ಸಂಪತ್ತು ಬಂದಾಗ ಪ್ರತಿಯೊಬ್ಬರೂ ಈ ಮೂರು ದುರ್ಗುಣಗಳಿಂದ ದೂರವಿರಬೇಕು, ಚಾಣಕ್ಯ ಹೇಳುವಂತೆ ಅವು ಯಾವುವು?

ಚಾಣಕ್ಯನ ಪ್ರಕಾರ ಧನ ಸಂಪತ್ತು ಬಂದಾಗ ಮನುಷ್ಯನಲ್ಲಿ ಕೆಟ್ಟಗುಣಗಳು ಉದ್ಭವಿಸುತ್ತವೆ. ಹಾಗಾಗಿ ಹಣದ ವಿಷಯದಲ್ಲಿ ಜಾಗರೂಕರಾಗಿರಬೇಕು. ಹಣ ಬಂದಾಗ ಅಹಂಕಾರ ಬೆಳೆಸಿಕೊಳ್ಳಬಾರದು. ಜೀವನದಲ್ಲಿ ಹಣ ಐಶ್ವರ್ಯ ಬಂದಾಗ ಅಹಂಕಾರ ಪಡುವವರು ಅಂಧಕಾರದತ್ತ ಸಾಗುತ್ತಾರೆ. ತಾಯಿ ಲಕ್ಚ್ಮಿ ಅಂತಹವರನ್ನು ಇಷ್ಟಪಡುವುದಿಲ್ಲ.

ಸಂಪತ್ತು ಬಂದಾಗ ಪ್ರತಿಯೊಬ್ಬರೂ ಈ ಮೂರು ದುರ್ಗುಣಗಳಿಂದ ದೂರವಿರಬೇಕು, ಚಾಣಕ್ಯ ಹೇಳುವಂತೆ ಅವು ಯಾವುವು?
ಸಂಪತ್ತು ಬಂದಾಗ ಪ್ರತಿಯೊಬ್ಬರೂ ಈ ಮೂರು ದುರ್ಗುಣಗಳಿಂದ ದೂರವಿರಬೇಕು, ಚಾಣಕ್ಯ ಹೇಳುವಂತೆ ಅವು ಯಾವುವು?
Follow us
TV9 Web
| Updated By: ಸಾಧು ಶ್ರೀನಾಥ್​

Updated on: Nov 18, 2021 | 7:11 AM

ಸಂಪತ್ತು ಬಂದಾಗ ಪ್ರತಿಯೊಬ್ಬರೂ ಈ ವಿಷಯಗಳ ಬಗ್ಗೆ ಗಮನ ಹರಿಸಬೇಕು. ಇಲ್ಲವಾದಲ್ಲಿ ತಾಯಿ ಲಕ್ಷ್ಮಿ ಕೋಪಗೊಂಡು ನಿಮ್ಮಿಂದ ವಿಮುಖವಾಗುತ್ತಾಳೆ. ಆಚಾರ್ಯ ಚಾಣಕ್ಯ ತನ್ನ ಚಾಣಕ್ಯ ನೀತಿಯಲ್ಲಿ ಇಂತಹ ವಿಷಯಗಳ ಬಗ್ಗೆಯೂ ತಿಳಿಯಹೇಳಿದ್ದಾನೆ. ಈ ಗ್ರಂಥದಲ್ಲಿ ವ್ಯಾವಹಾರಿಕ ಜ್ಞಾನ ಮತ್ತು ಗೃಹಸ್ಥ ಜೀವನದ ಬಗ್ಗೆಯೂ ವಿವರಿಸಿದ್ದಾರೆ.  ಆಚಾರ್ಯ ಚಾಣಕ್ಯನ ಮಾತುಗಳನ್ನುಆಲಿಸಲು, ಪಾಲಿಸಲು ಕಷ್ಟವೆನಿಸಿದರೂ ವಾಸ್ತವವಾಗಿ ಅವು ಜೀವನದ ಸುಧಾರಣೆಗಾಗಿ ಹೇಳಿಮಾಡಿಸಿದಂತೆ ಇರುವ ನೀತಿಗಳು. ಅವರು ಜೀವನದ ಸಮಸ್ತ ರಹಸ್ಯಗಳ ಬಗ್ಗೆ ವಿವರಣೆ ನೀಡಿದ್ದಾರೆ. ಧರ್ಮ, ಸಮಾಹ, ರಾಜನೀತಿ, ಸಂಪತ್ತು ಮುಂತಾದ ವಿಷಯಗಳ ರೀತಿರಿವಾಜುಗಳ ಬಗ್ಗೆ ಸೂಕ್ಷ್ಮವಾಗಿ ವಿವರಿಸಿದ್ದಾರೆ. ಸರಿ ಮತ್ತು ತಪ್ಪುಗಳ ನಡುವಣ ಸೂಕ್ಷ್ಮ ವ್ಯತ್ಯಾಸವನ್ನು ಇವರು ವಿವರಿಸಿದ್ದಾರೆ. ಸಂಪತ್ತು ಬಂದಾಗ ಅದನ್ನು ಹೇಗೆ ಉಳಿಸಿ, ಬೆಳೆಸಬೇಕು. ಸಹಚರರ ಜೊತೆ ಹೇಗೆ ನಡೆದುಕೊಳ್ಳಬೇಕು. ವಿನಯ ಎಂದರೇನು ಎಂಬುದನ್ನು ವಿವರಿಸಿದ್ದಾರೆ.

ಅಹಂಕಾರ ಬಿಡಬೇಕು: ಚಾಣಕ್ಯನ ಪ್ರಕಾರ ಧನ ಸಂಪತ್ತು ಬಂದಾಗ ಮನುಷ್ಯನಲ್ಲಿ ಕೆಟ್ಟಗುಣಗಳು ಉದ್ಭವಿಸುತ್ತವೆ. ಹಾಗಾಗಿ ಹಣದ ವಿಷಯದಲ್ಲಿ ಜಾಗರೂಕರಾಗಿರಬೇಕು. ಹಣ ಬಂದಾಗ ಅಹಂಕಾರ ಬೆಳೆಸಿಕೊಳ್ಳಬಾರದು. ಜೀವನದಲ್ಲಿ ಹಣ ಐಶ್ವರ್ಯ ಬಂದಾಗ ಅಹಂಕಾರ ಪಡುವವರು ಅಂಧಕಾರದತ್ತ ಸಾಗುತ್ತಾರೆ. ತಾಯಿ ಲಕ್ಚ್ಮಿ ಅಂತಹವರನ್ನು ಇಷ್ಟಪಡುವುದಿಲ್ಲ.

ಕ್ರೋಧದಿಂದ ದೂರವಿರಿ: ಚಾಣಕ್ಯನ ಪ್ರಕಾರ ಸ್ವಯಂ ಕ್ರೋಧದಿಂದ ಸದಾ ದೂರವಿರಬೇಕು. ಕ್ರೋಧ ಅಥವಾ ಕೋಪ ಎಂಬುದು ತುಂಬಾ ಅಪಾಯಕಾರಿ ಅವಗುಣವಾಗಿರುತ್ತದೆ. ಕೋಪ ಸದಾ ನಿಮ್ಮನ್ನು ತಪ್ಪು ಮಾರ್ಗದಲ್ಲಿ ಕೊಂಡೊಯ್ಯುತ್ತದೆ. ಕೋಪ ಎಂಬುದು ಮನುಷ್ಯನ ದೊಡ್ಡ ಶತ್ರು. ಸಂಪತ್ತು ಬಂದಾಗ ನಿಮ್ಮಲ್ಲಿ ಕ್ರೋಧಭಾವ ಬರಬಾರದು, ಬದಲಿಗೆ ಧೈರ್ಯ, ಸಹನೆ ಇವೇ ಮುಂತಾದ ಸದ್ಗುಣಗಳು ಮೂಡಬೇಕು.

ಭಾಷೆ ಮತ್ತು ಧ್ವನಿ ಬದಲಾಗಬಾರದು: ಅಂದರೆ ಹಣ, ಐಶ್ವರ್ಯ ಬಂದಾಗ ನಿಮ್ಮ ಧ್ವನಿ ಬದಲಾಗಬಾರದು. ಅಂದರೆ ನಿಮ್ಮ ಕಂಠ ಅಂದರೆ ನಿಮ್ಮ ಮಾತು ಬದಲಾಗಬಾರದು. ಮೊದಲು ಹೇಗೆ ವಿನಯದಿಂದ ಸಹಚರರ ಜೊತೆ ವರ್ತಿಸುತ್ತಿದ್ದಿರೋ ಅದೇ ಮಾತುಗಳೊಂದಿಗೆ ಸಹಜವಾಗಿ ನಡೆದುಕೊಳ್ಳಬೇಕು. ಸಿರಿ ಬಂದಾಗ ಮನುಷ್ಯನ ಅಸಲಿ ಬಣ್ಣ ಬಯಲಾಗುತ್ತದೆ. ಮನುಷ್ಯರ ಅಸಲಿ ಧ್ವನಿ ಬದಲಾಗಿಬಿಡುತ್ತದೆ. ಜನರ ಬಗ್ಗೆ ಉದಾಸೀನತೆ, ನಿರ್ಲಕ್ಷ್ಯ ಭಾವಗಳು ಬೆಳೆದುಬಿಡುತ್ತದೆ. ಅವರ ಧ್ವನಿಯೂ ಅದಕ್ಕೆ ತಕ್ಕಂತೆ ಬದಲಾಗುತ್ತದೆ. ತನ್ಮೂಲಕ ಎದುರಿಗಿನ ವ್ಯಕ್ತಿಯನ್ನು ಅವಮಾನ ಪಡಿಸುವುದು ಇವರಿಗೆ ಸುಲಭವಾಗಿ ಬಂದುಬಿಡುತ್ತದೆ. ಆದರೆ ಕಠಿಣ ಮನಃಸ್ಥಿತಿಯೊಂದಿಗೆ ಅಂತಹ ಸ್ವಭಾವವನ್ನು ಮೈಗೂಡಿಸಿಕೊಳ್ಳಬಾರದು. ತಮ್ಮ ಭಾಷೆ ಮತ್ತು ಧ್ವನಿಯನ್ನು ನಂಬಿ, ಸಹಜವಾಗಿ ಜೀವನ ನಡೆಸಬೇಕು.

(chanakya niti in kannada matter of money those who do not pay attention to these things become poor)

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ