AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಪಿಎಲ್​ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಫಾಲ್ಕನ್ಸ್ ಪಡೆ

ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ಆಯೋಜಿಸುವ ಕೆರಿಬಿಯನ್ ಪ್ರೀಮಿಯರ್ ಲೀಗ್‌ನ 13ನೇ ಆವೃತ್ತಿಗೆ ಅದ್ಧೂರಿ ತೆರೆಬಿದ್ದಿದೆ. ಈ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದು ಮೊಯಿನ್ ಅಲಿ ನಾಯಕತ್ವದ ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ತಂಡ. ಇನ್ನು ರೋವ್‌ಮನ್ ಪೊವೆಲ್ ಮುಂದಾಳತ್ವದ ಜಮೈಕಾ ಕಿಂಗ್ಸ್‌ಮೆನ್ ತಂಡವು ರನ್ನರ್ ಅಪ್ ಪಟ್ಟಕ್ಕೆ ತೃಪ್ತಿಪಟ್ಟುಕೊಂಡಿದೆ.

ಸಿಪಿಎಲ್​ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಫಾಲ್ಕನ್ಸ್ ಪಡೆ
Antigua And Barbuda FalconsImage Credit source: CPL
ಝಾಹಿರ್ ಯೂಸುಫ್
|

Updated on: Sep 21, 2026 | 11:58 AM

Share

ಕೆರಿಬಿಯನ್ ಪ್ರೀಮಿಯರ್ ಲೀಗ್​ನ 13ನೇ ಸೀಸನ್​ನಲ್ಲಿ ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್  ಚಾಂಪಿಯನ್ ಪಟ್ಟ ಅಲಂಕರಿಸಿದೆ. ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಜಮೈಕಾ ಕಿಂಗ್ಸ್‌ಮೆನ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ಚೊಚ್ಚಲ ಬಾರಿ ಟ್ರೋಫಿ ಎತ್ತಿ ಹಿಡಿದಿದೆ.

ಸದಾಕತ್ ಸೆಂಚುರಿ ವ್ಯರ್ಥ:

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಜಮೈಕಾ ಕಿಂಗ್ಸ್‌ಮೆನ್ ತಂಡಕ್ಕೆ ಆರಂಭಿಕ ಆಟಗಾರ ಮಾಝ್ ಸದಾಕತ್ ಸ್ಫೋಟಕ ಆರಂಭ ಒದಗಿಸಿದ್ದರು. ಅಲ್ಲದೆ ಕೇವಲ 58 ಎಸೆತಗಳನ್ನು ಎದುರಿಸಿದ ಸದಾಕತ್ 8 ಬೌಂಡರಿ ಹಾಗೂ 9 ಸಿಕ್ಸರ್‌ಗಳ ನೆರವಿನಿಂದ 114 ರನ್ ಚಚ್ಚಿದರು. ಇದು ಸಿಪಿಎಲ್ ಫೈನಲ್ ಇತಿಹಾಸದಲ್ಲೇ ದಾಖಲಾದ ಮೊದಲ ಶತಕ ಎಂಬುದು ವಿಶೇಷ.

ಮಾಝ್​ ಬಳಿಕ ಸೈಮ್ ಅಯೂಬ್ (29) ಮಾತ್ರ ಎರಡಂಕಿ ದಾಟಲು ಯಶಸ್ವಿಯಾದರು. ಆದರೆ ಉಳಿದ ಬ್ಯಾಟರ್‌ಗಳ ವೈಫಲ್ಯದಿಂದಾಗಿ ಜಮೈಕಾ ಕಿಂಗ್ಸ್‌ಮೆನ್ ತಂಡವು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಲಷ್ಟೇ ಶಕ್ತವಾಯಿತು.

ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ಪರ ಅತ್ಯುತ್ತಮ ದಾಳಿ ಸಂಘಟಿಸಿದ ಪಾಕಿಸ್ತಾನದ ಯುವ ಲೆಗ್ ಸ್ಪಿನ್ನರ್ ಸುಫ್ಯಾನ್ ಮುಖೀಮ್ ಕೇವಲ 14 ರನ್ ನೀಡಿ 4 ಪ್ರಮುಖ ವಿಕೆಟ್ ಉರುಳಿಸಿದರು. ಇನ್ನು ಅಲ್ಜಾರಿ ಜೋಸೆಫ್ 2 ವಿಕೆಟ್ ಪಡೆದರು.

ಸುಲಭವಾಗಿ ಗುರಿ ಬೆನ್ನಟ್ಟಿದ ಫಾಲ್ಕನ್ಸ್:

171 ರನ್‌ಗಳ ಸವಾಲಿನ ಗುರಿಯನ್ನು ಬೆನ್ನಟ್ಟಿದ ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ತಂಡಕ್ಕೆ ರಹಕೀಮ್ ಕಾರ್ನ್‌ವಾಲ್ (6 ಎಸೆತಗಳಲ್ಲಿ 20 ರನ್) ಬಿರುಸಿನ ಆರಂಭ ಒದಗಿಸಿದರು. ಮತ್ತೊಬ್ಬ ಆರಂಭಿಕ ಆಟಗಾರ ಎವಿನ್ ಲೆವಿಸ್ 38 ರನ್ ಗಳಿಸಿ ಔಟಾದರೆ, ಆ ಬಳಿಕ ಜೊತೆಯಾದ ಅಮೀರ್ ಜಂಗೂ ಮತ್ತು ಹಸನ್ ನವಾಝ್ ಜಮೈಕಾ ಕಿಂಗ್ಸ್​ಮೆನ್​ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು.

ಅಮೀರ್ ಜಂಗೂ (57) ಮತ್ತು ಹಸನ್ ನವಾಝ್ (47) ಮೂರನೇ ವಿಕೆಟ್‌ಗೆ ಮುರಿಯದ 89 ರನ್‌ಗಳ ಜೊತೆಯಾಟವಾಡುವ ಮೂಲಕ 16.4 ಓವರ್‌ಗಳಲ್ಲೇ ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ತಂಡವನ್ನು ಗೆಲುವಿನ  ದಡ ಸೇರಿಸಿದರು. ಈ ಮೂಲಕ ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿ ಚೊಚ್ಚಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ಪ್ಲೇಯಿಂಗ್ 11: ರಹಕೀಮ್ ಕಾರ್ನ್‌ವಾಲ್ , ಎವಿನ್ ಲೆವಿಸ್ , ಅಮೀರ್ ಜಂಗೂ (ವಿಕೆಟ್ ಕೀಪರ್) , ಹಸನ್ ನವಾಝ್ , ಮೊಯಿನ್ ಅಲಿ (ನಾಯಕ) , ಶಾದಾಬ್ ಖಾನ್ , ಜೋಶುವಾ ಜೇಮ್ಸ್ , ಸುಫ್ಯಾನ್ ಮುಖೀಮ್ , ಅಲ್ಜಾರಿ ಜೋಸೆಫ್ , ಜೇಡೆನ್ ಸೀಲ್ಸ್ , ಶಮರ್ ಸ್ಪ್ರಿಂಗರ್.

ಇದನ್ನೂ ಓದಿ: ಸೆಂಚುರಿ ಮೇಲೆ ಸೆಂಚುರಿ: ಹೊಸ ಇತಿಹಾಸ ಬರೆದ ಮಾಝ್ ಸದಾಕತ್!

ಜಮೈಕಾ ಕಿಂಗ್ಸ್‌ಮೆನ್ ಪ್ಲೇಯಿಂಗ್ 11: ಮಾಝ್ ಸದಾಕತ್ , ಕಿರ್ಕ್ ಮೆಕೆಂಜಿ , ಕೀಸಿ ಕಾರ್ಟಿ , ಸೈಮ್ ಅಯೂಬ್ , ರೋವ್‌ಮನ್ ಪೊವೆಲ್ (ನಾಯಕ) , ಆ್ಯಂಡ್ರೆ ರಸೆಲ್ , ಹಸನ್ ಖಾನ್ , ರೊಮೈನ್ ಮಾರಿಸ್ (ವಿಕೆಟ್ ಕೀಪರ್ ) ಕೀಮೊ ಪೌಲ್ , ವಿಟೆಲ್ ಲಾವೆಸ್ , ಹುನೈನ್ ಶಾ.

Follow Us