Sankashti Chaturthi: ಬಾಣಾಸುರನನ್ನು ಸೋಲಿಸಲು ಶ್ರೀ ಕೃಷ್ಣನಿಗೆ ಸಹಾಯ ಮಾಡಿತ್ತು ಈ ವ್ರತ, ವಿಘ್ನರಾಜ ಸಂಕಷ್ಟ ಚತುರ್ಥಿಯ ಮಹತ್ವ ತಿಳಿಯಿರಿ

ಸಂಸ್ಕೃತದಲ್ಲಿ ಸಂಕಷ್ಟಿ ಎಂದರೆ ವಿಮೋಚನೆ. ಆದ್ದರಿಂದ, ಭಕ್ತರಿಗೆ ಎದುರಾಗುವ ತೊಂದರೆಯನ್ನು ಗಣೇಶ ನಿವಾರಿಸುತ್ತಾನೆ ಎಂಬ ನಂಬಿಕೆ ಇದೆ. ಹೀಗಾಗಿ ಭಕ್ತರು ತಮಗೆ ಯಾವುದೇ ಸಂಕಷ್ಟ, ಅಡತಡೆಗಳು ಎದುರಾಗದಿರಲಿ ಎಂದು ಇಂದು ಪ್ರಾರ್ಥಿಸುತ್ತಾರೆ.

Sankashti Chaturthi: ಬಾಣಾಸುರನನ್ನು ಸೋಲಿಸಲು ಶ್ರೀ ಕೃಷ್ಣನಿಗೆ ಸಹಾಯ ಮಾಡಿತ್ತು ಈ ವ್ರತ, ವಿಘ್ನರಾಜ ಸಂಕಷ್ಟ ಚತುರ್ಥಿಯ ಮಹತ್ವ ತಿಳಿಯಿರಿ
ಪ್ರಥಮ ಪೂಜಿತ ಗಣೇಶ
Follow us
TV9 Web
| Updated By: ಆಯೇಷಾ ಬಾನು

Updated on:Sep 13, 2022 | 8:28 AM

ವಿಘ್ನ ವಿನಾಶಕ, ಸಂಕಷ್ಟ ಹರ ಗಣಪತಿಯ ಭಕ್ತರಿಗೆ ಇಂದು ವಿಶೇಷ ದಿನ. ಏಕೆಂದರೆ ಸೆಪ್ಟೆಂಬರ್ 13ರ ಇಂದು ವಿಘ್ನರಾಜ ಸಂಕಷ್ಟ ಚತುರ್ಥಿ ಇದೆ(Vighnaraja Sankashti Chaturthi 2022). ವಿಘ್ನರಾಜ ಎಂದರೆ ಅಡೆತಡೆಗಳನ್ನು ನಿಯಂತ್ರಿಸುವವನು. ಆದ್ದರಿಂದ, ಭಕ್ತರು ತಮ್ಮ ಜೀವನದಲ್ಲಿ ಎದುರಾಗುವ ಅಡೆತಡೆಗಳು, ಸಂಕಷ್ಟಗಳನ್ನು ತೊಡೆದುಹಾಕಲು ಈ ದಿನ ಉಪವಾಸವನ್ನು ಮಾಡುತ್ತಾರೆ. ಹಾಗೂ ಪ್ರಥಮ ಪೂಜಿತ ಗಣೇಶನಿಗೆ(Lord Ganesha) ಪ್ರಾರ್ಥನೆ ಸಲ್ಲಿಸುತ್ತಾರೆ. ಸಂಸ್ಕೃತದಲ್ಲಿ ಸಂಕಷ್ಟಿ ಎಂದರೆ ವಿಮೋಚನೆ. ಆದ್ದರಿಂದ, ಭಕ್ತರಿಗೆ ಎದುರಾಗುವ ತೊಂದರೆಯನ್ನು ಗಣೇಶ ನಿವಾರಿಸುತ್ತಾನೆ ಎಂಬ ನಂಬಿಕೆ ಇದೆ. ಹೀಗಾಗಿ ಭಕ್ತರು ತಮಗೆ ಯಾವುದೇ ಸಂಕಷ್ಟ, ಅಡತಡೆಗಳು ಎದುರಾಗದಿರಲಿ ಎಂದು ಇಂದು ಪ್ರಾರ್ಥಿಸುತ್ತಾರೆ. ಈ ಸಂಕಷ್ಟ ಚತುರ್ಥಿಯು ಮಂಗಳವಾರ ಬಂದಿರುವುದರಿಂದ ಇದನ್ನು ಅಂಗಾರಕ ಸಂಕಷ್ಟ ಚತುರ್ಥಿ ಎಂದೂ ಕರೆಯುತ್ತಾರೆ.

ಚತುರ್ಥಿ ತಿಥಿ 2022 ಆರಂಭ ಸಮಯ

ಚತುರ್ಥಿ ತಿಥಿ ಸೆಪ್ಟೆಂಬರ್ 13, 2022 ರಂದು ಬೆಳಗ್ಗೆ 10:37ಕ್ಕೆ ಪ್ರಾರಂಭವಾಗುತ್ತದೆ. ಹಾಗೂ ಸೆಪ್ಟೆಂಬರ್ 14, 2022 ರ ಬೆಳಗ್ಗೆ 10:25ಕ್ಕೆ ಕೊನೆಗೊಳ್ಳುತ್ತದೆ. ರಾತ್ರಿ 08:26ಕ್ಕೆ ಸಂಕಷ್ಟಿ ದಿನದ ಚಂದ್ರೋದಯ.

ವಿಘ್ನರಾಜ ಸಂಕಷ್ಟ ಚತುರ್ಥಿ 2022 ಯೋಗ

ವಿಘ್ನರಾಜ ಸಂಕಷ್ಟ ಚತುರ್ಥಿಯಂದು ಸರ್ವಾರ್ಥ ಸಿದ್ಧಿ ಮತ್ತು ಅಮೃತ ಸಿದ್ಧಿ ಯೋಗವೂ ರೂಪುಗೊಳ್ಳುತ್ತಿದೆ. ಈ ಎರಡೂ ಯೋಗಗಳಲ್ಲಿ ಗಣೇಶನ ಆರಾಧನೆಯು ಎರಡು ಪಟ್ಟು ಫಲಿತಾಂಶವನ್ನು ನೀಡುತ್ತದೆ.

ಸರ್ವಾರ್ಥ ಸಿದ್ಧಿ ಯೋಗ – ಸೆಪ್ಟೆಂಬರ್‌ 13 ರಂದು ಮಂಗಳವಾರ ಬೆಳಗ್ಗೆ 06:36 ರಿಂದ ಸೆಪ್ಟೆಂಬರ್‌ 14 ರಂದು ಬುಧವಾರ ಬೆಳಗ್ಗೆ 6:12 ರವರೆಗೆ

ಅಮೃತ ಸಿದ್ಧಿ ಯೋಗ – ಸೆಪ್ಟೆಂಬರ್‌ 13 ರಂದು ಮಂಗಳವಾರ ಬೆಳಗ್ಗೆ 06:36 ರಿಂದ ಸೆಪ್ಟೆಂಬರ್‌ 14 ರಂದು ಬುಧವಾರ ಬೆಳಗ್ಗೆ 6:12 ರವರೆಗೆ

ವಿಘ್ನರಾಜ ಸಂಕಷ್ಟಿ ಗಣೇಶ ಚತುರ್ಥಿ ಮಹತ್ವ

ಈ ದಿನದಂದು ಶಿವನು ತನ್ನ ಮಗ ಗಣೇಶನನ್ನು ಎಲ್ಲಾ ದೇವರುಗಳಿಗಿಂತ ಶ್ರೇಷ್ಠನೆಂದು ಘೋಷಿಸಿದನು ಎಂದು ನಂಬಲಾಗಿದೆ. ಪ್ರತಿ ತಿಂಗಳು, ಗಣಪತಿಯನ್ನು ಬೇರೆ ಬೇರೆ ಹೆಸರು ಮತ್ತು ಪೀಠದಿಂದ ಪೂಜಿಸಲಾಗುತ್ತದೆ. ಈ ದಿನ ಭಕ್ತರು ಬೇಗ ಎದ್ದು ಸ್ನಾನ ಮಾಡಿ ನಂತರ ಶುಭ್ರವಾದ ಬಟ್ಟೆಯನ್ನು ಧರಿಸಿ ಗಣೇಶನಿಗೆ ಪೂಜಿಸುತ್ತಾರೆ. ಭಕ್ತರು ವ್ರತ ಕಥಾ ಓದುವುದರೊಂದಿಗೆ ಸಂಜೆ ವ್ರತ ಪೂಜೆ ನಡೆಯುತ್ತದೆ. ಚತುರ್ಥಿ ವ್ರತದ ಪ್ರಭಾವದಿಂದ ವ್ಯಕ್ತಿಯ ಎಲ್ಲಾ ಅಡೆತಡೆಗಳು ದೂರವಾಗುತ್ತವೆ, ಎಲ್ಲಾ ತೊಂದರೆಗಳು ದೂರವಾಗುತ್ತವೆ. ಚತುರ್ಥಿ ತಿಥಿಯ ಶ್ರಾದ್ಧವನ್ನು ಸಹ ಈ ದಿನ ಪಿತೃ ಪಕ್ಷದಲ್ಲಿ ಮಾಡಲಾಗುತ್ತದೆ. ಇದನ್ನೂ ಓದಿ: Lord Ganesha: ಪ್ರಥಮ ಪೂಜಿತ ಗಣೇಶನ ದೇಹದ ಅಂಗಾಂಗಗಳ ಮಹತ್ವ ನಿಮಗೆ ಗೊತ್ತೇ?

ವಿಘ್ನರಾಜ ಸಂಕಷ್ಟಿ ಗಣೇಶ ಚತುರ್ಥಿ ವ್ರತ ಕಥಾ

ಧರ್ಮಗ್ರಂಥಗಳ ಪ್ರಕಾರ, ಪಾಂಡವ ರಾಜ ಯುಧಿಷ್ಠಿರನು ವಿಘ್ನರಾಜ ಸಂಕಷ್ಟಿ ಗಣೇಶ ಚತುರ್ಥಿಗೆ ಸಂಬಂಧಿಸಿದ ಕಥೆಯನ್ನು ಹೇಳಲು ಶ್ರೀ ಕೃಷ್ಣನನ್ನು ಕೇಳಿದನು. ಆಗ ಶ್ರೀ ಕೃಷ್ಣ ಈ ಕಥೆಯನ್ನು ಹೇಳುತ್ತಾನೆ. ಬಾಣಾಸುರನೆಂಬ ರಾಕ್ಷಸನಿದ್ದ. ಈತನಿಗೆ ಉಷಾ ಎಂಬ ಮಗಳಿದ್ದಳು. ಒಂದು ರಾತ್ರಿ ಅವಳು ಅನಿರುದ್ಧ ಎಂಬ ವ್ಯಕ್ತಿಯ ಬಗ್ಗೆ ಕನಸು ಕಂಡಳು. ಕನಸಿನ ನಂತರ ಅವಳು ಅನಿರುದ್ಧನನ್ನು ಭೇಟಿಯಾಗಲು ಉತ್ಸುಕಳಾಗಿದ್ದಳು. ಆದ್ದರಿಂದ ಎಲ್ಲಾ ನಿವಾಸಿಗಳ ಚಿತ್ರಗಳನ್ನು ಒಳಗೊಂಡಿರುವ ಮೂರು ಲೋಕಗಳ ರೇಖಾಚಿತ್ರಗಳನ್ನು ಮಾಡಲು ಚಿತ್ರಲೇಖಾ ಎಂಬ ತನ್ನ ಸ್ನೇಹಿತನನ್ನು ಕೇಳಿದಳು. ಆ ಮೂಲಕ ಉಷಾ ಅನಿರುದ್ಧನನ್ನು ಹುಡುಕಲು ಪ್ರಾರಂಭಿಸಿದಳು. ಅವನ ಇರುವಿಕೆಯನ್ನು ಪತ್ತೆಹಚ್ಚಲು ಸಹಾಯ ಮಾಡಲು ಸ್ನೇಹಿತ ಚಿತ್ರಲೇಖಾರನ್ನು ಕೇಳಿದಳು. ಉಷಾ ಅನಿರುದ್ಧನ ಮೇಲೆ ಎಷ್ಟು ಮೋಹಿತಳಾಗಿದ್ದಳೆ ಎಂದರೆ ಮದುವೆ ಆದರೆ ಅವನನ್ನೇ ಆಗುವುದಾಗಿ ನಿರ್ಧರಿಸಿದಳು. ಜೊತೆಗೆ ಅವನ ಪತ್ತೆಯಿಲ್ಲದೆ ತಾನು ಬದುಕಲು ಸಾಧ್ಯವಿಲ್ಲ ಎಂದು ತನ್ನ ಸ್ನೇಹಿತನಿಗೆ ವಿವರಿಸಿದಳು. ಚಿತ್ರಲೇಖಾ ಉಷಾಗೆ ಸಹಾಯ ಮಾಡಲು ನಿರ್ಧರಿಸಿದರು. ಇಬ್ಬರು ಅನಿರುದ್ಧನನ್ನು ಹುಡುಕಲು ಪ್ರಾರಂಭಿಸಿದರು. ಅಂತಿಮವಾಗಿ ಅನಿರುದ್ಧನನ್ನು ದ್ವಾರಿಕಾದಲ್ಲಿ ಕಂಡರು. ಬಳಿಕ ಅವಳು ರಾತ್ರಿಯಲ್ಲಿ ಅನಿರುದ್ಧನು ಮಲಗಿದ್ದಾಗ ಅವನನ್ನು ಅಪಹರಣ ಮಾಡಿ ಬಾಣಾಸುರನ ರಾಜ್ಯವನ್ನು ತಲುಪಿದಳು. ಇದನ್ನೂ ಓದಿ: ಮಾನವ ಮುಖ ಹೊಂದಿರುವ ವಿಶ್ವದ ಏಕೈಕ ಗಣೇಶ ದೇವಸ್ಥಾನ!

ಮತ್ತೊಂದೆಡೆ, ದ್ವಾರಿಕಾದಲ್ಲಿ ಅನಿರುದ್ಧನ ತಂದೆ ಪ್ರದ್ಯುಮ್ನ ತನ್ನ ಮಗ ನಾಪತ್ತೆಯಾದ ನಂತರ ಆತಂಕಗೊಂಡರು. ಪ್ರದ್ಯುಮ್ಮ ಶ್ರೀ ಕೃಷ್ಣ ಮತ್ತು ರುಕ್ಮಿಣಿಯರ ಹಿರಿಯ ಮಗ. ಎಲ್ಲರೂ ಅನಿರುದ್ಧನನ್ನು ಹುಡುಕಿದರು. ಆದರೆ ಅನಿರುದ್ಧ ಪತ್ತೆಯಾಗಲಿಲ್ಲ. ಕೊನೆಗೆ ಅನಿರುದ್ಧನನ್ನು ಹುಡುಕಲು ಶ್ರೀಕೃಷ್ಣನು ಋಷಿ ಲೋಮಾಶ್ ಅವರ ಸಹಾಯವನ್ನು ಕೋರಿದ. ತಮ್ಮ ದಿವ್ಯ ಶಕ್ತಿಯ ಮೂಲಕ ಋಷಿಮುನಿಗಳು ಬಾಣಾಸುರನ ಮಗಳ ಬಗ್ಗೆ ತಿಳಿದು ನಡೆದ ಘಟನೆಯನ್ನು ವಿವರಿಸಿದರು. ಇದಕ್ಕೆ ಪರಿಹಾರವನ್ನೂ ಋಷಿಮುನಿಗಳು ಶ್ರೀಕೃಷ್ಣನಿಗೆ ತಿಳಿಸಿದರು. ಸಮಸ್ಯೆಯಿಂದ ಮುಕ್ತಿ ಹೊಂದಲು ವಿಘ್ನರಾಜ ಸಂಕಷ್ಟಿ ಚತುರ್ಥಿಯಂದು ವ್ರತವನ್ನು ಆಚರಿಸುವಂತೆ ಋಷಿ ಶ್ರೀಕೃಷ್ಣನಿಗೆ ಸೂಚಿಸಿದರು. ಈ ವ್ರತದ ಫಲವಾಗಿ ಕೆಲವು ದಿನಗಳ ನಂತರ ಶ್ರೀ ಕೃಷ್ಣನು ಬಾಣಾಸುರನನ್ನು ಯುದ್ಧದಲ್ಲಿ ಸೋಲಿಸಿದನು ಮತ್ತು ಅನಿರುದ್ಧನನ್ನು ರಕ್ಷಿಸಿದನು.

Published On - 8:28 am, Tue, 13 September 22

ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್