Team India: ಟೀಮ್ ಇಂಡಿಯಾ ಆಟಗಾರರ ಕೇಂದ್ರ ಒಪ್ಪಂದ ಪಟ್ಟಿ ಪ್ರಕಟ
BCCI Central Contract: ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಟೀಮ್ ಇಂಡಿಯಾ ಪುರುಷರ ತಂಡದ ಆಟಗಾರರೊಂದಿಗಿನ ವಾರ್ಷಿಕ ಒಪ್ಪಂದ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿಯ ಒಪ್ಪಂದದಲ್ಲಿ ಒಟ್ಟು 34 ಆಟಗಾರರು ಸ್ಥಾನ ಪಡೆದಿದ್ದಾರೆ. ಇವರಲ್ಲಿ ನಾಲ್ವರು ಎ ಪ್ಲಸ್ ಗ್ರೇಡ್ನಲ್ಲಿ ಕಾಣಿಸಿಕೊಂಡಿದ್ದಾರೆ.

ಭಾರತೀಯ ಕ್ರಿಕೆಟ್ ಮಂಡಳಿ (BCCI) ಟೀಮ್ ಇಂಡಿಯಾ (Team India) ಆಟಗಾರರ ಜೊತೆಗಿನ ವಾರ್ಷಿಕ ಕೇಂದ್ರ ಗುತ್ತಿಗೆ ಒಪ್ಪಂದ ಪಟ್ಟಿಯನ್ನು ಪ್ರಕಟಿಸಿದೆ. ಹೊಸ ಒಪ್ಪಂದದಲ್ಲಿ ಒಟ್ಟು 34 ಆಟಗಾರರು ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಯುವ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ (Ishan Kishan) ಮತ್ತು ಶ್ರೇಯಸ್ ಅಯ್ಯರ್ (Shreyas Iyer) ಕೂಡ ಕಾಣಿಸಿಕೊಂಡಿದ್ದಾರೆ. ಕಳೆದ ಸಾಲಿನ ಒಪ್ಪಂದದಿಂದ ಇಬ್ಬರನ್ನು ಕೈ ಬಿಡಲಾಗಿತ್ತು. ಇದೀಗ ನೂತನ ಒಪ್ಪಂದದಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಇಶಾನ್ ಕಿಶನ್ ಅವರನ್ನು ಸೇರ್ಪಡೆಗೊಳಿಸಲಾಗಿದೆ.
34 ಆಟಗಾರರಿಗೆ ಸ್ಥಾನ:
ಕಳೆದ ಸಾಲಿನ ಬಿಸಿಸಿಐನ ಕೇಂದ್ರ ಒಪ್ಪಂದದಲ್ಲಿ 30 ಆಟಗಾರರಿಗೆ ಮಾತ್ರ ಸ್ಥಾನ ನೀಡಲಾಗಿತ್ತು. ಆದರೆ ಈ ಬಾರಿ ಈ ಸಂಖ್ಯೆಯನ್ನು 34 ಕ್ಕೆ ಏರಿಸಲಾಗಿದೆ. ಅಲ್ಲದೆ 34 ಆಟಗಾರರನ್ನು 4 ಶ್ರೇಣಿಗಳಾಗಿ ವಿಂಗಡಿಸಲಾಗಿದೆ. ಇಲ್ಲಿ ಪ್ರತಿಯೊಬ್ಬ ಆಟಗಾರನಿಗೆ ಅವರ ದರ್ಜೆಗೆ ಅನುಗುಣವಾಗಿ ಬಿಸಿಸಿಐ ವಾರ್ಷಿಕ ಮೊತ್ತವನ್ನು ನೀಡಲಿದೆ.
ಎ+ ಗ್ರೇಡ್ನಲ್ಲಿರುವ ಆಟಗಾರರಿಗೆ ಗರಿಷ್ಠ 7 ಕೋಟಿ ರೂ. ನೀಡಲಾಗುತ್ತದೆ. ಹಾಗೆಯೇ ಎ ಗ್ರೇಡ್ನ ಆಟಗಾರರು 5 ಕೋಟಿ ರೂ. ಮತ್ತು ಬಿ ಗ್ರೇಡ್ ಆಟಗಾರರಿಗೆ 3 ಕೋಟಿ ರೂ. ನಿಗದಿ ಮಾಡಲಾಗಿದೆ. ಇನ್ನು ಸಿ ಗ್ರೇಡ್ನಲ್ಲಿರುವ ಆಟಗಾರರು ವಾರ್ಷಿಕವಾಗಿ ತಲಾ 1 ಕೋಟಿ ರೂ. ಪಡೆಯಲಿದ್ದಾರೆ.
A+ ನಲ್ಲಿ 4 ಆಟಗಾರರಿಗೆ ಸ್ಥಾನ:
ಬಿಸಿಸಿಐ ಕೇಂದ್ರ ಒಪ್ಪಂದದ A+ ದರ್ಜೆಯಲ್ಲಿ ಒಟ್ಟು 4 ಆಟಗಾರರಿಗೆ ಸ್ಥಾನ ನೀಡಲಾಗಿದೆ. ಈ ನಾಲ್ವರು ಆಟಗಾರರಲ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾಗಿರುವ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಇರುವುದು ವಿಶೇಷ. ಅದರಂತೆ ಬಿಸಿಸಿಐ ವಾರ್ಷಿಕ ಗುತ್ತಿಗೆ ಒಪ್ಪಂದ ಪಡೆದಿರುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ…
A+ ಗ್ರೇಡ್ನಲ್ಲಿರುವ ಆಟಗಾರರು ( ವಾರ್ಷಿಕ ತಲಾ 7 ಕೋಟಿ ರೂ.):
- ವಿರಾಟ್ ಕೊಹ್ಲಿ
- ರೋಹಿತ್ ಶರ್ಮಾ
- ಜಸ್ಪ್ರೀತ್ ಬುಮ್ರಾ
- ರವೀಂದ್ರ ಜಡೇಜಾ
A ಗ್ರೇಡ್ನಲ್ಲಿರುವ ಆಟಗಾರರು ( ವಾರ್ಷಿಕ ತಲಾ 5 ಕೋಟಿ ರೂ.):
- ಮೊಹಮ್ಮದ್ ಸಿರಾಜ್
- ಕೆಎಲ್ ರಾಹುಲ್
- ಶುಭ್ಮನ್ ಗಿಲ್
- ಹಾರ್ದಿಕ್ ಪಾಂಡ್ಯ
- ಮೊಹಮ್ಮದ್ ಶಮಿ
- ರಿಷಭ್ ಪಂತ್
B ಗ್ರೇಡ್ನಲ್ಲಿರುವ ಆಟಗಾರರು ( ವಾರ್ಷಿಕ ತಲಾ 3 ಕೋಟಿ ರೂ.):
- ಶ್ರೇಯಸ್ ಅಯ್ಯರ್
- ಸೂರ್ಯಕುಮಾರ್ ಯಾದವ್
- ಅಕ್ಷರ್ ಪಟೇಲ್
- ಕುಲ್ದೀಪ್ ಯಾದವ್
- ಯಶಸ್ವಿ ಜೈಸ್ವಾಲ್.
ಇದನ್ನೂ ಓದಿ: VIDEO: RCB ಅಭಿಮಾನಿಗಳ ಗಮನಕ್ಕೆ: ನೀವು ಸುಳ್ಳಿಗೆ ಮರುಳಾಗಿದ್ದೀರಿ
C ಗ್ರೇಡ್ನಲ್ಲಿರುವ ಆಟಗಾರರು ( ವಾರ್ಷಿಕ ತಲಾ 1 ಕೋಟಿ ರೂ.):
-
- ಇಶಾನ್ ಕಿಶನ್
- ರಿಂಕು ಸಿಂಗ್
- ತಿಲಕ್ ವರ್ಮಾ
- ರುತುರಾಜ್ ಗಾಯಕ್ವಾಡ್
- ಶಿವಂ ದುಬೆ
- ರವಿ ಬಿಷ್ಣೋಯ್
- ವಾಷಿಂಗ್ಟನ್ ಸುಂದರ್
- ಮುಖೇಶ್ ಕುಮಾರ್
- ಸಂಜು ಸ್ಯಾಮ್ಸನ್
- ಅರ್ಷದೀಪ್ ಸಿಂಗ್
- ಪ್ರಸಿದ್ಧ್ ಕೃಷ್ಣ
- ರಜತ್ ಪಾಟಿದಾರ್
- ಧ್ರುವ್ ಜುರೆಲ್
- ಸರ್ಫರಾಝ್ ಖಾನ್
- ನಿತೀಶ್ ಕುಮಾರ್ ರೆಡ್ಡಿ
- ಹರ್ಷಿತ್ ರಾಣಾ
- ಅಭಿಷೇಕ್ ಶರ್ಮಾ
- ಆಕಾಶ್ ದೀಪ್
- ವರುಣ್ ಚಕ್ರವರ್ತಿ
ಆಟಗಾರರೊಂದಿಗೆ ಬಿಸಿಸಿಐ ಒಪ್ಪಂದ ಪಟ್ಟಿ:
🚨 𝗡𝗘𝗪𝗦 🚨
BCCI announces annual player retainership 2024-25 – Team India (Senior Men)#TeamIndia
Details 🔽https://t.co/lMjl2Ici3P pic.twitter.com/CsJHaLSeho
— BCCI (@BCCI) April 21, 2025
ಬಿಸಿಸಿಐ ಹಾಗೂ ಟೀಮ್ ಇಂಡಿಯಾ ಆಟಗಾರರ ನಡುವಣ ಈ ಕೇಂದ್ರ ಒಪ್ಪಂದವು ಅಕ್ಟೋಬರ್ 1, 2024 ರಿಂದ ಸೆಪ್ಟೆಂಬರ್ 30, 2025 ರವರೆಗೆ ಚಾಲ್ತಿಯಲ್ಲಿ ಇರಲಿದೆ. ಇದಾದ ಬಳಿಕ ಮತ್ತೆ ಒಪ್ಪಂದವನ್ನು ಪುನರ್ ರೂಪಿಸಲಾಗುತ್ತದೆ.
Published On - 12:12 pm, Mon, 21 April 25