AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾರ್ದಿಕ್ ಪಾಂಡ್ಯ ಎಂಟ್ರಿಯಿಂದ ಪಂಜಾಬ್ ಕಿಂಗ್ಸ್ ಮತ್ತಷ್ಟು ಬಲಿಷ್ಠ!

ಐಪಿಎಲ್ ಮಿನಿ ಹರಾಜಿಗೂ ಮುನ್ನವೇ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಮೆಗಾ ಟ್ರೇಡ್ ನಡೆದಿದೆ. ಈ ಸ್ವಾಪ್ ಟ್ರೇಡ್​ನಿಂದಾಗಿ ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ  ಪಂಜಾಬ್ ಕಿಂಗ್ಸ್ ಪಾಳೆಯವನ್ನು ಸೇರಿಕೊಳ್ಳಲಿದ್ದಾರೆ. ಅಲ್ಲದೆ ಈ ಒಪ್ಪಂದದ ಭಾಗವಾಗಿ ಪಂಜಾಬ್ ತಂಡ ತನ್ನ ಪ್ರಮುಖ ಎಡಗೈ ವೇಗಿ ಅರ್ಶ್‌ದೀಪ್ ಸಿಂಗ್ ಅವರನ್ನು ಮುಂಬೈಗೆ ಬಿಟ್ಟುಕೊಡಲಿದೆ.

ಹಾರ್ದಿಕ್ ಪಾಂಡ್ಯ ಎಂಟ್ರಿಯಿಂದ ಪಂಜಾಬ್ ಕಿಂಗ್ಸ್ ಮತ್ತಷ್ಟು ಬಲಿಷ್ಠ!
Punjab KingsImage Credit source: x.com
ಝಾಹಿರ್ ಯೂಸುಫ್
|

Updated on: Nov 08, 2026 | 7:46 AM

Share

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮಿನಿ ಹರಾಜಿಗೂ ಮುನ್ನ ಬಿಗ್ ಟ್ರೇಡ್‌ವೊಂದು ನಡೆದಿದೆ. ಈ ಒಪ್ಪಂದದ ಮೂಲಕ ಹಾರ್ದಿಕ್ ಪಾಂಡ್ಯ ಪಂಜಾಬ್ ಕಿಂಗ್ಸ್ ತಂಡವನ್ನು ಸೇರುವುದು ಖಚಿತವಾಗಿದೆ. ಇತ್ತ ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದ ಎಡಗೈ ವೇಗಿ ಅರ್ಷದೀಪ್ ಸಿಂಗ್ ಮುಂಬೈ ಇಂಡಿಯನ್ಸ್ ತಂಡಕ್ಕೆ ತೆರಳಲಿದ್ದಾರೆ. ಈ ಬಿಗ್ ಸ್ವಾಪ್ ಟ್ರೇಡ್ ಕೇವಲ ಇಬ್ಬರು ಆಟಗಾರರ ಅದಲು-ಬದಲಲ್ಲ, ಬದಲಿಗೆ ಇದು ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ಭವಿಷ್ಯದ ಕಾರ್ಯತಂತ್ರವನ್ನೇ ಸಂಪೂರ್ಣವಾಗಿ ಬದಲಿಸುವಂತಹ ಮಹತ್ವದ ನಿರ್ಧಾರವಾಗಿದೆ.

ಏಕೆಂದರೆ ಈ ಟ್ರೇಡ್ ಮೂಲಕ ಉಭಯ ತಂಡಗಳೂ ತಮ್ಮ ಬಲವನ್ನು ಹೆಚ್ಚಿಸಿಕೊಂಡಿವೆ. ಅದರಲ್ಲೂ ಪಂಜಾಬ್ ಕಿಂಗ್ಸ್ ಒಂದು ಹೆಜ್ಜೆ ಮುನ್ನಡೆದಿದ್ದು, ತನ್ನ ಪ್ಲೇಯಿಂಗ್ ಇಲೆವೆನ್‌ಗೆ ಹೊಸ ಬಲ ತುಂಬಿದೆ ಎಂದೇ ಹೇಳಬಹುದು. ಹಾಗಾದರೆ, ಈ ಮೆಗಾ ಟ್ರೇಡ್‌ನಿಂದಾಗಿ ಪಂಜಾಬ್ ಕಿಂಗ್ಸ್ ತಂಡದಲ್ಲಿ ಕಂಡುಬರಲಿರುವ ಪ್ರಮುಖ ಬದಲಾವಣೆಗಳು ಏನೆಂಬುದರ ವಿಶ್ಲೇಷಣೆ ಇಲ್ಲಿದೆ.

ಮಧ್ಯಮ ಕ್ರಮಾಂಕಕ್ಕೆ ಆನೆಬಲ:

ಪಂಜಾಬ್ ಕಿಂಗ್ಸ್ ತಂಡದಲ್ಲಿ ಪ್ರಭ್‌ಸಿಮ್ರನ್ ಸಿಂಗ್ ಹಾಗೂ ಪ್ರಿಯಾಂಶ್ ಆರ್ಯ ಅವರಂತಹ ಸ್ಫೋಟಕ ಆರಂಭಿಕ ದಾಂಡಿಗರಿದ್ದಾರೆ. ಆ ಬಳಿಕ ಇನಿಂಗ್ಸ್ ಮುನ್ನಡೆಸಲು ಶ್ರೇಯಸ್ ಅಯ್ಯರ್ ಕೂಡ ಇದ್ದಾರೆ. ಇದಾಗ್ಯೂ, ಮಧ್ಯಮ ಕ್ರಮಾಂಕದಲ್ಲಿ ಪಂದ್ಯದ ಗತಿಯನ್ನೇ ಬದಲಿಸಬಲ್ಲ ಒಬ್ಬ ಸ್ಫೋಟಕ ಆಟಗಾರನ ಕೊರತೆ ಪಂಜಾಬ್ ತಂಡದಲ್ಲಿ ಎದ್ದು ಕಾಣುತ್ತಿತ್ತು. ಈಗ ಹಾರ್ದಿಕ್ ಪಾಂಡ್ಯ ಸೇರ್ಪಡೆಯಿಂದ ಆ ಕೊರತೆ ಸಂಪೂರ್ಣವಾಗಿ ನೀಗಿದಂತಾಗಿದೆ.

ಪಾಂಡ್ಯ ಮುಂಬರುವ ಸೀಸನ್‌ನಲ್ಲಿ ನಾಲ್ಕನೇ ಅಥವಾ ಐದನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುವುದು ಖಚಿತವಾಗಿದ್ದು, ಇದು ತಂಡದ ಟಾಪ್-5 ಬ್ಯಾಟಿಂಗ್ ಲೈನ್‌ಅಪ್ ಅನ್ನು ಐಪಿಎಲ್‌ನಲ್ಲೇ ಅತ್ಯಂತ ಭೀಕರ ಹಾಗೂ ಬಲಿಷ್ಠವಾಗಿ ಮಾರ್ಪಡಿಸಲಿದೆ.

ಒತ್ತಡವಿಲ್ಲದ ಪಾಂಡ್ಯ ಅಪಾಯಕಾರಿ:

ಮುಂಬೈ ಇಂಡಿಯನ್ಸ್‌ನಲ್ಲಿ ನಾಯಕತ್ವದ ವಿಪರೀತ ಒತ್ತಡ ಹಾಗೂ ಅಭಿಮಾನಿಗಳ ಟ್ರೋಲ್‌ಗೆ ಒಳಗಾಗಿದ್ದ ಹಾರ್ದಿಕ್ ಪಾಂಡ್ಯ, ಈಗ ಪಂಜಾಬ್‌ನಲ್ಲಿ ಕೇವಲ ಒಬ್ಬ ಮುಕ್ತ ಆಟಗಾರನಾಗಿ ಕಣಕ್ಕಿಳಿಯಲಿದ್ದಾರೆ. ಶ್ರೇಯಸ್ ಅಯ್ಯರ್ ನಾಯಕತ್ವ ಇರುವುದರಿಂದ ಹಾರ್ದಿಕ್ ತಮ್ಮ ನೈಸರ್ಗಿಕ ಆಟಕ್ಕೆ ಮರಳಲು ಇದು ಸೂಕ್ತ ವೇದಿಕೆ.

ರಿಕ್ಕಿ ಪಾಂಟಿಂಗ್ ಮಾಸ್ಟರ್ ಸ್ಟ್ರೋಕ್:

ಪಂಜಾಬ್ ಕಿಂಗ್ಸ್ ತಂಡದ ಮುಖ್ಯ ಕೋಚ್ ರಿಕ್ಕಿ ಪಾಂಟಿಂಗ್ ಅವರು ಯಾವಾಗಲೂ ತಮ್ಮ ಗೇಮ್ ಪ್ಲಾನ್‌ನಲ್ಲಿ ಆಲ್‌ರೌಂಡರ್‌ಗಳಿಗೆ ಹೆಚ್ಚಿನ ಆದ್ಯತೆ ನೀಡುವ ತಂತ್ರಜ್ಞ. ಹಾರ್ದಿಕ್ ಪಾಂಡ್ಯ ಅವರ ಸೇರ್ಪಡೆಯು ಪಾಂಟಿಂಗ್ ಅವರ ಈ ದೀರ್ಘಕಾಲದ ತಂತ್ರಕ್ಕೆ ಪೂರಕವಾಗಿ ನಿಂತಿದೆ.

ಹಾರ್ದಿಕ್ ಮಧ್ಯಮ ಕ್ರಮಾಂಕದಲ್ಲಿ ಕೇವಲ ಬ್ಯಾಟರ್ ಆಗಿ ಮಾತ್ರವಲ್ಲದೆ, ತಮ್ಮ ಕೋಟಾದ 4 ಓವರ್‌ಗಳನ್ನು ಪೂರ್ಣಗೊಳಿಸಬಲ್ಲ ಪರಿಣಾಮಕಾರಿ ವೇಗದ ಬೌಲರ್ ಕೂಡ ಹೌದು. ಇದು ನಾಯಕ ಶ್ರೇಯಸ್ ಅಯ್ಯರ್‌ಗೆ ಬೌಲಿಂಗ್ ವಿಭಾಗದಲ್ಲಿ ಹೆಚ್ಚುವರಿ ಮತ್ತು ಅತ್ಯಂತ ನಂಬಿಕಸ್ಥ ಬೌಲಿಂಗ್ ಆಯ್ಕೆಯನ್ನು ಒದಗಿಸುತ್ತದೆ. ಪರಿಣಾಮವಾಗಿ, ಪಂಜಾಬ್ ಕಿಂಗ್ಸ್ ತಂಡಕ್ಕೆ ಏಕಕಾಲದಲ್ಲಿ ಒಬ್ಬ ಅನುಭವಿ ಮ್ಯಾಚ್ ವಿನ್ನರ್ ಬ್ಯಾಟರ್ ಹಾಗೂ ಪರಿಪೂರ್ಣ ಬೌಲರ್ ಲಭ್ಯವಾದಂತಾಗಿದೆ.

ಅಂದರೆ, ಇಲ್ಲಿ ಅರ್ಷದೀಪ್ ಸಿಂಗ್ ಅವರಂತಹ ಪ್ರಮುಖ ವೇಗಿಯನ್ನು ಕೈಬಿಟ್ಟಿದ್ದರೂ, ಆ ಸ್ಥಾನವನ್ನು ಹಾರ್ದಿಕ್ ಪಾಂಡ್ಯ ತಮ್ಮ ಚಾಣಾಕ್ಷ ಬೌಲಿಂಗ್ ಮೂಲಕ ಬ್ಯಾಲೆನ್ಸ್ ಮಾಡಬಲ್ಲರು. ಹಾರ್ದಿಕ್ ಪಾಂಡ್ಯ ಪವರ್‌ಪ್ಲೇ ಹಾಗೂ ಮಧ್ಯಮ ಓವರ್‌ಗಳಲ್ಲಿ ವಿಕೆಟ್ ಕೀಳುವ ಜಾಣ್ಮೆ ಹೊಂದಿದ್ದಾರೆ. ಹೀಗಾಗಿ, ಅರ್ಷದೀಪ್ ನಿರ್ಗಮನದಿಂದ ಸೃಷ್ಟಿಯಾಗುವ ಬೌಲಿಂಗ್ ಕೊರತೆಯನ್ನು ಹಾರ್ದಿಕ್ ಅವರ ಆಲ್‌ರೌಂಡ್ ಸಾಮರ್ಥ್ಯದಿಂದ ಸರಿದೂಗಿಸಲು ಪಂಜಾಬ್ ಕಿಂಗ್ಸ್ ಮ್ಯಾನೇಜ್‌ಮೆಂಟ್ ಮಾಸ್ಟರ್ ಪ್ಲಾನ್ ರೂಪಿಸಿದೆ. ಇದು ತಂಡಕ್ಕೆ ಅತ್ಯುತ್ತಮ ಸಮತೋಲನ ಮತ್ತು ಹೊಸ ಸಂಯೋಜನೆಯ ಬಲವನ್ನು ನೀಡಲಿದೆ.

ಮುಂಬೈ ಇಂಡಿಯನ್ಸ್ ಲೆಕ್ಕಾಚಾರವೇನು?

ಮುಂಬೈ ತಂಡ ಜಸ್​ಪ್ರೀತ್ ಬುಮ್ರಾ ಅವರಿಗೆ ಯೋಗ್ಯ ಜೋಡಿಯಾಗಬಲ್ಲ ಭಾರತೀಯ ವೇಗಿಯ ಹುಡುಕಾಟದಲ್ಲಿತ್ತು. ಈಗ ಅರ್ಷದೀಪ್ ಸಿಂಗ್ ಸೇರ್ಪಡೆಯಿಂದ ಮುಂಬೈ ತಂಡ ‘ಬುಮ್ರಾ + ಅರ್ಷದೀಪ್’ ಎಂಬ ಟಿ20 ಕ್ರಿಕೆಟ್‌ನ ಅತ್ಯಂತ ಭೀಕರ ಹಾಗೂ ಅಪಾಯಕಾರಿ ಡೆತ್ ಓವರ್ ಬೌಲಿಂಗ್ ಜೋಡಿಯನ್ನು ಪಡೆದುಕೊಂಡಂತಾಗಿದೆ. ಜೊತೆಗೆ, ಕಳೆದ ಸೀಸನ್‌ನಲ್ಲಿ ಹಾರ್ದಿಕ್ ನಾಯಕತ್ವದ ಸುತ್ತ ಡ್ರೆಸ್ಸಿಂಗ್ ರೂಮ್‌ನಲ್ಲಿ ಸೃಷ್ಟಿಯಾಗಿದ್ದ ನೆಗೆಟಿವಿಟಿಗೂ ಈಗ ಬ್ರೇಕ್ ಬಿದ್ದಿದೆ.

ಇಲ್ಲಿ ಮುಂಬೈ ಇಂಡಿಯನ್ಸ್ ತಂಡ ಬುಮ್ರಾಗೆ ಜೋಡಿಯಾಗಬಲ್ಲ ಒಬ್ಬ ವಿಶ್ವದರ್ಜೆಯ ಸ್ಪೆಷಲಿಸ್ಟ್ ಬೌಲರ್ ಅನ್ನು ಪಡೆದುಕೊಂಡಿರಬಹುದು. ಆದರೆ, ಅತ್ತ ಪಂಜಾಬ್ ಕಿಂಗ್ಸ್ ತೆಕ್ಕೆಗೆ ಬಿದ್ದಿರುವುದು ಕೇವಲ ಒಬ್ಬ ಆಟಗಾರನಲ್ಲ, ಬದಲಿಗೆ ಆಧುನಿಕ ಟಿ20 ಕ್ರಿಕೆಟ್‌ನಲ್ಲಿ ಏಕಾಂಗಿಯಾಗಿ ಪಂದ್ಯದ ಗತಿಯನ್ನೇ ಬದಲಿಸಬಲ್ಲ ಟೀಮ್ ಇಂಡಿಯಾದ ಅಲ್ಟಿಮೇಟ್ ಮ್ಯಾಚ್ ವಿನ್ನರ್ ಹಾಗೂ ಪ್ರಮುಖ ಫಾಸ್ಟ್ ಬೌಲಿಂಗ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಎಂಬುದನ್ನು ಮರೆಯುವಂತಿಲ್ಲ. ಮುಂಬೈಗೆ ಒಬ್ಬ ಬೌಲರ್ ಸಿಕ್ಕರೆ, ಪಂಜಾಬ್‌ ಕಿಂಗ್ಸ್ ಇಡೀ ತಂಡದ ಸಮತೋಲನವನ್ನೇ ಬದಲಿಸಬಲ್ಲ ಬಿಗ್-ಟಿಕೆಟ್ ಪ್ಲೇಯರ್ ಲಭ್ಯವಾಗಿದ್ದಾರೆ.

ಹೀಗಾಗಿಯೇ, ಮುಂಬರುವ ಐಪಿಎಲ್ ಸೀಸನ್ ಆರಂಭಕ್ಕೂ ಮುನ್ನವೇ ಪಂಜಾಬ್ ಕಿಂಗ್ಸ್ ತನ್ನ ಪ್ಲೇಯಿಂಗ್ ಇಲೆವೆನ್ ಅನ್ನು ಮತ್ತಷ್ಟು ಬಲಿಷ್ಠಗೊಳಿಸಿದೆ. ಹಾರ್ದಿಕ್ ಪಾಂಡ್ಯ ಅವರಂತಹ ಅಪರೂಪದ ಮ್ಯಾಚ್ ವಿನ್ನರ್ ತಂಡಕ್ಕೆ ಸೇರ್ಪಡೆಯಾಗಿರುವುದು ಪಂಜಾಬ್ ಪಾಲಿಗೆ ಟ್ರೋಫಿ ಗೆಲ್ಲುವ ಹಾದಿಯನ್ನು ಸುಲಭಗೊಳಿಸಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.

ಪಂಜಾಬ್ ಕಿಂಗ್ಸ್ ಸಂಭಾವ್ಯ ಪ್ಲೇಯಿಂಗ್ 11:

  1. ಪ್ರಭ್​ಸಿಮ್ರಾನ್ ಸಿಂಗ್ (ಆರಂಭಿಕ)
  2. ಪ್ರಿಯಾಂಶ್ ಆರ್ಯ (ಆರಂಭಿಕ)
  3. ಶ್ರೇಯಸ್ ಅಯ್ಯರ್ (ನಾಯಕ)
  4. ಹಾರ್ದಿಕ್ ಪಾಂಡ್ಯ (ಆಲ್​ರೌಂಡರ್)
  5. ನೇಹಾಲ್ ವಧೇರಾ (ಬ್ಯಾಟರ್)
  6. ಅಝ್ಮತ್ ಒಮರ್​ಝಾಹಿ/ಮಾರ್ಕಸ್ ಸ್ಟೊಯಿನಿಸ್ (ಆಲ್​ರೌಂಡರ್)
  7. ಶಶಾಂಕ್ ಸಿಂಗ್ (ಆಲ್​ರೌಂಡರ್)
  8. ಮಾರ್ಕೊ ಯಾನ್ಸೆನ್ (ಆಲ್​ರೌಂಡರ್)
  9. ಯುಜ್ವೇಂದ್ರ ಚಹಲ್ (ಸ್ಪಿನ್ನರ್)
  10. ವಿಜಯಕುಮಾರ್ ವೈಶಾಕ್ (ವೇಗದ ಬೌಲರ್)
  11. ಕ್ಸೇವಿಯರ್ ಬಾರ್ಟ್ಲೆಟ್ (ವೇಗದ ಬೌಲರ್)

ಇದನ್ನೂ ಓದಿ: 17 ವರ್ಷಗಳ ದಾಖಲೆ ಪತನ… ಟೀಮ್ ಇಂಡಿಯಾಗೆ ಮುಖಭಂಗ!

ಒಟ್ಟಾರೆಯಾಗಿ ಹೇಳುವುದಾದರೆ, ಈ ಮೆಗಾ ಟ್ರೇಡ್‌ನಿಂದಾಗಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಬಳಸದೆಯೇ ಬರೋಬ್ಬರಿ 8 ಜನ ಪರಿಣಾಮಕಾರಿ ಬ್ಯಾಟರ್‌ಗಳ ದಂಡೇ ಲಭ್ಯವಾಗಲಿದೆ. ಅಷ್ಟೇ ಅಲ್ಲದೆ, ಬೌಲಿಂಗ್ ವಿಭಾಗದಲ್ಲೂ ನಾಯಕನಿಗೆ ಒಟ್ಟು 7 ವಿಶ್ವಾಸಾರ್ಹ ಬೌಲಿಂಗ್ ಆಯ್ಕೆಗಳು ಸಿಗಲಿವೆ. ಹಾರ್ದಿಕ್ ಪಾಂಡ್ಯ ಅವರ ಈ ಆಲ್‌ರೌಂಡ್ ಸಾಮರ್ಥ್ಯವು ಪಂಜಾಬ್ ಕಿಂಗ್ಸ್ ತಂಡದ ಸಂಯೋಜನೆಗೆ ಅಭೂತಪೂರ್ವ ಸಮತೋಲನ ತಂದಿಟ್ಟಿದೆ. ಈ ಮೂಲಕ ಮುಂಬರುವ ಐಪಿಎಲ್ ಸೀಸನ್‌ನಲ್ಲಿ ಪಂಜಾಬ್ ಕಿಂಗ್ಸ್ ಚೊಚ್ಚಲ ಟ್ರೋಫಿ ಮುತ್ತಿಕ್ಕಲು ತನ್ನ ಭದ್ರ ಬುನಾದಿಯನ್ನು ಭರ್ಜರಿಯಾಗಿಯೇ ಸಿದ್ಧಪಡಿಸಿಕೊಂಡಿದೆ ಎಂದೇ ಹೇಳಬಹುದು.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ಇಂದು ಈ ರಾಶಿಯವರು ಸಂಗಾತಿಯ ಸಲಹೆಯನ್ನು ಪಡೆದು ನಿರ್ಧಾರ ತೆಗೆದುಕೊಳ್ಳಿ
ಇಂದು ಈ ರಾಶಿಯವರು ಸಂಗಾತಿಯ ಸಲಹೆಯನ್ನು ಪಡೆದು ನಿರ್ಧಾರ ತೆಗೆದುಕೊಳ್ಳಿ
ದೇವಿರಮ್ಮ ಬೆಟ್ಟದಿಂದ ಜಾರಿಬಿದ್ದ ಯುವಕ: ಗಂಭೀರ ಗಾಯ
ದೇವಿರಮ್ಮ ಬೆಟ್ಟದಿಂದ ಜಾರಿಬಿದ್ದ ಯುವಕ: ಗಂಭೀರ ಗಾಯ
ಕರ್ನಾಟಕದ ಡಿಪಿಆರ್‌ ತಿರಸ್ಕರಿಸಲು ಪ್ರಧಾನಿಗೆ ತಮಿಳುನಾಡು ಸಿಎಂ ಪತ್ರ
ಕರ್ನಾಟಕದ ಡಿಪಿಆರ್‌ ತಿರಸ್ಕರಿಸಲು ಪ್ರಧಾನಿಗೆ ತಮಿಳುನಾಡು ಸಿಎಂ ಪತ್ರ
ಪೋಲೆಂಡ್‌ನ ಕ್ರಾಕೋವ್‌ನಲ್ಲಿ ಗುಂಡಿನ ದಾಳಿ; 5 ಜನ ಸಾವು
ಪೋಲೆಂಡ್‌ನ ಕ್ರಾಕೋವ್‌ನಲ್ಲಿ ಗುಂಡಿನ ದಾಳಿ; 5 ಜನ ಸಾವು
ಸ್ಟಿಂಗ್​​​ನಿಂದ ಕರ್ನಾಟಕ ತಲೆ ತಗ್ಗಿಸುವಂತಾಗಿದೆ ಎಂದ ಡಾ. ಕೆ. ಸುಧಾಕರ್
ಸ್ಟಿಂಗ್​​​ನಿಂದ ಕರ್ನಾಟಕ ತಲೆ ತಗ್ಗಿಸುವಂತಾಗಿದೆ ಎಂದ ಡಾ. ಕೆ. ಸುಧಾಕರ್
ವೈಷ್ಣವಿ ಸಾವಿಗೆ ಕಾರಣವಾಯ್ತಾ ಅರಮನೆ ರಸ್ತೆಯ ಪ್ರೀ-ವೆಡ್ಡಿಂಗ್ ಶೂಟಿಂಗ್?
ವೈಷ್ಣವಿ ಸಾವಿಗೆ ಕಾರಣವಾಯ್ತಾ ಅರಮನೆ ರಸ್ತೆಯ ಪ್ರೀ-ವೆಡ್ಡಿಂಗ್ ಶೂಟಿಂಗ್?
ದೀಪಾವಳಿಗೆ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ ಅಯೋಧ್ಯೆ ರಾಮ ಮಂದಿರ
ದೀಪಾವಳಿಗೆ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ ಅಯೋಧ್ಯೆ ರಾಮ ಮಂದಿರ
ಬೆಂಗಳೂರಲ್ಲಿ ಸರಣಿ ಕೊಲೆ ಕೇಸ್: ತಮಿಳುನಾಡಿನ ಸೇಲಂನಲ್ಲಿ ಎರಡು ಶವ ಪತ್ತೆ
ಬೆಂಗಳೂರಲ್ಲಿ ಸರಣಿ ಕೊಲೆ ಕೇಸ್: ತಮಿಳುನಾಡಿನ ಸೇಲಂನಲ್ಲಿ ಎರಡು ಶವ ಪತ್ತೆ
30 ಲಕ್ಷಕ್ಕೂ ಹೆಚ್ಚು ದೀಪಗಳು; ಸರಯೂ ದಡದಲ್ಲಿ ಮತ್ತೊಂದು ವಿಶ್ವದಾಖಲೆ
30 ಲಕ್ಷಕ್ಕೂ ಹೆಚ್ಚು ದೀಪಗಳು; ಸರಯೂ ದಡದಲ್ಲಿ ಮತ್ತೊಂದು ವಿಶ್ವದಾಖಲೆ
ಗಾನವಿ ಮಾಡಿದ ಡ್ರಾಮಾ ಬಯಲು ಮಾಡಿದ ಸುದೀಪ್: ವಿಡಿಯೋ ನೋಡಿ
ಗಾನವಿ ಮಾಡಿದ ಡ್ರಾಮಾ ಬಯಲು ಮಾಡಿದ ಸುದೀಪ್: ವಿಡಿಯೋ ನೋಡಿ