ಭಾರತ ಅ-19 ತಂಡದಲ್ಲಿ ಸೆಹ್ವಾಗ್, ದ್ರಾವಿಡ್ ಪುತ್ರರು; ಆಸೀಸ್ ವಿರುದ್ಧ ಕಣಕ್ಕೆ
India U19 vs Australia U19 series: ಮುಂದಿನ ತಿಂಗಳು ಆಸ್ಟ್ರೇಲಿಯಾ U19 ತಂಡ ಭಾರತಕ್ಕೆ ಪ್ರವಾಸ ಕೈಗೊಳ್ಳಲಿದೆ. ಸೆಪ್ಟೆಂಬರ್‌ನಲ್ಲಿ ನಡೆಯುವ ಈ ಸರಣಿಗೆ ಬಿಸಿಸಿಐ ಭಾರತ U19 ತಂಡಗಳನ್ನು ಪ್ರಕಟಿಸಿದೆ. ವಿಶೇಷವಾಗಿ, ವೀರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಮತ್ತು ರಾಹುಲ್ ದ್ರಾವಿಡ್ ಪುತ್ರ ಅನ್ವಯ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮೂರು ಏಕದಿನ ಹಾಗೂ ಎರಡು ಬಹು-ದಿನದ ಪಂದ್ಯಗಳು ನಡೆಯಲಿವೆ. ಮಾಜಿ ದಿಗ್ಗಜರ ಮಕ್ಕಳ ಆಯ್ಕೆ ಈ ಸರಣಿಗೆ ಹೆಚ್ಚು ಗಮನ ಸೆಳೆದಿದೆ.

ಮುಂದಿನ ತಿಂಗಳು ಅಂದರೆ ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾ ಅಂಡರ್ 19 ತಂಡ ಭಾರತ (India U19 vs Australia U19) ಪ್ರವಾಸ ಮಾಡಲಿದೆ. ಈ ಪ್ರವಾಸದಲ್ಲಿ ಉಭಯ ಯುವ ತಂಡಗಳ ನಡುವೆ ಮೂರು ಏಕದಿನ ಪಂದ್ಯಗಳ ಸರಣಿ ಹಾಗೂ 2 ಬಹು-ದಿನ ಪಂದ್ಯಗಳು ನಡೆಯಲಿವೆ. ಸೆಪ್ಟೆಂಬರ್ 18 ರಿಂದ ಆರಂಭವಾಗಲಿರುವ ಈ ಪ್ರವಾಸಕ್ಕೆ ಇದೀಗ ಬಿಸಿಸಿಐ (BCCI) ಎರಡು ತಂಡಗಳನ್ನು ಪ್ರಕಟಿಸಿದೆ. ಅದರಲ್ಲೂ ಏಕದಿನ ತಂಡದಲ್ಲಿ ಟೀಂ ಇಂಡಿಯಾದ ಮಾಜಿ ಆಟಗಾರರಾದ ವೀರೇಂದ್ರ ಸೆಹ್ವಾಗ್ ಹಾಗೂ ರಾಹುಲ್ ದ್ರಾವಿಡ್ ಅವರ ಪುತ್ರರಿಗೆ ಅವಕಾಶ ನೀಡಿರುವುದು ಈ ಸರಣಿಯ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಸೆಹ್ವಾಗ್ ಪುತ್ರ ಆರ್ಯವೀರ್ ಬ್ಯಾಟರ್ ಆಗಿ ಆಯ್ಕೆಯಾಗಿದ್ದರೆ, ದ್ರಾವಿಡ್ ಪುತ್ರ ಅನ್ವಯ್ ವಿಕೆಟ್ ಕೀಪರ್ ಆಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಏಕದಿನ ಸರಣಿಯಲ್ಲಿ ಲಕ್ಷ್ಯ ರಾಯ್‌ಚಂದಾನಿ ತಂಡದ ನಾಯಕತ್ವ ನಿಭಾಯಿಸಲಿದ್ದು, ಯಶವರ್ಧನ್ ಚೌಹಾಣ್‌ಗೆ ಉಪನಾಯಕತ್ವ ನೀಡಲಾಗಿದೆ. ಹಾಗೆಯೇ ಬಹುದಿನಗಳ ಪಂದ್ಯಗಳಲ್ಲಿ ಯಶವರ್ಧನ್ ಚೌಹಾಣ್ ನಾಯಕನಾಗಿ ತಂಡವನ್ನು ಮುನ್ನಡೆಸಿದರೆ, ಲಕ್ಷ್ಯರಾಯ್‌ಚಂದಾನಿ ಉಪನಾಯಕತ್ವದ ಜವಾಬ್ದಾರಿ ಹೊಂದಿದ್ದಾರೆ.
ಏಕದಿನ ಸರಣಿಗೆ ಭಾರತ U19 ತಂಡ: ಲಕ್ಷ ರಾಯಚಂದನಿ (ನಾಯಕ), ಯಶಬರ್ಧನ್ ಚೌಹಾಣ್ (ಉಪನಾಯಕ), ರಜತ್ ಬಾಘೆಲ್ (ವಿಕೆಟ್ ಕೀಪರ್), ಆರ್ಯವೀರ್ ಸೆಹ್ವಾಗ್, ವಿ.ಕೆ. ವಿನೀತ್, ಕುಶಾಗ್ರ ಓಜಾ, ಅರ್ಜುನ್ ರಜಪೂತ್, ಮನಲ್ ಚೌಹಾಣ್, ಅನ್ವಯ್ ದ್ರಾವಿಡ್ (ವಿಕೆಟ್ ಕೀಪರ್), ವಿ. ಯಶ್ವೀರ್, ರೋಹಿತ್ ಯಾದವ್, ಶವಿನ್ ವಿನೋದ್, ಮೋಹಿತ್ ಉಲ್ವಾ, ಚಿಗುರುಪತಿ ವೆಂಕಟ, ಕಾವ್ಯಾ ಪಟೇಲ್.
ಬಹುದಿನದ ಪಂದ್ಯಗಳಿಗೆ ಭಾರತ U19 ತಂಡ: ಯಶಬರ್ಧನ್ ಚೌಹಾಣ್ (ನಾಯಕ), ಲಕ್ಷ ರಾಯಚಂದನಿ (ಉಪನಾಯಕ), ಸಾಗರ್ ವಿರ್ಕ್, ಕುಶಾಗ್ರ ಓಜಾ, ಮನಲ್ ಚೌಹಾಣ್, ಕುಶ್ ಪಟೇಲ್, ಮಾನವ್ ಕೃಷ್ಣ (ವಿಕೆಟ್ ಕೀಪರ್), ಅಭಿಪ್ರಯ್ ಸಿಂಗ್ ಬಿಸ್ವಾಸ್ (ವಿಕೆಟ್ ಕೀಪರ್), ರೋಹಿತ್ ಯಾದವ್, ಇಶಾನ್ ಓಂ, ಅಯಾನ್ ಅಕ್ರಮ್, ಪ್ರಣವ್ ರಾಘವೇಂದ್ರ, ಪ್ರಿಯಾಂಶು ಸಿಂಗ್, ಮೋಹಿತ್ ಉಲ್ವಾ, ಆರ್ಯನ್ ಯಾದವ್.
🚨 News 🚨
India U19 squad for Australia U19 Men’s Tour of India announced.
The tour consists of three One-Day matches and two Multi-Day fixtures.
Venues 🏟️: Rajkot and Ahmedabad
More Details ▶️ https://t.co/o2pF8bj3RJ
#INDU19vAUSU19 pic.twitter.com/Ud0tvcqaBe
— BCCI (@BCCI) August 27, 2026
ಏಕದಿನ ಸರಣಿ ವೇಳಾಪಟ್ಟಿ
- ಸೆಪ್ಟೆಂಬರ್-19: ಮೊದಲ ಏಕದಿನ ಪಂದ್ಯ, ರಾಜ್‌ಕೋಟ್
- ಸೆಪ್ಟೆಂಬರ್-21: ಎರಡನೇ ಏಕದಿನ ಪಂದ್ಯ, ರಾಜ್‌ಕೋಟ್
- ಸೆಪ್ಟೆಂಬರ್-23: ಮೂರನೇ ಏಕದಿನ ಪಂದ್ಯ, ರಾಜ್‌ಕೋಟ್
ಬಹು ದಿನಗಳ ಸರಣಿ
- ಸೆಪ್ಟೆಂಬರ್ 27-30: ಮೊದಲ ಪಂದ್ಯ, ರಾಜ್‌ಕೋಟ್
- ಅಕ್ಟೋಬರ್ 5-8: ಎರಡನೇ ಪಂದ್ಯ, ಅಹಮದಾಬಾದ್ – ಬಿ ಮೈದಾನ
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:44 pm, Thu, 27 August 26




