AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

CSK ಮಾಸ್ಟರ್ ಪ್ಲ್ಯಾನ್: 14.2 ಕೋಟಿ ರೂ. ಆಟಗಾರ ರಿಲೀಸ್?

ರಂಗು ರಂಗಿನ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್​ನ ಮಿನಿ ಹರಾಜು ಪ್ರಕ್ರಿಯೆ 2026 ರ ಡಿಸೆಂಬರ್ 16 ರಂದು ನಡೆಯಲಿದೆ. ಈ ಹರಾಜಿಗೂ ಮುನ್ನ ಎಲ್ಲಾ 10 ತಂಡಗಳು ತಾವು ಉಳಿಸಿಕೊಳ್ಳುವ ಮತ್ತು ಬಿಡುಗಡೆ ಮಾಡುವ ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸಬೇಕಾಗಿದೆ. ಈ ಆಟಗಾರರ ರಿಟೆನ್ಷನ್ ಪಟ್ಟಿಯನ್ನು ಸಲ್ಲಿಸಲು ಬಿಸಿಸಿಐ ನವೆಂಬರ್ 15 ಅನ್ನು ಅಂತಿಮ ಗಡುವು ಎಂದು ನಿಗದಿಪಡಿಸಿದೆ. 

CSK ಮಾಸ್ಟರ್ ಪ್ಲ್ಯಾನ್: 14.2 ಕೋಟಿ ರೂ. ಆಟಗಾರ ರಿಲೀಸ್?
CSKImage Credit source: IPL
ಝಾಹಿರ್ ಯೂಸುಫ್
|

Updated on: Nov 02, 2026 | 1:53 PM

Share

ಚೆನ್ನೈ ಸೂಪರ್ ಕಿಂಗ್ಸ್ ಮುಂಬರುವ ಐಪಿಎಲ್ ಮಿನಿ ಹರಾಜಿಗೂ ಮುನ್ನ ತನ್ನ ಸ್ಟಾರ್ ಆಲ್‌ರೌಂಡರ್ ಪ್ರಶಾಂತ್ ವೀರ್ ಅವರನ್ನು ಬಿಡುಗಡೆ ಮಾಡುವುದು ಬಹುತೇಕ ಖಚಿತವಾಗಿದೆ. ಸಿಎಸ್​ಕೆ ಮೂಲಗಳ ಮಾಹಿತಿ ಪ್ರಕಾರ, ಈ ಬಾರಿಯ ಹರಾಜಿಗೂ ಮುನ್ನ ಅವರನ್ನು ತಂಡದಿಂದ ಕೈ ಬಿಟ್ಟು, ತದನಂತರ ಹರಾಜಿನಲ್ಲಿ ಕಡಿಮೆ ಬೆಲೆಗೆ ‘ಬೈ-ಬ್ಯಾಕ್’ (ಮರಳಿ ಖರೀದಿ) ಮಾಡಲು ಫ್ರಾಂಚೈಸಿ ಮಾಸ್ಟರ್ ಪ್ಲ್ಯಾನ್ ರೂಪಿಸುತ್ತಿದೆ.

ಮಿನಿ ಹರಾಜಿಗೂ ಮುನ್ನ ಬಿಡುಗಡೆ ಮಾಡಬೇಕಾದ ಆಟಗಾರರ ಪಟ್ಟಿಯನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಸಿದ್ಧಪಡಿಸುತ್ತಿದ್ದು, ಈ ಲಿಸ್ಟ್‌ನಲ್ಲಿ ಯುವ ಆಲ್‌ರೌಂಡರ್ ಪ್ರಶಾಂತ್ ವೀರ್ ಹೆಸರು ಮುಂಚೂಣಿಯಲ್ಲಿದೆ. ಈ ಯುವ ಆಟಗಾರನಿಗೆ ನೀಡಲಾಗುತ್ತಿರುವ ಭಾರಿ ಮೊತ್ತದ ಸಂಭಾವನೆಯೇ ಸಿಎಸ್‌ಕೆ ಇಂತಹದ್ದೊಂದು ಕಠಿಣ ನಿರ್ಧಾರ ಕೈಗೊಳ್ಳಲು ಮುಖ್ಯ ಕಾರಣ ಎನ್ನಲಾಗಿದೆ.

14.2 ಕೋಟಿ ರೂ. ಆಟಗಾರ!

ಐಪಿಎಲ್ ಸೀಸನ್​-19 ಗಾಗಿ ಅಬುಧಾಬಿಯಲ್ಲಿ ನಡೆದಿದ್ದ ಹರಾಜಿನಲ್ಲಿ ಪ್ರಶಾಂತ್ ವೀರ್ ಅವರನ್ನು ಸಿಎಸ್‌ಕೆ ಬರೋಬ್ಬರಿ ₹14.20 ಕೋಟಿ ನೀಡಿ ಖರೀದಿಸಿತ್ತು. ಈ ಮೂಲಕ ಅವರು ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಮೊತ್ತಕ್ಕೆ ಹರಾಜಾದ ಅನ್‌ಕ್ಯಾಪ್ಡ್ (ಭಾರತ ತಂಡವನ್ನು ಪ್ರತಿನಿಧಿಸದ) ಆಟಗಾರ ಎಂಬ ದಾಖಲೆ ಬರೆದಿದ್ದರು.

ಆದರೆ, ಐಪಿಎಲ್ 2026ರ ಸೀಸನ್‌ನಲ್ಲಿ ಪ್ರಶಾಂತ್ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಆಡಿದ 6 ಪಂದ್ಯಗಳಲ್ಲಿ ಕೇವಲ 90 ರನ್ ಗಳಿಸಲಷ್ಟೇ ಶಕ್ತರಾದ ಅವರು, ಬೌಲಿಂಗ್‌ನಲ್ಲಿ ಒಂದೂ ವಿಕೆಟ್ ಪಡೆಯಲಿಲ್ಲ. ಹೀಗಾಗಿ, ಯುವ ಆಟಗಾರನನ್ನು ಸದ್ಯಕ್ಕೆ ತಂಡದಿಂದ ಕೈಬಿಟ್ಟು, ಮುಂಬರುವ ಹರಾಜಿನಲ್ಲಿ ಕಡಿಮೆ ಮೊತ್ತಕ್ಕೆ ಮರಳಿ ಖರೀದಿಸಲು ಸಿಎಸ್​ಕೆ  ಪ್ಲ್ಯಾನ್ ರೂಪಿಸಿದೆ.

ಸಿಎಸ್​ಕೆಯ ತಂತ್ರವೇನು?

  • ಹರಾಜು ಪರ್ಸ್ ಮೊತ್ತ ಹೆಚ್ಚಳ: ಪ್ರಸ್ತುತ ಚೆನ್ನೈ ಸೂಪರ್ ಕಿಂಗ್ಸ್ ಬಳಿ ಕೇವಲ ₹2.4 ಕೋಟಿ ಬಾಕಿ ಉಳಿದಿದೆ. ಪ್ರಶಾಂತ್ ವೀರ್ ಅವರನ್ನು ಬಿಡುಗಡೆ ಮಾಡುವುದರಿಂದ ಸಿಎಸ್‌ಕೆ ಖಾತೆಗೆ ₹14.20 ಕೋಟಿ ಮರಳಿ ಬರಲಿದ್ದು, ಡಿಸೆಂಬರ್‌ನಲ್ಲಿ ನಡೆಯಲಿರುವ ಮಿನಿ ಹರಾಜಿನಲ್ಲಿ ವಿದೇಶಿ ಆಟಗಾರರು ಹಾಗೂ ಬೌಲರ್‌ಗಳನ್ನು ಖರೀದಿಸಲು ಭಾರಿ ನೆರವಾಗಲಿದೆ.
  • ಕಡಿಮೆ ಬೆಲೆಗೆ ಮರಳಿ ಖರೀದಿ: ಪ್ರಶಾಂತ್ ವೀರ್ ಅವರ ಪ್ರತಿಭೆಯ ಬಗ್ಗೆ ಸಿಎಸ್‌ಕೆಗೆ ಇನ್ನೂ ನಂಬಿಕೆಯಿದೆ. ಯುಪಿ ಟಿ20 ಲೀಗ್‌ನಲ್ಲಿ ‘ಪ್ಲೇಯರ್ ಆಫ್ ದಿ ಟೂರ್ನಮೆಂಟ್’ ಆಗಿದ್ದ ಅವರು, ಇತ್ತೀಚೆಗೆ ಸಿ.ಕೆ. ನಾಯುಡು ಟ್ರೋಫಿಯಲ್ಲಿ 7 ವಿಕೆಟ್ ಕಿತ್ತು ಮಿಂಚಿದ್ದಾರೆ. ಹೀಗಾಗಿ, ಅವರನ್ನು ಈಗ ಬಿಡುಗಡೆ ಮಾಡಿ, ಹರಾಜಿನಲ್ಲಿ ಕಡಿಮೆ ಬೆಲೆಗೆ ಮರಳಿ ಖರೀದಿಸುವುದು ಚೆನ್ನೈ ಮ್ಯಾನೇಜ್‌ಮೆಂಟ್‌ನ ಪ್ಲ್ಯಾನ್ ಆಗಿದೆ.
  • ಕಾರ್ತಿಕ್ ಶರ್ಮಾಗೆ ಮಣೆ: ಪ್ರಶಾಂತ್ ಅವರೊಂದಿಗೆ ₹14.20 ಕೋಟಿಗೆ ಹರಾಜಾಗಿದ್ದ ಮತ್ತೊಬ್ಬ ಅನ್‌ಕ್ಯಾಪ್ಡ್ ವಿಕೆಟ್‌ಕೀಪರ್-ಬ್ಯಾಟರ್ ಕಾರ್ತಿಕ್ ಶರ್ಮಾ ಅವರನ್ನು ಸಿಎಸ್‌ಕೆ ಉಳಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಕಾರ್ತಿಕ್ ಕಳೆದ ಸೀಸನ್‌ನಲ್ಲಿ 11 ಪಂದ್ಯಗಳಿಂದ 295 ರನ್ ಗಳಿಸಿ ಮಧ್ಯಮ ಕ್ರಮಾಂಕದಲ್ಲಿ ಬಲ ತುಂಬಿದ್ದರು.

ಅಂದರೆ, ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಪ್ರಶಾಂತ್ ವೀರ್ ಒಬ್ಬರನ್ನೇ ಬಿಡುಗಡೆ ಮಾಡುವುದರಿಂದ ತನ್ನ ಪರ್ಸ್ ಮೊತ್ತವನ್ನು ಬರೋಬ್ಬರಿ ₹14.20 ಕೋಟಿಯಷ್ಟು ಹೆಚ್ಚಿಸಿಕೊಳ್ಳಬಹುದು. ಇದರೊಂದಿಗೆ ಇನ್ನೂ ಕೆಲವು ಆಟಗಾರರನ್ನು ಕೈಬಿಟ್ಟರೆ ತಂಡದ ಒಟ್ಟು ಹರಾಜು ಮೊತ್ತ ₹20 ಕೋಟಿ ದಾಟಲಿದೆ. ಹೀಗೆ ಪರ್ಸ್ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸಿಕೊಳ್ಳುವ ಮೂಲಕ, ಮುಂಬರುವ ಹರಾಜಿನಲ್ಲಿ ಸ್ಟಾರ್ ಆಟಗಾರರನ್ನು ಖರೀದಿಸಲು ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಭರ್ಜರಿ ಪ್ಲ್ಯಾನ್ ರೂಪಿಸಿದೆ.

ಇದನ್ನೂ ಓದಿ: ಆಸ್ಟ್ರೇಲಿಯಾ ತಂಡ ಪ್ರಕಟ: ಟೀಮ್​ನಲ್ಲಿ 8 ಹೊಸ ಆಟಗಾರರು!

ಒಟ್ಟಾರೆಯಾಗಿ, ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಈ ಬಾರಿ ಕೇವಲ ಭಾವನೆಗಳಿಗೆ ಬೆಲೆ ಕೊಡದೆ, ಸಂಪೂರ್ಣ ಪ್ರಾಯೋಗಿಕ ಹಾಗೂ ಚಾಣಾಕ್ಷ ತಂತ್ರದೊಂದಿಗೆ ಕಣಕ್ಕಿಳಿಯಲು ಸಿದ್ಧವಾಗಿದೆ. ₹14.20 ಕೋಟಿಯ ದುಬಾರಿ ಆಲ್‌ರೌಂಡರ್ ಪ್ರಶಾಂತ್ ವೀರ್ ಅವರನ್ನು ಬಿಡುಗಡೆ ಮಾಡುವ ನಿರ್ಧಾರವು ಮೇಲ್ನೋಟಕ್ಕೆ ಅಚ್ಚರಿ ಮೂಡಿಸಿದರೂ, ಹರಾಜಿನ ಪರ್ಸ್ ಮೊತ್ತವನ್ನು ಹೆಚ್ಚಿಸಿಕೊಂಡು ತಂಡದ ಸಮತೋಲನವನ್ನು ಕಾಯ್ದುಕೊಳ್ಳಲು ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಜಾಣತನದ ಹೆಜ್ಜೆಯನ್ನಿಟ್ಟಿದೆ. ಆದಾಗ್ಯೂ, ಮುಂಬರುವ ಹರಾಜಿನಲ್ಲಿ ಪ್ರಶಾಂತ್ ವೀರ್ ಅವರನ್ನು ಕಡಿಮೆ ಬೆಲೆಗೆ ಮರಳಿ ಖರೀದಿಸುವ ಸಿಎಸ್‌ಕೆಯ ಈ ಪ್ಲ್ಯಾನ್ ಯಶಸ್ವಿಯಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ವಿಎ ಪರೀಕ್ಷೆಯಲ್ಲಿ ಅಕ್ರಮ: ಶಂಕರ್ ಬನ್ನೂರು ವಿರುದ್ಧ ಎಫ್​ಐಆರ್​​
ವಿಎ ಪರೀಕ್ಷೆಯಲ್ಲಿ ಅಕ್ರಮ: ಶಂಕರ್ ಬನ್ನೂರು ವಿರುದ್ಧ ಎಫ್​ಐಆರ್​​
ಸಿಎಂ ಡಿಕೆ ಶಿವಕುಮಾರ್ ಭೇಟಿಗೆ ಆಗಮಿಸಿದ ಸಂಸದ ಬಸವರಾಜ ಬೊಮ್ಮಾಯಿ!
ಸಿಎಂ ಡಿಕೆ ಶಿವಕುಮಾರ್ ಭೇಟಿಗೆ ಆಗಮಿಸಿದ ಸಂಸದ ಬಸವರಾಜ ಬೊಮ್ಮಾಯಿ!
ಅರುಣ್ ಸಾಳುಂಕೆ ಮೃತದೇಹದ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಮಗಳು
ಅರುಣ್ ಸಾಳುಂಕೆ ಮೃತದೇಹದ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಮಗಳು
ಕಾಫಿ, ಟೀ ಬೆಲೆ ಹೆಚ್ಚಳ: ಸರ್ಕಾರದ ವಿರುದ್ಧ ಆಕ್ರೋಶ, ಜನ ಏನಂತಾರೆ ನೋಡಿ
ಕಾಫಿ, ಟೀ ಬೆಲೆ ಹೆಚ್ಚಳ: ಸರ್ಕಾರದ ವಿರುದ್ಧ ಆಕ್ರೋಶ, ಜನ ಏನಂತಾರೆ ನೋಡಿ
ಸ್ಟಿಂಗ್ ಆಪರೇಷನ್ ಪ್ರಕರಣ: ಕುಮಾರಸ್ವಾಮಿ ದೆಹಲಿ ನಿವಾಸ ಪರಿಶೀಲನೆ ಸಾಧ್ಯತೆ
ಸ್ಟಿಂಗ್ ಆಪರೇಷನ್ ಪ್ರಕರಣ: ಕುಮಾರಸ್ವಾಮಿ ದೆಹಲಿ ನಿವಾಸ ಪರಿಶೀಲನೆ ಸಾಧ್ಯತೆ
ಶಕ್ತಿದೇವತೆ ಹಾಸನಾಂಬೆಯನ್ನು ನೋಡಲು ಕಿಕ್ಕಿರಿದ ಭಕ್ತರ ದಂಡು!
ಶಕ್ತಿದೇವತೆ ಹಾಸನಾಂಬೆಯನ್ನು ನೋಡಲು ಕಿಕ್ಕಿರಿದ ಭಕ್ತರ ದಂಡು!
ಕೃಷ್ಣಾ ನದಿ ನೀರು ವಿವಾದ, ಮಹಾರಾಷ್ಟ್ರದ ವಿರುದ್ಧ ಎಂಬಿ ಪಾಟೀಲ್ ವಾಗ್ದಾಳಿ
ಕೃಷ್ಣಾ ನದಿ ನೀರು ವಿವಾದ, ಮಹಾರಾಷ್ಟ್ರದ ವಿರುದ್ಧ ಎಂಬಿ ಪಾಟೀಲ್ ವಾಗ್ದಾಳಿ
ನಂದಿನಿ ಹಾಲು ದರ ಏರಿಕೆ ಪರಿಣಾಮ: ರಾಜ್ಯಾದ್ಯಂತ ಕಾಫಿ, ಟೀ ಬೆಲೆ ₹5 ಹೆಚ್ಚಳ
ನಂದಿನಿ ಹಾಲು ದರ ಏರಿಕೆ ಪರಿಣಾಮ: ರಾಜ್ಯಾದ್ಯಂತ ಕಾಫಿ, ಟೀ ಬೆಲೆ ₹5 ಹೆಚ್ಚಳ
‘ಧಮ್ ಇದ್ರೆ ಬಿಚ್ಚಿಡು’; ಗಾನವಿ-ಆಸಿಯಾ ಮಧ್ಯೆ ನಡೆಯಿತು ದೊಡ್ಡ ವಾಕ್ಸಮರ
‘ಧಮ್ ಇದ್ರೆ ಬಿಚ್ಚಿಡು’; ಗಾನವಿ-ಆಸಿಯಾ ಮಧ್ಯೆ ನಡೆಯಿತು ದೊಡ್ಡ ವಾಕ್ಸಮರ
ಉತ್ತರಾಖಂಡ ಹೆಲಿಕಾಪ್ಟರ್ ದುರಂತದಲ್ಲಿ ಸತ್ತ ನಾಲ್ವರ ಮೃತದೇಹ ಬೆಂಗಳೂರಿಗೆ
ಉತ್ತರಾಖಂಡ ಹೆಲಿಕಾಪ್ಟರ್ ದುರಂತದಲ್ಲಿ ಸತ್ತ ನಾಲ್ವರ ಮೃತದೇಹ ಬೆಂಗಳೂರಿಗೆ