AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ಯಾಡೋ ಬ್ಯಾಟಿಂಗ್​ನೊಂದಿಗೆ ಮೈಮರೆತ ಬ್ಯಾಟರ್​… ವಿಚಿತ್ರವಾಗಿ ರನೌಟ್!

ಸಾಮಾನ್ಯವಾಗಿ ಬ್ಯಾಟರ್‌ಗಳು ಫೀಲ್ಡರ್‌ಗಳ ಚುರುಕಿನ ಥ್ರೋ ಅಥವಾ ರನ್ನಿಂಗ್ ನಡುವಿನ ಗೊಂದಲದಿಂದ ರನೌಟ್ ಆಗುತ್ತಾರೆ. ಆದರೆ ಪಂಜಾಬ್ ಟಿ20 ಲೀಗ್‌ನಲ್ಲಿ ನಡೆದ ಪಂದ್ಯವೊಂದರಲ್ಲಿ ಬ್ಯಾಟರ್ ಒಬ್ಬರು ಪಂದ್ಯದ ಮಧ್ಯದಲ್ಲೇ ಪಿಚ್ ಮೇಲೆ ನೆರಳು ಬ್ಯಾಟಿಂಗ್ ಮಾಡಲು ಹೋಗಿ ವಿಚಿತ್ರವಾಗಿ ರನೌಟ್ ಆಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿರುವ ಈ ಘಟನೆಯ ಸಂಪೂರ್ಣ ವಿವರ ಇಲ್ಲಿದೆ.

ಶ್ಯಾಡೋ ಬ್ಯಾಟಿಂಗ್​ನೊಂದಿಗೆ ಮೈಮರೆತ ಬ್ಯಾಟರ್​... ವಿಚಿತ್ರವಾಗಿ ರನೌಟ್!
ನೂರ್​ವೀರ್ ಸಿಂಗ್Image Credit source: x.com
ಝಾಹಿರ್ ಯೂಸುಫ್
|

Updated on: Sep 05, 2026 | 8:50 AM

Share

ಕ್ರಿಕೆಟ್‌ನಲ್ಲಿ ಪ್ರತಿ ಎಸೆತವೂ ಮುಖ್ಯ ಮತ್ತು ಪ್ರತಿ ಕ್ಷಣದ ಏಕಾಗ್ರತೆಯೂ ಅಷ್ಟೇ ನಿರ್ಣಾಯಕ. ಆದರೆ ಇಲ್ಲೊಬ್ಬ ಬ್ಯಾಟರ್ ಪಂದ್ಯದ ಎಸೆತವೊಂದು ಇನ್ನು ಚಾಲ್ತಿಯಲ್ಲಿರುವಾಗಲೇ , ಮೈಮರೆತು ಶ್ಯಾಡೋ ಬ್ಯಾಟಿಂಗ್ ಮಾಡಲು ಹೋಗಿ ವಿಚಿತ್ರವಾಗಿ ರನೌಟ್​ ಆಗಿದ್ದಾರೆ! ಇಂತಹದ್ದೊಂದು ಅಪರೂಪದ ರನೌಟ್​ಗೆ​ ಪಂಜಾಬ್‌ನಲ್ಲಿ ನಡೆಯುತ್ತಿರುವ ‘ಶೇರ್-ಎ-ಪಂಜಾಬ್ ಟಿ20 ಲೀಗ್’ ಸಾಕ್ಷಿಯಾಗಿದೆ.

ಶ್ಯಾಡೋ ಬ್ಯಾಟಿಂಗ್ ತಂದಿಟ್ಟ ಆಪತ್ತು!

ಶೇರ್-ಎ-ಪಂಜಾಬ್ ಟಿ20 ಲೀಗ್‌ನಲ್ಲಿ ಬಾಥಿಂಡಾ ರಾಯಲ್ಸ್ ತಂಡದ ಪರ ಆಡುತ್ತಿದ್ದ ಪಂಜಾಬ್‌ನ ವಿಕೆಟ್‌ಕೀಪರ್-ಬ್ಯಾಟರ್ ನೂರ್‌ವೀರ್ ಸಿಂಗ್ ಈ ವಿಚಿತ್ರ ರನ್ ಔಟ್‌ಗೆ ಬಲಿಯಾದ ದುರದೃಷ್ಟಕರ ಆಟಗಾರ.

ಬಾಥಿಂಡಾ ರಾಯಲ್ಸ್ ತಂಡವು ನೀಡಿದ 206 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುತ್ತಿದ್ದಾಗ, 14ನೇ ಓವರ್‌ನ ಕೊನೆಯ ಎಸೆತದಲ್ಲಿ ಈ ಘಟನೆ ನಡೆಯಿತು. ಆ ಓವರ್‌ನ ಕೊನೆಯ ಬಾಲ್ ಆಡಿದ ನಂತರ, ನೂರ್‌ವೀರ್ ಸಂಪೂರ್ಣವಾಗಿ ಮರೆತಿದ್ದರು.

ಇದನ್ನೂ ಓದಿ: ಡಾಕ್ಟರ್ ಸರ್ಟಿಫಿಕೇಟ್ ಇದ್ದರೆ ಸಾಕಾ? ಸುಂದರ್ ಆಯ್ಕೆ ವಿರುದ್ಧ ಶ್ರೀಕಾಂತ್ ಕಿಡಿ

ಓವರ್ ಮುಗಿಯಿತು ಅಥವಾ ಪ್ಲೇ ಮುಕ್ತಾಯಗೊಂಡಿದೆ ಎಂಬ ಭ್ರಮೆಯಲ್ಲಿದ್ದ ಅವರು, ಕ್ರೀಸ್​​ನಿಂದ ಮುಂದೆ ಬಂದು ತಮ್ಮ ಬ್ಯಾಟಿಂಗ್ ಶೈಲಿಯನ್ನು ಸುಧಾರಿಸಿಕೊಳ್ಳಲು ‘ಶ್ಯಾಡೋ ಬ್ಯಾಟಿಂಗ್’ (ನೆರಳಿನಲ್ಲಿ ಬ್ಯಾಟಿಂಗ್ ಪ್ರ್ಯಾಕ್ಟೀಸ್) ಮಾಡಲು ಮುಂದಾದರು.

ಕಣ್ಮುಚ್ಚಿ ಕಣ್ಬಿಡುವಷ್ಟರಲ್ಲಿ ರನೌಟ್!

ನೂರ್‌ವೀರ್ ಸಿಂಗ್ ತಮ್ಮ ಬ್ಯಾಟಿಂಗ್ ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ಸಂಪೂರ್ಣವಾಗಿ ಕ್ರೀಸ್‌ನಿಂದ ಹೊರಗೆ ಬಂದು ನಿಂತಿದ್ದರು. ಇದನ್ನೇ ಕಾಯುತ್ತಿದ್ದ ಎದುರಾಳಿ ತಂಡದ ಬೌಲರ್, ಚೆಂಡನ್ನು ನೇರವಾಗಿ ಸ್ಟಂಪ್ಸ್‌ಗೆ ಎಸೆದರು. ಬೇಲ್ಸ್ ಕೆಳಗೆ ಬಿದ್ದಾಗಲೂ ನೂರ್‌ವೀರ್‌ಗೆ ತಾನು ಕ್ರೀಸ್‌ನಿಂದ ಹೊರಗಿದ್ದೇನೆ ಮತ್ತು ಚೆಂಡು ಇನ್ನು ಡೆಡ್ ಆಗಿಲ್ಲ ಎಂಬ ಅರಿವೇ ಇರಲಿಲ್ಲ. ಅಂತಿಮವಾಗಿ ಅಂಪೈರ್ ಅವರನ್ನು ರನೌಟ್ ಎಂದು ಘೋಷಿಸಿದಾಗ ನೂರ್‌ವೀರ್‌ಗೆ ತಾನು ಮಾಡಿದ ತಪ್ಪು ಮನವರಿಕೆಯಾಯಿತು.

ಈ ವಿಚಿತ್ರ ರನೌಟ್​ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಇದನ್ನು ಆಟಗಾರನ ಬೇಜವಾಬ್ದಾರಿತನ ಎಂದರೆ, ಇನ್ನು ಕೆಲವರು ಇದನ್ನು ಕ್ರಿಕೆಟ್ ಇತಿಹಾಸದ ಅತ್ಯಂತ ವಿಚಿತ್ರ ‘ಬ್ರೈನ್ ಫೇಡ್’ ಕ್ಷಣ ಎಂದು ಕರೆಯುತ್ತಿದ್ದಾರೆ.

Follow Us
ಕೃಷ್ಣ ಜನ್ಮಾಷ್ಟಮಿ 2026: ಉಡುಪಿ ಶ್ರೀಕೃಷ್ಣ ಮಠದಲ್ಲಿ ಅರ್ಘ್ಯ ಪ್ರದಾನ
ಕೃಷ್ಣ ಜನ್ಮಾಷ್ಟಮಿ 2026: ಉಡುಪಿ ಶ್ರೀಕೃಷ್ಣ ಮಠದಲ್ಲಿ ಅರ್ಘ್ಯ ಪ್ರದಾನ
ಬೆಂಗಳೂರು: ಅಕ್ರಮವಾಗಿ ಸಾಗಿಸುತ್ತಿದ್ದ ಭಾರಿ ಪ್ರಮಾಣದ ಸ್ಫೋಟಕ ಜಪ್ತಿ
ಬೆಂಗಳೂರು: ಅಕ್ರಮವಾಗಿ ಸಾಗಿಸುತ್ತಿದ್ದ ಭಾರಿ ಪ್ರಮಾಣದ ಸ್ಫೋಟಕ ಜಪ್ತಿ
ಇಂದು ಈ ರಾಶಿಯವರಿಗಿದೆ ಐದು ಗ್ರಹಗಳ ಶುಭಫಲ!
ಇಂದು ಈ ರಾಶಿಯವರಿಗಿದೆ ಐದು ಗ್ರಹಗಳ ಶುಭಫಲ!
ಕಣ್ಣೀರಿಡುತ್ತಾ ಕೆಎಸ್‌ಆರ್‌ಟಿಸಿ ಬಸ್​​ಗೆ ಮುತ್ತನ್ನಿಟ್ಟ ಕೇರಳದ ಚಾಲಕ
ಕಣ್ಣೀರಿಡುತ್ತಾ ಕೆಎಸ್‌ಆರ್‌ಟಿಸಿ ಬಸ್​​ಗೆ ಮುತ್ತನ್ನಿಟ್ಟ ಕೇರಳದ ಚಾಲಕ
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ದಕ್ಷಿಣದ ಗೋವರ್ಧನಗಿರಿ ಎಂದು ಕರೆಯುವುದೇಕೆ
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ದಕ್ಷಿಣದ ಗೋವರ್ಧನಗಿರಿ ಎಂದು ಕರೆಯುವುದೇಕೆ
ಟಿವಿ9 ಇಂಪ್ಯಾಕ್ಟ್: 8 ವರ್ಷದಿಂದ ಆಗದ ಕೆಲಸ ಕೇವಲ ಹತ್ತು ದಿನದಲ್ಲೇ ಆಯ್ತು!
ಟಿವಿ9 ಇಂಪ್ಯಾಕ್ಟ್: 8 ವರ್ಷದಿಂದ ಆಗದ ಕೆಲಸ ಕೇವಲ ಹತ್ತು ದಿನದಲ್ಲೇ ಆಯ್ತು!
ಬಿಗ್ ಬಾಸ್ ಸ್ಪರ್ಧಿಗಳ ವಿಡಿಯೋ ಹಂಚಿಕೊಂಡ ಕಲರ್ಸ್ ಕನ್ನಡ; ಯಾರು ಗೊತ್ತಾಯ್ತಾ
ಬಿಗ್ ಬಾಸ್ ಸ್ಪರ್ಧಿಗಳ ವಿಡಿಯೋ ಹಂಚಿಕೊಂಡ ಕಲರ್ಸ್ ಕನ್ನಡ; ಯಾರು ಗೊತ್ತಾಯ್ತಾ
ದೆಹಲಿಯಲ್ಲಿ ಧಾರಾಕಾರ ಮಳೆ; ರಸ್ತೆಯಲ್ಲಿ ನಿಂತ ನೀರಿನಲ್ಲಿ ಈಜಾಡಿದ ಮಕ್ಕಳು
ದೆಹಲಿಯಲ್ಲಿ ಧಾರಾಕಾರ ಮಳೆ; ರಸ್ತೆಯಲ್ಲಿ ನಿಂತ ನೀರಿನಲ್ಲಿ ಈಜಾಡಿದ ಮಕ್ಕಳು
ವಿಚ್ಛೇದನದ ಬಗ್ಗೆ ಕೇಳಿದ್ದಕ್ಕೆ ದುನಿಯಾ ವಿಜಯ್ ನೀಡಿದ ಪ್ರತಿಕ್ರಿಯೆ ಏನು?
ವಿಚ್ಛೇದನದ ಬಗ್ಗೆ ಕೇಳಿದ್ದಕ್ಕೆ ದುನಿಯಾ ವಿಜಯ್ ನೀಡಿದ ಪ್ರತಿಕ್ರಿಯೆ ಏನು?
ಉದ್ಯಾನವನಗಳ ಸಂರಕ್ಷಣಾ ತಿದ್ದುಪಡಿ ವಿಧೇಯಕ ಸರ್ಕಾರಕ್ಕೆ ವಾಪಸ್
ಉದ್ಯಾನವನಗಳ ಸಂರಕ್ಷಣಾ ತಿದ್ದುಪಡಿ ವಿಧೇಯಕ ಸರ್ಕಾರಕ್ಕೆ ವಾಪಸ್