AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ vs ನ್ಯೂಝಿಲೆಂಡ್ ಏಕದಿನ ಪಂದ್ಯ ಎಷ್ಟು ಗಂಟೆಗೆ ಶುರು? ಇಲ್ಲಿದೆ ಮಾಹಿತಿ

ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಏಕದಿನ ಸರಣಿ ಬುಧವಾರದಿಂದ (ನವೆಂಬರ್ 4) ಆರಂಭವಾಗಲಿದೆ. ಈ ಸರಣಿಯಲ್ಲಿ ಒಟ್ಟು ಐದು ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯಕ್ಕೆ ಆಕ್ಲೆಂಡ್‌ನ ಈಡನ್ ಪಾರ್ಕ್ ಮೈದಾನ ಆತಿಥ್ಯ ವಹಿಸಲಿದೆ. ಈ ಪಂದ್ಯದ ಕುರಿತಾದ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ.

ಭಾರತ vs ನ್ಯೂಝಿಲೆಂಡ್ ಏಕದಿನ ಪಂದ್ಯ ಎಷ್ಟು ಗಂಟೆಗೆ ಶುರು? ಇಲ್ಲಿದೆ ಮಾಹಿತಿ
IND vs NZImage Credit source: x.com
ಝಾಹಿರ್ ಯೂಸುಫ್
|

Updated on: Nov 03, 2026 | 10:49 AM

Share

ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಐದು ಪಂದ್ಯಗಳ ಏಕದಿನ ಸರಣಿ ನಾಳೆಯಿಂದ ಶುರುವಾಗಲಿದೆ. ಆಕ್ಲೆಂಡ್‌ನ ಈಡನ್ ಪಾರ್ಕ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯ ಎಷ್ಟು ಗಂಟೆಗೆ ಆರಂಭವಾಗುತ್ತದೆ? ಯಾವ ಚಾನೆಲ್‌ನಲ್ಲಿ ನೇರ ಪ್ರಸಾರವಾಗಲಿದೆ? ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ…

ಪಂದ್ಯದ ಸಮಯ:

ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಏಕದಿನ ಸರಣಿಯ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಬೆಳಗ್ಗೆ 7:30 ಕ್ಕೆ ಆರಂಭವಾಗಲಿವೆ. ಅಂದರೆ, ನ್ಯೂಝಿಲೆಂಡ್‌ನಲ್ಲಿ ಮಧ್ಯಾಹ್ನ ಆರಂಭವಾಗುವ ಪಂದ್ಯಗಳನ್ನು ಭಾರತೀಯರು ಬೆಳಗ್ಗಿನ ಜಾವವೇ ವೀಕ್ಷಿಸಬಹುದಾಗಿದೆ.

  • ಪಂದ್ಯ ಆರಂಭವಾಗುವ ಸಮಯ: ಭಾರತೀಯ ಕಾಲಮಾನ (IST) ಬೆಳಗ್ಗೆ 07:30 ಗಂಟೆಗೆ.
  • ಟಾಸ್ ಪ್ರಕ್ರಿಯೆ: ಬೆಳಗ್ಗೆ 07:00 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ.

ಯಾವ ಚಾನೆಲ್​ನಲ್ಲಿ ನೇರ ಪ್ರಸಾರ?

ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಏಕದಿನ ಸರಣಿಯ ಎಲ್ಲಾ ಪಂದ್ಯಗಳು ಈ ಕೆಳಗಿನ ಚಾನೆಲ್ ಹಾಗೂ ಆ್ಯಪ್​ನಲ್ಲಿ ಲೈವ್ ವೀಕ್ಷಿಸಬಹುದು.

  • ಟಿವಿ ಚಾನೆಲ್: ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ಲೈವ್ ಇರಲಿದೆ.
  •  ಲೈವ್ ಸ್ಟ್ರೀಮಿಂಗ್: ಸೋನಿ ಲಿವ್ (Sony LIV) ಆ್ಯಪ್ ಹಾಗೂ ವೆಬ್‌ಸೈಟ್​ನಲ್ಲಿ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದು.

ಪಿಚ್ ರಿಪೋರ್ಟ್:

ಆಕ್ಲೆಂಡ್​ನ ಈಡನ್ ಪಾರ್ಕ್ ಮೈದಾನವು ವಿಶ್ವದಲ್ಲೇ ಅತ್ಯಂತ ಚಿಕ್ಕದಾದ ಬೌಂಡರಿಗಳನ್ನು (ವಿಶೇಷವಾಗಿ ಸ್ಟ್ರೈಟ್ ಬೌಂಡರಿಗಳು ಕೇವಲ 55 ಮೀಟರ್) ಹೊಂದಿದೆ. ಹೀಗಾಗಿ ಇಲ್ಲಿ ಬ್ಯಾಟರ್‌ಗಳು ಸುಲಭವಾಗಿ ಸಿಕ್ಸರ್ ಹಾಗೂ ಬೌಂಡರಿಗಳನ್ನು ಬಾರಿಸಬಹುದು. ಅಂದರೆ ಈ ಪಂದ್ಯದಲ್ಲಿ ಬೃಹತ್ ಮೊತ್ತವನ್ನು ನಿರೀಕ್ಷಿಸಬಹುದು.

ಸಣ್ಣ ಬೌಂಡರಿಗಳ ಕಾರಣದಿಂದಾಗಿ ಬೌಲರ್‌ಗಳಿಗೆ ತಪ್ಪು ಮಾಡಲು ಇಲ್ಲಿ ಹೆಚ್ಚಿನ ಅವಕಾಶವಿರುವುದಿಲ್ಲ. ಆದರೂ ಆರಂಭಿಕ ಓವರ್‌ಗಳಲ್ಲಿ ವೇಗಿಗಳಿಗೆ ಸ್ವಲ್ಪ ಸ್ವಿಂಗ್ ಮತ್ತು ಬೌನ್ಸ್ ಸಿಗುವ ನಿರೀಕ್ಷೆಯಿದೆ. ಅಂದರೆ ಆರಂಭದಲ್ಲಿ ಕರಾರುವಾಕ್ ದಾಳಿ ಸಂಘಟಿಸಿದರೆ ಪಂದ್ಯದ ಮೇಲೆ ಹಿಡಿತ ಸಾಧಿಸಬಹುದು.

ಇನ್ನು ಈ ಪಿಚ್​ನಲ್ಲಿ ಚೇಸಿಂಗ್ ಮಾಡುವುದು ತುಲನಾತ್ಮಕವಾಗಿ ಸುಲಭ. ರಾತ್ರಿಯ ವೇಳೆಗೆ ಇಬ್ಬನಿ ಬೀಳುವ ಸಾಧ್ಯತೆ ಇರುವುದರಿಂದ, ಟಾಸ್ ಗೆದ್ದ ತಂಡವು ಮೊದಲು ಬೌಲಿಂಗ್ ಮಾಡಲು ಆದ್ಯತೆ ನೀಡುತ್ತದೆ. ಹೀಗಾಗಿ ಮೊದಲ ಮ್ಯಾಚ್​ನಲ್ಲಿ ಟಾಸ್ ಗೆಲ್ಲುವ ತಂಡ ಫೀಲ್ಡಿಂಗ್ ಆಯ್ದುಕೊಳ್ಳುವ ಸಾಧ್ಯತೆ ಹೆಚ್ಚಿದೆ.

ನ್ಯೂಝಿಲೆಂಡ್ ಏಕದಿನ ತಂಡ (ಮೊದಲ 3 ಪಂದ್ಯಗಳಿಗೆ): ಮಿಚೆಲ್ ಸ್ಯಾಂಟ್ನರ್ (ನಾಯಕ), ಮೈಕೆಲ್ ಬ್ರೇಸ್‌ವೆಲ್, ಡೆವೊನ್ ಕಾನ್ವೇ, ಜೇಕಬ್ ಡಫಿ, ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಡ್ಯಾರಿಲ್ ಮಿಚೆಲ್, ಹೆನ್ರಿ ನಿಕೋಲ್ಸ್, ಗ್ಲೆನ್ ಫಿಲಿಪ್ಸ್, ಟಿಮ್ ಸೈಫರ್ಟ್, ನಾಥನ್ ಸ್ಮಿತ್, ವಿಲ್ ಯಂಗ್, ಬ್ಲೇರ್ ಟಿಕ್ನರ್.

ಇದನ್ನೂ ಓದಿ: ನವೆಂಬರ್ 2, 17, 23: ಐಪಿಎಲ್ ಮಿನಿ ಹರಾಜಿನ ಬಿಗ್ ಅಪ್​ಡೇಟ್

ಭಾರತದ ಏಕದಿನ ತಂಡ (ಮೊದಲ 3 ಪಂದ್ಯಗಳಿಗೆ): ಶುಭ್​ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಕೆಎಲ್ ರಾಹುಲ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ನಮನ್ ಧೀರ್, ಅನ್ಶುಲ್ ಕಂಬೋಜ್, ಗುರ್ನೂರ್ ಬ್ರಾರ್, ರುತುರಾಜ್ ಗಾಯಕ್ವಾಡ್, ಅರ್ಷದೀಪ್ ಸಿಂಗ್, ಇಶಾನ್ ಕಿಶನ್, ಮೊಹಮ್ಮದ್ ಸಿರಾಜ್, ಆಖಿಬ್ ನಬಿ, ಕುಲ್ದೀಪ್ ಯಾದವ್.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More