ನೀವು ಹೆಚ್ಚು ಕಾಲ ಬದುಕಬೇಕಾ? ಹಾಗಾದ್ರೆ ಈ ಸರಳ ಉಪಾಯಗಳನ್ನ ಅನುಸರಿಸಿ

ಇದೀಗ ದಿನದಿಂದ ದಿನಕ್ಕೆ, ವರ್ಷದಿಂದ ವರ್ಷಕ್ಕೆ ಮನುಷ್ಯನ ಆರೋಗ್ಯ, ಆಯಸ್ಸು ಕ್ಷೀಣಿಸ್ತಿದೆ. ಹೃದ್ರೋಗ, ಕ್ಯಾನ್ಸರ್ ರೋಗದಂತಹ ಸಮಸ್ಯೆಗಳಿಂದ ಮಧ್ಯವಯಸ್ಕರಲ್ಲದೇ ಯುವಕರೂ ಸಹ ಕೊನೆಯುಸಿರೆಳೆಯುತ್ತಿದ್ದಾರೆ. ಆರೋಗ್ಯ ವೃದ್ಧಿಗಾಗಿ, ಆಯುಷ್ಯ ವೃದ್ಧಿಗಾಗಿ ನಾನಾ ರೀತಿಯ ಔಷಧಿಗಳು ಮಾರುಕಟ್ಟೆಗೆ ಬಂದರೂ ಸಹ ಅದ್ರಿಂದ ಮನುಷ್ಯನ ಆರೋಗ್ಯ ವೃದ್ಧಿಯಾಗುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಆಧ್ಯಾತ್ಮರಂಗದಲ್ಲಿ, ಧರ್ಮಶಾಸ್ತ್ರದಲ್ಲಿ ಆಯುಷ್ಯ ವೃದ್ಧಿಗಾಗಿ ಸೂಚಿಸಲಾಗಿರುವ ಕೆಲವೊಂದು ಉಪಾಯಗಳತ್ತ ಜನರು ಇದೀಗ ಹೆಚ್ಚಾಗಿ ಒಲವನ್ನು ತೋರುತ್ತಿದ್ದಾರೆ. ಧರ್ಮಶಾಸ್ತ್ರಗಳಲ್ಲಿ ಆಯುಷ್ಯ ವೃದ್ಧಿಗಾಗಿ ಬಹಳಷ್ಟು ಉಪಾಯಗಳನ್ನು ಹೇಳಲಾಗಿದೆ. ದೀರ್ಘಾಯುಷ್ಯಕ್ಕೆ ಉಪಾಯಗಳು * ಸಾಯಸಂಧ್ಯೆಯ […]

ನೀವು ಹೆಚ್ಚು ಕಾಲ ಬದುಕಬೇಕಾ? ಹಾಗಾದ್ರೆ ಈ ಸರಳ ಉಪಾಯಗಳನ್ನ ಅನುಸರಿಸಿ
Follow us
ಸಾಧು ಶ್ರೀನಾಥ್​
| Updated By: ಆಯೇಷಾ ಬಾನು

Updated on:Nov 23, 2020 | 12:25 PM

ಇದೀಗ ದಿನದಿಂದ ದಿನಕ್ಕೆ, ವರ್ಷದಿಂದ ವರ್ಷಕ್ಕೆ ಮನುಷ್ಯನ ಆರೋಗ್ಯ, ಆಯಸ್ಸು ಕ್ಷೀಣಿಸ್ತಿದೆ. ಹೃದ್ರೋಗ, ಕ್ಯಾನ್ಸರ್ ರೋಗದಂತಹ ಸಮಸ್ಯೆಗಳಿಂದ ಮಧ್ಯವಯಸ್ಕರಲ್ಲದೇ ಯುವಕರೂ ಸಹ ಕೊನೆಯುಸಿರೆಳೆಯುತ್ತಿದ್ದಾರೆ.

ಆರೋಗ್ಯ ವೃದ್ಧಿಗಾಗಿ, ಆಯುಷ್ಯ ವೃದ್ಧಿಗಾಗಿ ನಾನಾ ರೀತಿಯ ಔಷಧಿಗಳು ಮಾರುಕಟ್ಟೆಗೆ ಬಂದರೂ ಸಹ ಅದ್ರಿಂದ ಮನುಷ್ಯನ ಆರೋಗ್ಯ ವೃದ್ಧಿಯಾಗುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಆಧ್ಯಾತ್ಮರಂಗದಲ್ಲಿ, ಧರ್ಮಶಾಸ್ತ್ರದಲ್ಲಿ ಆಯುಷ್ಯ ವೃದ್ಧಿಗಾಗಿ ಸೂಚಿಸಲಾಗಿರುವ ಕೆಲವೊಂದು ಉಪಾಯಗಳತ್ತ ಜನರು ಇದೀಗ ಹೆಚ್ಚಾಗಿ ಒಲವನ್ನು ತೋರುತ್ತಿದ್ದಾರೆ. ಧರ್ಮಶಾಸ್ತ್ರಗಳಲ್ಲಿ ಆಯುಷ್ಯ ವೃದ್ಧಿಗಾಗಿ ಬಹಳಷ್ಟು ಉಪಾಯಗಳನ್ನು ಹೇಳಲಾಗಿದೆ.

ದೀರ್ಘಾಯುಷ್ಯಕ್ಕೆ ಉಪಾಯಗಳು

* ಸಾಯಸಂಧ್ಯೆಯ ಬಿಸಿಲನ್ನು ಆಸ್ವಾದಿಸೋದು: ಸೂರ್ಯಾಸ್ತ, ಸೂರ್ಯೋದಯದ ಸಮಯದಲ್ಲಿ ನಮ್ಮ ದೇಹವನ್ನು ಬಿಸಿಲಿಗೆ ಒಡ್ಡೋದು. ಸೂರ್ಯನ ಎಳೆ ಬಿಸಿಲಿನಲ್ಲಿ ನಮ್ಮ ಚರ್ಮಕ್ಕೆ ಬೇಕಾದ ವಿಟಮಿನ್ ಡಿ ಸಿಗುತ್ತೆ. ಹೀಗಾಗೇ ಸಾವಿರಾರು ವರ್ಷಗಳ ಹಿಂದೆ ವೇದಗಳಲ್ಲಿ ಉಲ್ಲೇಖಿಸಲಾಗಿರುವಂತಹ ಈ ಸಲಹೆಯನ್ನು ಇದೀಗ ವೈಜ್ಞಾನಿಕವಾಗಿ ಒಪ್ಪಿಕೊಳ್ಳಲಾಗಿದೆ.

* ನಿತ್ಯ ವ್ಯಾಯಾಮ ಮಾಡುವುದು: ಪ್ರತಿನಿತ್ಯ ದೇಹವನ್ನು ಸ್ವಲ್ಪ ಸಮಯವಾದರೂ ದಂಡಿಸಬೇಕು. ದೇಹ ದಂಡಿಸೋದು ಹೇಗೆ ಅಂದ್ರೆ ವಾಕಿಂಗ್, ಜಾಗಿಂಗ್, ಯೋಗಾಸನಗಳನ್ನು ಮಾಡಬೇಕು. ಇದ್ರಿಂದ ಅನಗತ್ಯ ಕೊಬ್ಬಿನಂಶ ಕರಗುತ್ತೆ. * ಯಜ್ಞ, ಯಾಗಾದಿಗಳ ಹೊಗೆ ಸೇವಿಸೋದು: ಯಜ್ಞಗಳಲ್ಲಿ ಅರಳಿ, ಮಾವು, ಬೇವು ಸೇರಿದಂತೆ ಹಲವು ವೃಕ್ಷಗಳ ಸಮಿತ್ತನ್ನು ಬಳಸಲಾಗುತ್ತೆ. ಈ ಸಮಿತ್ತುಗಳು ಯಜ್ಞದಲ್ಲಿ ಉರಿದಾಗ ಬರುವ ಹೊಗೆ ಆರೋಗ್ಯಕ್ಕೆ ಒಳ್ಳೆಯದು ಅನ್ನೋದು ನಮ್ಮ ಋಷಿಮುನಿಗಳು ಕಂಡುಕೊಂಡಿರುವ ಸತ್ಯ.

* ಹೆಚ್ಚು ನೀರನ್ನು ಕುಡಿಯುವುದು: ಹೆಚ್ಚು ನೀರು ಕುಡಿಯೋದ್ರಿಂದ ಹಲವು ಲಾಭಗಳಾಗುತ್ತವೆ. ನಮ್ಮ ವಯಸ್ಸು ಹಾಗೂ ತೂಕಕ್ಕೆ ಅನುಗುಣವಾಗಿ ಸರಿಯಾದ ಪ್ರಮಾಣದಲ್ಲಿ ನೀರನ್ನು ಸೇವಿಸೋದ್ರಿಂದ ಸ್ಥೂಲಕಾಯದಿಂದ ಮುಕ್ತರಾಗಬಹುದು.

* ರಾತ್ರಿ ಹೊತ್ತು ಹಾಲು, ಅನ್ನ ತಿನ್ನುವುದು: ರಾತ್ರಿ ವೇಳೆ ನಮ್ಮ ದೇಹ ನಿದ್ರಾವಸ್ಥೆಯಲ್ಲಿರುತ್ತೆ. ಯಾವುದೇ ಚಟುವಟಿಕೆಗಳಲ್ಲಿ ತೊಡಗೋದಿಲ್ಲ. ಹೀಗಾಗೇ ರಾತ್ರಿ ವೇಳೆ ಲಘು ಆಹಾರ ಸೇವಿಸೋದು ಒಳ್ಳೆಯದು ಎನ್ನಲಾಗುತ್ತೆ. ಲಘು ಆಹಾರದ ಪೈಕಿ ಹಾಲು, ಅನ್ನ ಉತ್ತಮ.

* ದಾಂಪತ್ಯ ಜೀವನ: ದಾಂಪತ್ಯ ಜೀವನವನ್ನು ಪ್ರಾಮಾಣಿಕವಾಗಿ ಪಾಲಿಸೋದು. ಇದೆಲ್ಲದರ ಜೊತೆಗೆ ಸದಾ ಸಂತೋಷವಾಗಿರಬೇಕು. ಸಕಾರಾತ್ಮಕವಾಗಿ ಚಿಂತಿಸಬೇಕು. ಎಲ್ಲರಿಗಿಂತಲೂ ಹೆಚ್ಚಿನ ತೃಪ್ತಿ ನಮಗಿದೆ. ನಮಗಿಂತಲೂ ಹೆಚ್ಚಿನ ಕಷ್ಟ, ಕಾರ್ಪಣ್ಯಗಳು ಲಕ್ಷಾಂತರ ಮಂದಿಗೆ ಇದೆ ಎಂದು ತಿಳಿದುಕೊಳ್ಳಬೇಕು. ಧರ್ಮಶಾಸ್ತ್ರದಲ್ಲಿ ಸೂಚಿಸಲಾಗಿರುವ ಈ ಸರಳ ಉಪಾಯಗಳನ್ನು ಅನುಸರಿಸಿದ್ರೆ ನಾವೆಲ್ಲಾ ಆರೋಗ್ಯವಂತರಾಗಿ, ದೀರ್ಘಾಯುಷಿಗಳಾಗಬಹುದು.

Published On - 9:56 am, Sun, 3 November 19