Ashes 2023: ಪ್ರತಿಷ್ಠಿತ ಆಶಸ್ ಸರಣಿಗೆ ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟ; ಹೊಸಬರಿಗೂ ಅವಕಾಶ
Ashes 2023: ಆಸ್ಟ್ರೇಲಿಯಾ ವಿರುದ್ಧದ ಆಶಸ್ ಸರಣಿಯ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ 16 ಸದಸ್ಯರ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದೆ.

ಐರ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯವನ್ನು ಸುಲಭವಾಗಿ ಗೆದ್ದು ಮುಗಿಸಿರುವ ಇಂಗ್ಲೆಂಡ್ ಪಡೆ ಆಶಸ್ ಸರಣಿಗೆ (Ashes 2023) ತಯಾರಿ ಆರಂಭಿಸಿದೆ. ಅದರ ಮೊದಲ ಹೆಜ್ಜೆಯಾಗಿ ಇದೀಗ ಆಸ್ಟ್ರೇಲಿಯಾ ವಿರುದ್ಧದ ಆಶಸ್ ಸರಣಿಯ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ 16 ಸದಸ್ಯರ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. ಇತ್ತ ಭಾರತ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗಾಗಿ (World Test Championship final) ಇಂಗ್ಲೆಂಡ್ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಈ ಫೈನಲ್ ಬಳಿಕ ಇಲ್ಲೇ ತನ್ನ ಪ್ರವಾಸವನ್ನು ಮುಂದುವರೆಸಲಿದೆ. ಜೂನ್ 7 ರಿಂದ ಲಂಡನ್‌ನ ಓವಲ್‌ನಲ್ಲಿ ಭಾರತ ಹಾಗೂ ಆಸೀಸ್ (India vs Australia) ನಡುವೆ ಫೈನಲ್ ಫೈಟ್ ನಡೆಯಲ್ಲಿದ್ದು, ಆ ನಂತರ ಆಸ್ಟ್ರೇಲಿಯ ತಂಡ ಆತಿಥೇಯ ಇಂಗ್ಲೆಂಡ್ ತಂಡವನ್ನು ಆಶಸ್ ಸರಣಿಯಲ್ಲಿ ಎದುರಿಸಲಿದೆ.
ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ ಜೂನ್ 7 ರಿಂದ 11 ರವರೆಗೆ ಲಂಡನ್‌ನಲ್ಲಿ ನಡೆಯಲಿದೆ. ಇದಕ್ಕಾಗಿ ಹೆಚ್ಚುವರಿ ದಿನವನ್ನಾಗಿ ಜೂನ್ 12ನ್ನು ಕಾಯ್ದಿರಿಸಲಾಗಿದೆ. ಈ ಫೈನಲ್ ಬಳಿಕ ಆಶಸ್ ಸರಣಿಯತ್ತ ನೇರವಾಗಿ ಗಮನ ಹರಿಸಲಿದ್ದು, ಬೆನ್ ಸ್ಟೋಕ್ಸ್ ನಾಯಕತ್ವದ ಇಂಗ್ಲೆಂಡ್ ತಂಡ ‘ಬಜ್ಜ್ ಬಾಲ್’ ಕ್ರಿಕೆಟ್ ಮೂಲಕ ಆಸ್ಟ್ರೇಲಿಯಾವನ್ನು ಸ್ವಾಗತಿಸಲು ಸಜ್ಜಾಗಿದೆ.
IPL 2022 Mega Auction: ಆಶಸ್ ಮಹಾ ಸೋಲು; ಮೆಗಾ ಹರಾಜಿನಿಂದ ಹಿಂದೆ ಸರಿದ ಇಂಗ್ಲೆಂಡ್ನ ಸ್ಟಾರ್ ಆಲ್ರೌಂಡರ್!
ಇಂಗ್ಲೆಂಡ್ ತಂಡದಲ್ಲಿ ಹೊಸ ಆಟಗಾರರಿಗೆ ಅವಕಾಶ
ಕಳೆದ ಒಂದು ವರ್ಷದಿಂದ ಟೆಸ್ಟ್ನಲ್ಲಿ ವಿಭಿನ್ನ ರೀತಿಯಲ್ಲಿ ಆಡುತ್ತಿರುವ ಇಂಗ್ಲೆಂಡ್ ತಂಡ ಇದೇ ಫಾರ್ಮ್ನಲ್ಲಿ ಮೊಟ್ಟಮೊದಲ ಬಾರಿಗೆ ಆಸ್ಟ್ರೇಲಿಯಾವನ್ನು ಎದುರಿಸಲು ಹೊರಟಿದ್ದು, ಇದಕ್ಕಾಗಿ ತಂಡವನ್ನು ಪ್ರಕಟಿಸಲಾಗಿದೆ. ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ಜೂನ್ 3 ರ ಶನಿವಾರದಂದು ಆಶಸ್ ಸರಣಿಯ ಮೊದಲ ಎರಡು ಟೆಸ್ಟ್‌ಗಳಿಗೆ ತಂಡವನ್ನು ಪ್ರಕಟಿಸಿದ್ದು, ಇದರಲ್ಲಿ ಯುವ ವೇಗದ ಬೌಲರ್ ಜೋಶ್ ಟಂಗ್‌ಗೆ ಅವಕಾಶ ನೀಡಲಾಗಿದೆ.
ವಾಸ್ತವವಾಗಿ, ಮೊದಲ ಎರಡು ಆಶಸ್ ಟೆಸ್ಟ್ ಪಂದ್ಯಗಳಿಗೆ ಈಗ ಐರ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಆಡಿದ ತಂಡವನ್ನೇ ಇಂಗ್ಲೆಂಡ್ ಉಳಿಸಿಕೊಂಡಿದೆ. ಈ ತಂಡವನ್ನು ಹೊರತುಪಡಿಸಿದರೆ ಬಲಗೈ ವೇಗದ ಬೌಲರ್ ಜೋಶ್ ಟಾಂಗ್ ಮಾತ್ರ ಇಂಗ್ಲೆಂಡ್ ಪರ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಲಿದ್ದಾರೆ.
The 16 players to take on the Aussies at Edgbaston and Lord’s ????????
Bring it on. #Ashes pic.twitter.com/ndlxpGsqm4
— England Cricket (@englandcricket) June 3, 2023
ಸರಣಿ ವೇಳಾಪಟ್ಟಿ ಮತ್ತು ಇಂಗ್ಲೆಂಡ್ ತಂಡ
ಜೂನ್ 16 ರಂದು ಆಶಸ್ ಪಂದ್ಯಗಳು ಆರಂಭವಾಗಲಿವೆ. ಸರಣಿಯ ಮೊದಲ ಪಂದ್ಯ ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್ ಮೈದಾನದಲ್ಲಿ ನಡೆಯಲಿದೆ. ಹಾಗೆಯೇ ಎರಡನೇ ಪಂದ್ಯವು ಜೂನ್ 28 ರಿಂದ ಲಾರ್ಡ್ಸ್‌ನಲ್ಲಿ ಆರಂಭವಾಲಿದೆ. ಮೂರನೇ ಟೆಸ್ಟ್ ಪಂದ್ಯ ಜುಲೈ 6 ರಿಂದ ಲೀಡ್ಸ್ನಲ್ಲಿ ಶುರುವಾಗಲಿದೆ. ಸರಣಿಯ ನಾಲ್ಕನೇ ಪಂದ್ಯ ಜುಲೈ 19 ರಿಂದ ಮ್ಯಾಂಚೆಸ್ಟರ್‌ನಲ್ಲಿ ಮತ್ತು ಕೊನೆಯ ಪಂದ್ಯ ಜುಲೈ 27 ರಿಂದ ಓವಲ್‌ನಲ್ಲಿ ಪ್ರಾರಂಭವಾಗಲಿದೆ.
ಆಶಸ್ ಸರಣಿಗೆ ಇಂಗ್ಲೆಂಡ್: ಬೆನ್ ಸ್ಟೋಕ್ಸ್ (ನಾಯಕ), ಜೇಮ್ಸ್ ಆಂಡರ್ಸನ್, ಜಾನಿ ಬೈರ್‌ಸ್ಟೋ, ಸ್ಟುವರ್ಟ್ ಬ್ರಾಡ್, ಹ್ಯಾರಿ ಬ್ರೂಕ್, ಜ್ಯಾಕ್ ಕ್ರಾಲಿ, ಬೆನ್ ಡಕೆಟ್, ಡಾನ್ ಲಾರೆನ್ಸ್, ಜಾಕ್ ಲೀಚ್, ಓಲಿ ಪೋಪ್, ಮ್ಯಾಥ್ಯೂ ಪಾಟ್ಸ್, ಓಲಿ ರಾಬಿನ್ಸನ್, ಜೋ ರೂಟ್, ಜೋಶ್ ಟಂಗ್, ಕ್ರಿಸ್ ವೋಕ್ಸ್ ಮತ್ತು ಮಾರ್ಕ್ ವುಡ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




