AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ ಮತ್ತು ಜಪಾನ್ ನಡುವೆ ಐತಿಹಾಸಿಕ ಟಿ20 ಪಂದ್ಯ; ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ

ಭಾರತ ಮತ್ತು ಜಪಾನ್ ನಡುವಿನ ಐತಿಹಾಸಿಕ 'ಸುಜುಕಿ ಕಪ್' ಟಿ20 ಪಂದ್ಯ ಸೆಪ್ಟೆಂಬರ್ 22 ರಂದು ನಡೆಯಲಿದೆ. ಉಭಯ ದೇಶಗಳ 75 ವರ್ಷಗಳ ರಾಜತಾಂತ್ರಿಕ ಸಂಬಂಧವನ್ನು ಆಚರಿಸಲು ಈ ವಿಶೇಷ ಪಂದ್ಯವನ್ನು ಆಯೋಜಿಸಲಾಗಿದೆ. ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಭಾರತದ ಏಷ್ಯನ್ ಗೇಮ್ಸ್ ತಂಡವು ಕಣಕ್ಕಿಳಿಯಲಿದ್ದು, ಇದು ಉಭಯ ತಂಡಗಳ ಮೊದಲ ಹಿರಿಯ ಅಂತರರಾಷ್ಟ್ರೀಯ ಕ್ರಿಕೆಟ್ ಮುಖಾಮುಖಿಯಾಗಿದೆ.

ಭಾರತ ಮತ್ತು ಜಪಾನ್ ನಡುವೆ ಐತಿಹಾಸಿಕ ಟಿ20 ಪಂದ್ಯ; ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ
ಭಾರತ Vs ಜಪಾನ್
ಪೃಥ್ವಿಶಂಕರ
|

Updated on: Sep 04, 2026 | 7:05 PM

Share

ಟೀಂ ಇಂಡಿಯಾ ಇದೇ ಸೆಪ್ಟೆಂಬರ್ 13 ರಿಂದ ಅಫ್ಘಾನಿಸ್ತಾನ ವಿರುದ್ಧ ಟಿ20 ಸರಣಿಯನ್ನು ಆಡಲಿದೆ. ಉಭಯ ತಂಡಗಳ ನಡುವೆ ಮೂರು ಪಂದ್ಯಗಳ ಟಿ20 ಸರಣಿ ಭಾರತದಲ್ಲಿ ನಡೆಯಲಿದೆ. ಇದಾದ ಬಳಿಕ 2026 ರ ಏಷ್ಯನ್ ಕ್ರೀಡಾಕೂಟದಲ್ಲಿ ಟೀಂ ಇಂಡಿಯಾ ಆಡಲಿದೆ. ಆದಾಗ್ಯೂ, ಈ ಸರಣಿ ಮತ್ತು ಪಂದ್ಯಾವಳಿಯ ನಡುವೆ ಭಾರತ ಮತ್ತು ಜಪಾನ್‌ ನಡುವೆ ವಿಶೇಷ ಟಿ20 ಪಂದ್ಯವೊಂದು ನಡೆಯಲಿದೆ. ಈ ಪಂದ್ಯದ ಅಧಿಕೃತ ವೇಳಾಪಟ್ಟಿಯನ್ನು ಬಿಸಿಸಿಐ ಸೆಪ್ಟೆಂಬರ್ 4 ರಂದು ಬಿಡುಗಡೆ ಮಾಡಿದೆ. ಆ ಪ್ರಕಾರ, ಉಭಯ ತಂಡಗಳ ನಡುವಿನ ಈ ಐತಿಹಾಸಿಕ ಪಂದ್ಯ ಸೆಪ್ಟೆಂಬರ್ 22 ರಂದು ನಡೆಯಲಿದೆ. ಹಿರಿಯ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉಭಯ ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗುತ್ತಿರುವುದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿವೆ.

ಭಾರತ-ಜಪಾನ್ ನಡುವೆ ವಿಶೇಷ ಪಂದ್ಯ

ಬಿಸಿಸಿಐ ಮತ್ತು ಜಪಾನ್ ಕ್ರಿಕೆಟ್ ಅಸೋಸಿಯೇಷನ್ ಎರಡೂ ಕೂಡ ​​ಈ ಐತಿಹಾಸಿಕ ಪಂದ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿವೆ. ವಾಸ್ತವವಾಗಿ ಈ ಎರಡು ತಂಡಗಳು ಈ ವಿಶೇಷ ಪಂದ್ಯವನ್ನು ಏಕೆ ಆಡುತ್ತಿವೆ ಎಂದರೆ, ಭಾರತ ಮತ್ತು ಜಪಾನ್ ನಡುವಿನ ರಾಜತಾಂತ್ರಿಕ ಸಂಬಂಧಗಳ 75 ನೇ ವಾರ್ಷಿಕೋತ್ಸವದ ನೆನಪಿಗಾಗಿ ಈ ಪಂದ್ಯವನ್ನು ಆಡಲಾಗುತ್ತಿದೆ.

ಭಾರತ ಮತ್ತು ಜಪಾನ್ ನಡುವಿನ ಈ ಏಕೈಕ ಪಂದ್ಯವನ್ನು ‘ಸುಜುಕಿ ಕಪ್’ ಎಂದು ಹೆಸರಿಸಲಾಗಿದೆ. ಈ ಪಂದ್ಯವು ಸೆಪ್ಟೆಂಬರ್ 22 ರಂದು ತೋಚಿಗಿ ಪ್ರಾಂತ್ಯದ ಸಾನೋ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯವು ಭಾರತೀಯ ಕಾಲಮಾನ ಬೆಳಿಗ್ಗೆ 9:30 ಕ್ಕೆ ಪ್ರಾರಂಭವಾಗಲಿದೆ. ಕ್ರೀಡಾ ಕ್ಷೇತ್ರದಲ್ಲಿ ಭಾರತ-ಜಪಾನ್ ಸಹಕಾರವನ್ನು ಹೆಚ್ಚಿಸಲು ಈ ವರ್ಷದ ಆರಂಭದಲ್ಲಿ ನಡೆದ ವಿಶೇಷ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನಿನ ಪ್ರಧಾನಿ ಸನೇ ತಕೈಚಿ ‘ಸ್ಪೋರ್ಟ್ 75’ ಉಪಕ್ರಮವನ್ನು ಪ್ರಾರಂಭಿಸಿದ್ದರು. ಅದರಂತೆ ಈ ಪ್ರಕಾರದ ಮೊದಲ ಹೆಜ್ಜೆಯಾಗಿ ಉಭಯ ದೇಶಗಳ ನಡುವೆ ಟಿ20 ಪಂದ್ಯವೊಂದು ನಡೆಯಲಿದೆ.

ಯಾವ ತಂಡ ಕಣಕ್ಕಿಳಿಯಲಿದೆ?

ಭಾರತ ಮತ್ತು ಜಪಾನ್ ತಂಡಗಳು ಈ ಹಿಂದೆ ಅಂಡರ್-19 ವಿಶ್ವಕಪ್‌ನಲ್ಲಿ ಮುಖಾಮುಖಿಯಾಗಿವೆ. ಆದರೆ ಹಿರಿಯರ ಮಟ್ಟದಲ್ಲಿ ಇದು ಉಭಯ ತಂಡಗಳ ನಡುವಿನ ಮೊದಲ ಮುಖಾಮುಖಿಯಾಗಲಿದೆ. ತಂಡಕ್ಕೆ ಸಂಬಂಧಿಸಿದಂತೆ, ಭಾರತೀಯ ತಂಡವು ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಆಡಲಿದ್ದು, ಏಷ್ಯನ್ ಕ್ರೀಡಾಕೂಟಕ್ಕೆ ಆಯ್ಕೆಯಾದ ಅದೇ ಆಟಗಾರರು ಈ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.

IND vs AFG: ಭಾರತ ವಿರುದ್ಧದ ಟಿ20 ಸರಣಿಗೆ ಬಲಿಷ್ಠ ಅಫ್ಘಾನಿಸ್ತಾನ ತಂಡ ಪ್ರಕಟ

ಏಷ್ಯನ್ ಕ್ರೀಡಾಕೂಟಕ್ಕೆ ಭಾರತ ತಂಡ: ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಶಿವಂ ದುಬೆ, ವೈಭವ್ ಸೂರ್ಯವಂಶಿ, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ಜಸ್ಪ್ರೀತ್ ಬುಮ್ರಾ, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಬೆಂಗಳೂರಿಗರೇ ಎಚ್ಚರ: ನಗರದಲ್ಲಿ ಟೋಯಿಂಗ್ ಕಾರ್ಯಾಚರಣೆ ಪುನರಾರಂಭ!
ಬೆಂಗಳೂರಿಗರೇ ಎಚ್ಚರ: ನಗರದಲ್ಲಿ ಟೋಯಿಂಗ್ ಕಾರ್ಯಾಚರಣೆ ಪುನರಾರಂಭ!
‘ಮೈಮೇಲೆ ಪ್ರಜ್ಞೆ ಇರಬೇಕು’: ಮಗ ಮಾಡಿದ ಕೃತ್ಯದ ಬಗ್ಗೆ ವಿಜಯ್ ಸಿಟ್ಟು
‘ಮೈಮೇಲೆ ಪ್ರಜ್ಞೆ ಇರಬೇಕು’: ಮಗ ಮಾಡಿದ ಕೃತ್ಯದ ಬಗ್ಗೆ ವಿಜಯ್ ಸಿಟ್ಟು
ಮೈಸೂರು ಯುವ ದಸರಾ ಉದ್ಘಾಟಕರಾಗಿ ನೃತ್ಯ ನಿರ್ದೇಶಕ ಪ್ರಭುದೇವ್ ಆಯ್ಕೆ
ಮೈಸೂರು ಯುವ ದಸರಾ ಉದ್ಘಾಟಕರಾಗಿ ನೃತ್ಯ ನಿರ್ದೇಶಕ ಪ್ರಭುದೇವ್ ಆಯ್ಕೆ
ಕೆಪಿಎಸ್​​ಸಿ ಹಗರಣ: ಆರೋಪಿ ಬಸವರಾಜ ಬಗ್ಗೆ ಸ್ಫೋಟ ಅಂಶ ಬಿಚ್ಚಿಟ್ಟ ಖಂಡ್ರೆ
ಕೆಪಿಎಸ್​​ಸಿ ಹಗರಣ: ಆರೋಪಿ ಬಸವರಾಜ ಬಗ್ಗೆ ಸ್ಫೋಟ ಅಂಶ ಬಿಚ್ಚಿಟ್ಟ ಖಂಡ್ರೆ
ಮೋಡ ಬಿತ್ತನೆ ಕಾರ್ಯಕ್ಕೆ ಸಚಿವ ಚಲುವರಾಯಸ್ವಾಮಿ ಚಾಲನೆ
ಮೋಡ ಬಿತ್ತನೆ ಕಾರ್ಯಕ್ಕೆ ಸಚಿವ ಚಲುವರಾಯಸ್ವಾಮಿ ಚಾಲನೆ
ಜಗದೊದ್ಧಾರನ ಆಡಿಸಿದಳೆಶೋದೆ ಕೀರ್ತನೆ ಹುಟ್ಟಿದ ತಾಣದಲ್ಲಿ ಜನ್ಮಾಷ್ಟಮಿಸಂಭ್ರಮ
ಜಗದೊದ್ಧಾರನ ಆಡಿಸಿದಳೆಶೋದೆ ಕೀರ್ತನೆ ಹುಟ್ಟಿದ ತಾಣದಲ್ಲಿ ಜನ್ಮಾಷ್ಟಮಿಸಂಭ್ರಮ
ಸದ್ದಿಲ್ಲದೆ ತಮಿಳುನಾಡಿಗೆ ಹರಿಯುತ್ತಿದೆ ಕಾವೇರಿ ನೀರು!
ಸದ್ದಿಲ್ಲದೆ ತಮಿಳುನಾಡಿಗೆ ಹರಿಯುತ್ತಿದೆ ಕಾವೇರಿ ನೀರು!
ಬರಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ ಡಿಕೆಶಿ
ಬರಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ ಡಿಕೆಶಿ
ನಿರುದ್ಯೋಗಿ ಯುವಕ ಯುವತಿಯರೇ ಟಾರ್ಗೆಟ್: ಈತನ ಮೊಬೈಲ್​​​ನಲ್ಲಿ ಶಾಕಿಂಗ್ ಅಂಶ
ನಿರುದ್ಯೋಗಿ ಯುವಕ ಯುವತಿಯರೇ ಟಾರ್ಗೆಟ್: ಈತನ ಮೊಬೈಲ್​​​ನಲ್ಲಿ ಶಾಕಿಂಗ್ ಅಂಶ
ಕೃಷ್ಣ ಜನ್ಮಾಷ್ಟಮಿ; ಗೋಪೂಜೆ ಸಲ್ಲಿಸಿದ ಬಿಜೆಪಿ ಅಧ್ಯಕ್ಷ ವಿಜಯೇಂದ್ರ
ಕೃಷ್ಣ ಜನ್ಮಾಷ್ಟಮಿ; ಗೋಪೂಜೆ ಸಲ್ಲಿಸಿದ ಬಿಜೆಪಿ ಅಧ್ಯಕ್ಷ ವಿಜಯೇಂದ್ರ