ಸೋಂಕಿತ ತಾಯಂದಿರ ಎದೆಹಾಲು ನವಜಾತ ಶಿಶುಗಳಿಗೆ ಸೋಂಕನ್ನು ವರ್ಗಾಯಿಸುವುದಿಲ್ಲ: ಅಧ್ಯಯನ
ಜರ್ನಲ್ ಆಫ್ ಅಮೇರಿಕನ್ ಮೆಡಿಕಲ್ ಅಸೋಸಿಯೇಶನ್ನ (JAMA) ಆನ್ಲೈನ್ ಆವೃತ್ತಿಯಲ್ಲಿ ಪ್ರಕಟಗೊಂಡಿರುವ ವರದಿಯೊಂದರ ಪ್ರಕಾರ ಕೊವಿಡ್-19 ಸೋಂಕಿತ ತಾಯಂದಿರ ಎದೆಹಾಲು ನವಜಾತ ಶಿಶುಗಳಿಗೆ ವೈರಸನ್ನು ವರ್ಗಾಯಿಸುವುದಿಲ್ಲ. ಕ್ಯಾಲಿಪೋರ್ನಿಯ ವಿಶ್ವವಿದ್ಯಾಲಯ, ಸ್ಯಾನ್ ಡೀಗೊ ಸ್ಕೂಲ್ ಆಫ್ ಮೆಡಿಸಿನ್, ಲಾಸ್ ಏಂಜೆಲ್ಸ್ನಲ್ಲಿರುವ ಯುನಿವರ್ಸಿಟಿ ಆಫ್ ಕ್ಯಾಲಿಪೋರ್ನಿಯಾದ ಸಂಶೋಧಕರು, ಅಧ್ಯಯನವೊಂದನ್ನು ನಡೆಸಿ ಈ ಅಂಶವನ್ನು ಕಂಡುಕೊಡಿದ್ದು ಅವರು ನೀಡಿದ ವರದಿಯನ್ನು ಪತ್ರಿಕೆ ಪ್ರಕಟಿಸಿದೆ. ಅಧ್ಯಯನಕ್ಕಾಗಿ ಅವರು ಅಮೆರಿಕಾದಲ್ಲಿ ಕೊವಿಡ್-19 ಸೋಂಕಿತ ಮತ್ತು ಆಗಷ್ಟೇ ತಾಯಿಯಾಗಿದ್ದ 18 ಮಹಿಳೆಯರ ಎದೆಹಾಲನ್ನು ಸಂಗ್ರಹಿದ್ದರು. ಸಂಶೋಧಕರ ಪ್ರಕಾರ, […]
ಜರ್ನಲ್ ಆಫ್ ಅಮೇರಿಕನ್ ಮೆಡಿಕಲ್ ಅಸೋಸಿಯೇಶನ್ನ (JAMA) ಆನ್ಲೈನ್ ಆವೃತ್ತಿಯಲ್ಲಿ ಪ್ರಕಟಗೊಂಡಿರುವ ವರದಿಯೊಂದರ ಪ್ರಕಾರ ಕೊವಿಡ್-19 ಸೋಂಕಿತ ತಾಯಂದಿರ ಎದೆಹಾಲು ನವಜಾತ ಶಿಶುಗಳಿಗೆ ವೈರಸನ್ನು ವರ್ಗಾಯಿಸುವುದಿಲ್ಲ.
ಕ್ಯಾಲಿಪೋರ್ನಿಯ ವಿಶ್ವವಿದ್ಯಾಲಯ, ಸ್ಯಾನ್ ಡೀಗೊ ಸ್ಕೂಲ್ ಆಫ್ ಮೆಡಿಸಿನ್, ಲಾಸ್ ಏಂಜೆಲ್ಸ್ನಲ್ಲಿರುವ ಯುನಿವರ್ಸಿಟಿ ಆಫ್ ಕ್ಯಾಲಿಪೋರ್ನಿಯಾದ ಸಂಶೋಧಕರು, ಅಧ್ಯಯನವೊಂದನ್ನು ನಡೆಸಿ ಈ ಅಂಶವನ್ನು ಕಂಡುಕೊಡಿದ್ದು ಅವರು ನೀಡಿದ ವರದಿಯನ್ನು ಪತ್ರಿಕೆ ಪ್ರಕಟಿಸಿದೆ. ಅಧ್ಯಯನಕ್ಕಾಗಿ ಅವರು ಅಮೆರಿಕಾದಲ್ಲಿ ಕೊವಿಡ್-19 ಸೋಂಕಿತ ಮತ್ತು ಆಗಷ್ಟೇ ತಾಯಿಯಾಗಿದ್ದ 18 ಮಹಿಳೆಯರ ಎದೆಹಾಲನ್ನು ಸಂಗ್ರಹಿದ್ದರು.
ಸಂಶೋಧಕರ ಪ್ರಕಾರ, ಕೊರೊನಾ ವೈರಸ್ ಎದೆಹಾಲಿನಲ್ಲಿ ದ್ವಿಗುಣಗೊಳ್ಳುವುದಿಲ್ಲ, ಹೀಗಾಗಿ ತಾಯಿಯ ಸೋಂಕು ಶಿಶುವಿಗೆ ವರ್ಗಾಂತರಗೊಳ್ಳುವುದಿಲ್ಲ.
ಸಂಶೋಧನೆಯಲ್ಲಿ ಪಾಲ್ಗೊಂಡವರ ಪೈಕಿ ಒಬ್ಬರಾಗಿರುವ ಸ್ಯಾನ್ ಡೀಗೊ ಸ್ಕೂಲ್ ಆಫ್ ಮೆಡಿಸಿನ್ ಮಕ್ಕಳರೋಗ ವಿಭಾಗದ ಪ್ರೊಫೆಸರ್, ಕ್ರಿಸ್ಟಿನಾ ಚೇಂಬರ್ಸ್, ‘‘ಅರ್ ಎನ್ ಎ ನಲ್ಲಿ ಪತ್ತೆಯಾಗುವ ರೋಗಾಣುವನ್ನು ಸೋಂಕು ಎಂದು ಪರಿಗಣಿಸಲಾಗುವುದಿಲ್ಲ. ಸೋಂಕು ತಗುಲಬೇಕಾದರೆ ವೈರಸ್ ಬೆಳವಣಿಗೆ ಹೊಂದಿ ಶೀಘ್ರವಾಗಿ ದ್ವಿಗುಣಗೊಳ್ಳಬೇಕು, ನಮಲ್ಲಿದ್ದ ನಮೂನೆಗಳಲ್ಲಿ (ಸ್ಯಾಂಪಲ್) ನಾವು ಅಂಥದನ್ನು ಕಾಣಲಿಲ್ಲ,’’ ಎಂದಿದ್ದಾರೆ.
‘‘ಈ ಸಂಶೋಧನೆಯಲ್ಲಿ ನಾವು ಪತ್ತೆಹಚ್ಚಿರುವ ಅಂಶವೇನೆಂದರೆ, ಎದೆಹಾಲು ಸೋಂಕಿನ ಮೂಲವಾಗಿರಬಹುದಾದ ಸಾಧ್ಯತೆ ಇಲ್ಲ,’’ ಎನ್ನುತ್ತಾರೆ ಕ್ರಿಸ್ಟಿನಾ.
ಶಿಶುವಿಗೆ ಸೋಂಕು ತಗುಲಬಾರದೆಂದರೆ, ತಾಯಂದಿರು ತಮ್ಮ ಸ್ವಚ್ಛತೆ ಬಗ್ಗೆ ಜಾಸ್ತಿ ಗಮನಹರಿಸಬೇಕು, ಸ್ತನಗಳಲ್ಲಿ ಹಾಲು ತುಂಬಿಕೊಳ್ಳಲು ಪಂಪ್ ಮಾಡುವ ಉಪಕರಣವನ್ನು ಉಪಯೋಗಿಸುತ್ತಿದ್ದರೆ ಅದನ್ನು ಪ್ರತಿಬಾರಿ ಸ್ಟರ್ಲೈಸ್ ಮಾಡಿಯೇ ಉಪಯೋಗಿಸಬೇಕು, ಎಂದು ಕ್ರಿಸ್ಟಿನಾ ಸಲಹೆ ನೀಡುತ್ತಾರೆ.
ಕೊವಿಡ್-19 ಸೋಂಕಿತ ತಾಯಂದಿರು ಎದೆ ಹಾಲುಣಿಸುವ ಬಗ್ಗೆ ಹೆಚ್ಚು ಮಾಹಿತಿ ಲಭ್ಯವಿಲ್ಲದ ಕಾರಣ ಅವರು ಮಕ್ಕಳಿಂದ ದೂರವಿರುತ್ತಾರೆ ಹಾಗೂ ಹಾಲುಣಿಸುವ ಯೋಚನೆಯನ್ನು ಸಹ ಮಾಡುವುದಿಲ್ಲ. ಎಂದು ಅಧ್ಯಯನದಲ್ಲಿ ಭಾಗಿಯಾಗಿರುವ ಇನ್ನೊಬ್ಬ ಸಂಶೋಧಕ, ಲಾಸ್ ಏಂಜೆಲ್ಸ್ ಗೆಫಿನ್ ಸ್ಕೂಲ್ ಆಫ್ ಮೆಡಿಸಿನ್ಮಕ್ಕಳರೋಗ ವಿಭಾಗದಲ್ಲಿ ಪ್ರೊಫೆಸರ್ ಆಗಿರುವ ಗ್ರೇಸ್ ಅಲ್ಡ್ರೊವಂಡಿ ಹೇಳುತ್ತಾರೆ.
‘‘ನಮ್ಮ ಈ ಸಂಶೋಧನೆ ಮತ್ತು ಮುಂದಿನ ಅಧ್ಯಯನ ತಾಯಂದಿರಿಗೆ ಎದೆಹಾಲುಣಿಸಲು ಪ್ರೇರೇಪಿಸುತ್ತದೆ ಹಾಗೂ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆಂಬ ಭರವಸೆ ನಮಗಿದೆ. ಎದೆಹಾಲು ತಾಯಂದಿರಿಗೆ ಮತ್ತು ನವಜಾತ ಶಿಶುಗಳಿಗೆ ಅತ್ಯಮೂಲ್ಯ ಪ್ರಯೋಜನಗಳನ್ನು ಒದಗಿಸುತ್ತದೆ,’’ ಎನ್ನುತ್ತಾರೆ ಗ್ರೇಸ್ ಅಲ್ಡ್ರೊವಂಡಿ.
Published On - 3:38 pm, Sat, 22 August 20