IND vs SL: ಭಾರತಕ್ಕೆ ಆತಿಥ್ಯವಹಿಸುವ ಮುನ್ನವೇ ಟಿ20 ನಾಯಕತ್ವಕ್ಕೆ ವನಿಂದು ಹಸರಂಗ ಗುಡ್​ ಬೈ..!

Wanindu Hasaranga: ವಾಸ್ತವವಾಗಿ 2024ರ ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಪ್ರದರ್ಶನ ವಿಶೇಷವೇನೂ ಆಗಿರಲಿಲ್ಲ. ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ತಂಡ ಸೋಲನ್ನು ಎದುರಿಸಬೇಕಾಯಿತು. ಟೂರ್ನಿಯಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ ನಂತರ ತಂಡವು ಸಾಕಷ್ಟು ಟೀಕೆಗೆ ಒಳಗಾಗಿತ್ತು. ಹೀಗಾಗಿ ತಂಡದ ಕಳಪೆ ಪ್ರದರ್ಶನದ ಹೊಣೆ ಹೊತ್ತು ಹಸರಂಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

IND vs SL: ಭಾರತಕ್ಕೆ ಆತಿಥ್ಯವಹಿಸುವ ಮುನ್ನವೇ ಟಿ20 ನಾಯಕತ್ವಕ್ಕೆ ವನಿಂದು ಹಸರಂಗ ಗುಡ್​ ಬೈ..!
ವನಿಂದು ಹಸರಂಗ
Follow us
ಪೃಥ್ವಿಶಂಕರ
|

Updated on:Jul 11, 2024 | 8:07 PM

ಇದೇ ತಿಂಗಳ ಅಂದರೆ ಜುಲೈ 26 ರಿಂದ ಬಲಿಷ್ಠ ಟೀಂ ಇಂಡಿಯಾಕ್ಕೆ ಮೂರು ಪಂದ್ಯಗಳ ಟಿ20 ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಗೆ ಶ್ರೀಲಂಕಾ ತಂಡ ಆತಿಥ್ಯವಹಿಸಬೇಕಾಗಿದೆ. ಈ ಸರಣಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿರುವಾಗ ಶ್ರೀಲಂಕಾ ಟಿ20 ತಂಡದ ನಾಯಕ ವನಿಂದು ಹಸರಂಗ ತಮ್ಮ ನಾಯಕತ್ವಕ್ಕೆ ಇದ್ದಕ್ಕಿದ್ದಂತೆ ವಿದಾಯ ಹೇಳಿದ್ದಾರೆ. ವಾಸ್ತವವಾಗಿ 2024ರ ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಪ್ರದರ್ಶನ ವಿಶೇಷವೇನೂ ಆಗಿರಲಿಲ್ಲ. ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ತಂಡ ಸೋಲನ್ನು ಎದುರಿಸಬೇಕಾಯಿತು. ಟೂರ್ನಿಯಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ ನಂತರ ತಂಡವು ಸಾಕಷ್ಟು ಟೀಕೆಗೆ ಒಳಗಾಗಿತ್ತು. ಹೀಗಾಗಿ ತಂಡದ ಕಳಪೆ ಪ್ರದರ್ಶನದ ಹೊಣೆ ಹೊತ್ತು ಹಸರಂಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಮುಂದಿನ ನಾಯಕ ಯಾರು?

ವಾಸ್ತವವಾಗಿ ದಸುನ್ ಶನಕ ಬದಲಿಗೆ ವನಿಂದು ಹಸರಂಗ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದರು. ಆದರೆ ಕಳಪೆ ಪ್ರದರ್ಶನದ ಕಾರಣ ಅವರು ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ. ಹೀಗಿರುವಾಗ ತಂಡದ ನೂತನ ನಾಯಕ ಯಾರು ಎಂಬುದೇ ಈಗ ದೊಡ್ಡ ಪ್ರಶ್ನೆಯಾಗಿದೆ. ಸದ್ಯ ಕುಸಾಲ್ ಮೆಂಡಿಸ್ ತಂಡದ ಉಪನಾಯಕರಾಗಿದ್ದು ಅವರೇ ತಂಡದ ಚುಕ್ಕಾಣಿ ಹಿಡಿಯುವ ಸಾಧ್ಯತೆಗಳಿವೆ. ಹೀಗಾಗಿ ಶ್ರೀಲಂಕಾ ತಂಡ ಹೊಸ ನಾಯಕನೊಂದಿಗೆ ಟೀಂ ಇಂಡಿಯಾ ವಿರುದ್ಧ ಕಣಕ್ಕಿಳಿಯುವುದು ಖಚಿತವಾಗಿದೆ.

ರಾಜೀನಾಮೆ ಪುರಸ್ಕರಿಸಿದ ಮಂಡಳಿ

ತಮ್ಮ ನಿರ್ಧಾರದ ಬಗ್ಗೆ ಮಾಹಿತಿ ನೀಡಿರುವ ಹಸರಂಗ ಅವರು ಶ್ರೀಲಂಕಾ ಕ್ರಿಕೆಟ್‌ನ ಹಿತದೃಷ್ಟಿಯಿಂದ ನಾಯಕತ್ವದ ಜವಾಬ್ದಾರಿಯನ್ನು ತೊರೆದು ಆಟಗಾರನಾಗಿ ತಂಡದಲ್ಲಿ ಉಳಿಯಲು ನಿರ್ಧರಿಸಿರುವುದಾಗಿ ಮಂಡಳಿಗೆ ತಿಳಿದ್ದಾರೆ. ಅದೇ ಸಮಯದಲ್ಲಿ ಶ್ರೀಲಂಕಾ ಕ್ರಿಕೆಟ್ ಕೂಡ ಹಸರಂಗ ರಾಜೀನಾಮೆಯನ್ನು ಅಂಗೀರಿಸಿದ್ದು, ‘ಶ್ರೀಲಂಕಾ ಕ್ರಿಕೆಟ್ ಅವರ ರಾಜೀನಾಮೆಯನ್ನು ಅಂಗೀಕರಿಸಲು ಬಯಸುತ್ತದೆ ಮತ್ತು ನಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ಯೋಜನೆಗಳಲ್ಲಿ ಹಸರಂಗ ನಮಗೆ ಪ್ರಮುಖ ಆಟಗಾರನಾಗಿ ಉಳಿಯುತ್ತಾರೆ ಎಂದು ಮಂಡಳಿ ತಿಳಿಸಿದೆ.

ಟಿ20 ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ

ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ಆತಿಥ್ಯದಲ್ಲಿ ನಡೆದ ಟಿ20 ವಿಶ್ವಕಪ್ 2024 ರಲ್ಲಿ ಶ್ರೀಲಂಕಾ ತಂಡವು ವನಿಂದು ಹಸರಂಗ ನಾಯಕತ್ವದಲ್ಲಿ ಕಳಪೆ ಪ್ರದರ್ಶನ ನೀಡಿತ್ತು. 2014 ರ ಚಾಂಪಿಯನ್ ತಂಡಕ್ಕೆ ಸೂಪರ್ ಎಂಟು ಸುತ್ತಿಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ.  ಜುಲೈ 2022 ರಲ್ಲಿ ಟಿ20 ತಂಡದ ನಾಯಕತ್ವಹಿಸಿಕೊಂಡಿದ್ದ ವನಿಂದು ಹಸರಂಗ ಅತಿ ಕಡಿಮೆ ಅವಧಿಗೆ ತಮ್ಮ ಜವಬ್ದಾರಿಯಿಂದ ಕೆಳಗಿಳಿದಿದ್ದಾರೆ.

ಸರಣಿ ಜುಲೈ 26 ರಿಂದ ಆರಂಭ

ಭಾರತ ತಂಡ ಪ್ರಸ್ತುತ ಐದು ಪಂದ್ಯಗಳ ಟಿ20 ಸರಣಿಗಾಗಿ ಜಿಂಬಾಬ್ವೆ ಪ್ರವಾಸದಲ್ಲಿದೆ. ಇದರ ನಂತರ, ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಟಿ20 ಮತ್ತು ಸಮಾನ ಸಂಖ್ಯೆಯ ಏಕದಿನ ಸರಣಿಗಳನ್ನು ಆಡಬೇಕಾಗಿದೆ. ಇದು ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿರುವ ಗೌತಮ್ ಗಂಭೀರ್ ಅವರ ಮೊದಲ ಪ್ರವಾಸವಾಗಿದೆ. ಮೂರು ಪಂದ್ಯಗಳ ಟಿ20 ಸರಣಿ ಜುಲೈ 26ರಿಂದ ಆರಂಭವಾಗಲಿದೆ. ಎರಡನೇ ಪಂದ್ಯ ಇದೇ 27ರಂದು ನಡೆಯಲಿದ್ದು, ಮೂರನೇ ಪಂದ್ಯ ಜುಲೈ 29ರಂದು ನಡೆಯಲಿದೆ. ಅದೇ ಸಮಯದಲ್ಲಿ, ಏಕದಿನ ಸರಣಿಯು ಆಗಸ್ಟ್ 1 ರಿಂದ ಪ್ರಾರಂಭವಾಗಲಿದ್ದು, ಎರಡನೇ ಮತ್ತು ಮೂರನೇ ಪಂದ್ಯಗಳು ಕ್ರಮವಾಗಿ ಆಗಸ್ಟ್ 4 ಮತ್ತು 7 ರಂದು ನಡೆಯಲಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:54 pm, Thu, 11 July 24