AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈಭವ್ ಔಟ್ ಆಗಲು ಕಾರಣವಾಯ್ತು ಆ ಒಂದು ‘ಸಿಗ್ನಲ್’

Vaibhav Sooryavanshi: ಕ್ರಿಕೆಟ್ ಮೈದಾನದಲ್ಲಿ ಅನುಭವದ ಎದುರು ಅಬ್ಬರಿಸುತ್ತಿದ್ದ ಯುವ ವೇಗಕ್ಕೆ ಬ್ರೇಕ್ ಹಾಕಿದ್ದು ಕೋಚ್ ಆಶಿಶ್ ನೆಹ್ರಾ ಅವರ ಒಂದು ಚಾಣಾಕ್ಷ ನಡೆ! ಬೌಂಡರಿಗಳ ಸುರಿಮಳೆಗೈಯುತ್ತಿದ್ದ ವೈಭವ್ ಸೂರ್ಯವಂಶಿ ಆರ್ಭಟವನ್ನು ಹತ್ತಿಕ್ಕಲು ನೆಹ್ರಾ ಡಗೌಟ್‌ನಿಂದಲೇ ನೀಡಿದ ಆ 'ಸಿಗ್ನಲ್' ಮತ್ತು ಮೊಹಮ್ಮದ್ ಸಿರಾಜ್ ಅವರ ಕಿಲ್ಲರ್ ಬೌನ್ಸರ್ ಈಗ ಐಪಿಎಲ್ 2026ರ ಅತ್ಯಂತ ಚರ್ಚಿತ ವಿಷಯವಾಗಿದೆ.

ವೈಭವ್ ಔಟ್ ಆಗಲು ಕಾರಣವಾಯ್ತು ಆ ಒಂದು 'ಸಿಗ್ನಲ್'
Nehra - Vaibhav - Siraj
ಝಾಹಿರ್ ಯೂಸುಫ್
|

Updated on:May 10, 2026 | 10:56 AM

Share

IPL 2026: ಕ್ರಿಕೆಟ್ ಎಂಬುದು ಕೇವಲ ದೈಹಿಕ ಬಲದ ಆಟವಲ್ಲ, ಅದು ಬುದ್ಧಿವಂತಿಕೆಯ ಚದುರಂಗದಾಟ ಎಂಬುದನ್ನು ಗುಜರಾತ್ ಟೈಟಾನ್ಸ್ ತಂಡದ ಕೋಚ್ ಆಶಿಶ್ ನೆಹ್ರಾ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಮೊಹಮ್ಮದ್ ಸಿರಾಜ್ ಅವರ ಓವರ್‌ನಲ್ಲಿ ರನ್ ಮಳೆ ಹರಿಸುತ್ತಿದ್ದ ವೈಭವ್ ಸೂರ್ಯವಂಶಿಯನ್ನು ಕಟ್ಟಿಹಾಕಲು ಡಗೌಟ್‌ನಿಂದ ನೆಹ್ರಾ ನೀಡಿದ ಒಂದು ಸಣ್ಣ ‘ಮಾಸ್ಟರ್‌ಸ್ಟ್ರೋಕ್’ ಸಿಗ್ನಲ್, ಇಡೀ ಪಂದ್ಯದ ಚಿತ್ರಣ ಬದಲಿಸಿತು.

ಹೌದು, ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, 230 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಆರಂಭ ಒದಗಿಸಿದ್ದರು. ಮೊಹಮ್ಮದ್ ಸಿರಾಜ್ ಎಸೆದ ಮೂರನೇ ಓವರ್‌ನಲ್ಲಿ ವೈಭವ್ ಒಂದು ಸಿಕ್ಸರ್ ಮತ್ತು ಮೂರು ಸತತ ಬೌಂಡರಿಗಳನ್ನು ಬಾರಿಸಿ ಸಿರಾಜ್‌ರನ್ನು ಒತ್ತಡಕ್ಕೆ ಸಿಲುಕಿಸಿದ್ದರು.

ಅಲ್ಲದೆ ಕೇವಲ 16 ಎಸೆತಗಳಲ್ಲಿ 36 ರನ್ ಗಳಿಸಿದ್ದ ವೈಭವ್ ಆಟ ನೋಡಿ ಅನುಭವಿ ವೇಗಿಗಳಾದ ಮೊಹಮ್ಮದ್ ಸಿರಾಜ್ ಹಾಗೂ ಕಗಿಸೊ ರಬಾಡ ಕೂಡ ಅಸಹಾಯಕರಾಗಿ ನಿಂತಿದ್ದರು. ಇತ್ತ ಸಿರಾಜ್ ಅವರ ಮುಖದಲ್ಲಿನ ಅಸಹಾಯಕತೆಯನ್ನು ಗಮನಿಸಿದ ಆಶಿಶ್ ನೆಹ್ರಾ ಒಂದು ಸಿಗ್ನಲ್ ನೀಡಿದ್ದಾರೆ.

ನೆಹ್ರಾ ಅವರ ಆ ಒಂದು ಸಿಗ್ನಲ್:

ವೈಭವ್ ಆರ್ಭಟ ಮುಂದುವರೆಯುತ್ತಿದ್ದಂತೆ ಡಗೌಟ್‌ನಲ್ಲಿದ್ದ ಗುಜರಾತ್ ಟೈಟಾನ್ಸ್ ಕೋಚ್ ಆಶಿಶ್ ನೆಹ್ರಾ ಅವರು ಮೈದಾನದಲ್ಲಿದ್ದ ಸಿರಾಜ್‌ಗೆ ಕೈ ಸನ್ನೆ ಮಾಡಿ ವಿಶೇಷ ಸೂಚನೆಯೊಂದನ್ನು ನೀಡಿದರು. ಅದರಂತೆ ಮೊಹಮ್ಮದ್ ಸಿರಾಜ್ ವೈಭವ್‌ಗೆ ಶಾರ್ಟ್ ಬಾಲ್ ಬೌನ್ಸರ್​ ಎಸೆದಿದ್ದಾರೆ.

146.6 ಕಿ.ಮೀ ವೇಗದಲ್ಲಿ ಬಂದ ಮಾರಕ ಬೌನ್ಸರ್ ಅನ್ನು ವೈಭವ್  ಪುಲ್ ಮಾಡಲು ಪ್ರಯತ್ನಿಸಿ ವಿಫಲರಾದರು. ಚೆಂಡು ಬ್ಯಾಟ್‌ನ ಎಡ್ಜ್​ಗೆ ತಾಗಿ ಅರ್ಶದ್ ಖಾನ್ ಕೈಸೇರಿತು. ಅಲ್ಲಿಗೆ ವೈಭವ್ ಸೂರ್ಯವಂಶಿಯ ಇನಿಂಗ್ಸ್ ಕೂಡ ಕೊನೆಗೊಂಡಿತು.

ಇದೀಗ ವೈಭವ್ ಸೂರ್ಯವಂಶಿಗಾಗಿ ಆಶಿಶ್ ನೆಹ್ರಾ ರೂಪಿಸಿದ್ದ ಮಾಸ್ಟರ್ ಪ್ಲ್ಯಾನ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪಂದ್ಯದ ಫಲಿತಾಂಶ:

ಈ ಪಮದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು 20 ಓವರ್​ಗಳಲ್ಲಿ 229 ರನ್​ ಕಲೆಹಾಕಿದ್ದರು. ಈ ಕಠಿಣ ಗುರಿ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡವು 16.3 ಓವರ್​ಗಳಲ್ಲಿ 152 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಗುಜರಾತ್ ಟೈಟಾನ್ಸ್ ತಂಡವು 77 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಶುಭ್​ಮನ್ ಗಿಲ್ ಪಡೆ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದೆ.

Published On - 10:51 am, Sun, 10 May 26

Follow Us