೆ ಪ್ರಾಂತ್ಯದಲ್ಲಿ ಮರಾಠಿ ಮಾತಾಡುವ ಜನರೇ ಪ್ರಮುಖ ರಾಜಕೀಯ ಧುರೀಣರೆಸಿಸಿಕೊಂಡಿದ್ದರಿಂದ ಅದನ್ನು ಸಂಯುಕ್ತ ಮಹಾರಾಷ್ಟ್ರ ರಾಜ್ಯದಲ್ಲಿ ಸೇರಿಸಬೇಕೆಂದು ಒತ್ತಡ ಹೇರಿದರು.

ಅವರ ಒತ್ತಡ ಹೊರತಾಗಿಯೂ ಭಾಷಾವಾರು ಪ್ರಾಂತ್ಯಗಳ ಕಾಯಿದೆ 1956 ರ ಅನ್ವಯ ಬೆಳಗಾಮ್ ಮತ್ತು ಬಾಂಬೆ ರಾಜ್ಯದ 10 ತಾಲ್ಲೂಕುಗಳನ್ನು ಆಗಿನ ಮೈಸೂರ್ ರಾಜ್ಯಕ್ಕೆ ಸೇರಿಸಲಾಯಿತು. 1973ರಲ್ಲಿ ಮೈಸೂರ್​​ಗೆ ಕರ್ನಾಟಕ ಎಂದು ಪುನರ್ ನಾಮಕರಣ ಮಾಡಲಾಯಿತು. ಜನರು ಮಾತಾಡುವ ಭಾಷೆ ಆಧಾರದ ಮೇಲೆ ರಾಜ್ಯಗಳನ್ನು ರಚಿಸಲಾಗಿತ್ತು.

ಸದರಿ ಹಂಚಿಕೆಯನ್ನು ಮಹಾರಾಷ್ಟ್ರ ಬಲವಾಗಿ ವಿರೋಧಿಸಿತ್ತು ಮತ್ತು ಆಕ್ಷೇಪಣೆಯನ್ನೂ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಆಗಿನ ಕೇಂದ್ರ ಸರ್ಕಾರ 1966ರಲ್ಲಿ ನಿವೃತ್ತ ಮುಖ್ಯ ನ್ಯಾಯಾಧೀಶ ಮೆಹರ್ ಚಂದ್ ಮಹಾಜನ್ ನೇತೃತ್ವದಲ್ಲಿ ಒಂದು ಆಯೋಗವನ್ನು ರಚಿಸಿ ಪ್ರಕರಣವನ್ನು ಆದಕ್ಕೆ ಒಪ್ಪಿಸಿತು. ಇದನ್ನೇ ನಾವೆಲ್ಲ ಮಹಾಜನ್ ಆಯೋಗ ಅಂತ ಹೇಳೋದು.

ಮರುವರ್ಷವೇ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ ಆಯೋಗವು ವಿವಾದಿತ ಪ್ರದೇಶದ 264 ಗ್ರಾಮಗಳನ್ನು ಮಹಾರಾಷ್ಟ್ರಗೆ ಮತ್ತು 247 ಅನ್ನು ಕರ್ನಾಟಕಕ್ಕೆ ನೀಡಿತು.

ಅಲ್ಲಿಂದೀಚೆಗೆ ಮಹಾರಾಷ್ಟ್ರ ಬೆಳಗಾವಿ ತನ್ನದೆಂದು ಕ್ಯಾತೆ ತೆಗೆಯುತ್ತಲೇ ಇದೆ. ತೀರ ಇತ್ತೀಚಿಗೆ ಅಂದರೆ 2006ರಲ್ಲಿ ಬೆಳಗಾವಿ ನಗರ ತನಗೆ ಸೇರಬೇಕೆಂದು ಮಹಾರಾಷ್ಟ್ರ ಸರ್ಕಾರ ಸುಪ್ರೀಮ್ ಕೋರ್ಟ್ ನಲ್ಲಿ ದಾವೆಯೊಂದನ್ನು ಹೂಡಿದೆ. ಕನ್ನಡಿಗರ ನಡುವೆ ಮಾರಾಠಿ ಮಾತಾಡುವ ಜನರಿಗೆ ಇತ್ತೀಚಿಗೆ ಅಭದ್ರತೆ ಕಾಡುತ್ತಿದೆ ಎಂದು ಮಹಾರಾಷ್ಟ್ರ ಸರ್ಕಾರ ತನ್ನ ದಾವೆಯಲ್ಲಿ ಉಲ್ಲೇಖಿಸಿದೆ.

ಆದರೆ, ಬೆಳಗಾವಿ ಹಿಂದೆಯೂ ಕರ್ನಾಟಕದ ಭಾಗವಾಗಿತ್ತು, ಈಗಲೂ ಆಗಿದೆ ಮತ್ತು ಮುಂಬರುವ ದಿನಗಳಲ್ಲೂ ಅದರ ಭಾಗವಾಗಿಯೇ ಉಳಿಯಲಿರುವುದು ನಿಶ್ಚಿತ.

ಇದನ್ನೂ ಓದಿ:   ಕನ್ನಡ ರಾಜ್ಯೋತ್ಸವಕ್ಕೆ ಕೊಡುಗೆ! ನವೆಂಬರ್‌ನಿಂದ ಬದಲಾಗಲಿದೆ ಸರ್ಕಾರದ ಆಡಳಿತ ವೈಖರಿ, ಆಡಳಿತದ ವೆಚ್ಚ ಕಡಿತಗೊಳಿಸಲು ಹೊಸ ಕ್ರಮ

Published On - 9:26 am, Mon, 1 November 21

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ