AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಷ್ಯನ್​ ಗೇಮ್ಸ್​ನಲ್ಲಿ ಫೈನಲ್​ಗೇರಿದ ಟೀಮ್ ಇಂಡಿಯಾ

ಏಷ್ಯನ್ ಗೇಮ್ಸ್ ಮಹಿಳಾ ಟಿ20 ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯಗಳು ಮುಗಿದಿವೆ. ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ್ ತಂಡವನ್ನು 8 ವಿಕೆಟ್​ಗಳಿಂದ ಮಣಿಸಿ ಶ್ರೀಲಂಕಾ ತಂಡ ಫೈನಲ್​ಗೆ ಪ್ರವೇಶಿಸಿದೆ. ಇದೀಗ ಬಾಂಗ್ಲಾದೇಶ್ ತಂಡಕ್ಕೆ ಸೋಲುಣಿಸುವ ಮೂಲಕ ಟೀಮ್ ಇಂಡಿಯಾ ಕೂಡ ಫೈನಲ್​ಗೆ ಲಗ್ಗೆಯಿಟ್ಟಿದೆ.

ಏಷ್ಯನ್​ ಗೇಮ್ಸ್​ನಲ್ಲಿ ಫೈನಲ್​ಗೇರಿದ ಟೀಮ್ ಇಂಡಿಯಾ
ಟೀಮ್ ಇಂಡಿಯಾImage Credit source: Asian Games
ಝಾಹಿರ್ ಯೂಸುಫ್
|

Updated on: Sep 20, 2026 | 1:25 PM

Share

ಜಪಾನ್​ನಲ್ಲಿ ನಡೆದ 2026ರ ಏಷ್ಯನ್ ಗೇಮ್ಸ್ ಮಹಿಳಾ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡ ಫೈನಲ್​ಗೇರಿದೆ. ನಿಶ್ಶಿನ್​ ನಗರದ ಕ್ರಿಕೆಟ್ ಮೈದಾನದಲ್ಲಿ ನಡೆದ ಬಾಂಗ್ಲಾದೇಶ್ ವಿರುದ್ಧದ ಸೆಮಿಫೈನಲ್​ ಪಂದ್ಯದಲ್ಲಿ 114 ರನ್​ಗಳ ಭರ್ಜರಿ ಜಯ ಸಾಧಿಸಿ ಟೀಮ್ ಇಂಡಿಯಾ ಫೈನಲ್​ಗೆ ಲಗ್ಗೆಯಿಟ್ಟಿದೆ. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕಿ ಹರ್ಮನ್​ಪ್ರೀತ್ ಕೌರ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.

ನಾಯಕಿಯ ನಿರ್ಧಾರವನ್ನು ಸಮರ್ಥಿಸುವಂತೆ ಬ್ಯಾಟ್ ಬೀಸಿದ ಶಫಾಲಿ ವರ್ಮಾ ಬಾಂಗ್ಲಾ ಬೌಲರ್​ಗಳ ಬೆಂಡೆತ್ತಿದರು. ಪರಿಣಾಮ ಶಫಾಲಿ ಬ್ಯಾಟ್​ನಿಂದ 49 ಎಸೆತಗಳಲ್ಲಿ 9 ಭರ್ಜರಿ ಸಿಕ್ಸರ್ ಹಾಗೂ 3 ಫೋರ್​ಗಳೊಂದಿಗೆ 100 ರನ್​ಗಳ ಶತಕ ಮೂಡಿಬಂತು.

ಮತ್ತೊಂದೆಡೆ ಸ್ಮೃತಿ ಮಂಧಾನ 37 ರನ್​ಗಳ ಕೊಡುಗೆ ನೀಡಿದರೆ, ಹರ್ಮನ್​ಪ್ರೀತ್ ಕೌರ್​ 40 ರನ್​ಗಳನ್ನು ಬಾರಿಸಿದರು. ಈ ಮೂಲಕ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 195 ರನ್ ಕಲೆಹಾಕಿತು.

196 ರನ್​ಗಳ ಗುರಿ:

20 ಓವರ್​ಗಳಲ್ಲಿ 196 ರನ್​ಗಳ ಕಠಿಣ ಗುರಿ ಪಡೆದ ಬಾಂಗ್ಲಾದೇಶ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ನಂದಿನಿ ಶರ್ಮಾ ಯಶಸ್ವಿಯಾದರು. ಈ ಆಘಾತದಿಂದ ಪಾರಾಗುವ ಮುನ್ನವೇ ಕ್ರಾಂತಿ ಗೌಡ್ ಹಾಗೂ ಶ್ರೀಚರಣಿ ಅತ್ಯುತ್ತಮ ದಾಳಿ ಸಂಘಟಿಸಿದರು. ಪರಿಣಾಮ 49 ರನ್​ಗಳಿಸುವಷ್ಟರಲ್ಲಿ ಬಾಂಗ್ಲಾದೇಶ್ ತಂಡ 5 ವಿಕೆಟ್ ಕಳೆದುಕೊಂಡಿತು.

ಇದಾಗ್ಯೂ ದಿಲಾರಾ ಅಕ್ತರ್ 27 ರನ್​ಗಳಿಸುವ ಮೂಲಕ ತಂಡಕ್ಕೆ ಆಸರೆಯಾಗಿ ನಿಂತರು. ಆದರೆ ಟೀಮ್ ಇಂಡಿಯಾ ಬೌಲರ್​ಗಳ ಕರಾರುವಾಕ್ ದಾಳಿ ಮುಂದೆ ದಿಲಾರಾ ಕೂಡ ಶರಣಾಗಬೇಕಾಯಿತು. ಅಂತಿಮವಾಗಿ ಬಾಂಗ್ಲಾದೇಶ್ ತಂಡವು 15.4 ಓವರ್​ಗಳಲ್ಲಿ 81 ರನ್​ಗಳಿಸಿ ಸರ್ವಪತನ ಕಂಡಿತು.

ಈ ಮೂಲಕ ಟೀಮ್ ಇಂಡಿಯಾ 114 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡವು ಫೈನಲ್​ಗೆ ಲಗ್ಗೆಯಿಟ್ಟಿದ್ದು, ಮಂಗಳವಾರ ನಡೆಯಲಿರುವ ಫೈನಲ್​ ಮ್ಯಾಚ್​ನಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ.

ಭಾರತ ಪ್ಲೇಯಿಂಗ್ 11:  ಸ್ಮೃತಿ ಮಂಧಾನ , ಶಫಾಲಿ ವರ್ಮಾ , ಗುಣಲನ್ ಕಮಲಿನಿ , ಹರ್ಮನ್‌ಪ್ರೀತ್ ಕೌರ್ (ನಾಯಕಿ) , ರಿಚಾ ಘೋಷ್ (ವಿಕೆಟ್ ಕೀಪರ್), ಭಾರತಿ ಫುಲ್ಮಾಲಿ , ದೀಪ್ತಿ ಶರ್ಮಾ , ಶ್ರೇಯಾಂಕ ಪಾಟೀಲ್ , ಶ್ರೀ ಚರಣಿ , ನಂದನಿ ಶರ್ಮಾ , ಕ್ರಾಂತಿ ಗೌಡ್.

ಇದನ್ನೂ ಓದಿ: ವಿಶ್ವ ದಾಖಲೆಯನ್ನೇ ಉಡೀಸ್ ಮಾಡಿದ ಸ್ಮೃತಿ ಮಂಧಾನ!

ಬಾಂಗ್ಲಾದೇಶ್ ಪ್ಲೇಯಿಂಗ್ 11: ದಿಲಾರಾ ಅಕ್ತರ್ , ಜುಯೆರಿಯಾ ಫರ್ದೌಸ್ , ಶೋಭಾನ ಮೋಸ್ಟರಿ , ನಿಗರ್ ಸುಲ್ತಾನ (ನಾಯಕಿ) , ಶೋರ್ನಾ ಅಕ್ತರ್ , ಶರ್ಮಿನ್ ಅಖ್ತರ್ , ಶಂಜಿದಾ ಅಕ್ತರ್ ಮೇಘಲಾ , ರಬೇಯಾ ಖಾನ್ , ನಹಿದಾ ಅಕ್ತರ್ , ಮರುಫಾ ಅಕ್ತರ್ , ಸುಲ್ತಾನ ಖಾತುನ್.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
‘ರಜನಿಕಾಂತ್ ಕನ್ನಡ ಡೈಲಾಗ್ ಸೂಪರ್’; ‘ಜೈಲರ್ 2’ ನೋಡಿ ಫ್ಯಾನ್ಸ್ ಏನಂದ್ರು?
‘ರಜನಿಕಾಂತ್ ಕನ್ನಡ ಡೈಲಾಗ್ ಸೂಪರ್’; ‘ಜೈಲರ್ 2’ ನೋಡಿ ಫ್ಯಾನ್ಸ್ ಏನಂದ್ರು?
ದಸರಾ: ಪ್ರಶಾಂತ ಆನೆಯ ಆಯ್ಕೆ ಎಷ್ಟು ಸವಾಲಾಗಿತ್ತು? ವಿವರಿಸಿದ ಸಿಸಿಎಫ್
ದಸರಾ: ಪ್ರಶಾಂತ ಆನೆಯ ಆಯ್ಕೆ ಎಷ್ಟು ಸವಾಲಾಗಿತ್ತು? ವಿವರಿಸಿದ ಸಿಸಿಎಫ್
ಹಿಂದಿ ಸರಿಗಮಪದಲ್ಲಿ ಮಿಂಚು ಹರಿಸಿದ ಕನ್ನಡತಿ ಶಿವಾನಿ ಸ್ವಾಮಿ
ಹಿಂದಿ ಸರಿಗಮಪದಲ್ಲಿ ಮಿಂಚು ಹರಿಸಿದ ಕನ್ನಡತಿ ಶಿವಾನಿ ಸ್ವಾಮಿ
ಖಾಸಗಿ ಬಸ್​​ ಅಪಘಾತ: 15 ಮಂದಿಗೆ ಗಂಭೀರ ಗಾಯ
ಖಾಸಗಿ ಬಸ್​​ ಅಪಘಾತ: 15 ಮಂದಿಗೆ ಗಂಭೀರ ಗಾಯ
₹90 ಲಕ್ಷ ಹೂವಿನ ಅಲಂಕಾರ: ಹಾಸನಾಂಬೆ ಜಾತ್ರೆ ಖರ್ಚು ಕೇಳಿ ರೇವಣ್ಣ ಶಾಕ್!
₹90 ಲಕ್ಷ ಹೂವಿನ ಅಲಂಕಾರ: ಹಾಸನಾಂಬೆ ಜಾತ್ರೆ ಖರ್ಚು ಕೇಳಿ ರೇವಣ್ಣ ಶಾಕ್!
ಅಂಕಿತಾ ಭಂಡಾರಿ ಕೊಲೆ, ಪೋಷಕರ ಪ್ರತಿಭಟನೆಗೆ ರಾಹುಲ್, ಪ್ರಿಯಾಂಕಾ ಸಾಥ್
ಅಂಕಿತಾ ಭಂಡಾರಿ ಕೊಲೆ, ಪೋಷಕರ ಪ್ರತಿಭಟನೆಗೆ ರಾಹುಲ್, ಪ್ರಿಯಾಂಕಾ ಸಾಥ್
ಒಳಗೊಳಗೆ ಮಸಲತ್ತು ಮಾಡಿದ ಗಾನವಿ; ತಮ್ಮ ತಂಡಕ್ಕೆ ಮೋಸ?
ಒಳಗೊಳಗೆ ಮಸಲತ್ತು ಮಾಡಿದ ಗಾನವಿ; ತಮ್ಮ ತಂಡಕ್ಕೆ ಮೋಸ?
ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಿಸಿದ ಕಬ್ಬು ಬೆಳೆಗಾರರು
ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಿಸಿದ ಕಬ್ಬು ಬೆಳೆಗಾರರು
ಅಗ್ನಿ ಪರೀಕ್ಷೆಗೆ 18 ಕಿಲೋಮೀಟರ್ ನಡೆದುಕೊಂಡು ಹೋಗಿದ್ದೆ: ಕಷ್ಟ ನೆನೆದ ಮಂಜ
ಅಗ್ನಿ ಪರೀಕ್ಷೆಗೆ 18 ಕಿಲೋಮೀಟರ್ ನಡೆದುಕೊಂಡು ಹೋಗಿದ್ದೆ: ಕಷ್ಟ ನೆನೆದ ಮಂಜ
ಮಂಡ್ಯ ಎಳನೀರು ವ್ಯಾಪಾರಿಗಳಿಗೆ ಮಹಾ ದೋಖಾ: 25 ಲಕ್ಷಕ್ಕೂ ಹೆಚ್ಚು ಹಣ ವಂಚನೆ
ಮಂಡ್ಯ ಎಳನೀರು ವ್ಯಾಪಾರಿಗಳಿಗೆ ಮಹಾ ದೋಖಾ: 25 ಲಕ್ಷಕ್ಕೂ ಹೆಚ್ಚು ಹಣ ವಂಚನೆ