AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾರ್ಡರ್-ಗವಾಸ್ಕರ್ ಟ್ರೋಫಿ ವೇಳಾಪಟ್ಟಿಯಲ್ಲಿ ಬದಲಾವಣೆ ಸಾಧ್ಯತೆ

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 2027ರ ಬಾರ್ಡರ್-ಗವಾಸ್ಕರ್ ಟ್ರೋಫಿಯ 4ನೇ ಟೆಸ್ಟ್ ಪಂದ್ಯದ ಸ್ಥಳ ರಾಂಚಿಯಿಂದ ಬದಲಾಗುವ ಸಾಧ್ಯತೆ ಇದೆ. ಪೂರ್ವ ಭಾರತದಲ್ಲಿ ಸಂಜೆಯ ಬೆಳಕಿನ ಕೊರತೆ ಮತ್ತು ಚಳಿ ಕಾರಣ, 90 ಓವರ್‌ಗಳ ಆಟ ಕಷ್ಟವಾಗಲಿದೆ. ಇದು WTC ಫೈನಲ್‌ ರೇಸ್‌ನಲ್ಲಿರುವ ಭಾರತಕ್ಕೆ ನಿರ್ಣಾಯಕ. ವಿಶಾಖಪಟ್ಟಣಂ, ಹೈದರಾಬಾದ್, ಅಥವಾ ರಾಜ್‌ಕೋಟ್ ಸಂಭಾವ್ಯ ಹೊಸ ಸ್ಥಳಗಳಾಗಿವೆ.

ಬಾರ್ಡರ್-ಗವಾಸ್ಕರ್ ಟ್ರೋಫಿ ವೇಳಾಪಟ್ಟಿಯಲ್ಲಿ ಬದಲಾವಣೆ ಸಾಧ್ಯತೆ
ಭಾರತ Vs ಆಸ್ಟ್ರೇಲಿಯಾImage Credit source: RCB X
ಪೃಥ್ವಿಶಂಕರ
|

Updated on: Sep 18, 2026 | 9:02 PM

Share

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು ಮುಂದಿನ ವರ್ಷ ಅಂದರೆ ಜನವರಿ 21 ರಿಂದ ಮಾರ್ಚ್ 3, 2027 ರವರೆಗೆ ನಡೆಸಲು ತೀರ್ಮಾನಿಸಲಾಗಿದೆ. ಆದರೀಗ ಕೇಳಿಬಂದಿರುವ ಮಾಹಿತಿ ಪ್ರಕಾರ ಪ್ರಸ್ತಾವಿತ ವೇಳಾಪಟ್ಟಿಯಲ್ಲಿ ಪ್ರಮುಖ ಬದಲಾವಣೆಯಾಗಬಹುದು. ವಾಸ್ತವವಾಗಿ ರಾಂಚಿಯ ಜೆಎಸ್‌ಸಿಎ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಸರಣಿಯ ನಾಲ್ಕನೇ ಪಂದ್ಯವನ್ನು ನಡೆಸಲು ತೀರ್ಮಾನಿಸಲಾಗಿತ್ತು. ಆದರೀಗ ಈ ಪಂದ್ಯದ ಸ್ಥಳವನ್ನು ಬೇರೆಡೆಗೆ ಸ್ಥಳಾಂತರಿಸಬಹುದು ಎನ್ನಲಾಗುತ್ತಿದೆ.

ಬೇಗನೇ ಸೂರ್ಯಸ್ತ

ವರದಿಗಳ ಪ್ರಕಾರ, ಜನವರಿ ಮತ್ತು ಫೆಬ್ರವರಿಯಲ್ಲಿ ದೇಶದ ಪೂರ್ವ ಭಾಗದಲ್ಲಿ ಸೂರ್ಯ ಬೇಗನೆ ಮುಳುಗುವುದರಿಂದ ಬೆಳಕಿನ ಕೊರತೆ ಉಂಟಾಗುತ್ತದೆ. ಇದು ಆಟಕ್ಕೆ ಅಡ್ಡಿಪಡಿಸಬಹುದು ಎಂಬುದು ಬಿಸಿಸಿಐನ ಕಳವಳ ಕಾರಣವಾಗಿದೆ. ಸೂರ್ಯಸ್ತ ಬೇಗನೆ ಆಗುವ ಕಾರಣದಿಂದ ಪ್ರತಿದಿನ 90 ಓವರ್‌ಗಳ ಆಟವನ್ನು ನಡೆಸುವುದು ಕಷ್ಟವಾಗಬಹುದು. ಇದು ಪಂದ್ಯದ ಫಲಿತಾಂಶದ ಮೇಲೆ ಪರಿಣಾಮ ಬೀರುವುದಂತೂ ಖಚಿತ. ಅದರಲ್ಲೂ ಡಬ್ಲ್ಯೂಟಿಸಿ ಫೈನಲ್ ರೇಸ್​ನಲ್ಲಿರುವ ಭಾರತ ತಂಡಕ್ಕೆ ಎಲ್ಲಾ ಪಂದ್ಯಗಳ ಫಲಿತಾಂಶ ಹೊರಬೀಳುವುದು ಅತ್ಯವಶ್ಯಕವಾಗಿದೆ.

4ನೇ ಪಂದ್ಯದ ಸ್ಥಳ ಬದಲಾವಣೆ ಸಾಧ್ಯತೆ

ಮೇಲೆ ಹೇಳಿದಂತೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ರೇಸ್​ನಲ್ಲಿರುವ ಭಾರತ ತಂಡಕ್ಕೆ ಆಸ್ಟ್ರೇಲಿಯಾ ವಿರುದ್ಧದ ಈ ಟೆಸ್ಟ್ ಸರಣಿಯು ನಿರ್ಣಾಯಕವಾಗಿದೆ. ಆದಾಗ್ಯೂ, ಪೂರ್ವ ಭಾರತದ ರಾಂಚಿಯಲ್ಲಿ ಫೆಬ್ರವರಿ ಮೂರನೇ ವಾರದಲ್ಲಿ (ಫೆಬ್ರವರಿ 19-23) ಸಂಜೆ 4:30 ರಿಂದ 5:00 ರ ನಡುವೆ ಕತ್ತಲೆ ಆವರಿಸುತ್ತದೆ. ಇದು ಆಟದ ಸಮಯವನ್ನು ಕಡಿಮೆ ಮಾಡುವುದಲ್ಲದೆ, ಡ್ರಾ ಆಗುವ ಅಪಾಯವನ್ನು ಹೆಚ್ಚಿಸುತ್ತದೆ. ಅಲ್ಲದೆ ತೀವ್ರ ಚಳಿಯಿಂದಾಗಿ ಪಿಚ್ ಭಾರತದ ಸ್ಪಿನ್ ತಂತ್ರಕ್ಕೆ ಅನುಕೂಲಕರವಾಗಿರುವುದಿಲ್ಲ ಎಂದು ತಂಡದ ಆಡಳಿತ ಮಂಡಳಿ ನಂಬಿದೆ. ಪರಿಣಾಮವಾಗಿ, ಪಂದ್ಯವನ್ನು ಹಗಲು ಬೆಳಕು ಸಮಸ್ಯೆಯಿಲ್ಲದ ಸ್ಥಳಕ್ಕೆ ಸ್ಥಳಾಂತರಿಸಲು ಆಡಳಿತ ಮಂಡಳಿ ಶಿಫಾರಸು ಮಾಡಿದೆ.

ಆಟ ಅರ್ಧ ಗಂಟೆ ಬೇಗನೆ ಆರಂಭ

ವಿಶಾಖಪಟ್ಟಣಂ, ಹೈದರಾಬಾದ್ ಅಥವಾ ರಾಜ್‌ಕೋಟ್​ ಈ ಮೂರು ನಗರಗಳ ಒಂದು ಸ್ಥಳದಲ್ಲಿ ನಾಲ್ಕನೇ ಟೆಸ್ಟ್ ಪಂದ್ಯವನ್ನು ನಡೆಸುವ ಸಾಧ್ಯತೆಗಳಿವೆ. ಏತನ್ಮಧ್ಯೆ, ಸರಣಿಯ ಮೂರನೇ ಟೆಸ್ಟ್ ಪಂದ್ಯವನ್ನು ಫೆಬ್ರವರಿ 11 ಮತ್ತು 15 ರ ನಡುವೆ ಅಸ್ಸಾಂನ ಗುವಾಹಟಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ಈಶಾನ್ಯ ಪ್ರದೇಶದಲ್ಲಿ ನೆಲೆಗೊಂಡಿರುವ ಗುವಾಹಟಿ ತನ್ನ ಆತಿಥೇಯ ಹಕ್ಕುಗಳನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ಆದಾಗ್ಯೂ, ಗುವಾಹಟಿ ಟೆಸ್ಟ್‌ನ ಆರಂಭದ ಸಮಯವನ್ನು ಬದಲಾಯಿಸಬಹುದು ಮತ್ತು ಪಂದ್ಯವು ಸುಮಾರು 30 ನಿಮಿಷಗಳ ಮೊದಲು ಪ್ರಾರಂಭವಾಗಬಹುದು.

ಟೀಂ ಇಂಡಿಯಾ ಮುಂದಿನ ಟೆಸ್ಟ್ ಸರಣಿಯನ್ನು ಯಾವಾಗ, ಎಲ್ಲಿ ಆಡಲಿದೆ?

ಬಾರ್ಡರ್-ಗವಾಸ್ಕರ್ ಟ್ರೋಫಿ 2027: ಪ್ರಸ್ತಾವಿತ ವೇಳಾಪಟ್ಟಿ

  • ಮೊದಲ ಟೆಸ್ಟ್ (ಜನವರಿ 21-25): ವಿಸಿಎ ಕ್ರೀಡಾಂಗಣ, ನಾಗ್ಪುರ
  • ಎರಡನೇ ಟೆಸ್ಟ್ (ಜನವರಿ 29-ಫೆಬ್ರವರಿ): ಎಂಎ ಚಿದಂಬರಂ ಕ್ರೀಡಾಂಗಣ, ಚೆನ್ನೈ
  • ಮೂರನೇ ಟೆಸ್ಟ್ (ಫೆಬ್ರವರಿ 11-15): ಎಸಿಎ ಕ್ರೀಡಾಂಗಣ, ಗುವಾಹಟಿ (ಸಮಯ ಬದಲಾವಣೆ ಸಾಧ್ಯತೆ)
  • 4ನೇ ಟೆಸ್ಟ್ (ಫೆಬ್ರವರಿ 19–23): ಜೆಎಸ್‌ಸಿಎ ಕ್ರೀಡಾಂಗಣ, ರಾಂಚಿ (ಸ್ಥಳ ಬದಲಾವಣೆ ಬಹುತೇಕ ಖಚಿತ)
  • ಐದನೇ ಟೆಸ್ಟ್ (ಫೆಬ್ರವರಿ 27-ಮಾರ್ಚ್ 3): ನರೇಂದ್ರ ಮೋದಿ ಕ್ರೀಡಾಂಗಣ, ಅಹಮದಾಬಾದ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ನಾನಾ ಪಾಟೇಕರ್ ಜೊತೆ ಕರಿ ಸುಬ್ಬು ಒಡನಾಟ ಶುರು ಆಗಿದ್ದು ಹೇಗೆ? ವಿವರಿಸಿದ ನಟ
ನಾನಾ ಪಾಟೇಕರ್ ಜೊತೆ ಕರಿ ಸುಬ್ಬು ಒಡನಾಟ ಶುರು ಆಗಿದ್ದು ಹೇಗೆ? ವಿವರಿಸಿದ ನಟ
ಮುಂಬೈನ ಮುಲುಂಡ್ ಕಾರ್ಮಿಕರ ಕ್ಯಾಂಪ್‌ನಲ್ಲಿ ಭೀಕರ ಬೆಂಕಿ ದುರಂತ
ಮುಂಬೈನ ಮುಲುಂಡ್ ಕಾರ್ಮಿಕರ ಕ್ಯಾಂಪ್‌ನಲ್ಲಿ ಭೀಕರ ಬೆಂಕಿ ದುರಂತ
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ