AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿವೀಸ್ ಪಾಲಿಗೆ 2026 ಕರಾಳ ವರ್ಷ; ಟೀಮ್ ಇಂಡಿಯಾ ವಿರುದ್ಧ ಮುಜುಗರದ ದಾಖಲೆ

ನ್ಯೂಜಿಲೆಂಡ್ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ಭಾರತ DLS ಮೂಲಕ 4 ರನ್‌ಗಳ ರೋಚಕ ಜಯ ಸಾಧಿಸಿ ಸರಣಿಯಲ್ಲಿ 2-0 ಮುನ್ನಡೆ ಗಳಿಸಿದೆ. ಈ ಸೋಲಿನೊಂದಿಗೆ ನ್ಯೂಜಿಲೆಂಡ್, 2026ರಲ್ಲಿ ಭಾರತದ ವಿರುದ್ಧ 11ನೇ ಸೋಲು ಕಂಡು ಹೀನಾಯ ದಾಖಲೆ ಬರೆದಿದೆ. ಬೌಲರ್ ಗುರ್ನೂರ್ ಬ್ರಾರ್ ತಂಡದ ಗೆಲುವಿಗೆ ಪ್ರಮುಖ ಕೊಡುಗೆ ನೀಡಿದರು.

ಕಿವೀಸ್ ಪಾಲಿಗೆ 2026 ಕರಾಳ ವರ್ಷ; ಟೀಮ್ ಇಂಡಿಯಾ ವಿರುದ್ಧ ಮುಜುಗರದ ದಾಖಲೆ
Newzealand Team
ಪೃಥ್ವಿಶಂಕರ
|

Updated on: Nov 07, 2026 | 8:17 PM

Share

ನ್ಯೂಜಿಲೆಂಡ್ ನೆಲದಲ್ಲಿ ಟೀಂ ಇಂಡಿಯಾದ ಗೆಲುವಿನ ನಾಗಾಲೋಟ ಮುಂದುವರಿದಿದೆ. ಆತಿಥೇಯ ಕಿವೀಸ್ ತಂಡಕ್ಕೆ ಮತ್ತೊಮ್ಮೆ ಸೋಲಿನ ರುಚಿ ತೋರಿಸಿರುವ ಭಾರತ, ಮಳೆ ಪೀಡಿತ ಎರಡನೇ ಏಕದಿನ ಪಂದ್ಯದಲ್ಲಿ ಡಿಎಲ್‌ಎಸ್ ನಿಯಮದಡಿ 4 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಕಾಯ್ದುಕೊಂಡಿದೆ. ಮತ್ತೊಂದೆಡೆ, ಈ ಸೋಲಿನೊಂದಿಗೆ ನ್ಯೂಜಿಲೆಂಡ್ ತಂಡದ ಹೆಸರಿನಲ್ಲಿ ಬೇಡದ ದಾಖಲೆಯೊಂದು ಸೇರ್ಪಡೆಯಾಗಿದೆ. ವಾಸ್ತವವಾಗಿ, 2026ರ ಕ್ಯಾಲೆಂಡರ್ ವರ್ಷದಲ್ಲಿ ಭಾರತ ವಿರುದ್ಧ ನ್ಯೂಜಿಲೆಂಡ್ ಅನುಭವಿಸಿದ 11ನೇ ಸೋಲು ಇದಾಗಿದೆ. ಒಂದೇ ಕ್ಯಾಲೆಂಡರ್ ವರ್ಷದಲ್ಲಿ ನಿರ್ದಿಷ್ಟ ಎದುರಾಳಿ ತಂಡದ ವಿರುದ್ಧ ನ್ಯೂಜಿಲೆಂಡ್ ಅನುಭವಿಸಿದ ಗರಿಷ್ಠ ಸೋಲುಗಳ ದಾಖಲೆಯಾಗಿದೆ.

ನ್ಯೂಜಿಲೆಂಡ್‌ ಹೆಸರಿಗೆ ಹೀನಾಯ ದಾಖಲೆ

2026ನೇ ವರ್ಷ ನ್ಯೂಜಿಲೆಂಡ್ ಪಾಲಿಗೆ ಭಾರತದ ವಿರುದ್ಧ ಅಷ್ಟೊಂದು ಉತ್ತಮವಾಗಿಲ್ಲ. ಟೀಂ ಇಂಡಿಯಾ ಎದುರು ಆಡಿದ ಪಂದ್ಯಗಳಲ್ಲಿ ಕಿವೀಸ್ ಪಡೆ ಪದೇಪದೇ ಸೋಲು ಕಂಡಿದೆ. ಇದೀಗ ಎರಡನೇ ಏಕದಿನ ಪಂದ್ಯದ ಸೋಲಿನೊಂದಿಗೆ ಈ ವರ್ಷದ ಸೋಲುಗಳ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಒಂದೇ ಕ್ಯಾಲೆಂಡರ್ ವರ್ಷದಲ್ಲಿ ನಿರ್ದಿಷ್ಟ ತಂಡದ ವಿರುದ್ಧ ಅತಿ ಹೆಚ್ಚು ಪಂದ್ಯಗಳನ್ನು ಸೋತ ನ್ಯೂಜಿಲೆಂಡ್‌ನ ಬೇಡದ ದಾಖಲೆ ನಿರ್ಮಾಣವಾಗಿದೆ. ಇದಕ್ಕೂ ಮೊದಲು ಆಸ್ಟ್ರೇಲಿಯಾ ವಿರುದ್ಧ ನ್ಯೂಜಿಲೆಂಡ್ 2005ರಲ್ಲಿ 10 ಪಂದ್ಯಗಳಲ್ಲಿ ಸೋಲು ಕಂಡಿತ್ತು.

ವೆಲ್ಲಿಂಗ್ಟನ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಉಭಯ ತಂಡಗಳ ನಡುವೆ ತೀವ್ರ ಪೈಪೋಟಿ ಕಂಡುಬಂದಿತ್ತು. ನ್ಯೂಜಿಲೆಂಡ್ ಬೌಲರ್‌ಗಳು ಭಾರತೀಯ ಬ್ಯಾಟರ್‌ಗಳನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸುವ ಪ್ರಯತ್ನ ಮಾಡಿದರು. ಆದರೆ ಭಾರತದ ಬೌಲರ್ ಗುರ್ನೂರ್ ಬ್ರಾರ್ ಅವರ ಅಮೋಘ ಪ್ರದರ್ಶನ ತಂಡದ ಗೆಲುವಿಗೆ ಪ್ರಮುಖ ಕಾರಣವಾಯಿತು. ಈ ಜಯದೊಂದಿಗೆ ಭಾರತ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತು.

ಮಳೆ ಕೈಕೊಟ್ಟಿತು, ಪಿಚ್ ಸವಾಲೊಡ್ಡಿತು: ಭಾರತ ವಿರುದ್ಧದ ಸೋಲಿನ ಬಗ್ಗೆ ಸ್ಯಾಂಟ್ನರ್ ಮಾತು

ಭಾರತಕ್ಕೆ 4 ರನ್​ಗಳ ಜಯ

ಮಳೆಯಿಂದಾಗಿ ಪಂದ್ಯಕ್ಕೆ ಅಡ್ಡಿಯಾದ ಹಿನ್ನೆಲೆಯಲ್ಲಿ ಡಿಎಲ್‌ಎಸ್ ನಿಯಮದ ಪ್ರಕಾರ ಫಲಿತಾಂಶ ನಿರ್ಧರಿಸಲಾಯಿತು. ಭಾರತ 26 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 113 ರನ್ ಗಳಿಸಿತ್ತು. ಈ ವೇಳೆ ಗೆಲುವಿಗೆ ಇನ್ನೂ 66 ಎಸೆತಗಳಲ್ಲಿ 22 ರನ್‌ಗಳ ಅಗತ್ಯವಿತ್ತು. ಆದರೆ ನಿರಂತರ ಮಳೆಯಿಂದಾಗಿ ಪಂದ್ಯವನ್ನು ಮತ್ತೆ ಆರಂಭಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಡಿಎಲ್‌ಎಸ್ ನಿಯಮದಡಿ ಭಾರತಕ್ಕೆ 4 ರನ್‌ಗಳ ಜಯ ಘೋಷಿಸಲಾಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಬೆಲೆ ಏರಿಕೆ ಭಾಗ್ಯದ ಸರ್ಕಾರವಲ್ಲ, ಗ್ಯಾರಂಟಿಗಳ ಸರ್ಕಾರ: ಡಿಕೆ ಸುರೇಶ್
ಬೆಲೆ ಏರಿಕೆ ಭಾಗ್ಯದ ಸರ್ಕಾರವಲ್ಲ, ಗ್ಯಾರಂಟಿಗಳ ಸರ್ಕಾರ: ಡಿಕೆ ಸುರೇಶ್
ಮಗನ ಸಿನಿಮಾದಿಂದ ಹೊರಹಾಕಿದ ಪ್ರಿಯಾಂಕಾ ಉಪೇಂದ್ರ: ಅಳಲು ತೋಡಿಕೊಂಡ ನಿರ್ದೇಶಕ
ಮಗನ ಸಿನಿಮಾದಿಂದ ಹೊರಹಾಕಿದ ಪ್ರಿಯಾಂಕಾ ಉಪೇಂದ್ರ: ಅಳಲು ತೋಡಿಕೊಂಡ ನಿರ್ದೇಶಕ
ಎಥೆನಾಲ್ ವಿಚಾರದಲ್ಲಿ ರಾಜ್ಯ ಸರ್ಕಾರ ಸುಳ್ಳು ಆರೋಪ ಮಾಡ್ತಿದೆ: ಜೋಶಿ
ಎಥೆನಾಲ್ ವಿಚಾರದಲ್ಲಿ ರಾಜ್ಯ ಸರ್ಕಾರ ಸುಳ್ಳು ಆರೋಪ ಮಾಡ್ತಿದೆ: ಜೋಶಿ
ಪ್ರಿಯಾಂಕ್ ಖರ್ಗೆ ವಿರುದ್ಧ ಮರುಳಾರಾಧ್ಯ ಸ್ವಾಮೀಜಿ ಆಕ್ಷೇಪಾರ್ಹ ಹೇಳಿಕೆ
ಪ್ರಿಯಾಂಕ್ ಖರ್ಗೆ ವಿರುದ್ಧ ಮರುಳಾರಾಧ್ಯ ಸ್ವಾಮೀಜಿ ಆಕ್ಷೇಪಾರ್ಹ ಹೇಳಿಕೆ
ಕೈಕೊಟ್ಟ ಮಳೆ: ಉಡುಪಿಯಲ್ಲಿ ರೈತರು, ಮೀನುಗಾರರಿಗೆ ಸಂಕಷ್ಟ!
ಕೈಕೊಟ್ಟ ಮಳೆ: ಉಡುಪಿಯಲ್ಲಿ ರೈತರು, ಮೀನುಗಾರರಿಗೆ ಸಂಕಷ್ಟ!
ಲೆಟರ್ ವಿಷಯದಲ್ಲಿ ಗಾನವಿಗೆ ಕ್ಲಾಸ್? ಸೂಚನೆ ಕೊಟ್ಟ ಸುದೀಪ್
ಲೆಟರ್ ವಿಷಯದಲ್ಲಿ ಗಾನವಿಗೆ ಕ್ಲಾಸ್? ಸೂಚನೆ ಕೊಟ್ಟ ಸುದೀಪ್
ಸ್ಟಿಂಗ್ ಕೇಸ್: ಕುಮಾರಸ್ವಾಮಿ ವಿರುದ್ಧ ಯತೀಂದ್ರ ಸ್ಫೋಟಕ ಹೇಳಿಕೆ
ಸ್ಟಿಂಗ್ ಕೇಸ್: ಕುಮಾರಸ್ವಾಮಿ ವಿರುದ್ಧ ಯತೀಂದ್ರ ಸ್ಫೋಟಕ ಹೇಳಿಕೆ
ದೇವಿರಮ್ಮ ಜಾತ್ರೆಯಲ್ಲಿ ನಟಿ ಅಮೂಲ್ಯ; ಬೆಟ್ಟ ಏರಿ ದೇವರದರ್ಶನ ಪಡೆದ ನಟಿ
ದೇವಿರಮ್ಮ ಜಾತ್ರೆಯಲ್ಲಿ ನಟಿ ಅಮೂಲ್ಯ; ಬೆಟ್ಟ ಏರಿ ದೇವರದರ್ಶನ ಪಡೆದ ನಟಿ
ಶೋಭಾ ಕರಂದ್ಲಾಜೆ, ಬೊಮ್ಮಾಯಿ ಮನೆ ಮುಂದೆ ವಿವಾದಾತ್ಮಕ ಪೋಸ್ಟರ್ !
ಶೋಭಾ ಕರಂದ್ಲಾಜೆ, ಬೊಮ್ಮಾಯಿ ಮನೆ ಮುಂದೆ ವಿವಾದಾತ್ಮಕ ಪೋಸ್ಟರ್ !
ಅತ್ತಿಬೆಲೆ ಪಟಾಕಿ ಮಾರುಕಟ್ಟೆಯಲ್ಲಿ ಈ ಬಾರಿ ಮಾರಾಟ ಶೇ 30 ರಷ್ಟು ಕುಸಿತ!
ಅತ್ತಿಬೆಲೆ ಪಟಾಕಿ ಮಾರುಕಟ್ಟೆಯಲ್ಲಿ ಈ ಬಾರಿ ಮಾರಾಟ ಶೇ 30 ರಷ್ಟು ಕುಸಿತ!