AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಳ್ಳಮಾವಾಸ್ಯೆ ಆಚರಣೆ ಮಾಡುವ ಉದ್ದೇಶವೇನು? ಚರಗ ಚೆಲ್ಲುವುದರ ಹಿಂದಿನ ಮಹತ್ವವೇನು?

ಉತ್ತರ ಕರ್ನಾಟಕದಲ್ಲಿ ಎಳ್ಳ ಅಮಾವಾಸ್ಯೆ ಹಬ್ಬವನ್ನು ಬಹಳಷ್ಟು ವಿಶೇಷ ಹಾಗೂ ವಿಶಿಷ್ಟವಾಗಿ ಆಚರಣೆ ಮಾಡಲಾಗುತ್ತದೆ. ಅವರು ನಂಬಿದ ಭೂಮಿ ತಾಯಿಗೆ ಚೆರಗ ಚೆಲ್ಲುವ ಮೂಲಕ ನೈವೈದ್ಯ ಅರ್ಪಿಸಲಾಗುತ್ತದೆ. ಹಿಂಡಿ ಪಲ್ಯಾ, ಹೋಳಿಗೆ, ಬದನೆಕಾಯಿ ಪಲ್ಲೆ, ಅನ್ನ-ಸಾಂಬಾರು ಅನ್ನು ಉಂಡೆ ಉಂಡೆ ಮಾಡಿ ಹೊಲದ ತುಂಬಾ ಚೆರಗ ಚೆಲ್ಲಲಾಗುತ್ತದೆ.

ಎಳ್ಳಮಾವಾಸ್ಯೆ ಆಚರಣೆ ಮಾಡುವ ಉದ್ದೇಶವೇನು? ಚರಗ ಚೆಲ್ಲುವುದರ ಹಿಂದಿನ ಮಹತ್ವವೇನು?
ಪ್ರೀತಿ ಭಟ್​, ಗುಣವಂತೆ
| Updated By: Digi Tech Desk|

Updated on:Jan 11, 2024 | 9:44 AM

Share

ಎಳ್ಳಮವಾಸ್ಯೆ ರೈತಾಪಿ ವರ್ಗಕ್ಕೆ ಹಬ್ಬವಿದ್ದಂತೆ. ನಾಡಿನ ಎಲ್ಲೆಡೆ ‘ಚೆರಗ ಚೆಲ್ಲುವ’ ಸಂಭ್ರಮ ಮನೆ ಮಾಡಿರುತ್ತದೆ. ಆ ದಿನ ಭೂತಾಯಿಯನ್ನು ಪೂಜಿಸಿ, ಕುಟುಂಬದವರು ಸಹಭೋಜನ ಮಾಡಿ ಸಂಭ್ರಮಿಸುತ್ತಾರೆ. ಈ ಅಮಾವಾಸ್ಯೆಯನ್ನು ಕೆಲವರು ಮಾರ್ಗಶಿರ ಅಮಾವಾಸ್ಯೆ ಎನ್ನತ್ತಾರೆ. ಎನ್ನು ಕೆಲವು ಭಾಗದಲ್ಲಿ ಎಳ್ಳಮಾವಾಸ್ಯೆ ಅಥವಾ ದರ್ಶ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಇನ್ನು ಉತ್ತರ ಕರ್ನಾಟಕದಲ್ಲಿ ಎಳ್ಳಮಾವಾಸ್ಯೆ ಹಬ್ಬವನ್ನು ಬಹಳಷ್ಟು ವಿಶೇಷ ಹಾಗೂ ವಿಶಿಷ್ಟವಾಗಿ ಆಚರಣೆ ಮಾಡಲಾಗುತ್ತದೆ. ಅವರು ನಂಬಿದ ಭೂಮಿ ತಾಯಿಗೆ ಚೆರಗ ಚೆಲ್ಲುವ ಮೂಲಕ ನೈವೈದ್ಯ ಅರ್ಪಿಸಲಾಗುತ್ತದೆ. ಹಿಂಡಿ ಪಲ್ಯಾ, ಹೋಳಿಗೆ, ಬದನೆಕಾಯಿ ಪಲ್ಲೆ, ಅನ್ನ -ಸಾಂಬಾರು ಅನ್ನು ಮುದ್ದೆ ಅಥವಾ ಉಂಡೆ ಉಂಡೆ ಮಾಡಿ ಹೊಲದ ತುಂಬಾ ಚೆರಗ ಚೆಲ್ಲಲಾಗುತ್ತದೆ.

ಎಳ್ಳಮಾವಾಸ್ಯೆ ಆಚರಣೆ ಹೇಗೆ?

ಸಾಮಾನ್ಯವಾಗಿ ರೈತರು ಈ ಸಮಯದಲ್ಲಿ ಜೋಳವನ್ನು ಬೆಳೆಯುತ್ತಾರೆ. ಇದು ಅವರಿಗೆ ಕಡಿಮೆ ಖರ್ಚಿನಲ್ಲಿಯೇ ಒಳ್ಳೆಯ ಫಸಲನ್ನು ನೀಡುತ್ತದೆ. ಹಾಗಾಗಿ ಇದು ರೈತರ ಆಪ್ತಮಿತ್ರನಾಗಿರುತ್ತದೆ. ಹಾಗಾಗಿ ಇದೊಂದು ರೀತಿಯ ಗೌರವ ಸೂಚಿಸುವ ಹಬ್ಬವೂ ಆಗಿದೆ. ಕೆಲವು ಪುರಾಣಗಳಲ್ಲಿ ಪಾಂಡವರು- ಕೌರವರು ಕೂಡ ಜೋಳದ ಬೆಳೆಯನ್ನು ಬಿತ್ತಿದ್ದರು ಎಂಬ ಉಲ್ಲೇಖವಿದೆ. ಇನ್ನು ಕೆಲವು ಭಾಗದಲ್ಲಿ ರೈತರು ಅವರ ಜಮೀನಿನಲ್ಲಿ ಎಳ್ಳು ಹಾಗೂ ಬೆಲ್ಲವನ್ನು ಚಿಮ್ಮುತ್ತಾರೆ. ಈ ಆಹಾರಗಳು ಭೂಮಿಯ ಫಲವತ್ತತೆಯನ್ನು ಕಾಪಾಡುವ ಎರೆಹುಳಗಳಿಗೆ ಆಹಾರವಾಗುತ್ತದೆಯೆಂಬ ಉದ್ದೇಶದಿಂದ ಚಿಮ್ಮಲಾಗುತ್ತದೆ. ಇನ್ನು ಅಮಾವಾಸ್ಯೆ ದಿನವು ಲಕ್ಷ್ಮೀ ದೇವಿ ಮತ್ತು ಶಿವನ ಆರಾಧನೆಗೆ ಮತ್ತು ಪೂರ್ವಜರ ಶಾಂತಿಗಾಗಿ ಬಹಳ ಫಲಪ್ರದವಾಗಿದೆ ಎನ್ನಲಾಗುತ್ತದೆ. ಜೀವನದಲ್ಲಿ ಸಂಪತ್ತು ಮತ್ತು ಸಂತೋಷ ಬಯಸುವವರು ಮಹಾಲಕ್ಷ್ಮೀಯನ್ನು ಈ ದಿನ ಆರಾಧಿಸಬಹುದು.

ಇದನ್ನೂ ಓದಿ: ಕೃಷ್ಣಾವತಾರದ ಅಂತ್ಯದಲ್ಲಿ ಒಂದೇ ತಿಂಗಳಲ್ಲಿ ಬಂದಿತ್ತು ಎರಡು ಅಮಾವಾಸ್ಯೆ; ಇನ್ನೊಂದು ತಿಂಗಳಲ್ಲಿ ಅಂಥದ್ದೇ ಸನ್ನಿವೇಶ

ಚರಗ ಚೆಲ್ಲುವುದು ಏಕೆ ಗೊತ್ತಾ?

ಈ ಹಬ್ಬದ ಹಿಂದೆ ಮಹದಾದ ವೈಜ್ಞಾನಿಕ ಕಾರಣವಿದೆ. ಎಳ್ಳ ಅಮವಾಸ್ಯೆ ಹೊತ್ತಿಗೆ ಹಿಂಗಾರು ಪೈರು ಬೆಳೆದು ನಿಂತಿರುತ್ತದೆ. ಅದರಲ್ಲಿಯೂ ಜೋಳದ ಮಧ್ಯೆ ಕಡಲೆ ಬೆಳೆಗೆ ಕಾಯಿಕೊರಕ ಎಂಬ ಹುಳ ಬಿದ್ದು ಹಾನಿ ಮಾಡುತ್ತದೆ. ಉತ್ತರ ಕರ್ನಾಟಕದಲ್ಲಿ ಅತೀ ಹೆಚ್ಚು ಜೋಳ, ಕಡಲೆಯನ್ನು ಹಿಂಗಾರು ಬೆಳೆಯಾಗಿ ರೈತರು ಬೆಳೆಯುತ್ತಾರೆ. ಈ ಹೊತ್ತಲ್ಲಿ “ಹುಲ್ಲು ಹುಲ್ಲಿಗೋ ಚೆಲ್ಲ ಚೆಲ್ಲಂಬರಿಗೋ” ಎಂದು ಚರಗ ಚೆಲ್ಲುವಾಗ ಖಾದ್ಯ ತಿನ್ನಲು ಹಕ್ಕಿಗಳು ಬರುತ್ತವೆ. ಅವು ಜೋಳದ ಮಧ್ಯೆ ಆಹಾರ ತಿನ್ನಲು ಇಳಿಯುತ್ತವೆ. ಆಗ ಖಾದ್ಯದ ಜೊತೆಗೆ ಕಡಲೆಗೆ ಬಿದ್ದಿರೋ ಕಾಯಿಕೊರಕ ಹುಳವನ್ನು ಕೂಡ ತಿನ್ನುತ್ತವೆ. ಇದರಿಂದ ಈ ಹುಳುಗಳ ನಿಯಂತ್ರಣವಾಗುತ್ತದೆ. ಪೈರು ಸೊಂಪಾಗಿ ಬೆಳೆಯುತ್ತದೆ. ಈ ಕಾರಣಕ್ಕಾಗಿ ಚರಗ ಚೆಲ್ಲುವ ಹಬ್ಬವನ್ನು ತಲಾಂತರದಿಂದ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:32 pm, Tue, 9 January 24