DC vs GT Highlights, IPL 2024: ರೋಚಕ ಪಂದ್ಯದಲ್ಲಿ ಕೊನೆಗೂ ಗೆದ್ದ ಡೆಲ್ಲಿ
Delhi Capitals vs Gujarat Titans Highlights in Kannada: ಐಪಿಎಲ್ 2024 ರ 40 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಲ್ಕು ರನ್‌ಗಳಿಂದ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾಗಿದೆ.

ಐಪಿಎಲ್ 2024 ರ 40 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಲ್ಕು ರನ್‌ಗಳಿಂದ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾಗಿದೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಡೆಲ್ಲಿ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 224 ರನ್ ಗಳಿಸಿತು. ತಂಡದ ಪರ ನಾಯಕ ರಿಷಬ್ ಪಂತ್ 43 ಎಸೆತಗಳಲ್ಲಿ ಅಜೇಯ 88 ರನ್ ಮತ್ತು ಅಕ್ಷರ್ ಪಟೇಲ್ 66 ರನ್ ಗಳಿಸಿದರು. ಉತ್ತರವಾಗಿ ಗುಜರಾತ್ ತಂಡ 20 ಓವರ್‌ಗಳಲ್ಲಿ ಎಂಟು ವಿಕೆಟ್‌ಗೆ 220 ರನ್ ಗಳಿಸಲಷ್ಟೇ ಶಕ್ತವಾಯಿತು. ತಂಡದ ಪರ ಗೆಲುವಿಗಾಗಿ ಹೋರಾಟ ನೀಡಿದ ಸಾಯಿ ಸುದರ್ಶನ್ ಹಾಗೂ ಡೇವಿಡ್ ಮಿಲ್ಲರ್ ತಲಾ ಅರ್ಧಶತಕ ಬಾರಿಸಿದರು. ಆದಾಗ್ಯೂ ತಂಡಕ್ಕೆ ಗೆಲುವು ತಂದುಕೊಂಡಲು ಸಾಧ್ಯವಾಗಲಿಲ್ಲ.
LIVE NEWS & UPDATES
-
ಡೆಲ್ಲಿಗೆ ಜಯ
ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 4 ರನ್‌ಗಳ ಜಯ ಸಾಧಿಸಿದೆ. ಡೆಲ್ಲಿ ನೀಡಿದ 224 ರನ್ ಗುರಿ ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 220 ರನ್ ಬಾರಿಸಲಷ್ಟೇ ಶಕ್ತವಾಯಿತು. ಇತ್ತ ಡೆಲ್ಲಿ ತಂಡದ ಪರವಾಗಿ ರಿಷಬ್ ಪಂತ್ ಮತ್ತು ಅಕ್ಷರ್ ಪಟೇಲ್ ಅರ್ಧಶತಕ ಬಾರಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
-
ಮಿಲ್ಲರ್ ಅರ್ಧಶತಕ, ಔಟ್
ಗುಜರಾತ್ ಟೈಟಾನ್ಸ್ ಬ್ಯಾಟ್ಸ್‌ಮನ್ ಡೇವಿಡ್ ಮಿಲ್ಲರ್ 55 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ತಂಡದ ಸ್ಕೋರ್ 7 ವಿಕೆಟ್ ನಷ್ಟಕ್ಕೆ 183 ರನ್ ಆಗಿದೆ.
-
-
ತೆವಾಟಿಯಾ ಔಟ್
ಗುಜರಾತ್ ಟೈಟಾನ್ಸ್ ಬ್ಯಾಟ್ಸ್‌ಮನ್ ರಾಹುಲ್ ತೆವಾಟಿಯಾ 4 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿದ್ದಾರೆ. ತಂಡದ ಸ್ಕೋರ್ 6 ವಿಕೆಟ್ ನಷ್ಟಕ್ಕೆ 152 ರನ್ ಆಗಿದೆ.
-
14 ಓವರ್ ಪೂರ್ಣ
ಗುಜರಾತ್ ಟೈಟಾನ್ಸ್ ತಂಡ 14 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿದೆ. ಡೇವಿಡ್ ಮಿಲ್ಲರ್ 18 ರನ್ ಮತ್ತು ಶಾರುಖ್ ಖಾನ್ 8 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ತಂಡದ ಗೆಲುವಿಗೆ 36 ಎಸೆತಗಳಲ್ಲಿ 86 ರನ್‌ಗಳ ಅಗತ್ಯವಿದೆ.
-
ಸಾಯಿ ಸುದರ್ಶನ್ ಔಟ್
ಗುಜರಾತ್ ಟೈಟಾನ್ಸ್ ಬ್ಯಾಟ್ಸ್ ಮನ್ ಸಾಯಿ ಸುದರ್ಶನ್ 65 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಡೇವಿಡ್ ಮಿಲ್ಲರ್ ಜೊತೆ ಶಾರುಖ್ ಖಾನ್ ಕ್ರೀಸ್ ಗೆ ಬಂದಿದ್ದಾರೆ. ತಂಡದ ಸ್ಕೋರ್ 4 ವಿಕೆಟ್ ನಷ್ಟಕ್ಕೆ 121 ರನ್ ಆಗಿದೆ.
-
-
ಸಹಾ ಔಟ್
ಗುಜರಾತ್ ಟೈಟಾನ್ಸ್ ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಹಾ 39 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದ್ದಾರೆ. ತಂಡದ ಪರವಾಗಿ ಅಜ್ಮತುಲ್ಲಾ ಉಮರ್ಜಾಯ್ ಕ್ರೀಸ್‌ಗೆ ಬಂದಿದ್ದಾರೆ. 10 ಓವರ್‌ಗಳಲ್ಲಿ ತಂಡ 2 ವಿಕೆಟ್ ನಷ್ಟಕ್ಕೆ 98 ರನ್ ಗಳಿಸಿದೆ.
-
8 ಓವರ್ ಪೂರ್ಣ
ಗುಜರಾತ್ ಟೈಟಾನ್ಸ್ ತಂಡ 8 ಓವರ್‌ಗಳಲ್ಲಿ 79 ರನ್ ಗಳಿಸಿದೆ. ಇಬ್ಬರೂ ಬ್ಯಾಟ್ಸ್‌ಮನ್‌ಗಳು 66 ರನ್‌ಗಳ ಜೊತೆಯಾಟ ಆಡಿದ್ದಾರೆ. ತಂಡದ ಗೆಲುವಿಗೆ 72 ಎಸೆತಗಳಲ್ಲಿ 146 ರನ್‌ಗಳ ಅಗತ್ಯವಿದೆ.
-
ಪವರ್‌ಪ್ಲೇ ಅಂತ್ಯ
ಗುಜರಾತ್ ಟೈಟಾನ್ಸ್ ತಂಡ ಪವರ್ ಪ್ಲೇ ಅಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 67 ರನ್ ಗಳಿಸಿದೆ. ವೃದ್ಧಿಮಾನ್ ಸಹಾ 33 ರನ್ ಹಾಗೂ ಸಾಯಿ ಸುದರ್ಶನ್ 27 ರನ್ ಗಳಿಸಿ ಆಡುತ್ತಿದ್ದಾರೆ.
-
ಗಿಲ್ ಔಟ್
ಗುಜರಾತ್ ಟೈಟಾನ್ಸ್ ನಾಯಕ ಶುಭ್‌ಮನ್ ಗಿಲ್ 6 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದ್ದಾರೆ. ವೃದ್ಧಿಮಾನ್ ಸಹಾ ಅವರೊಂದಿಗೆ ಸಾಯಿ ಸುದರ್ಶನ್ ಕ್ರೀಸ್‌ಗೆ ಬಂದಿದ್ದಾರೆ. ತಂಡದ ಸ್ಕೋರ್ 1 ವಿಕೆಟ್ ನಷ್ಟಕ್ಕೆ 24 ರನ್ ಆಗಿದೆ.
-
225 ರನ್ ಟಾರ್ಗೆಟ್
ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 224 ರನ್ ಗಳಿಸಿದೆ. ರಿಷಬ್ ಪಂತ್ 88 ರನ್ ಮತ್ತು ಅಕ್ಷರ್ ಪಟೇಲ್ 66 ರನ್‌ಗಳ ಅತ್ಯುತ್ತಮ ಇನ್ನಿಂಗ್ಸ್‌ಗಳನ್ನು ಆಡಿದ್ದು, ಗುಜರಾತ್ ಟೈಟಾನ್ಸ್ ಗೆಲುವಿಗೆ 120 ಎಸೆತಗಳಲ್ಲಿ 225 ರನ್ ಅಗತ್ಯವಿದೆ.
-
ಪಂತ್ ಅರ್ಧ ಶತಕ
ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಬ್ ಪಂತ್ ಅರ್ಧಶತಕ ಪೂರೈಸಿದ್ದಾರೆ. 18 ಓವರ್‌ಗಳಲ್ಲಿ ತಂಡ 171 ರನ್ ಗಳಿಸಿದೆ.
-
ಅಕ್ಷರ್ ಔಟ್
ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟ್ಸ್‌ಮನ್ ಅಕ್ಷರ್ ಪಟೇಲ್ 66 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದಾರೆ. ತಂಡದ ಪರವಾಗಿ ಟ್ರಿಸ್ಟಾನ್ ಸ್ಟಬ್ಸ್ ಕ್ರೀಸ್‌ಗೆ ಬಂದಿದ್ದಾರೆ. 17 ಓವರ್‌ಗಳಲ್ಲಿ ತಂಡ 4 ವಿಕೆಟ್ ಕಳೆದುಕೊಂಡು 162 ರನ್ ಗಳಿಸಿದೆ.
-
ಅಕ್ಷರ ಪಟೇಲ್ ಅರ್ಧಶತಕ
ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟ್ಸ್‌ಮನ್ ಅಕ್ಷರ್ ಪಟೇಲ್ ಅರ್ಧಶತಕ ಪೂರೈಸಿದ್ದಾರೆ. ರಿಷಬ್ ಪಂತ್ ಕೂಡ 41 ರನ್ ಗಳಿಸಿ ಆಡುತ್ತಿದ್ದಾರೆ. ತಂಡದ ಸ್ಕೋರ್ 3 ವಿಕೆಟ್ ನಷ್ಟಕ್ಕೆ 134 ರನ್ ಆಗಿದೆ.
-
ಡೆಲ್ಲಿ ಅರ್ಧ ಇನಿಂಗ್ಸ್ ಅಂತ್ಯ
ಡೆಲ್ಲಿ ಕ್ಯಾಪಿಟಲ್ಸ್ ತಂಡ 10 ಓವರ್‌ಗಳಲ್ಲಿ 86 ರನ್ ಗಳಿಸಿದೆ. ತಂಡದ ಪರ ರಿಷಬ್ ಪಂತ್ 18 ರನ್ ಹಾಗೂ ಅಕ್ಷರ್ ಪಟೇಲ್ 26 ರನ್ ಗಳಿಸಿ ಆಡುತ್ತಿದ್ದಾರೆ.
-
8 ಓವರ್ ಮುಕ್ತಾಯ
ಡೆಲ್ಲಿ ಕ್ಯಾಪಿಟಲ್ಸ್ ತಂಡ 8 ಓವರ್ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 63 ರನ್ ಗಳಿಸಿದೆ. ರಿಷಬ್ ಪಂತ್ 5 ರನ್ ಹಾಗೂ ಅಕ್ಷರ್ ಪಟೇಲ್ 17 ರನ್ ಗಳಿಸಿ ಆಡುತ್ತಿದ್ದಾರೆ.
-
ಶಾಯ್ ಹೋಪ್ ಔಟ್
ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟ್ಸ್‌ಮನ್ ಶಾಯ್ ಹೋಪ್ 5 ರನ್ ಗಳಿಗೆ ಇನ್ನಿಂಗ್ಸ್ ಮುಗಿಸಿದ್ದಾರೆ. ಅಕ್ಷರ್ ಪಟೇಲ್ ಜೊತೆ ರಿಷಬ್ ಪಂತ್ ಕ್ರೀಸ್‌ನಲ್ಲಿದ್ದಾರೆ. ಪವರ್‌ಪ್ಲೇ ಅಂತ್ಯಕ್ಕೆ ತಂಡ 3 ವಿಕೆಟ್ ನಷ್ಟಕ್ಕೆ 44 ರನ್ ಗಳಿಸಿದೆ.
-
2ನೇ ವಿಕೆಟ್
ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟ್ಸ್‌ಮನ್ ಪೃಥ್ವಿ ಶಾ 11 ರನ್ ಗಳಿಗೆ ವಿಕೆಟ್ ಒಪ್ಪಿಸಿದ್ದಾರೆ. ಶಾಯ್ ಹಾಪ್ ಕ್ರೀಸ್‌ನಲ್ಲಿದ್ದಾರೆ. 4 ಓವರ್‌ಗಳಲ್ಲಿ ತಂಡ 2 ವಿಕೆಟ್ ನಷ್ಟಕ್ಕೆ 36 ರನ್ ಗಳಿಸಿದೆ.
-
ಮೆಕ್‌ಗುರ್ಕ್ ಔಟ್
ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟ್ಸ್‌ಮನ್ ಜೇಕ್ ಫ್ರೇಸರ್-ಮೆಕ್‌ಗುರ್ಕ್ 23 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಪೃಥ್ವಿ ಶಾ ಜೊತೆಗೆ ಅಕ್ಷರ್ ಪಟೇಲ್ ಕ್ರೀಸ್‌ನಲ್ಲಿದ್ದಾರೆ.
-
ಡೆಲ್ಲಿ ಇನ್ನಿಂಗ್ಸ್ ಆರಂಭ
ಡೆಲ್ಲಿ ಇನ್ನಿಂಗ್ಸ್ ಆರಂಭವಾಗಿದೆ. ಮೊದಲ ಓವರ್‌ನಲ್ಲಿ ಕ್ಯಾಪಿಟಲ್ಸ್ ಯಾವುದೇ ವಿಕೆಟ್ ನಷ್ಟವಿಲ್ಲದೆ 10 ರನ್ ಗಳಿಸಿದೆ. ಪ್ರಸ್ತುತ, ಜೇಕ್ ಫ್ರೇಸರ್ ಮೆಕ್‌ಗುರ್ಕ್ ಮತ್ತು ಪೃಥ್ವಿ ಶಾ ತಲಾ ಐದು ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಗುಜರಾತ್ ಪರ ಅಜ್ಮತುಲ್ಲಾ ಒಮರ್ಜಾಯ್ ಮೊದಲ ಓವರ್ ಬೌಲ್ ಮಾಡಿದರು.
-
ಗುಜರಾತ್ ಟೈಟಾನ್ಸ್
ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಶುಭ್‌ಮನ್ ಗಿಲ್ (ನಾಯಕ), ಡೇವಿಡ್ ಮಿಲ್ಲರ್, ಅಜ್ಮತುಲ್ಲಾ ಒಮರ್ಜಾಯ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಆರ್ ಸಾಯಿ ಕಿಶೋರ್, ನೂರ್ ಅಹ್ಮದ್, ಮೋಹಿತ್ ಶರ್ಮಾ, ಸಂದೀಪ್ ವಾರಿಯರ್.
ಇಂಪ್ಯಾಕ್ಟ್ ಪ್ಲೇಯರ್: ಶರತ್ ಬಿಆರ್, ಸಾಯಿ ಸುದರ್ಶನ್, ಮಾನವ್ ಸುತಾರ್, ದರ್ಶನ್ ನಲ್ಕಂಡೆ, ವಿಜಯ್ ಶಂಕರ್.
-
ಡೆಲ್ಲಿ ಕ್ಯಾಪಿಟಲ್ಸ್
ಪೃಥ್ವಿ ಶಾ, ಜಾಕ್ ಫ್ರೇಸರ್ ಮೆಕ್‌ಗುರ್ಕ್, ಶಾಯ್ ಹೋಪ್, ರಿಷಬ್ ಪಂತ್ (ನಾಯಕ ಮತ್ತು ವಿಕೆಟ್ ಕೀಪರ್), ಟ್ರಿಸ್ಟಾನ್ ಸ್ಟಬ್ಸ್, ಅಭಿಷೇಕ್ ಪೊರೆಲ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಅನ್ರಿಚ್ ನೋಕಿಯಾ, ಖಲೀಲ್ ಅಹ್ಮದ್, ಮುಖೇಶ್ ಕುಮಾರ್.
ಇಂಪ್ಯಾಕ್ಟ್ ಪ್ಲೇಯರ್: ಸುಮಿತ್ ಕುಮಾರ್, ರಸಿಖ್ ದಾರ್ ಸಲಾಮ್, ಕುಮಾರ್ ಕುಶಾಗ್ರಾ, ಪ್ರವೀಣ್ ದುಬೆ, ಲಲಿತ್ ಯಾದವ್.
-
ಟಾಸ್ ಗೆದ್ದ ಗುಜರಾತ್
ಟಾಸ್ ಗೆದ್ದ ಗುಜರಾತ್ ನಾಯಕ ಶುಭ್‌ಮನ್ ಗಿಲ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
Published On - Apr 24,2024 7:01 PM
