AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND A vs SL A: ವೈಭವ್ ಸಿಡಿಲಬ್ಬರ..​ ತ್ರಿಕೋನ ಸರಣಿ ಗೆದ್ದ ಟೀಂ ಇಂಡಿಯಾ

India A Wins Dambulla Tri-Series Final: ಶ್ರೀಲಂಕಾದ ದಂಬುಲ್ಲಾದಲ್ಲಿ ನಡೆದ ತ್ರಿಕೋನ ಏಕದಿನ ಸರಣಿಯ ಫೈನಲ್‌ನಲ್ಲಿ ಭಾರತ ಎ ತಂಡ ಶ್ರೀಲಂಕಾ ಎ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 378 ರನ್ ಗಳಿಸಿದ ಭಾರತ ಎ, ಆತಿಥೇಯರನ್ನು ಸೋಲಿಸಿತು. ಈ ಮೂಲಕ ಭಾರತ ಎ ತಂಡವು ಸತತ 7ನೇ ತ್ರಿಕೋನ ಸರಣಿಯನ್ನು ಗೆದ್ದು ಇತಿಹಾಸ ನಿರ್ಮಿಸಿದೆ. ಈ ಸಾಧನೆಯು ತಂಡದ ಪ್ರವಾಸಕ್ಕೆ ಅದ್ಧೂರಿ ಅಂತ್ಯ ನೀಡಿದೆ.

IND A vs SL A: ವೈಭವ್ ಸಿಡಿಲಬ್ಬರ..​ ತ್ರಿಕೋನ ಸರಣಿ ಗೆದ್ದ ಟೀಂ ಇಂಡಿಯಾ
India A
ಪೃಥ್ವಿಶಂಕರ
|

Updated on:Jun 21, 2026 | 6:44 PM

Share

ಶ್ರೀಲಂಕಾದ ದಂಬುಲ್ಲಾ ಕ್ರೀಡಾಂಗಣದಲ್ಲಿ ನಡೆದ ಭಾರತ ಎ ಹಾಗೂ ಶ್ರೀಲಂಕಾ ಎ (India A vs Sri Lanka A) ತಂಡಗಳ ನಡುವಿನ ತ್ರಿಕೋನ ಏಕದಿನ ಸರಣಿಯ ಫೈನಲ್ ಪಂದ್ಯದಲ್ಲಿ ಆತಿಥೇಯ ತಂಡವನ್ನು ಸೋಲಿಸಿದ ಭಾರತ ಎ ತಂಡ ತ್ರಿಕೋನ ಸರಣಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಈ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ಎ ತಂಡ ವೈಭವ್ ಸೂರ್ಯವಂಶಿ (Vaibhav Sooryavanshi) ಅವರ ಸ್ಫೋಟಕ ಬ್ಯಾಟಿಂಗ್​ನಿಂದಾಗಿ ನಿಗದಿತ 50 ಓವರ್​ಗಳಲ್ಲಿ 378 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ನಿಯಮಿತ ಅಂತರಗಳಲ್ಲಿ ವಿಕೆಟ್ ಕಳೆದುಕೊಂಡು ಸೋಲಿಗೆ ಶರಣಾಯಿತು. ಈ ಮೂಲಕ ಭಾರತ ತಂಡ ಸತತ 7ನೇ ತ್ರಿಕೋನ ಸರಣಿಯನ್ನು ಗೆದ್ದ ದಾಖಲೆಯೊಂದಿಗೆ ಈ ಪ್ರವಾಸವನ್ನು ಅಂತ್ಯಗೊಳಿಸಿದೆ.

ಸ್ಫೋಟಕ ಆರಂಭ ನೀಡಿದ ವೈಭವ್

ಈ ಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎ ತಂಡವು 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 377 ರನ್‌ಗಳ ಬೃಹತ್ ಮೊತ್ತವನ್ನು ಗಳಿಸಿತು. ತಂಡದ ಪರ ವೈಭವ್ ಸೂರ್ಯವಂಶಿ ಕೇವಲ 29 ಎಸೆತಗಳಲ್ಲಿ 10 ಬೌಂಡರಿ ಮತ್ತು 8 ಸಿಕ್ಸರ್‌ಗಳನ್ನು ಒಳಗೊಂಡಂತೆ 94 ರನ್ ಗಳಿಸಿದರು. ಅವರ ಸ್ಟ್ರೈಕ್ ರೇಟ್ 324 ಕ್ಕಿಂತ ಹೆಚ್ಚಿತ್ತು. ಮತ್ತೊಬ್ಬ ಆರಂಭಿಕ ಪ್ರಿಯಾಂಶ್ ಆರ್ಯ ಕೂಡ 39 ರನ್ ಗಳಿಸಿದರು. ನಾಯಕ ತಿಲಕ್ ವರ್ಮಾ ಕೂಡ 67 ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಆಡಿದರು. ಕೊನೆಯಲ್ಲಿ ಅನುಕುಲ್ ರಾಯ್ 15 ಎಸೆತಗಳಲ್ಲಿ 39 ರನ್ ಬಾರಿಸಿ ತಂಡದ ಸ್ಕೋರ್ ಅನ್ನು 377 ರನ್​​ಗಳಿಗೆ ಕೊಂಡೊಯ್ದರು.

ಇತ್ತ ಈ ಪಂದ್ಯದಲ್ಲಿ ಶ್ರೀಲಂಕಾ ಎ ತಂಡದ ಬೌಲಿಂಗ್ ಸಾಕಷ್ಟು ದುಬಾರಿಯಾಗಿತ್ತು. ವನುಜಾ ಸಹನ್, ಕುಗಥಾಸ್ ಮಥುಲನ್ ಮತ್ತು ರವಿಂಡು ಫರ್ನಾಂಡೊ ತಲಾ ಎರಡು ವಿಕೆಟ್ ಪಡೆದರೂ, ಉಳಿದ ಬೌಲರ್‌ಗಳು ಪರಿಣಾಮ ಬೀರುವಲ್ಲಿ ವಿಫಲರಾದರು, ಇದನ್ನು ಭಾರತೀಯ ಬ್ಯಾಟ್ಸ್‌ಮನ್‌ಗಳು ಸದುಪಯೋಗಪಡಿಸಿಕೊಂಡರು.

68, 175, 67, 96, 94..! ನಿರ್ಣಾಯಕ ಪಂದ್ಯಗಳಲ್ಲಿ ಅಬ್ಬರಿಸುವ ವೈಭವ್ ಸೂರ್ಯವಂಶಿ

ಭಾರತಕ್ಕೆ ಸುಲಭ ಜಯ

ಈ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ಎ ತಂಡ ಕಳಪೆ ಆರಂಭ ಪಡೆದುಕೊಂಡಿತು. ಮಧ್ಯಮ ಓವರ್‌ಗಳಲ್ಲಿ ಪ್ರತಿರೋಧ ತೋರಿತ್ತಾದರೂ ಭಾರತೀಯ ಬೌಲರ್‌ಗಳ ಒತ್ತಡಕ್ಕೆ ಮಣಿದು 47.1 ಓವರ್‌ಗಳಲ್ಲಿ ಕೇವಲ 311 ರನ್‌ಗಳಿಗೆ ಆಲ್ ಔಟ್ ಆಯಿತು. ತಂಡದ ಪರ ವನಜಾ ಸಹನ್ 62 ರನ್‌ ಬಾರಿಸಿದರೆ, ಸದೇರಾ ಸಮರವಿಕ್ರಮ 52 ರನ್ ಗಳಿಸಿದರು. ವಿಜಯಕಾಂತ್ ವ್ಯಾಸಕಾಂತ್ 39 ಮತ್ತು ನಾಯಕ ಸಹನ್ ಅರಚ್ಚಿಗೆ 38 ರನ್​ಗಳ ಕಾಣಿಕೆ ನೀಡಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ.

ಮತ್ತೊಂದೆಡೆ, ಭಾರತದ ಪರ ಯಶ್ ಠಾಕೂರ್ ಮತ್ತು ವಿಪ್ರಜ್ ನಿಗಮ್ ಅದ್ಭುತ ಬೌಲಿಂಗ್ ಮಾಡಿದರು. ಇಬ್ಬರೂ ಬೌಲರ್‌ಗಳು ತಲಾ ಮೂರು ವಿಕೆಟ್ ಪಡೆದರು. ಅನುಕುಲ್ ರಾಯ್ ಕೂಡ ಎರಡು ವಿಕೆಟ್ ಪಡೆದರು. ಅಶೋಕ್ ಶರ್ಮಾ ಮತ್ತು ತಿಲಕ್ ವರ್ಮಾ ಕೂಡ ತಲಾ ಒಂದು ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:03 pm, Sun, 21 June 26

Follow Us
ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿ ಫುಟ್‌ಪಾತ್ ತೆರವು ಅಭಿಯಾನ
ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿ ಫುಟ್‌ಪಾತ್ ತೆರವು ಅಭಿಯಾನ
ಒಳ್ಳೆ ಪತಿಯಾಗುವುದು ಹೇಗೆ? ಚಿಕ್ಕಣ್ಣನಿಗೆ ಪಾಠ ಹೇಳಿದ್ದಾರಂತೆ ಯಶ್
ಒಳ್ಳೆ ಪತಿಯಾಗುವುದು ಹೇಗೆ? ಚಿಕ್ಕಣ್ಣನಿಗೆ ಪಾಠ ಹೇಳಿದ್ದಾರಂತೆ ಯಶ್
‘ಮದುವೆಗೆ ದರ್ಶನ್ ಅವರನ್ನು ಕರೆಯೋಕೆ ಆಗಲ್ಲ’: ಕಾರಣ ತಿಳಿಸಿದ ಚಿಕ್ಕಣ್ಣ
‘ಮದುವೆಗೆ ದರ್ಶನ್ ಅವರನ್ನು ಕರೆಯೋಕೆ ಆಗಲ್ಲ’: ಕಾರಣ ತಿಳಿಸಿದ ಚಿಕ್ಕಣ್ಣ
ಕರ್ನಾಟಕದಲ್ಲಿ ಕೆಜಿ ಈರುಳ್ಳಿ ದರ ಶೀಘ್ರವೇ 100 ರೂಪಾಯಿ?
ಕರ್ನಾಟಕದಲ್ಲಿ ಕೆಜಿ ಈರುಳ್ಳಿ ದರ ಶೀಘ್ರವೇ 100 ರೂಪಾಯಿ?
IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ಕೇಸ್​ಗೆ ಟ್ವಿಸ್ಟ್
IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ಕೇಸ್​ಗೆ ಟ್ವಿಸ್ಟ್
ಬಾಗಲಕೋಟೆ ಶ್ರೀ ಬನಶಂಕರಿ ದೇವಾಲಯದ ಮಹತ್ವ ಮತ್ತು ಐತಿಹಾಸಿಕ ಹಿನ್ನೆಲೆ
ಬಾಗಲಕೋಟೆ ಶ್ರೀ ಬನಶಂಕರಿ ದೇವಾಲಯದ ಮಹತ್ವ ಮತ್ತು ಐತಿಹಾಸಿಕ ಹಿನ್ನೆಲೆ
ಗುಡ್ ನ್ಯೂಸ್: ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆಗೆ ಡೇಟ್ ಫಿಕ್ಸ್​​
ಗುಡ್ ನ್ಯೂಸ್: ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆಗೆ ಡೇಟ್ ಫಿಕ್ಸ್​​
ಗದಗದ ಕೆಂಚಲಾಪೂರದಲ್ಲಿ ಸದ್ದಿಲ್ಲದೆ ಸರ್ಕಾರಿ ಕನ್ನಡ ಶಾಲೆಗೆ ಬೀಗ?
ಗದಗದ ಕೆಂಚಲಾಪೂರದಲ್ಲಿ ಸದ್ದಿಲ್ಲದೆ ಸರ್ಕಾರಿ ಕನ್ನಡ ಶಾಲೆಗೆ ಬೀಗ?
ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿ ವಿಳಂಬಕ್ಕೆ ವಿದ್ಯಾರ್ಥಿಗಳ ರಣಕಹಳೆ
ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿ ವಿಳಂಬಕ್ಕೆ ವಿದ್ಯಾರ್ಥಿಗಳ ರಣಕಹಳೆ
KRS ಡ್ಯಾಂಗೆ ಮುತ್ತಿಗೆ: ವಾಟಾಳ್ ನಾಗರಾಜ್ ಘೋಷಣೆ
KRS ಡ್ಯಾಂಗೆ ಮುತ್ತಿಗೆ: ವಾಟಾಳ್ ನಾಗರಾಜ್ ಘೋಷಣೆ